ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 7

ಇತ್ತೀಚಿನ ದಿನಗಳಲ್ಲಿ 'ಪುರುಷ ನೋಟ' ಬದಲಾಗುತ್ತಿದೆ, 'ಪರಿಪೂರ್ಣ' ಹುಡುಗಿ ಅಥವಾ ಮಹಿಳೆಯರ ಕುರಿತಾದ ಬೇಡಿಕೆಗಳು ಕಡಿಮೆಯಾಗುತ್ತಿದೆ: ಕೃತಿ ಸನನ್


"ಒಟಿಟಿ ಪ್ಲಾಟ್ಫಾರ್ಮ್ಗಳು ಅನೇಕ ಭೌಗೋಳಿಕ ಪ್ರದೇಶಗಳಲ್ಲಿ ಪ್ರದರ್ಶನ ಅವಕಾಶ ನೀಡುವ ಮೂಲಕ ನಮಗೆ ಜಾಗತಿಕ ವ್ಯಾಪ್ತಿಯನ್ನು ನೀಡುತ್ತಿವೆ:" ಕೃತಿ ಸನನ್

" ಸೂಪರ್ ವುಮನ್ ಪಾತ್ರದಲ್ಲಿ ಮತ್ತು ಸಂಪೂರ್ಣವಾಗಿ ನಕಾರಾತ್ಮಕ ಪಾತ್ರದಲ್ಲಿ ನಟಿಸಲು ನನಗೆ ಆಸಕ್ತಿ ಇದೆ": ಕೃತಿ ಸನನ್

55ನೇ ಐಎಫ್ಎಫ್ಐನಲ್ಲಿ ನಡೆದ ‘ಸಬಲೀಕರಣದ ಬದಲಾವಣೆ: ಮಹಿಳೆಯರು ಸಿನಿಮಾ ಕ್ಷೇತ್ರದ ಗತಿ ಮುನ್ನಡೆಸುತ್ತಿದ್ದಾರೆ’ ಕುರಿತು ಸಂಭಾಷಣೆಯಲ್ಲಿ  ಕೃತಿ ಸನೋನ್ ಭಾಗವಹಿಸಿದರು

ಸ್ವಭಾವತಃ ಅನಿಶ್ಚಿತವಾಗಿರುವ ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಮತ್ತು ನಟನಾ ವೃತ್ತಿಜೀವನದಲ್ಲಿ ತೊಡಗಿಕೊಂಡಿರುವಾಗ, ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ಬ್ಯಾಕ್-ಅಪ್ ವೃತ್ತಿ ಕೂಡಾ ಆಯ್ಕೆಮಾಡಿಕೊಳ್ಳಲು ಸಿದ್ಧವಾಗಿರಿಸಿಕೊಳ್ಳುವುದು ಉತ್ತಮ ಸಂಕೇತವಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ನಟಿ ಕೃತಿ ಸನನ್ ಅವರು ಇಂದು ಹೇಳಿದ್ದಾರೆ.

ತಮ್ಮ ನಟನಾ ವೃತ್ತಿಜೀವನದಲ್ಲಿ, ಇಲ್ಲಿಯವರೆಗೆ ಮಾಡಿದ ಚಲನಚಿತ್ರಗಳಲ್ಲಿ, 'ಮಿಮಿ' ಚಿತ್ರವು ಅತ್ಯಂತ ಧೈರ್ಯಶಾಲಿ ಎಂಬ ಹೆಗ್ಗಳಿಕೆ ಪಡೆದಿದೆ ಮತ್ತು ಆ ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ (ಮಹಿಳೆ) ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಾಗ ಆ ಹೆಗ್ಗಳಿಕೆಯು ಉತ್ತಮ ಗೌರವ ನೀಡಿದೆ ಎಂದು ನಟಿ ಕೃತಿ ಸನನ್ ಅವರು ಹೇಳಿದರು. ಗೋವಾದ ಕಲಾ ಅಕಾಡೆಮಿಯಲ್ಲಿ ‘ಸಬಲೀಕರಣ ಬದಲಾವಣೆ: ಸಿನಿಮಾದಲ್ಲಿ ಮಹಿಳೆಯರು ಮುನ್ನಡೆಸುತ್ತಿದ್ದಾರೆ’ ಎಂಬ ವಿಷಯದ ಕುರಿತು ಪ್ಯಾನಲ್ ಚರ್ಚೆಯಲ್ಲಿ ಖ್ಯಾತ ನಟಿ ಕೃತಿ ಸನನ್ ಅವರು ಮಾತನಾಡಿದರು. ಐಎಫ್ಎಫ್ಐ, 2024 ರ ಸಂದರ್ಭದಲ್ಲಿ ಈ ವಿಶೇಷ 'ಸಂವಾದ ಅಧಿವೇಶನ’ವನ್ನು ಆಯೋಜಿಸಲಾಯಿತು.

“ಈ “ಮಿಮಿ” ಚಿತ್ರವನ್ನು ಆಯ್ಕೆ ಮಾಡದಂತೆ ನನಗೆ ಅನೇಕ ಜನರು ಸಲಹೆ ನೀಡಿದರು. ಕಲಾತ್ಮಕ ಚಿತ್ರಗಳಿಗೆ ಆದ್ಯತೆ ನೀಡುವ ನಟಿ ಎಂಬ ಹಣೆಪಟ್ಟಿಯನ್ನು ನನಗೆ ನೀಡಲಾಯಿತು ಮತ್ತು ಅದು ನನ್ನ ದಾರಿಯಲ್ಲಿ ಬರುವ ಇತರ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನನಗೆ ಅರಿವಾಯಿತು. ಆದರೂ ಕೂಡಾ, ಸ್ಕ್ರಿಪ್ಟ್ ನನ್ನ ಹೃದಯವನ್ನು ಮುಟ್ಟಿದ ಕಾರಣ ನಾನು ಅದನ್ನು ಸಂಪೂರ್ಣ ಮನಸ್ಸಿನಿಂದ ಆರಿಸಿಕೊಂಡೆ. ನಾವು ಯೋಜನೆಗಳನ್ನು ಆಯ್ಕೆಮಾಡುವಾಗ ಈ ಅಂಶಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರಬೇಕು" ಎಂದು ಖ್ಯಾತ ನಟಿ ಕೃತಿ ಸನನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಸೂಪರ್ ವುಮನ್ ಪಾತ್ರವನ್ನು ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭವಿಷ್ಯದಲ್ಲಿ ನಕಾರಾತ್ಮಕ ಪಾತ್ರದಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸುವ ಬಯಕೆಯನ್ನು ಕೂಡಾ ವ್ಯಕ್ತಪಡಿಸಿದರು.

'ದೋ ಪಟ್ಟಿ' ಚಿತ್ರದಲ್ಲಿನ ತನ್ನ ಪಾತ್ರವನ್ನು ಮತ್ತು ಸೂಕ್ಷ್ಮವಾಗಿ ಪರಿಗಣಿಸುವುದಾಗಿ ನಟಿ ಕೃತಿ ಸನನ್ ಅವರು ಹೇಳಿದರು ಮತ್ತು ಕೌಟುಂಬಿಕ ಹಿಂಸೆಯ ವಿಷಯವನ್ನು “ತನ್ನ ಹೃದಯವನ್ನು ಸ್ಪರ್ಶಿಸುವ ವಿಷಯ” ಎಂದು ಹೇಳಿದ್ದಾರೆ. "ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ" ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, ಸಂಪೂರ್ಣವಾಗಿ ನೇರ ಮುಖದ ರೋಬೋಟ್ ಪಾತ್ರವನ್ನು ನಿರ್ವಹಿಸುವುದು ಹೇಗೆ ಕಷ್ಟವಾಯಿತು ಮತ್ತು ಆ ಪಾತ್ರವನ್ನು ಹೇಗೆ ಸ್ವೀಕರಿಸಲಾಯಿತು ಎಂಬುದನ್ನು ನಟಿ ಕೃತಿ ಸನನ್ ಅವರು ವಿವರಿಸಿದ್ದಾರೆ.

“ಇತ್ತೀಚಿನ ಚಲನಚಿತ್ರಗಳಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ನಕಾರಾತ್ಮಕ ಪಾತ್ರಗಳು ಮತ್ತು ಪಾತ್ರಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿ ಕೃತಿ ಸನನ್ ಅವರು, ಪ್ರೇಕ್ಷಕರು ನಕಾರಾತ್ಮಕ (ಬೂದು) ಪಾತ್ರಗಳನ್ನು ಇಷ್ಟಪಡುತ್ತಾರೆ ಮತ್ತು ಆ ಪಾತ್ರಗಲ ಜೊತೆಗೆ ತಮ್ಮನ್ನು ಚೆನ್ನಾಗಿ ಸಂಪರ್ಕಿಸುತ್ತಾರೆ ಮತ್ತು ಇತ್ತೀಚಿನ ದಿನಗಳಲ್ಲಿ 'ಪುರುಷ ನೋಟ' ಬದಲಾಗುತ್ತಿದೆ, 'ಪರಿಪೂರ್ಣ' ಹುಡುಗಿಗೆ ಅಥವಾ ಮಹಿಳೆಯರಿಗೆ ಬೇಡಿಕೆ ಇತ್ತೀಚೆಗಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ “ ಎಂದು ನಟಿ ಕೃತಿ ಸನನ್ ಅವರು ಹೇಳಿದರು. 

ಒಟಿಟಿ ವೇದಿಕೆ  ಗಳ ಮೂಲಕ ಉದ್ಯಮಕ್ಕೆ ಪ್ರವೇಶ ಪಡೆದ ಮಹಿಳಾ ಬರಹಗಾರರ ಹೊಸ ಅವಕಾಶಗಳಿಗೆ ನಟಿ ಕೃತಿ ಸನನ್ ಅವರು ಅಪಾರ ಮೆಚ್ಚುಗೆಯನ್ನು ಹೊಂದಿದ್ದಾರೆ. “ಒಟಿಟಿ ವೇದಿಕೆಗಳು ನೂರಾರು ದೇಶಗಳಲ್ಲಿ ಮಹಿಳಾ ಚಲನಚಿತ್ರ ನಿರ್ಮಾಪಕರಿಗೆ ಉತ್ತಮ ತಲುಪುವಿಕೆಯನ್ನು ನೀಡುತ್ತಿವೆ” ಎಂದು ನಟಿ ಕೃತಿ ಸನನ್ ಅವರು  ಹೇಳಿದರು.

“ಮಹಿಳೆಯರು ತಮ್ಮನ್ನು ತಾವು ಬೆಳೆಸಿಕೊಳ್ಳಬೇಕು ಮತ್ತು ಉತ್ತಮ ಕೆಲಸ ಮಾಡಬೇಕು; ನೂರಕ್ಕೆ ನೂರು ಪ್ರತಿಶತ ಶ್ರಮವನ್ನು ಅವರು ನೀಡಬೇಕು, ಸದಾ ಕುತೂಹಲದಿಂದ ಇರಬೇಕು ಮತ್ತು ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಬೇಕು” ಎಂದು ನಟಿ ಕೃತಿ ಸನನ್ ಅವರು ಹೇಳಿದರು.

 

*****
 

iffi reel

(Release ID: 2077401) Visitor Counter : 4