ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಜಾನಪದ ಸಾಹಿತ್ಯ ಮತ್ತು ನನ್ನ ಬಾಲ್ಯದ ಅನುಭವದಿಂದ ಪ್ರೇರಿತ ಕಿರು ಚಿತ್ರವಾಗಿದೆ ‘ಸೂರ್ಯಕಾಂತಿಗಳೇ ಮೊದಲು ತಿಳಿದದ್ದು (ಸನ್ ಫ್ಲವರ್ಸ್ ವೇರ್ ದ ಫರ್ಸ್ಟ್ ವೈನ್ಸ್ ಟು ನೊ)' : ನಿರ್ದೇಶಕ ಶ್ರೀ ಚಿದಾನಂದ ಎಸ್. ನಾಯ್ಕ್
ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರುಗಳಿಗೆ ತಮ್ಮ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಲು ಕಿರುಚಿತ್ರವು ಉತ್ತಮ ಅವಕಾಶವಾಗಿದೆ: ನಿರ್ದೇಶಕ ಶ್ರೀ ಚಿದಾನಂದ ಎಸ್. ನಾಯ್ಕ್
55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ - ಐ.ಎಫ್.ಎಫ್.ಐ.) ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದ ಕಿರುಚಿತ್ರ ಸನ್ ಫ್ಲವರ್ಸ್ ತಂಡವು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡರು, ಹಾಗೂ ಸಿನಿಮೀಯ ಯೋಜನೆಯ ತಯಾರಿಕೆಯ ಹಿನ್ನೆಲೆ , ವಿವಿಧ ಹಂತಗಳ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.

‘ಸೂರ್ಯಕಾಂತಿಗಳೇ ಮೊದಲು ತಿಳಿದದ್ದು (ಸನ್ ಫ್ಲವರ್ಸ್ ವೇರ್ ದ ಫರ್ಸ್ಟ್ ವೈನ್ಸ್ ಟು ನೊ) ’ ಕಿರು ಚಿತ್ರ ತಯಾರಿಸಲು ಭಾರತೀಯ ಜಾನಪದ ಮತ್ತು ಅವರ ಬಾಲ್ಯದ ಅನುಭವಗಳಲ್ಲಿ ಆಗಿರುವ ಪ್ರೇರಣೆ ಆಳವಾಗಿ ಬೇರೂರಿದೆ ಎಂದು ನಿರ್ದೇಶಕ ಶ್ರೀ ಚಿದಾನಂದ ಎಸ್. ನಾಯ್ಕ್ ಅವರು ಮಾಧ್ಯಮ ಸಂವಾದದ ಸಂದರ್ಭದಲ್ಲಿ ಹೇಳಿದರು

ಸಾಂಪ್ರದಾಯಿಕ ಕಥೆಗಳು ಮತ್ತು ವೈಯಕ್ತಿಕ ನೆನಪುಗಳ ಕಾವ್ಯಾತ್ಮಕ ಸೌಂದರ್ಯವನ್ನು ಒಟ್ಟಿಗೆ ಹೆಣೆಯುವ ನಿರೂಪಣೆಯನ್ನು ಆ ನಿಟ್ಟಿನಲ್ಲಿ ಪೋಣಿಸಿ ಕಿರು ಚಿತ್ರ ರಚಿಸಿದರು. "ನೈಜ-ಜೀವನದ ಅನುಭವದ ಕಾವ್ಯಾತ್ಮಕ ಅಭಿವ್ಯಕ್ತಿ" ಎಂದು ವಿವರಿಸಿದರು, ಈ ಯೋಜನೆಯು ಸಾಂಸ್ಕೃತಿಕ ವಿಷಯಗಳು ಮತ್ತು ಕಥೆ ಹೇಳುವಿಕೆಯ ಅವರ ಅನ್ವೇಷಣೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ವಿವರಿಸಿದರು.
ಚಲನಚಿತ್ರ ನಿರ್ಮಾಪಕರಾಗಿ ಅವರ ಪ್ರಯಾಣದ ಬಗ್ಗೆ ಕೇಳಿದಾಗ, "ಯುವ ಮತ್ತು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಕಿರುಚಿತ್ರಗಳು ವಿಶೇಷವಾದ ಅವಕಾಶವಾಗಿರುತ್ತದೆ" ಎಂದು ಚಿದಾನಂದ ಅವರು ಹೇಳಿದರು. "ಸೃಷ್ಟ ಕಿರು ಚಿತ್ರವು ತಮ್ಮ ಸಿನಿಮೀಯ ಪ್ರಯಾಣವನ್ನು ಪ್ರಾರಂಭಿಸಲು ಮಹತ್ವಾಕಾಂಕ್ಷೆಯ ಚಲನಚಿತ್ರ ನಿರ್ಮಾಪಕರಿಗೆ ಉತ್ತಮ ವೇದಿಕೆಯಾಗಿದೆ, ಅವರಿಗೆ ವಿಭಿನ್ನ ಶೈಲಿಗಳು, ತಂತ್ರಗಳು ಮತ್ತು ಕಥೆ ಹೇಳುವ ಪ್ರಕಾರಗಳನ್ನು ಪ್ರಯೋಗಿಸಲು ಅವಕಾಶವನ್ನು ಕಿರು ಚಿತ್ರ ನೀಡುತ್ತದೆ" ಎಂದು ಚಿದಾನಂದ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
"ಚಲನಚಿತ್ರ ನಿರ್ಮಾಪಕರಾಗಿ, ಯಾವಾಗಲೂ ಸಮಯ, ಸ್ಥಳ ಮತ್ತು ವೆಚ್ಚದ ನಡುವೆ ಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ, ಆದರೆ ಚಲನಚಿತ್ರವನ್ನು ಅದರ ಪ್ರೇಕ್ಷಕರಿಗೆ ಮೌಲ್ಯವನ್ನು ನೀಡುವಂತೆ ಮಾಡಲಾಗುತ್ತದೆ" ಎಂದು ಚಿದಾನಂದ ಅವರು ಹೇಳಿದರು.
ಚಿತ್ರದ ನಿರ್ಮಾಣ ಪ್ರಕ್ರಿಯೆಯು ಅಷ್ಟೇ ಗಮನಾರ್ಹವಾಗಿದೆ, ಸೀಮಿತ ಸಂಪನ್ಮೂಲಗಳ ನಿರ್ಬಂಧಗಳೊಳಗೆ ಚಲನಚಿತ್ರವನ್ನು ಜೀವಂತವಾಗಿ ತರುವ ಸವಾಲುಗಳ ಕುರಿತು ಚಿತ್ರ ನಿರ್ಮಾಣ ವಿನ್ಯಾಸಕ ಪ್ರಣವ್ ಖೋತ್ ಅವರು ವಿವರಿಸಿದರು. "ಪುಣೆಯ ಎಫ್.ಟಿ.ಐ.ಐ.ನಿಂದ ತಯಾರಿಸಲ್ಪಟ್ಟಿರುವ, ‘ಸೂರ್ಯಕಾಂತಿಗಳೇ ಮೊದಲು ತಿಳಿದದ್ದು ( ಸನ್ ಫ್ಲವರ್ಸ್ ವೇರ್ ದ ಫರ್ಸ್ಟ್ ವೈನ್ಸ್ ಟು ನೊ) ಕಿರು ಚಿತ್ರ ಯೋಜನೆಯಾಗಿದ್ದು, ನಮಗೆ ಲಭ್ಯವಿರುವ ಸೀಮಿತ ಮಾರ್ಗಸೂಚಿಗಳು ಮತ್ತು ಲಭ್ಯ ಸಂಪನ್ಮೂಲಗಳೊಳಗೆ ಸೃಜನಾತ್ಮಕವಾಗಿ ಯೋಚಿಸಲು ಮತ್ತು ನವೀನ ಪರಿಹಾರಗಳನ್ನು ಹುಡುಕಲು ನಮ್ಮನ್ನು ಅನಿವಾರ್ಯವಾಗಿಸಿತು" ಎಂದು ವಿನ್ಯಾಸಕ ಪ್ರಣವ್ ಖೋತ್ ಅವರು ಹೇಳಿದರು.
ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ 97ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಧಿಕೃತವಾಗಿ ಸನ್‌ಫ್ಲವರ್ಸ್ ಕಿರು ಚಿತ್ರ ಅರ್ಹತೆಯನ್ನು ಪಡೆಯಿತು. ಈ ಗಮನಾರ್ಹ ಸಾಧನೆಯು ಕೇನ್ಸ್ ಚಲನಚಿತ್ರೋತ್ಸವದ ಲಾ ಸಿನೆಫ್ ಆಯ್ಕೆಯಲ್ಲಿ ಚಲನಚಿತ್ರವು 1 ನೇ ಬಹುಮಾನವನ್ನು ಸ್ವೀಕರಿಸುವ ಹಂತಕ್ಕೆ ತಲುಪಿಸಿತು. ಈ ಮೂಲಕ ಭಾರತೀಯ ಜಾನಪದ ಕಥೆಗಳು ಮತ್ತು ಸಂಪ್ರದಾಯಗಳಿಂದ ಪ್ರೇರಿತವಾದ ಈ ಕನ್ನಡ ಭಾಷೆಯ ಕಿರು ಚಿತ್ರ ಯೋಜನೆಯೊಂದು ಜಾಗತಿಕ ಮನ್ನಣೆಯನ್ನು ಗಳಿಸಿತು.

ಕಿರು ಚಿತ್ರದ ಬಗ್ಗೆ:
ಬಣ್ಣ | 16’ | 2023 | ಕನ್ನಡ
ಹಳ್ಳಿಯ ಹುಂಜವನ್ನು ಕದಿಯುವ ವಯಸ್ಸಾದ ಮಹಿಳೆಯ ಕಥೆಯಿದು. ಈ ಘಟನೆ ಸಮುದಾಯವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುತ್ತದೆ. ಹುಂಜವನ್ನು ಮರಳಿ ತರಲು, ಭವಿಷ್ಯವಾಣಿಯ ಮೊರೆಹೋಗುತ್ತಾರೆ. ಹಾಗೂ ವಯಸ್ಸಾದ ಮಹಿಳೆಯ ಕುಟುಂಬವನ್ನು ಗ್ರಾಮದಿಂದ ಗಡಿಪಾರು ಮಾಡಿ ಕಳುಹಿಸಿಕೊಡಲಾಗುತ್ತದೆ.
ಕಿರು ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗಳ ಬಗ್ಗೆ ವಿವರ:
ಚಿತ್ರ ನಿರ್ದೇಶಕರು: ಚಿದಾನಂದ ಎಸ್. ನಾಯ್ಕ್
ಚಿತ್ರ ನಿರ್ಮಾಪಕರು: ಎಫ್.ಟಿ.ಐ.ಐ., ಪುಣೆ
ಚಿತ್ರಕಥೆಗಾರ: ಚಿದಾನಂದ ಎಸ್. ನಾಯ್ಕ್
ಚಿತ್ರ ಸಂಕಲನಕಾರ: ಮನೋಜ್ ವಿ.
ಚಿತ್ರ ಛಾಯಾಗ್ರಾಹಕ: ಸೂರಜ್ ಠಾಕೂರ್
*****
(Release ID: 2076547)