ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

ಭಾರತೀಯ ಪನೋರಮಾದಲ್ಲಿ ದೇಶದ ಎಲ್ಲಾ ಭಾಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮಾಡಲು ಪ್ರಯತ್ನಗಳನ್ನು ಮಾಡಲಾಗಿದೆ: ಹಿಮಾಂಶು ಶೇಖರ್ ಖತುವಾ, ತೀರ್ಪುಗಾರರ ಸಮಿತಿಯ ಸದಸ್ಯ


ಭಾರತೀಯ ಪನೋರಮಾ ಭಾರತ ಮತ್ತು ಭಾರತೀಯ ಸಿನಿಮಾದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ: ಪ್ರಿಯಾ ಕೃಷ್ಣಸ್ವಾಮಿ

ದೇಶದ ಎಲ್ಲಾ ಪ್ರದೇಶಗಳಿಂದ ಬರುವ ಪ್ರತಿಭೆ, ಚಲನಚಿತ್ರಗಳು ಮತ್ತು ಸೃಜನಶೀಲತೆಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ತೀರ್ಪುಗಾರರು ಶ್ರಮಿಸುತ್ತಾರೆ: ಮನೋಜ್ ಜೋಶಿ

ಭಾರತೀಯ ಪನೋರಮಾ ಜ್ಯೂರಿ ಐ ಎಫ್‌ ಎಫ್‌ ಐ 2024ರಲ್ಲಿ ಭಾರತೀಯ ಸಿನಿಮಾದ ಮುಂಬರುವ ಪ್ರವೃತ್ತಿಗಳನ್ನು ಜಗತ್ತಿಗೆ ಪ್ರದರ್ಶಿಸುವ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ

384 ಚಲನಚಿತ್ರಗಳಲ್ಲಿ 20 ಭಾರತೀಯ ಚಲನಚಿತ್ರಗಳನ್ನು ಆಯ್ಕೆ ಮಾಡುವುದು ಕಷ್ಟಕರವಾದ ಕೆಲಸವಾಗಿತ್ತು ಮತ್ತು ಈ ಐ ಎಫ್‌ ಎಫ್‌ ಐ ಗಾಗಿ ಚಲನಚಿತ್ರಗಳನ್ನು ಆಯ್ಕೆ ಮಾಡದಿರುವುದು ಚಲನಚಿತ್ರಗಳ ಗುಣಮಟ್ಟದ ಬಗೆಗಿನ ತೀರ್ಪು ಎಂದು ಪರಿಗಣಿಸಬೇಕಾಗಿಲ್ಲ ಎಂದು ಐ ಎಫ್‌ ಎಫ್‌ ಐ 2024ರಲ್ಲಿ ಭಾರತೀಯ ಪನೋರೋಮಾದ ಫೀಚರ್ ಫಿಲ್ಮ್ಸ್ ವಿಭಾಗದ ತೀರ್ಪುಗಾರ ಸಮಿತಿಯ ಸದಸ್ಯರು ಹೇಳಿದ್ದಾರೆ. ಅವರು ಇಂದು 55 ನೇ ಐ ಎಫ್‌ ಎಫ್‌ ಐ 2024ರ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಭಾರತೀಯ ಪನೋರಮಾ ಆಯ್ಕೆ ಪ್ರಕ್ರಿಯೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಖ್ಯಾತ ಚಲನಚಿತ್ರ ನಿರ್ಮಾತೃ ಹಿಮಾಂಶು ಶೇಖರ್ ಖತುವಾ, ತೀರ್ಪುಗಾರ ಸಮಿತಿಯ ಸದಸ್ಯರೆಲ್ಲರೂ ದೇಶದ ವಿವಿಧ ಭಾಗಗಳಿಂದ ಬಂದವರಉ ಮತ್ತು ದೇಶದ ಎಲ್ಲಾ ಭಾಗಗಳಿಗೆ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳುವುದು ಕಠಿಣ ಕೆಲಸವಾಗಿತ್ತು ಎಂದು ವಿವರಿಸಿದರು. ಈ ವಿಭಾಗದಲ್ಲಿ ಇಪ್ಪತ್ತೈದು ಅತ್ಯುತ್ತಮ ಚಲನಚಿತ್ರಗಳನ್ನು ಆಯ್ಕೆ ಮಾಡಲು 13 ಜ್ಯೂರಿಗಳು ನಲವತ್ತೆರಡು ದಿನಗಳ ಕಾಲ ಚರ್ಚಿಸಿದರು. ಗೋವಾ ಅಚ್ಚುಮೆಚ್ಚಿನ ಚಿತ್ರೀಕರಣ ಸ್ಥಳವಾಗಿದೆ ಮತ್ತು ಗೋವಾದಲ್ಲಿ ಚಿತ್ರೀಕರಣ ಮಾಡುವಾಗ ಚಲನಚಿತ್ರ ನಿರ್ಮಾಪಕರು ಅಗತ್ಯವಿರುವ ಎಲ್ಲಾ ಬೆಂಬಲವನ್ನು ಪಡೆಯುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಖತುವಾ ಹೇಳಿದರು.

ತೀರ್ಪುಗಾರರ ಸಮಿತಿ ಸದಸ್ಯ ಮನೋಜ್ ಜೋಶಿ ಮಾತನಾಡಿ, ದೇಶದ ಎಲ್ಲಾ ಪ್ರದೇಶಗಳಿಂದ ಬರುವ ಪ್ರತಿಭೆ, ಚಲನಚಿತ್ರಗಳು ಮತ್ತು ಸೃಜನಶೀಲತೆಗೆ ನ್ಯಾಯವನ್ನು ನೀಡಲು ತೀರ್ಪುಗಾರರ ಸಮಿತಿ ಪ್ರಯತ್ನಿಸಿದೆ ಎಂದರು. "ನಾವು ಪ್ರಪಂಚದ ಪ್ರಾಥಮಿಕ ಕಥೆಗಾರರು. ಕಥೆ ಹೇಳುವುದು ನಮ್ಮ ರಕ್ತದಲ್ಲಿಯೇ ಇದೆ ಮತ್ತು ನಾವು ವಿಶ್ವದ ಅತ್ಯುತ್ತಮ ಕಂಟೆಂಟ್ ಒದಗಿಸುವ ದೇಶವಾಗಿದ್ದೇವೆ”ಎಂದು ಶ್ರೀ ಜೋಶಿ ಹೇಳಿದರು.

ಐ ಎಫ್‌ ಎಫ್‌ ಐ 2024ರಲ್ಲಿ ಭಾರತೀಯ ಪನೋರಮಾ ಚಿತ್ರಗಳು ಭಾರತದ ವೈವಿಧ್ಯತೆ ಮತ್ತು ಭಾರತೀಯ ಚಿತ್ರರಂಗದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಎಂದು ತೀರ್ಪುಗಾರರ ಸಮಿತಿ ಸದಸ್ಯೆ ರತ್ನೋತ್ತಮ ಸೇನಗುಪ್ತ ಹೇಳಿದರು. ಉತ್ಸವವು ಕೇವಲ 10 ದಿನಗಳ ಕಾಲ ನಡೆಯುತ್ತಿದ್ದರೂ, ಅದರ ಪದರದಲ್ಲಿ ಅನೇಕ ವಿಭಾಗಗಳು ವೈವಿಧ್ಯಮಯ ಮತ್ತು ವರ್ಗಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ತೀರ್ಪುಗಾರರ ಸಮಿತಿ ಸದಸ್ಯ ಅಶು ತ್ರಿಖಾ ಮಾತನಾಡಿ, ಸಿನಿಮಾ ಎಂಬುದು ಒಂದು ಧರ್ಮವಾಗಿದ್ದು, ಬಹಳ ಕಾಳಜಿ ಮತ್ತು ನಿಷ್ಠೆಯಿಂದ ಆಯ್ಕೆ ಮಾಡಲಾಗಿದೆ. ಸ್ಪೆಷಲ್ ಎಫೆಕ್ಟ್ ಮತ್ತು ಡಿಜಿಟಲ್ ತಂತ್ರಜ್ಞಾನ ಮತ್ತು ಅಂತಹ ಎಲ್ಲಾ ಕ್ಷೇತ್ರಗಳ ಬಳಕೆಯಲ್ಲಿ ಭಾರತೀಯ ಚಿತ್ರರಂಗ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ ಮತ್ತು ವಿಶ್ವದ ಗುಣಮಟ್ಟಕ್ಕೆ ಸರಿಸಮಾನವಾಗಿದೆ ಎಂದು ಅವರು ಹೇಳಿದರು.

ತೀರ್ಪುಗಾರರ ಸಮಿತಿ ಸದಸ್ಯೆ ಪ್ರಿಯಾ ಕೃಷ್ಣಸ್ವಾಮಿ ಇಂದು ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತವಾಗಿರುವ ವಿಷಯಾಧಾರಿತ ಒಳನೋಟಗಳನ್ನು ಶ್ಲಾಘಿಸಿದರು. “ಹೊಸ ಚಿತ್ರ ನಿರ್ಮಾಪಕರು ಪ್ರಯೋಗಿಸುವ ಕಲಾ ಪ್ರಕಾರ ಮತ್ತು ಅವರು ಮುಂಚೂಣಿಗೆ ತರುವ ಹೊಸ ಸಿನಿಮೀಯ ಭಾಷೆಯನ್ನು ನೋಡುವುದು ಸಂತೋಷಕರವಾಗಿದೆ. ಚಲನಚಿತ್ರಗಳ ನಿಖರವಾದ ಆಯ್ಕೆಯ ಮೂಲಕ, ಜ್ಯೂರಿ ಸದಸ್ಯರ ಪ್ರಯತ್ನವು ಚಲನಚಿತ್ರ ತಯಾರಿಕೆಯಲ್ಲಿ ಮುಂಬರುವ ಪ್ರವೃತ್ತಿಗಳನ್ನು ಪ್ರದರ್ಶಿಸಲು ಮತ್ತು ಭಾರತೀಯ ಚಲನಚಿತ್ರದ ವೈವಿಧ್ಯತೆಯನ್ನು ಜಗತ್ತಿಗೆ ಎತ್ತಿ ತೋರಿಸಲು ಪ್ರಯತ್ನಿಸುತ್ತಿದೆ” ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಇತರ ತೀರ್ಪುಗಾರರ ಸಮಿತಿ ಸದಸ್ಯರಾದ ಸುಶ್ಮಿತಾ ಮುಖರ್ಜಿ, ಓಯಿನಮ್ ಗೌತಮ್, ಎಸ್.ಎಂ. ಪಾಟೀಲ್, ನೀಲಭ್ ಕೌಲ್, ಸುಶಾಂತ್ ಮಿಶ್ರಾ, ಅರುಣ್ ಕುಮಾರ್ ಬೋಸ್ ಮತ್ತು ಸಮೀರ್ ಹಂಚಾತೆ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯನ್ನು ರಜಿತ್ ಚಂದ್ರನ್ ನಿರ್ವಹಿಸಿದರು.

ಭಾರತೀಯ ಪನೋರಮಾ, ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ನ ಪ್ರಮುಖ ವಿಭಾಗವಾಗಿದ್ದು, ಐ ಎಫ್‌ ಎಫ್‌ ಐ ನ 55 ನೇ ಆವೃತ್ತಿಯಲ್ಲಿ ಪ್ರದರ್ಶಿಸಲು 25 ಫೀಚರ್ ಫಿಲ್ಮ್‌ ಗಳು ಮತ್ತು 20 ನಾನ್-ಫೀಚರ್ ಫಿಲ್ಮ್‌ಗಳನ್ನು ಹೊಂದಿದೆ. 384 ಸಮಕಾಲೀನ ಭಾರತೀಯ ಚಲನಚಿತ್ರಗಳು ಮತ್ತು  ಮುಖ್ಯವಾಹಿನಿಯ 5 ಚಲನಚಿತ್ರಗಳ ವಿಶಾಲ ವ್ಯಾಪ್ತಿಯಿಂದ 25 ಚಲನಚಿತ್ರಗಳ ಪ್ಯಾಕೇಜ್ ಅನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಪನೋರಮಾ 2024 ರ ಉದ್ಘಾಟನಾ ಚಲನಚಿತ್ರವಾಗಿ ತೀರ್ಪುಗಾರರ ಆಯ್ಕೆಯು ಶ್ರೀ ರಣದೀಪ್ ಹೂಡಾ ನಿರ್ದೇಶಿಸಿದ “ಸ್ವಾತಂತ್ರ್ಯ ವೀರ್ ಸಾವರ್ಕರ್ (ಹಿಂದಿ)” ಆಗಿದೆ.

ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ತೀರ್ಪುಗಾರರ ಸಮಿತಿ ಸದಸ್ಯರು:

1. ಶ್ರೀ ಮನೋಜ್ ಜೋಶಿ, ನಟ

2. ಶ್ರೀಮತಿ ಸುಸ್ಮಿತಾ ಮುಖರ್ಜಿ, ನಟಿ

3. ಶ್ರೀ ಹಿಮಾಂಶು ಶೇಖರ್ ಖತುವಾ, ಚಲನಚಿತ್ರ ನಿರ್ದೇಶಕ

4. ಶ್ರೀ ಓಯಿನಮ್ ಗೌತಮ್ ಸಿಂಗ್, ಚಲನಚಿತ್ರ ನಿರ್ದೇಶಕ

5. ಶ್ರೀ ಅಶು ತ್ರಿಖಾ, ಚಲನಚಿತ್ರ ನಿರ್ದೇಶಕ

6. ಶ್ರೀ ಎಸ್.ಎಂ. ಪಾಟೀಲ್, ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ

7. ಶ್ರೀ ನೀಲಾಭ್ ಕೌಲ್, ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕ

8. ಶ್ರೀ ಸುಸಂತ್ ಮಿಶ್ರಾ, ಚಲನಚಿತ್ರ ನಿರ್ದೇಶಕ

9. ಶ್ರೀ ಅರುಣ್ ಕುಮಾರ್ ಬೋಸ್, ಪ್ರಸಾದ್ ಇನ್ಸ್ಟಿಟ್ಯೂಟ್ನ ಮಾಜಿ ಎಚ್‌ ಒ ಡಿ ಮತ್ತು ಸೌಂಡ್ ಇಂಜಿನಿಯರ್

10. ಶ್ರೀಮತಿ ರತ್ನೋತ್ತಮ ಸೇನಗುಪ್ತಾ, ಬರಹಗಾರ್ತಿ ಮತ್ತು ಸಂಕಲನಕಾರರು

11. ಶ್ರೀ ಸಮೀರ್ ಹಂಚಾಟೆ, ಚಲನಚಿತ್ರ ನಿರ್ದೇಶಕ

12. ಶ್ರೀಮತಿ ಪ್ರಿಯಾ ಕೃಷ್ಣಸ್ವಾಮಿ, ಚಲನಚಿತ್ರ ನಿರ್ದೇಶಕಿ

 

ಭಾರತೀಯ ಪನೋರಮಾ ಬಗ್ಗೆ

ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಜೊತೆಗೆ ಸಿನಿಮಾ ಕಲೆಯ ಸಹಾಯದಿಂದ ಭಾರತೀಯ ಚಲನಚಿತ್ರಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಭಾರತೀಯ ಪನೋರಮಾವನ್ನು 1978ರಲ್ಲಿ ಐ ಎಫ್‌ ಎಫ್‌ ಐ ಭಾಗವಾಗಿ ಪ್ರಾರಂಭಿಸಲಾಯಿತು. ಅದರ ಪ್ರಾರಂಭದಿಂದಲೂ, ಭಾರತೀಯ ಪನೋರಮಾವು ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಮಾತ್ರ ಮೀಸಲಿಡಲಾಗಿದೆ. ಚಲನಚಿತ್ರ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳನ್ನು ಭಾರತ ಮತ್ತು ವಿದೇಶಗಳಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಅಡಿಯಲ್ಲಿ ಆಯೋಜಿಸಲಾದ ಭಾರತೀಯ ಚಲನಚಿತ್ರ ಸಪ್ತಾಹಗಳು ಮತ್ತು ಭಾರತದಲ್ಲಿನ ಸಾಂಸ್ಕೃತಿಕ ವಿನಿಮಯ ಪ್ರೋಟೋಕಾಲ್‌ ಗಳು ಮತ್ತು ಉತ್ಸವಗಳ ಹೊರಗೆ ವಿಶೇಷ ಭಾರತೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗುತ್ತದೆ ಅಮೆರಿಕದಲ್ಲಿ ವಿಶೇಷ ಭಾರತೀಯ ಪನೋರಮಾ ಉತ್ಸವಗಳಲ್ಲಿ ಲಾಭರಹಿತ ಪ್ರದರ್ಶನಗಳಿಗಾಗಿ ಸಹ ಪ್ರದರ್ಶಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleasePage.aspx?PRID=2067711

 

*****

 

iffi reel

(Release ID: 2075684) Visitor Counter : 17