ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಫೋರ್ಸ್ ಆಫ್ ನೇಚರ್: ದಿ ಡ್ರೈ 2' ಅನ್ನು ಕಂಟ್ರಿ ಫೋಕಸ್: ಆಸ್ಟ್ರೇಲಿಯಾ ವಿಭಾಗದಲ್ಲಿ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು
ರಾಬರ್ಟ್ ಕೊನೊಲಿ ಭಾರತೀಯ ಸಿನಿಮಾವನ್ನು ಜಾಗತಿಕ ಸೇತುವೆ ಎಂದು ಕರೆದರು, ಅಂತಾರಾಷ್ಟ್ರೀಯ ಚಲನಚಿತ್ರ ಕಥೆಗಳನ್ನು ಪ್ರಸ್ತುತಪಡಿಸುವಲ್ಲಿ ಐ ಎಫ್ ಎಫ್ ಐ ಪಾತ್ರವನ್ನು ಶ್ಲಾಘಿಸಿದರು
ಆಸ್ಟ್ರೇಲಿಯನ್ ಸಿನಿಮಾದ ರೋಮಾಚಂಕತೆ ಮತ್ತು ಆಧುನಿಕತೆಯನ್ನು ಪ್ರತಿಬಿಂಬಿಸುವ, ಫೋರ್ಸ್ ಆಫ್ ನೇಚರ್: ದಿ ಡ್ರೈ 2 ಅನ್ನು ಗೋವಾದಲ್ಲಿ ನಡೆಯುತ್ತಿರುವ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಂಟ್ರಿ ಫೋಕಸ್: ಆಸ್ಟ್ರೇಲಿಯಾ ವಿಭಾಗದಲ್ಲಿ ವಿಶೇಷ ಚಲನಚಿತ್ರವಾಗಿ ಪ್ರದರ್ಶಿಸಲಾಯಿತು. ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕ ರಾಬರ್ಟ್ ಕೊನೊಲಿ ಇಂದು ಗೋವಾದಲ್ಲಿ ತಮ್ಮ ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ಚಿತ್ರದಲ್ಲಿ, ಐವರು ಮಹಿಳೆಯರು ದೂರದ ಕಾಡಿಗೆ ಪ್ರವಾಸಕ್ಕೆ ಹೋಗುತ್ತಾರೆ, ಆದರೆ ಅವರಲ್ಲಿ ನಾಲ್ವರು ಮಾತ್ರ ಹಿಂತಿರುಗುತ್ತಾರೆ. ಫೆಡರಲ್ ಪೊಲೀಸ್ ಏಜೆಂಟ್ ಆರನ್ ಫಾಕ್ ಕಾಣೆಯಾದ ಚಾರಣಿಗಳ ಹುಡುಕಾಟವನ್ನು ಪ್ರಾರಂಭಿಸುತ್ತಾನೆ. ಅವನು ಉತ್ತರಗಳನ್ನು ಹುಡುಕುತ್ತಿರುವಾಗ, ಅದೇ ಒರಟಾದ ಭೂದೃಶ್ಯದಲ್ಲಿ ಅವನ ಬಾಲ್ಯದ ನೆನಪುಗಳು ಮತ್ತೆ ತೆರೆದುಕೊಳ್ಳಲು ಪ್ರಾರಂಭಿಸುತ್ತವೆ, ನಿಜವಾಗಿ ಏನಾಯಿತು ಎಂಬ ರಹಸ್ಯದೊಂದಿಗೆ ಕಥೆ ಹೆಣೆದುಕೊಂಡಿವೆ.

ಸಿನಿಮೀಯ ಪ್ರಖರತೆಯ ಚಲನಚಿತ್ರವು ನ್ಯಾಯ, ಕುಟುಂಬ ನಿಷ್ಠೆ ಮತ್ತು ಹಿಂದಿನ ಭಾವನಾತ್ಮಕ ಆಘಾತಗಳನ್ನು ಪರಿಶೋಧಿಸುತ್ತದೆ. ಆಸ್ಟ್ರೇಲಿಯಾದ ಗ್ರಾಮಾಂತರದ ಹಿನ್ನೆಲೆಯಲ್ಲಿ ನಡೆಯುವ ಈ ಥ್ರಿಲ್ಲರ್ ಸಿನಿಮಾವು ತನಿಖಾ ಒತ್ತಡ ಮತ್ತು ಪಾತ್ರಗಳ ಮಿಶ್ರಣದಿಂದ ತುಂಬಿದೆ.
ಚಿತ್ರದ ನಿರ್ದೇಶಕ ರಾಬರ್ಟ್ ಕೊನೊಲಿ ಅವರು ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಭಾರತೀಯ ಚಿತ್ರರಂಗದ ಬಗ್ಗೆ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. "ನಾವು ಸಿನಿಮಾದ ಮೂಲಕ ಭಾರತದ ಬಗ್ಗೆ ಸಾಕಷ್ಟು ಕಲಿಯುತ್ತೇವೆ ಮತ್ತು ತುಂಬಿದ ಭಾರತೀಯ ಪ್ರೇಕ್ಷಕರಿಗಾಗಿ ಚಲನಚಿತ್ರವನ್ನು ಪ್ರದರ್ಶಿಸುವುದನ್ನು ನಾನು ನಿಜವಾಗಿಯೂ ಆನಂದಿಸಿದೆ" ಎಂದು ಅವರು ಹೇಳಿದರು. ತಮ್ಮ ಚಿತ್ರಗಳಲ್ಲಿನ ಸನ್ನಿವೇಶಗಳ ಪ್ರಾಮುಖ್ಯತೆಯ ಪ್ರಶ್ನೆಗೆ, ಅವರು ಚಿತ್ರದ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಅವುಗಳು ತಮ್ಮ ಚಿತ್ರದ ಕಥಾವಸ್ತುವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಮತ್ತು ವಿಶೇಷವಾದ 'ಪಾತ್ರಗಳು' ಎಂದು ಬಣ್ಣಿಸಿದರು. ಅರ್ಥಪೂರ್ಣ ಚಲನಚಿತ್ರವನ್ನು ರೂಪಿಸುವಲ್ಲಿ ಭೂದೃಶ್ಯಗಳು ಜನರ ಮೇಲೆ ಬೀರುವ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಸಿನಿಮಾದ ಮೂಲಕ ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ವಿಷಯದ ಕುರಿತು ಮಾತನಾಡಿದ ನಿರ್ದೇಶಕ ಕೊನೊಲಿ ಇದೊಂದು ಪ್ರಮುಖ ವಿಷಯ ಎಂದು ಒಪ್ಪಿಕೊಂಡರು ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಹವಾಮಾನ ಬದಲಾವಣೆಯ ಪರಿಣಾಮವನ್ನು ಹೊರತರುವ ಚಲನಚಿತ್ರಗಳನ್ನು ಮಾಡುವತ್ತ ಗಮನಹರಿಸಬೇಕು ಎಂದು ಹೇಳಿದರು.
ತಮ್ಮ ಸಮಾರೋಪ ಮಾತುಗಳಲ್ಲಿ ಅವರು ಭಾರತೀಯ ಚಿತ್ರರಂಗದ ಜಾಗತಿಕ ವ್ಯಾಪ್ತಿಯನ್ನು ಗಮನಿಸಿದರು ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಪ್ರೇಕ್ಷಕರು ಈ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ಹೇಳಿದರು.ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಶ್ಲಾಘಿಸಿದ ಅವರು ಪ್ರಪಂಚದಾದ್ಯಂತ ಕೆಲವು ರೋಚಕ ಕಥೆಗಳನ್ನು ನಿರ್ಮಿಸಲು ಇದು ಅಡಿಪಾಯವಾಗಿದೆ ಎಂದು ಹೇಳಿದರು.
*****
(Release ID: 2076441)
Visitor Counter : 32