ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐ ಎಫ್ ಎಫ್ ಐ ಇ ಎಸ್ ಟಿ ಎ 'ಸಫರ್” 'ಸಫರ್ನಾಮಾ' ಅನಾವರಣದೊಂದಿಗೆ ಪ್ರಾರಂಭ
'ನಾವು ಸ್ವತಂತ್ರರಾಗಿಲ್ಲದಿದ್ದಾಗಲೂ, ನಾವು ಚಲನಚಿತ್ರಗಳನ್ನು ಮಾಡಲು ಪ್ರಾರಂಭಿಸಿದ್ದೆವು; ಇದು ನಮ್ಮ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ ಮತ್ತು ಇಲ್ಲಿ ನಾವು ಅದನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತಿದ್ದೇವೆ ' ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು
'ಚಿತ್ರರಂಗದಲ್ಲಿ ಭಾಷೆ ಅಡ್ಡಿಯಲ್ಲ. ದಕ್ಷಿಣದಲ್ಲಿ ನಾವು ಆ ರೀತಿ ಯೋಚಿಸುವುದಿಲ್ಲ' - ಅಕ್ಕಿನೇನಿ ನಾಗಾರ್ಜುನ ರಾವ್
ಐ ಎಫ್ ಎಫ್ ಐ ಇ ಎಸ್ ಟಿ ಎ: ಸಿನೆಮಾ, ಸಂಸ್ಕೃತಿ ಮತ್ತು ಇತಿಹಾಸದ ಅದ್ಭುತ ಸಮ್ಮಿಳನವನ್ನು 55ನೇ ಐಎಫ್ಎಫ್ಐನಲ್ಲಿ ಉದ್ಘಾಟಿಸಲಾಯಿತು
ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ತನ್ನ 55ನೇ ಆವೃತ್ತಿಯಲ್ಲಿ ಸಂಗೀತ, ಕಲೆ ಮತ್ತು ಸಂಸ್ಕೃತಿಯನ್ನು ಮನರಂಜನೆಯ ಹೃದಯ ಭಾಗಕ್ಕೆ ತರುವುದಾಗಿ ಭರವಸೆ ನೀಡಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಖ್ಯಾತ ಚಲನಚಿತ್ರ ನಟ ಮತ್ತು ನಿರ್ಮಾಪಕ ಶ್ರೀ ಅಕ್ಕಿನೇನಿ ನಾಗಾರ್ಜುನ ರಾವ್ ಅವರು ಇಂದು ಗೋವಾದ ಪಣಜಿಯ ಕಲಾ ಅಕಾಡೆಮಿಯಲ್ಲಿ 'ಸಫರ್ನಾಮಾ: ಎವಲ್ಯೂಷನ್ ಆಫ್ ಇಂಡಿಯನ್ ಸಿನೆಮಾ' ಪ್ರದರ್ಶನವನ್ನು ಅನಾವರಣಗೊಳಿಸಿದರು. ಭಾರತದ ಶ್ರೀಮಂತ ಸಿನಿಮೀಯ ಸಂಪ್ರದಾಯ ಮತ್ತು ಇತಿಹಾಸದ ಬಗ್ಗೆ ಜನರನ್ನು ತಲುಪುವ ಉದ್ದೇಶದಿಂದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಈ ಮಲ್ಟಿಮೀಡಿಯಾ ಪ್ರದರ್ಶನವನ್ನು ಆಯೋಜಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಜಾಜು, ಭಾರತೀಯ ಚಿತ್ರರಂಗದ ಇತಿಹಾಸವು ಭಾರತವು ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗ ರಾಜಾ ಹರಿಶ್ಚಂದ್ರ ಚಲನಚಿತ್ರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಅದರೊಂದಿಗೆ ಭಾರತವು ಸಿನಿಮೀಯ ಮನಸ್ಸನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು ಮತ್ತು ಆ ಸಂಪ್ರದಾಯವನ್ನು ಇಲ್ಲಿಯವರೆಗೆ ಹಾಗೇ ಉಳಿಸಿಕೊಳ್ಳಲಾಗಿದೆ. ಐಎಫ್ಎಫ್ಐನ ಈ ನಿರ್ದಿಷ್ಟ ಉಪಕ್ರಮವು ಆ ಶ್ರೀಮಂತ ಪರಂಪರೆಗೆ ವಂದಿಸುವ ಗುರಿಯನ್ನು ಹೊಂದಿದೆ ಮತ್ತು ವಿಶೇಷವಾಗಿ ಯುವ ವಿದ್ಯಾರ್ಥಿಗಳ ಮುಂದೆ ಸಿನೆಮಾ ಮತ್ತು ಶ್ರೀಮಂತ ಪರಂಪರೆಯ ಮೌಲ್ಯವನ್ನು ಪ್ರದರ್ಶಿಸಿ ಅವರ ಆಸಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಖ್ಯಾತ ನಟ ಶ್ರೀ ನಾಗಾರ್ಜುನ ಅವರು ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ, ತಮಗೆ ಸಿನೆಮಾ ಎಂದರೆ ಅದು ಭಾರತೀಯ ಮತ್ತು ಅದಕ್ಕೆ ಯಾವುದೇ ಭಾಷೆಯ ನಿರ್ಬಂಧವಿಲ್ಲ ಎಂದು ಸಂತೋಷದಿಂದ ಎತ್ತಿ ತೋರಿಸಿದರು. ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ಅವರಂತಹ ಇತರ ಶತಮಾನೋತ್ಸವದ ದಂತಕಥೆಗಳು ಸ್ಥಾಪಿಸಿದ ಪರಂಪರೆ ನಿಜವಾಗಿಯೂ ಅಭೂತಪೂರ್ವವಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.
'ಸಫರ್ನಾಮಾ' ಪ್ರದರ್ಶನದಲ್ಲಿ, ಈ ವರ್ಷ ಐಎಫ್ಎಫ್ಐನಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಿರುವ ನಾಲ್ಕು ದಂತಕಥೆಗಳಾದ ರಾಜ್ ಕಪೂರ್, ಮೊಹಮ್ಮದ್ ರಫಿ, ತಪನ್ ಸಿನ್ಹಾ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರಿಗೆ ನಾಲ್ಕು ಗ್ಯಾಲರಿಗಳನ್ನು ಸಮರ್ಪಿಸಲಾಗಿದೆ. ಪ್ರದರ್ಶನವು ಈ ನಾಲ್ಕು ಸಿನಿಮೀಯ ದಂತಕಥೆಗಳನ್ನು ಪೋಸ್ಟರ್ಗಳು, ವೀಡಿಯೊಗಳು ಮತ್ತು ಸ್ಮರಣಿಕೆಗಳು ಸೇರಿದಂತೆ ಕ್ಯುರೇಟೆಡ್ ವಿಷಯ ಮತ್ತು ಅಪರೂಪದ ಆರ್ಕೈವಲ್ ಸಾಮಗ್ರಿಗಳೊಂದಿಗೆ ಗೌರವಿಸುತ್ತದೆ, ಆ ಮೂಲಕ ಭಾರತೀಯ ಚಿತ್ರರಂಗವನ್ನು ರೂಪಿಸಿದ ಈ ಅಪ್ರತಿಮ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತದೆ.
2024ರ ನವೆಂಬರ್ 20 ರಿಂದ 28 ರವರೆಗೆ ಸಾರ್ವಜನಿಕರಿಗೆ ತೆರೆದಿರುವ ಈ ಪ್ರದರ್ಶನವು ಭಾರತೀಯ ಸಿನೆಮಾದ ಆರಂಭಿಕ ದಿನಗಳಿಂದ ಸಮಕಾಲೀನ ಆವಿಷ್ಕಾರಗಳವರೆಗಿನ ಪ್ರಯಾಣದ ಚಲನಶೀಲ ಪರಿಶೋಧನೆಯನ್ನು ನೀಡುತ್ತದೆ. ಇದು ಗಮನಾರ್ಹ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ, ಇದು ಯುವ ಪೀಳಿಗೆಗೆ ಶೈಕ್ಷಣಿಕ ಅನುಭವವನ್ನು ನೀಡುತ್ತದೆ.ಪ್ರದರ್ಶನವು ಪ್ರೊಜೆಕ್ಷನ್ ಮ್ಯಾಪಿಂಗ್, ವರ್ಚುವಲ್ ರಿಯಾಲಿಟಿ, ವರ್ಧಿತ ರಿಯಾಲಿಟಿ, ಡಿಜಿಟಲ್ ರಸಪ್ರಶ್ನೆ ಮತ್ತು ಡಿಜಿಟಲ್ ಒಗಟುಗಳಂತಹ ಇತ್ತೀಚಿನ ತಾಂತ್ರಿಕ ಅಂಶಗಳನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಕೆಟಿಬಿ - ಭಾರತ್ ಹೈ ಹಮ್, ಅನಿಮೇಷನ್ ಸರಣಿ ಸೀಸನ್ -2 ಅನ್ನು ಪ್ರಾರಂಭ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಅನಿಮೇಟೆಡ್ ಸರಣಿಯು ಡಿಸೆಂಬರ್ 1 ರಿಂದ ದೂರದರ್ಶನ, ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ವೇವ್ಸ್ನಲ್ಲಿ ಪ್ರಸಾರವಾಗಲಿದೆ, ಜೊತೆಗೆ ಆಕಾಶವಾಣಿಯಲ್ಲಿ ರೇಡಿಯೋ ಸರಣಿ ಮತ್ತು ಸ್ಪಾಟಿಫೈನಲ್ಲಿ ಪಾಡ್ಕಾಸ್ಟ್ ಪ್ರಸಾರವಾಗಲಿದೆ. ಈ ಸರಣಿಯು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಮರಾಠಿ, ಗುಜರಾತಿ, ಬಂಗಾಳಿ, ಅಸ್ಸಾಮಿ ಮತ್ತು ಒಡಿಯಾ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಮತ್ತು ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್, ಕೊರಿಯನ್, ಚೈನೀಸ್ ಮತ್ತು ಅರೇಬಿಕ್ ಸೇರಿದಂತೆ ಏಳು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಈ ಸಮಯದಲ್ಲಿ, ದೂರದರ್ಶನದ ಪರಂಪರೆ ಮತ್ತು ಪ್ರಸಾರ ಭಾರತಿಯ ಹೊಸ ಒಟಿಟಿ ಉಪಕ್ರಮವಾದ ವೇವ್ಸ್ನ ಭವಿಷ್ಯವನ್ನು ಕುರಿತ ಸಿಗ್ನೇಚರ್ ಹಾಡನ್ನು ಸಹ ಬಿಡುಗಡೆ ಮಾಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ; ಸಿಬಿಸಿ ಡಿಜಿ ಶ್ರೀ ಯೋಗೇಶ್ ಬವೇಜಾ, ಕಾರ್ಯಕ್ರಮದ ಸೃಷ್ಟಿಕರ್ತರಾದ ಮುಂಜಾಲ್ ಶ್ರಾಫ್ ಮತ್ತು ಗ್ರಾಫಿಟಿ ಸ್ಟುಡಿಯೋಸ್ನ ತಿಲಕ್ ಶೆಟ್ಟಿ; ನೆಟ್ಫ್ಲಿಕ್ಸ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕಿ ಮಹಿಮಾ ಕೌಲ್ ಮತ್ತು ಪ್ರೈಮ್ ವಿಡಿಯೋದ ಎಸ್ವಿಒಡಿ ನಿರ್ದೇಶಕ ಮತ್ತು ಮುಖ್ಯಸ್ಥ ಶಿಲಾಂಗಿ ಮುಖರ್ಜಿ ಉಪಸ್ಥಿತರಿದ್ದರು.
ಹೆಚ್ಚಿನ ಓದಿಗಾಗಿ:
*****
(Release ID: 2075825)
Visitor Counter : 7