ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಎಲ್ಲೆಗಳ ದಾಟಿ: 55ನೇ ಐ.ಎಫ್.ಎಫ್.ಐ. ಚಲನಚಿತ್ರಗಳಲ್ಲಿ ಪ್ರವೇಶಕ್ಕಾಗಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ
ಸಬ್ಕಾ ಮನೋರಂಜನ್: 55ನೇ ಐ.ಎಫ್.ಎಫ್.ಐ ಚಲನಚಿತ್ರೋತ್ಸವಗಳಲ್ಲಿ ಒಳಗೊಳ್ಳುವಿಕೆಯನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ
55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಪ್ರೇಕ್ಷಕರಿಗೆ ಅಂತರ್ಗತ ಸಿನಿಮಾದ ಅನುಭವವನ್ನು ಒದಗಿಸಲು "ಸಬ್ಕಾ ಮನೋರಂಜನ್" (ಎಲ್ಲರಿಗೂ ಮನರಂಜನೆ) ಪರಿಕಲ್ಪನೆಯನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳುತ್ತದೆ. ವರ್ಷಗಳಲ್ಲಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಎಲ್ಲಾ ಸಾಮರ್ಥ್ಯದ ಸಿನಿಪ್ರಿಯರನ್ನು ಉತ್ಸವಕ್ಕೆ ಸ್ವಾಗತಿಸಿದೆ, ಪ್ರೇಕ್ಷಕರು ಸುಲಭವಾಗಿ ಚಲನಚಿತ್ರಗಳನ್ನು ವೀಕ್ಷಿಸಬಹುದಾದ ಚಲನಚಿತ್ರೋತ್ಸವದ ಸಂಪ್ರದಾಯವು ಮುಂದುವರಿಯುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ. ಇನ್ಕ್ಲೂಷನ್ ಪಾರ್ಟ್ ನರ್, ರಾಜ್ಯ ವಿಕಲಾಂಗ ವ್ಯಕ್ತಿಗಳ ಆಯೋಗ, ಗೋವಾ ಮತ್ತು ಪ್ರವೇಶಿಸುವಿಕೆ ಪಾಲುದಾರರಾದ 'ಸ್ವಯಂ' ನಂತಹ ಪ್ರಮುಖ ಸಹಯೋಗಿಗಳ ಬೆಂಬಲದೊಂದಿಗೆ, ಐ.ಎಫ್.ಎಫ್.ಐ ಚಲನಚಿತ್ರದ ಒಳಗೊಳ್ಳುವಿಕೆಗೆ ಹೊಸ ಆಯಾಮವನ್ನು ಹೊಂದಿಸಿದೆ.
55ನೇ ಐ.ಎಫ್.ಎಫ್.ಐ ನಲ್ಲಿನ ಪ್ರಮುಖ ಅನುಕೂಲಕರ ಉಪಕ್ರಮಗಳು ಈ ಕೆಳಗಿನಂತಿವೆ:
ಒಳಗೊಳ್ಳುವ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು: ಐ.ಎಫ್.ಎಫ್.ಐ. ಇತಿಹಾಸದಲ್ಲಿ ಮೊದಲ ಬಾರಿಗೆ, ಆರಂಭಿಕ ಮತ್ತು ಸಮಾರೋಪ ಸಮಾರಂಭಗಳು ಸಂಕೇತ ಭಾಷೆಯಲ್ಲಿ ನೇರ ವ್ಯಾಖ್ಯಾನವನ್ನು ಒಳಗೊಂಡಿರುತ್ತವೆ. ಶ್ರವಣ ದೋಷವುಳ್ಳವರು ಸೇರಿದಂತೆ ಎಲ್ಲಾ ಪಾಲ್ಗೊಳ್ಳುವವರು ಉತ್ಸವದ ಶ್ರವ್ಯ-ದೃಶ್ಯ ಆನಂದದಲ್ಲಿ ಸಂಪೂರ್ಣವಾಗಿ ಭಾಗವಹಿಸಬಹುದು ಎನ್ನುವುದನ್ನು ಇದು ಖಚಿತಪಡಿಸುತ್ತದೆ.
ಐ.ಎಫ್.ಎಫ್.ಐ. 2024ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಈ ವಿಭಾಗವು ಆಡಿಯೊ ವಿವರಣೆ ಮತ್ತು ಭಾರತೀಯ ಸಂಕೇತ ಭಾಷೆಯೊಂದಿಗೆ ಆಯ್ದ ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದು ದೃಷ್ಟಿವಿಕಲಚೇತನ ಮತ್ತು ಶ್ರವಣದೋಷವುಳ್ಳ ವೀಕ್ಷಕರಿಗೆ ನಿರೂಪಣೆಯ ಮೂಲಕ ಚಲನಚಿತ್ರವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. 55ನೇ ಐ.ಎಫ್.ಎಫ್.ಐ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಆ್ಯಪ್ ಮೂಲಕ ಆಡಿಯೊ ವಿವರಣೆಯೊಂದಿಗೆ ಪ್ರದರ್ಶಿಸುತ್ತದೆ. ಇದು ನಿಮಗೆ ಚಿತ್ರದ ಸಮಗ್ರ ಅನುಭವವನ್ನು ನೀಡುತ್ತದೆ. ಈ ವಿಭಾಗವು ನವೆಂಬರ್ 22 ರಂದು 'ಟ್ವೆಲ್ತ್ ಫೇಲ್ ಚಿತ್ರದ ಪ್ರದರ್ಶನದೊಂದಿಗೆ ಪ್ರಾರಂಭವಾಗುತ್ತದೆ. ಆಡಿಯೋ ವಿವರಣೆ ಮತ್ತು ಸಂಕೇತ ಭಾಷೆಯ ಕಾಮೆಂಟರಿಯೊಂದಿಗೆ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಪ್ರಖ್ಯಾತ ನೃತ್ಯಗಾರ್ತಿ ಮೆಥಿಲ್ ದೇವಿಕಾ ಅವರ ಭಾರತೀಯ ಸಂಕೇತ ಭಾಷೆಯಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನದೊಂದಿಗೆ ಅನುಕೂಲಕರ ಚಲನಚಿತ್ರಗಳ ವಿಭಾಗದಲ್ಲಿ ಹೊಸ ಅಧ್ಯಾಯವು ಪ್ರಾರಂಭವಾಗುತ್ತದೆ, ಇದು ಉತ್ಸವದ ಒಳಗೊಳ್ಳುವಿಕೆಗೆ ಬದ್ಧತೆಯ ಸಂಕೇತವಾಗಿದೆ .
ಡಿಜಿಟಲ್ ಮತ್ತು ಆನ್-ಸೈಟ್ ಪ್ರವೇಶಿಸುವಿಕೆ:
ಚಿತ್ರೋತ್ಸವದ ಜಾಲತಾಣ, ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮ ಚಾನಲ್ ಗಳು ಸೇರಿದಂತೆ ಆನ್ಲೈನ್ ಪ್ಲಾಟ್ಫಾರ್ಮ್ಗಳು ಬಳಕೆದಾರರ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
ಆವರಣಗಳು ಗಾಲಿಕುರ್ಚಿಯು ಪ್ರವೇಶಿಸಬಹುದಾದ ಸ್ಥಳಗಳು, ವಿಶ್ರಾಂತಿ ಕೊಠಡಿಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿವೆ. ಚಿತ್ರೋತ್ಸವದ ಸಮಯದಲ್ಲಿ ಆನ್-ಸೈಟ್ ಸಂಕೇತ ಭಾಷಾ ವ್ಯಾಖ್ಯಾನಕಾರರು ಸಹ ಲಭ್ಯವಿರುತ್ತಾರೆ.
ಮಾಸ್ಟರ್ ತರಗತಿಗಳು ಮತ್ತು ಪತ್ರಿಕಾಗೋಷ್ಠಿಗಳು
"ಸಿನಿಮಾ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನ: ತಲುಪುವ (ಪ್ರವೇಶದ) ಪ್ರಶ್ನೆ" ಎಂಬ ಶೀರ್ಷಿಕೆಯ ವಿಶೇಷ ಮಾಸ್ಟರ್ ಕ್ಲಾಸ್ ಅನ್ನು ಐ.ಎಫ್.ಎಫ್.ಐ. 2024 ರ ಸಮಯದಲ್ಲಿ ನಡೆಸಲಾಗುವುದು. ಜೊತೆಗೆ, ಮಾಸ್ಟರ್ ಕ್ಲಾಸುಗಳು ಮತ್ತು ಪತ್ರಿಕಾಗೋಷ್ಠಿಗಳು ನೇರ ಸಂಕೇತ ಭಾಷೆಯ ವ್ಯಾಖ್ಯಾನವನ್ನು ಒಳಗೊಂಡಿರುತ್ತದೆ, ಪ್ರಮುಖ ನವೀಕರಣಗಳು ಮತ್ತು ಚರ್ಚೆಗಳು ಎಲ್ಲರಿಗೂ ಪ್ರವೇಶಿಸಬಹುದು ಎನ್ನುವುದನ್ನು ಖಚಿತಪಡಿಸುತ್ತದೆ.
ಸುಲಭ ಸೌಲಭ್ಯದೊಂದಿಗೆ ಪ್ರದರ್ಶಿಸಲಾಗುವ ಚಲನಚಿತ್ರಗಳ ವೇಳಾಪಟ್ಟಿ ಹೀಗಿದೆ:
ಟ್ವೆಲ್ವ್ತ್ ಫೇಲ್ - ನವೆಂಬರ್ 22, 11:30 AM (ಆಡಿಯೋ ವಿವರಣೆ, ಸಂಕೇತ ಭಾಷೆ)
ಬಾರ್ತಾಲಿಸ್ ಬೈಸಿಕಲ್ - ನವೆಂಬರ್ 24, 5:00 PM (ಆಡಿಯೋ ವಿವರಣೆ, ಲೈವ್ ಸೈನ್ ಲಾಂಗ್ವೇಜ್)
ಬಿಯಾಂಡ್ ದಿ ಕೋರ್ಟ್: ದಿ ಇಂಡಿಯನ್ ವೀಲ್ ಚೇರ್ ಬಾಸ್ಕೆಟ್ ಬಾಲ್ ಜರ್ನಿ - ನವೆಂಬರ್ 24, 5:00 PM (ಆಡಿಯೋ ವಿವರಣೆ, ಸಂಕೇತ ಭಾಷೆ)
ಸ್ಟ್ರೈಡ್ - ನವೆಂಬರ್ 26, 11:45 AM (ಆಡಿಯೋ ವಿವರಣೆ, ಸಂಕೇತ ಭಾಷೆ)
ಇಂಡಿಯಾ ವೋಟ್ಸ್ #WorldsLargestElection - ನವೆಂಬರ್ 26, 11:45 AM (ಸಂಕೇತ ಭಾಷೆ)
ವೆನ್ ಆಪರ್ಚುನಿಟಿ ನಾಕ್ಸ್ ದಿ ರಿಕ್ರೂಟರ್ಸ್ ಡೋರ್ - ನವೆಂಬರ್ 26, 11:45 AM (ಆಡಿಯೋ ವಿವರಣೆ, ಸಂಕೇತ ಭಾಷೆ)
ಅಪ್ಲಿಕೇಶನ್ ವೈಶಿಷ್ಟ್ಯಗಳ ಮೂಲಕ ಆಡಿಯೊ ವಿವರಣೆಗಳೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನಗಳು –
ಕ್ಯೂಬ್ ಸಿನಿಮಾಸ್ ಅಭಿವೃದ್ಧಿಪಡಿಸಿದ ಮೂವಿಬಫ್ ಆಕ್ಸೆಸ್ ಅಪ್ಲಿಕೇಶನ್ನೊಂದಿಗೆ ಈಗ ದೃಷ್ಟಿ ವಿಕಲಚೇತನವ್ಯಕ್ತಿಗಳು ಚಲನಚಿತ್ರಗಳನ್ನು ಪೂರ್ಣವಾಗಿ ಆನಂದಿಸಬಹುದು. ವಿವರಣಾತ್ಮಕ ಆಡಿಯೊವನ್ನು ನೇರವಾಗಿ ತಮ್ಮ ಫೋನ್ ಗೆ ಸ್ಟ್ರೀಮ್ ಮಾಡಲು ಭಾಗವಹಿಸುವವರು ಸ್ಥಳದ ವೈಫೈಗೆ ಸರಳವಾಗಿ ಸಂಪರ್ಕಿಸಬೇಕು.
- ಸ್ವಾತಂತ್ರ್ಯ ವೀರ್ ಸಾವರ್ಕರ್ (ಆರಂಭಿಕ ಚಿತ್ರ) - ನವೆಂಬರ್ 21, 11:00 AM
- ಪಿಯಾನೋ ಲೆಸನ್ಸ್(ಯುಎಸ್.ಎ) - ನವೆಂಬರ್ 21, 12:45 PM
- ಘರತ್ ಗಣಪತಿ- ನವೆಂಬರ್ 22, 12:45 PM
- ಮಹಾವತಾರ ನರಸಿಂಹ(ವಿಶ್ವ ಪ್ರೀಮಿಯರ್) - ನವೆಂಬರ್ 24, 4:30 PM
- ಸ್ಯಾಮ್ ಬಹದ್ದೂರ್- ಮೇಘನಾ ಗುಲ್ಜಾರ್ ಅವರ ನಿರ್ದೇಶನ, ನವೆಂಬರ್ 24, 8:00 PM
- ದಿ ರೂಸ್ಟರ್ (ಆಸ್ಟ್ರೇಲಿಯಾ) - ನವೆಂಬರ್ 24, 5:15 PM
- ಆರ್ಟಿಕಲ್ 370- ನವೆಂಬರ್ 26, 8:00 PM
- ಅಡಿಷನ್ (ಆಸ್ಟ್ರೇಲಿಯಾ) - ನವೆಂಬರ್ 27, 10:15 PM
ಸಬಲೀಕರಣ ಪಾಲುದಾರಿಕೆಗಳು
55ನೇ ಐ.ಎಫ್.ಎಫ್.ಐ. ನ ಸುಲಭ ಪ್ರವೇಶ ಉಪಕ್ರಮಗಳು ಪ್ರಮುಖ ವಿಷಯ ಪಾಲುದಾರರ ಸಹಯೋಗದ ಮೂಲಕ ಸಾಧ್ಯವಾಗಿದೆ
- ಶ್ರೀ ಅಲೋಕ್ ಕೇಜ್ರಿವಾಲ್ ಸ್ಥಾಪಿಸಿದ ಇಂಡಿಯಾ ಸೈನಿಂಗ್ ಹ್ಯಾಂಡ್ಸ್, ವಿಶೇಷಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ.
- ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶ್ರೀಮತಿ ಮಾಧವಿ ಲತಾ ಪ್ರತಿಗುಡುಪು ಅವರು ಸ್ಥಾಪಿಸಿದ ಚಾರಿಟೇಬಲ್ ಟ್ರಸ್ಟ್ ʼಯೆಸ್, ವಿ ಟೂ ಕ್ಯಾನ್ ಚಾರಿಟೇಬಲ್ ಟ್ರಸ್ಟ್.
- ಕ್ಯೂಬ್ ಸಿನಿಮಾ ಅಭಿವೃದ್ಧಿಪಡಿಸಿದ ಮೂವಿ ಬಫ್ ಅಪ್ಲಿಕೇಶನ್, ಸುಲಭಪ್ರವೇಶಿಸಬಹುದಾದ ಚಲನಚಿತ್ರ ಪ್ರದರ್ಶನಗಳನ್ನು ಸಕ್ರಿಯಗೊಳಿಸುವ ತಡೆರಹಿತ ಆಡಿಯೊ ವಿವರಣೆಯನ್ನು ಸುಗಮಗೊಳಿಸುತ್ತದೆ.
- ಡಬ್ಸ್ವರ್ಕ್ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಸಿನೆಡಬ್ಸ್ ಅಪ್ಲಿಕೇಶನ್ ಬಹುಭಾಷಾ ಪ್ರದರ್ಶನಗಳನ್ನು ಬೆಂಬಲಿಸುತ್ತದೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಒತ್ತಿಹೇಳುತ್ತದೆ.
- ಬಿಲಿಯನ್ ರೀಡರ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಸಿನಿಮಾದಲ್ಲಿ ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುತ್ತದೆ, ವಿಶಾಲವಾದ ಪ್ರಾತಿನಿಧ್ಯ ಮತ್ತು ಪ್ರವೇಶವನ್ನು ಉತ್ತೇಜಿಸುತ್ತದೆ.
- ಅನುಭೂತಿ ಮತ್ತು ಒಳಗೊಳ್ಳುವಿಕೆಗೆ ಬದ್ಧವಾಗಿರುವ ತಂಡ
ಐ.ಎಫ್.ಎಫ್.ಐ. ತಂಡವು ಸಮಗ್ರ ಸೂಕ್ಷ್ಮತೆಯ ತರಬೇತಿಯನ್ನು ಪಡೆದಿದೆ ಈ ಸಿದ್ಧತೆಯು ಐ.ಎಫ್.ಎಫ್.ಐ. ಸಿಬ್ಬಂದಿಯನ್ನು ಸೂಕ್ಷ್ಮ ಮತ್ತು ವಿಶೇಷ ಬೆಂಬಲವನ್ನು ಒದಗಿಸಲು ಸಜ್ಜುಗೊಳಿಸುತ್ತದೆ ಮತ್ತು ಚಿತ್ರೋತ್ಸವದ ಉದ್ದಕ್ಕೂ ಅತಿಥಿಗಳಿಗೆ ಅಂತರ್ಗತ ಮತ್ತು ಗೌರವಾನ್ವಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಒಳಗೊಳ್ಳುವಿಕೆಗೆ IFFIಯ ಬದ್ಧತೆಯು "ಎಲ್ಲರಿಗೂ ಮನರಂಜನೆ" ಎನ್ನುವ ಉತ್ಸವದ ವಿಶಾಲ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. 55ನೇ ಐ.ಎಫ್.ಎಫ್.ಐ., ಪ್ರತಿಯೊಬ್ಬರೂ ಸಿನಿಮಾದ ಚಮತ್ಕಾರವನ್ನು ಅನುಭವಿಸುವ ವಾತಾವರಣವನ್ನು ಉತ್ತೇಜಿಸುವ ಮೂಲಕ ಹಂಚಿಕೊಂಡ ಸಾಂಸ್ಕೃತಿಕ ಅನುಭವಗಳನ್ನು ರಚಿಸುವಲ್ಲಿ ಜಾಗತಿಕ ನಾಯಕನಾಗಿ ತನ್ನ ಪಾತ್ರವನ್ನು ಪುನರುಚ್ಚರಿಸುತ್ತದೆ.
*****
(Release ID: 2074943)
Visitor Counter : 12