ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

55ನೇ ಐ.ಎಫ್.ಎಫ್.ಐ ಚಲನಚಿತ್ರೋತ್ಸವದಲ್ಲಿ ನಕುಲ್ ಕಾಮ್ಟೆ ಮತ್ತು ಎರಿಕ್ ಹೋಹೆನ್  ಅವರ 'ಚಲನಚಿತ್ರದಲ್ಲಿ ಧ್ವನಿಯ ಕಲೆ ಮತ್ತು ವಿಜ್ಞಾನ'ದ ವಿಷಯವನ್ನು ಪ್ರಸ್ತುತಪಡಿಸಲಾಯಿತು 


ಚಲನಚಿತ್ರದಲ್ಲಿನ ಧ್ವನಿಯು ಖಾಲಿ ಜಾಗಗಳನ್ನು ತುಂಬುವುದಲ್ಲದೆ, ಕಥಾವಸ್ತುವಿನ ಜೊತೆಗೆ ಪ್ರೇಕ್ಷಕರನ್ನು ಒಯ್ಯುತ್ತದೆ : ಎರಿಕ್ ಹೋಹೆನ್

ಕೃತಕ ಬುದ್ಧಿಮತ್ತೆಯು ನಮಗೆ ಆಯ್ಕೆಗಳನ್ನು ನೀಡುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಪ್ರಸ್ತುತಿಯ ಸತ್ಯಾಸತ್ಯತೆಯನ್ನು ವಿವರಿಸುವುದಿಲ್ಲ, ಇದು ಮೂಲಭೂತವಾಗಿ ಮಾನವನ ಕಥೆ ಹೇಳುವಿಕೆಯ ಪ್ರಮುಖ ಅಂಶವಾಗಿದೆ: ನಕುಲ್ ಕಾಮ್ಟೆ

ಗೋವಾದಲ್ಲಿ ನಡೆದ 55ನೇ ಐ.ಎಫ್.ಎಫ್.ಐ ಚಲನಚಿತ್ರೋತ್ಸವದಲ್ಲಿ,  ಹೆಸರಾಂತ ಧ್ವನಿ ವಿನ್ಯಾಸ ಕಲಾವಿದರಾದ ನಕುಲ್ ಕಾಮ್ಟೆ ಮತ್ತು ಎರಿಕ್ ಹೋಹೆನ್ ಅವರು ಧ್ವನಿ ವಿನ್ಯಾಸದ ಕಲೆ ಮತ್ತು ವಿಜ್ಞಾನದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಎರಡು ಬಾರಿ ರಾಷ್ಟ್ರಪ್ರಶಸ್ತಿ ವಿಜೇತರಾದ ಕಾಮ್ಟೆ ಅವರು ಲಗಾನ್ ಮತ್ತು ದಿಲ್ ಚಾಹ್ತಾ ಹೈ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಾರೆ. ಎರಡು ಬಾರಿ ಎಮ್ಮಿ ಪ್ರಶಸ್ತಿ ವಿಜೇತ ಹೋಹೆನ್ ಅವರು ದಿ ಕ್ವೀನ್ಸ್ ಗ್ಯಾಂಬಿಟ್ ಮತ್ತು ಡೀಪ್ ವಾಟರ್ ಹಾರಿಜಾನ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇಬ್ಬರೂ ತಜ್ಞರು ಧ್ವನಿ ತಂತ್ರಜ್ಞಾನ, ಕಥೆ ಹೇಳುವಿಕೆಯಲ್ಲಿ ಅದರ ಪಾತ್ರ ಮತ್ತು ಚಲನಚಿತ್ರ ಉದ್ಯಮದಲ್ಲಿ ಧ್ವನಿ ವಿನ್ಯಾಸದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಕುರಿತು ತಮ್ಮ ಆಲೋಚನಗಳನ್ನು ಹಂಚಿಕೊಂಡರು.

ಧ್ವನಿ ವಿನ್ಯಾಸದ ಬದಲಾಗುತ್ತಿರುವ ಸ್ವರೂಪದ ಕುರಿತು ಕಾಮ್ಟೆ ಮತ್ತು ಹೋಹೆನ್ ಅವರ ಆಲೋಚನೆಗಳೊಂದಿಗೆ ಅಧಿವೇಶನವು ಪ್ರಾರಂಭವಾಯಿತು. ತಂತ್ರಜ್ಞಾನದ ಪ್ರಗತಿಯಿಂದ ಸೃಷ್ಟಿಯಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ಕಾಮ್ಟೆ ಅವರು ತಮ್ಮ ಆಲೋಚನೆಗಳನ್ನು ನೀಡಿದರೆ, ಹೋಹೆನ್ ಧ್ವನಿ ಉತ್ಪಾದನೆಯಲ್ಲಿ ಮಾನವ ಅಂಶದ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು.

ಈ ಅಧಿವೇಶನವು ಉದಯೋನ್ಮುಖ ತಂತ್ರಜ್ಞಾನಗಳ ಪ್ರಭಾವವನ್ನು ಚರ್ಚಿಸಿತು, ವಿಶೇಷವಾಗಿ ಕೃತಕ ಬುದ್ಧಿಮತ್ತೆ (ಎಐ), ಧ್ವನಿ ವಿನ್ಯಾಸದ ಮೇಲೆ. "ಕೃತಕ ಬುದ್ಧಿಮತ್ತೆಯು ಆಯ್ಕೆಗಳನ್ನು ಒದಗಿಸುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಅಥವಾ ಪ್ರದರ್ಶನಗಳ ದೃಢೀಕರಣವನ್ನು ವಿವರಿಸುವುದಿಲ್ಲ, ಇದು ಮೂಲಭೂತವಾಗಿ ಮಾನವನ ಸ್ವಾಭಾವಿಕ ಕಥೆ ಹೇಳುವಿಕೆಯ ಪ್ರಮುಖ ಅಂಶವಾಗಿದೆ " ಎಂದು ಹೋಹೆನ್ ಹೇಳಿದರು. ಕಾಮ್ಟೆ ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದರು ಮತ್ತು ಧ್ವನಿ ವಿನ್ಯಾಸದಲ್ಲಿ ನರಮನುಷ್ಯನ ವಿವೇಚನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ಸಂಕೀರ್ಣ ಧ್ವನಿ ಸಂಯೋಜನೆಯಲ್ಲಿ ಧ್ವನಿ ವಿನ್ಯಾಸಕರು ಎದುರಿಸುವ ಸವಾಲುಗಳನ್ನು ಸಹ ಚರ್ಚಿಸಲಾಯಿತು "ಚಲನಚಿತ್ರದಲ್ಲಿನ ಧ್ವನಿಯು ಪ್ರೇಕ್ಷಕರಿಗೆ ಭಾವಾತಿರೇಕ ಎನಿಸದೆ ನಿರ್ದೇಶಕರು ಏನನ್ನು ಹೇಳಲು ಬಯಸುತ್ತಾರೆ ಎನ್ನುವುದನ್ನು ತಿಳಿಸುತ್ತದೆ" ಎಂದು ಹೋಹೆನ್ ವಿವರಿಸಿದರು. ಸಿನಿಮಾದ ಧ್ವನಿಯಲ್ಲಿ ಅಗತ್ಯವಿರುವ ಮಟ್ಟವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಕಾಮ್ಟೆ ಎತ್ತಿ ತೋರಿಸಿದರು. "ಇಂದಿನ ಚಲನಚಿತ್ರಗಳು ಸಾಮಾನ್ಯವಾಗಿ ಸ್ವೀಕಾರಾರ್ಹ ಡೆಸಿಬಲ್ ಮಿತಿಯನ್ನು ಮೀರುತ್ತವೆ, ಇದು ಪ್ರೇಕ್ಷಕರು ಸಿನಿಮಾವನ್ನು ಆನಂದಿಸುವುದಕ್ಕೆ  ಅಡ್ಡಿಯಾಗುತ್ತದೆ" ಎಂದು ಅವರು ಹೇಳಿದರು.

ಹಾರರ್ ಅಥವಾ ಭಯಾನಕ ಚಿತ್ರಗಳಲ್ಲಿನ ಧ್ವನಿ ವಿನ್ಯಾಸದ ಬಗ್ಗೆಯೂ ಚರ್ಚಿಸಲಾಯಿತು. ಕಾಮ್ಟೆ ಹೇಳಿದರು, "ಬಲವಾದ ಕಥಾವಸ್ತುವು ಧ್ವನಿಯಿಲ್ಲದಿದ್ದರೂ ಸಹ ಚಲನಚಿತ್ರವನ್ನು ಯಶಸ್ವಿಗೊಳಿಸಬಹುದು" ಎಂದು ಹೋಹೆನ್ ಹೇಳಿದರು, "ವಿರಳವಾದ ಧ್ವನಿಗಳು ಪ್ರೇಕ್ಷಕರಿಗೆ ಕಥೆಯಲ್ಲಿ ಮುಳುಗಲು ಅನುವು ಮಾಡಿಕೊಡುತ್ತದೆ." ಚಲನಚಿತ್ರದ ಭಾವನಾತ್ಮಕ ಧ್ವನಿಯನ್ನು ರೂಪಿಸುವಲ್ಲಿ ಸಂಗೀತ ಮತ್ತು ಧ್ವನಿಯ ಪಾತ್ರವು ಮುಖ್ಯವಾಗಿದೆ ಎಂದು ಇಬ್ಬರೂ ತಜ್ಞರು ಅಭಿಪ್ರಾಯ ಪಟ್ಟರು.

ನಂತರ ಸಂಭಾಷಣೆಯು ಧ್ವನಿ ಮತ್ತು ದೃಶ್ಯ ಸಂಯೋಜನೆಯ ಅಭಿವೃದ್ಧಿಯನ್ನು ಚರ್ಚಿಸಲು ಮುಂದುವರೆಯಿತು, ಕಾಮ್ಟೆ ಅವರು ಭಾರತೀಯ ಚಿತ್ರರಂಗದಲ್ಲಿ ಈ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾ, ಲಗಾನ್ ಚಲನಚಿತ್ರವನ್ನು ಒಂದು ಮೂಲ ಉದಾಹರಣೆಯಾಗಿ ಉಲ್ಲೇಖಿಸಿದರು.  “ಧ್ವನಿ ಸಮನ್ವಯಕ್ಕೆ ಬಹಳಷ್ಟು ಶಿಸ್ತು ಅಗತ್ಯವಿರುತ್ತದೆ ಮತ್ತು ಶಬ್ದದ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಸರಿಯಾದ ಸ್ಥಾನವನ್ನು ಆಯ್ಕೆಮಾಡುತ್ತದೆ, ಆದರೆ ಇದು ಅಧಿಕೃತ ಧ್ವನಿಯನ್ನು ಸೆರೆಹಿಡಿದಾಗ, ಫಲಿತಾಂಶಗಳು ಅದ್ಭುತವಾಗಿರುತ್ತವೆ." ಎಂದು ಹೇಳಿದರು.

ಈ ಅಧಿವೇಶನದಲ್ಲಿ, ಹಾಲಿವುಡ್ ಮತ್ತು ಭಾರತೀಯ ಸಿನಿಮಾಗಳ ನಡುವಿನ ಧ್ವನಿ ವಿನ್ಯಾಸದ ಅಭ್ಯಾಸಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಚರ್ಚಿಸಲಾಯಿತು. ಕಾಮ್ಟೆ ಅವರು ಭಾರತದಲ್ಲಿನ ಹಣಕಾಸಿನ ನಿರ್ಬಂಧಗಳು ಸಾಮಾನ್ಯವಾಗಿ ಧ್ವನಿ ವಿನ್ಯಾಸಕರಿಗೆ (ಧ್ವನಿ ವಿನ್ಯಾಸಕರು/ದಾಖಲೆಕಾರರು) ಹೆಚ್ಚಿನ ಸಂಪನ್ಮೂಲಗಳನ್ನು ಹೇಗೆ ಬಯಸುತ್ತವೆ ಎನ್ನುವುದನ್ನು ಎತ್ತಿ ತೋರಿಸಿದರು. ಇದು ದಿ ಮಾಸ್ಟರ್ ಮತ್ತು ಕಮಾಂಡರ್ ನಂತಹ ಚಲನಚಿತ್ರಗಳಲ್ಲಿ ಕಂಡುಬರುವ ವಿಸ್ತಾರವಾದ ಪ್ರಕ್ರಿಯೆಗಿಂತ ಭಿನ್ನವಾಗಿದೆ. ಅಂತಹ ಸೀಮಿತ ಪರಿಕರಗಳಲ್ಲಿ ಕೆಲಸ ಮಾಡುವುದು ನಾವೀನ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೋಹೆನ್ ಹೇಳಿದರು, "ಕೆಲವೊಮ್ಮೆ, ಐಫೋನ್ ನಲ್ಲಿ ಧ್ವನಿಮುದ್ರಣಗೊಂಡ ಧ್ವನಿಯು ನಿರೀಕ್ಷೆಗಿಂತ ಹೆಚ್ಚು ಗಮನಸೆಳೆಯುವ ಪರಿಣಾಮವನ್ನು ಬೀರುತ್ತದೆ." ಎಂದು ಹೇಳಿದರು.

ಚಲನಚಿತ್ರ ನಿರ್ಮಾಣದಲ್ಲಿ, ಧ್ವನಿ ವಿನ್ಯಾಸ ಸಂಯೋಜನೆಯ ಸಹಯೋಗದ ಸ್ವರೂಪಕ್ಕೆ ಒತ್ತು ನೀಡಲಾಗುತ್ತದೆ. ಕಾಮ್ಟೆಯವರು "ಧ್ವನಿ ವಿನ್ಯಾಸಕರು ನಿರ್ದೇಶಕರಿಂದ ವಿವರವಾದ ಮಾಹಿತಿ ಅಥವಾ ಉಲ್ಲೇಖವನ್ನು ಪಡೆದಾಗ, ಅವರು ಕಥೆಯೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ." ಎಂದು ಹೇಳಿದರು.  ಹೋಹೆನ್ ಅವರು "ವಿಫಲವಾಗದ ದೃಶ್ಯಗಳ ಮೇಲೆ ಪೂರ್ಣ ಗಮನವನ್ನು ಇರಿಸಲಾಗುತ್ತದೆ, ಧ್ವನಿಯು ಕಥೆಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ." ಎಂದು ಹೇಳಿದರು.

ಅಧಿವೇಶನದ ಕೊನೆಯಲ್ಲಿ, ತಜ್ಞರು ವಿದೇಶಿ ಚಲನಚಿತ್ರಗಳಲ್ಲಿ ಧ್ವನಿ ವಿನ್ಯಾಸದ ಪಾತ್ರದ ಬಗ್ಗೆ ಮಾತನಾಡಿದರು. "ಉಪಶೀರ್ಷಿಕೆಗಳೊಂದಿಗೆ ಸಹ, ಭಾವನಾತ್ಮಕ ಸಂಪರ್ಕವನ್ನು ಕಾಪಾಡಿಕೊಳ್ಳಲು ಧ್ವನಿಯು ನಿರ್ಣಾಯಕವಾಗಿದೆ" ಎಂದು ಹೋಹೆನ್ ಹೇಳಿದರೆ, ಚಲನಚಿತ್ರ ನಿರ್ಮಾಣದ ಅಂಶಗಳಲ್ಲಿ ಧ್ವನಿ ವಿನ್ಯಾಸವನ್ನು ಗೌಣವಾಗಿ ಪರಿಗಣಿಸಬಾರದು ಎಂದು ಕಾಮ್ಟೆ ಬಲವಾಗಿ ಅಭಿಪ್ರಾಯಪಟ್ಟರು.

ಉದಯೋನ್ಮುಖ ಧ್ವನಿ ವಿನ್ಯಾಸಕರಿಗೆ ಅಮೂಲ್ಯವಾದ ಸಲಹೆ ನೀಡುವುದರೊಂದಿಗೆ ಅಧಿವೇಶನವು ಮುಕ್ತಾಯವಾಯಿತು. ಕಾಮ್ಟೆ ಅವರು "ಚಲನಚಿತ್ರಗಳಲ್ಲಿನ ಅತ್ಯಂತ ಎದ್ದುಕಾಣುವ ಧ್ವನಿಗಳನ್ನು ಗಮನಿಸಿ ಮತ್ತು ದಾಖಲಿಸುವ ಮೂಲಕ ಪ್ರಾರಂಭಿಸಿ" ಎಂದರು.  ಹೋಹೆನ್ ಅವರು ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಾಂಪ್ರದಾಯಿಕ ಧ್ವನಿ ವಿನ್ಯಾಸಗಳ ಪುನರಾವರ್ತನೆಯನ್ನು ಅಭ್ಯಾಸ ಮಾಡಬೇಕೆಂದು ಹೇಳಿದರು. ಇಬ್ಬರೂ ತಜ್ಞರು ಕೌಶಲ್ಯಗಳನ್ನು ಸುಧಾರಿಸಲು ವೈಯಕ್ತಿಕ ಧ್ವನಿ ಲೈಬ್ರರಿಯನ್ನು ನಿರ್ಮಿಸುವ ಮಹತ್ವವನ್ನು ಒತ್ತಿಹೇಳಿದರು.

 

*****

iffi reel

(Release ID: 2076516)