ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಐಎಫ್ಎಫ್ಐ ನಲ್ಲಿ ಶ್ರೀ ಆಂಥೋನ್ ಮುಲ್ಲರ್ ಅವರ ವೈವಿಧ್ಯಮಯ ಮಾಸ್ಟರ್‌ಕ್ಲಾಸ್ ನಲ್ಲಿ ಬಾರ್ಕೊದ ಹೆಚ್.ಡಿ.ಆರ್. ತಂತ್ರಜ್ಞಾನವನ್ನು ವಿವರಿಸಲಾಯಿತು
'ನಮ್ಮಲ್ಲಿ 3 ರೂಪ ತಂತ್ರವ್ಯೂಹವಿದೆ: ಚಲನಚಿತ್ರ ಪ್ರೇಕ್ಷಕರಿಗೆ ಶಿಕ್ಷಣ ನೀಡಿ, ನಿರ್ಮಾಣದ ನಂತರದ ವ್ಯವಸ್ಥೆಗಳನ್ನು ಉತ್ತಮಗೊಳಿಸಿ ಮತ್ತು ಪ್ರದರ್ಶನ ಸಭಾಂಗಣಗಳನ್ನು ಪ್ರೋತ್ಸಾಹಿಸಿ': ಶ್ರೀ ಆಂಥೋನ್ ಮುಲ್ಲರ್
ಹೆಚ್.ಡಿ.ಆರ್ ಸುಪೀರಿಯರ್ ಕಾಂಟ್ರಾಸ್ಟ್ ಮತ್ತು ಅಸಾಧಾರಣ ಏಕರೂಪತೆಯನ್ನು ನೀಡುತ್ತದೆ
ಗೋವಾದ ಕಲಾ ಅಕಾಡೆಮಿಯಲ್ಲಿ 55ನೇ ಐಎಫ್‌ಎಫ್‌ಐನಲ್ಲಿ ಎಚ್‌ಡಿಆರ್ ತಂತ್ರಜ್ಞಾನದ ಅನುಭವದೊಂದಿಗೆ ಪ್ರತಿನಿಧಿಗಳಿಗೆ ಐದನೇ ದಿನದ ಕಾರ್ಯಾಕ್ರಮ ಪ್ರಾರಂಭವಾಯಿತು. 'ಲೇಸರ್ ಫಾರ್ ಪೋಸ್ಟ್-ಪ್ರೊಡಕ್ಷನ್ ಮತ್ತು ಎವಲ್ಯೂಷನ್ ಟು ಹೆಚ್.ಡಿ.ಆರ್' ಕುರಿತು ನಡೆದ ದಿನದ ಮೊದಲ ಮಾಸ್ಟರ್‌ಕ್ಲಾಸ್ ನಲ್ಲಿ, ಬಾರ್ಕೊ ಸಿನಿಮಾದ ಜಾಗತಿಕ ಕಾರ್ಯತಂತ್ರದ ನಿರ್ದೇಶಕರಾದ ಶ್ರೀ ಆಂಥೋನ್ ಮುಲ್ಲರ್, ಬಾರ್ಕೊದ ಪೇಟೆಂಟ್ ಪಡೆದ ಹೆಚ್.ಡಿ.ಆರ್ ತಂತ್ರಜ್ಞಾನದೊಂದಿಗೆ ಪೋಸ್ಟ್-ಪ್ರೊಡಕ್ಷನ್ ಮತ್ತು ಪ್ರೊಜೆಕ್ಷನ್ ನ ಭವಿಷ್ಯದ ಬಗ್ಗೆ ಪ್ರೇಕ್ಷಕರಿಗೆ ತಿಳುವಳಿಕೆ ನೀಡಿದರು.
ಆರಂಭದಲ್ಲಿ, ಆಂಥೋನ್ ಸಿನಿಮಾದಲ್ಲಿನ ಹೆಚ್.ಡಿ.ಆರ್ ತಂತ್ರಜ್ಞಾನದ ಪರಿಣಾಮಗಳ ಕುರಿತು ಆಡಿಯೊ-ವಿಶುವಲ್ ಪ್ರಸ್ತುತಿಯೊಂದಿಗೆ ಪ್ರತಿನಿಧಿಗಳನ್ನು ವಿಷಯದ ಮುಖ್ಯ ಧಾರೆಗೆ ಆಕರ್ಷಿಸಿದರು ಮತ್ತು ನಂತರ ಅರ್ಧ ಘಂಟೆಯ ಅವಧಿಯಲ್ಲಿ ವಿಷಯದ ಬಗ್ಗೆ, ಸರಳ ರೀತಿಯಲ್ಲಿ ವಿವರಿಸಿದರು.
ಹೆಚ್.ಡಿ. ಯುಗದಲ್ಲಿ, ಎಲ್ಲಾ ಪ್ರೇಕ್ಷಕರು ಎಲ್.ಇ.ಡಿ, ಕ್ಯೂ.ಎಲ್.ಇ.ಡಿ ಸ್ಕ್ರೀನಿಂಗ್ ಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ; ಐ-ಫೋನ್ ಅಥವಾ, ಐ-ಪ್ಯಾಡ್ ಹೆಚ್.ಡಿ.ಆರ್ ಪರದೆಯ ಮೂಲಕವೂ ಸಹ ವೀಕ್ಷಿಸಬಹುದು. ಸಿನಿಮಾ ಪ್ರೊಜೆಕ್ಷನ್, ಅಥವಾ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ, ಹೆಚ್.ಡಿ.ಆರ್ ಅನ್ನುವುದು, ಸಾಕಷ್ಟು ಮುಂದುವರಿದಿದ್ದು, ಕ್ರಾಂತಿಕಾರಿ ಪರಿಕಲ್ಪನೆಯಾಗಿದೆ. ಶ್ರೀ ಆಂಥೋನ್ ಅವರ ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತ 99% ಪೋಸ್ಟ್-ಪ್ರೊಡಕ್ಷನ್ ಹೌಸ್‌ಗಳು ಇನ್ನೂ ಲ್ಯಾಂಪ್ ಆಧಾರಿತ ಸೆಟಪ್ ಅನ್ನು ಬಳಸುತ್ತವೆ.
ಬಾರ್ಕೊದೊಂದಿಗೆ, ಶ್ರೀ ಆಂಥೋನ್ ಆ ಸನ್ನಿವೇಶವನ್ನು ಬದಲಾಯಿಸುವ ಗುರಿಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ಅವರ ಮಾತುಗಳಲ್ಲಿ ಹೇಳುವುದಾದರೆ, "ನಮ್ಮಲ್ಲಿ 3 ರೂಪ ತಂತ್ರಗಳಿವೆ: ಚಲನಚಿತ್ರ ಪ್ರೇಕ್ಷಕರಿಗೆ ಶಿಕ್ಷಣ ನೀಡಿ, ನಿರ್ಮಾಣದ ನಂತರದ ವ್ಯವಸ್ಥೆಗಳನ್ನು ಉತ್ತಮಗೊಳಿಸಿ ಮತ್ತು ಪ್ರದರ್ಶನ ಸಭಾಂಗಣಗಳನ್ನು ಪ್ರೋತ್ಸಾಹಿಸಿ."
ಸಂಪೂರ್ಣ ಮಾಸ್ಟರ್‌ಕ್ಲಾಸ್ ನಲ್ಲಿ ಶ್ರೀ ಆಂಥೋನ್ ಎಸ್.ಡಿ.ಆರ್ ಬದಲಾಗಿ ಹೆಚ್.ಡಿ.ಆರ್ ಅನ್ನು ಬಳಸುವಾಗ ಸಿಗುವ ಅನುಕೂಲಗಳನ್ನು ನಿರ್ದಿಷ್ಟವಾಗಿ ವಿವರಿಸಿದರು ಮತ್ತು ಉದಾಹರಣೆಗಳು, ವಿವರಣೆಗಳು ಮತ್ತು ಅಂಕಿಅಂಶಗಳೊಂದಿಗೆ ಅವರ ವಿಷಯಗಳನ್ನು ಸಮರ್ಥಿಸಿದರು. ಲ್ಯಾಂಪ್ ಆಧಾರಿತ ಪ್ರೊಜೆಕ್ಷನ್‌ನಿಂದ ಡಿಜಿಟಲ್ ಪ್ರೊಜೆಕ್ಷನ್ ಟೆಕ್ನಾಲಜಿಯ ದಾರಿ ಮೂಲಕ ಲೇಸರ್ ಆಧಾರಿತ ಹೆಚ್.ಡಿ.ಆರ್ ತಂತ್ರಗಾರಿಕೆಯತ್ತ ಶ್ರೀ ಅಂಥೋನ್ ಅವರೊಂದಿಗೆ ನೂತನ ತಂತ್ರಜ್ಞಾನದತ್ತ ಪ್ರಯಾಣಿಸುವುದು ಆಸಕ್ತ ಪ್ರೇಕ್ಷಕರಿಗೆ ಸಾಕಷ್ಟು ಆಕರ್ಷಕ ಅನುಭವವಾಗಿತ್ತು.
ಲೇಸರ್ ಎಚ್‌ಡಿಆರ್ ತಂತ್ರಜ್ಞಾನವು ಸಿನೆಮಾ ಮಾಡುವ ಮತ್ತು ಅನುಭವಿಸುವ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಎಸ್‌ಡಿಆರ್ ನಿಂದ ಭಿನ್ನ ಹೆಜ್ಜೆಯಾಗಲಿದೆ. ಮತ್ತು ಆಂಥೋನ್ ಮಾಡಿದ ತಂತ್ರಜ್ಞಾನಗಳ ಮೂಲಕ ಹೋದರೆ, ಅದು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿರುತ್ತದೆ. ಆಂಥೋನ್ ಅವರು ತಮ್ಮ ಕೆಲಸದ ಸ್ಥಳದಲ್ಲಿ ನಿರಂತರವಾಗಿ ಬಾರ್ಕೊದ ಎಚ್‌ಡಿಆರ್‌ಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ, ಅವರ ಹಿಂದಿನ ಅಭಿರುಚಿ ಈಗ ಹಾಳಾಗಿದೆ ಎಂದು ಹೇಳಿದರು. ಮತ್ತು ಅವರು ತಮ್ಮ ಮನೆಯಲ್ಲಿ ಸಂಪೂರ್ಣ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಲೇಸರ್ ಆಧಾರಿತ ಹೆಚ್.ಡಿ.ಆರ್ ತಂತ್ರಜ್ಞಾನಕ್ಕೆ ಉನ್ನತೀಕರಣ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರಪ್ರೇಮಿಗಳಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಳನೋಟಗಳನ್ನು ನೀಡಬೇಕಾಗಿದೆ . ಕಳೆದ ವಾರ ಮೊದಲ ಬಾರಿಗೆ ಯುಎಸ್ ನಲ್ಲಿ ಮತ್ತು ನಂತರ ಲಂಡನ್ ನಲ್ಲಿ ಪ್ರಾರಂಭಿಸುವ ಮೂಲಕ ಬಾರ್ಕೊ ಈಗಾಗಲೇ ಅದರ ಪ್ರಚಾರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ; ಮತ್ತು, ಆರು ಶೀರ್ಷಿಕೆಗಳನ್ನು ಭದ್ರಪಡಿಸುವ ಮೂಲಕ ಮತ್ತು ಅವುಗಳ ಸೆಟಪ್‌ನೊಂದಿಗೆ ಎಲ್ಲಾ ಕಡೆ ಪ್ರಕ್ಷೇಪಿಸಲಾಗುತ್ತದೆ ಎಂದು ಹೇಳಿದರು
ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ, ಶ್ರೀ ಆಂಥೋನ್ ಅವರು ಉತ್ತಮ ಬಣ್ಣದ ಶ್ರೇಣೀಕರಣ ಮತ್ತು ವ್ಯತಿರಿಕ್ತತೆಯೊಂದಿಗೆ ಬಾರ್ಕೊ ತಂತ್ರಜ್ಞಾನವು ಹೆಚ್ಚು ನಮ್ಯತೆಗಳನ್ನು ನೀಡುತ್ತದೆ. ಕಪ್ಪು ಮತ್ತು ಬಿಳಿಯ ಕ್ಲಾಸಿಕ್‌ಗಳ ಕಡೆಗೆ ಕಡಿಮೆ ಆಕರ್ಷಿತರಾಗಲು ಮುಂಬರುವ ಪೀಳಿಗೆಗೆ ಉತ್ತಮ ಪ್ರಚೋದನೆಯಾಗಲಿದೆ. ಪ್ಯಾಲೆಟ್‌ನಲ್ಲಿ ಹೆಚ್ಚು ಗಾಢವಾದ ಕಪ್ಪು ಮತ್ತು ಗಾಢವಾದ ಬಿಳಿ ಬಣ್ಣವನ್ನು ನೀಡುವ ಬದಲು, ಈ ತಂತ್ರಜ್ಞಾನವು ಮುಂಬರುವ ದಿನಗಳಲ್ಲಿ ಏಕವರ್ಣದ ಚಲನಚಿತ್ರಗಳನ್ನು ಆನಂದಿಸುವ ಅನುಭವವನ್ನು ಹೆಚ್ಚು ತಲ್ಲೀನಗೊಳಿಸುತ್ತದೆ ಎಂದು ಹೇಳಿದರು
ಶ್ರೀ ಆಂಥೋನ್ ನಿಂದ ಸುಪೀರಿಯರ್ ಕಾಂಟ್ರಾಸ್ಟ್ ಮತ್ತು ಅಸಾಧಾರಣ ಏಕರೂಪತೆಯನ್ನು ಹೊಂದುವ ಭರವಸೆಯೊಂದಿಗೆ, ಬಾರ್ಕೊದ ಲೇಸರ್ ಎಚ್‌ಡಿಆರ್‌ನೊಂದಿಗೆ ಪ್ರಕಾಶಮಾನವಾದ ನಾಳೆಯನ್ನು ನಮ್ಮ ಚಲನಚಿತ್ರಗಳಲ್ಲಿ ಕೂಡ ವೀಕ್ಷಿಸಲು ಹಾತೊರೆದರು, ಹಾಗೂ ಈ ಮನಸ್ಸಿನೊಂದಿಗೆ ಭಾಗವಹಿಸಿದ ಚಿತ್ರ ಪ್ರೇಮಿಗಳು ಈ ಕಾರ್ಯಕ್ರಮ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
*****
(Release ID: 2076819)
Visitor Counter : 4