ಆಯುಷ್
azadi ka amrit mahotsav

ನಾಗಮಂಗಲದ ಸೆಂಟ್ರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಮತ್ತು ನ್ಯಾಚುರೋಪತಿಯಲ್ಲಿ 7ನೇ ಪ್ರಕೃತಿ ಚಿಕಿತ್ಸಾ ದಿನಾಚರಣೆ


ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಹೆಚ್ಚು ಜನಪ್ರಿಯವಾಗುತ್ತಿದೆ: ಶ್ರೀ ಪ್ರತಾಪ್ ರಾವ್ ಜಾಧವ್

ಯೋಗಟೆಕ್ ಸವಾಲಿನ ವಿಜೇತರನ್ನು ಸನ್ಮಾನಿಸಲಾಯಿತು; ಯೋಗ ಮತ್ತು ಪ್ರಕೃತಿಚಿಕಿತ್ಸೆ ಕುರಿತು ಮೀಸಲಾದ 12 ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು

Posted On: 18 NOV 2024 6:58PM by PIB Bengaluru

ಕೇಂದ್ರ ಆಯುಷ್ ಸಚಿವಾಲಯದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಮತ್ತು ನ್ಯಾಚುರೋಪತಿ (ಸಿಸಿಆರ್‌ವೈಎನ್) ಆಶ್ರಯದಲ್ಲಿ 7 ನೇ ಪ್ರಕೃತಿ ಚಿಕಿತ್ಸಾ ದಿನವನ್ನು ನಾಗಮಂಗಲದ ಸೆಂಟ್ರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಮತ್ತು ನ್ಯಾಚುರೋಪತಿ (ಸಿಆರ್‌ಐವೈಎನ್) ನಲ್ಲಿ ಆಚರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಣಿಪುರದಂತಹ ರಾಜ್ಯಗಳನ್ನು ಪ್ರತಿನಿಧಿಸುವ  800 ಕ್ಕೂ ಹೆಚ್ಚು ವೈದ್ಯರು, ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಕ್ಷೇತ್ರದ ವಿದ್ವಾಂಸರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಕವಿತಾ ಗಾರ್ಗ್, ಸಿಸಿಆರ್‌ವೈಎನ್ ನಿರ್ದೇಶಕ ಡಾ.ರಾಘವೇಂದ್ರರಾವ್, ಎಸ್‌ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ಉಪಕುಲಪತಿ ಡಾ.ಮಂಜುನಾಥ್ ಎನ್.ಕೆ., ಸ್ವ್ಯಾಸ ವಿಶ್ವವಿದ್ಯಾಲಯ, ಡಾ.ಪ್ರಶಾಂತ್ ಶೆಟ್ಟಿ, ಸಿಸಿಆರ್‌ವೈಎನ್ ಆಡಳಿತ ಮಂಡಳಿ, ಸದಸ್ಯರು , ನಾಗಮಂಗಲ ಶಾಸಕರು ಮತ್ತು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  

ಕೇಂದ್ರ ಆಯುಷ್‌ ರಾಜ್ಯ ಖಾತೆ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ರಾ ಜಾಧವ್ ಅವರು ತಮ್ಮ ಲಿಖಿತ ಸಂದೇಶದಲ್ಲಿ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತೇಜಿಸುವ ಒಂದು ವಿಶಿಷ್ಟವಾದ ಔಷಧೀಯ ವ್ಯವಸ್ಥೆಯಾಗಿದೆ.  ಮತ್ತು ರಾಷ್ಟ್ರದಾದ್ಯಂತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಹಾರ ಕೇಂದ್ರಗಳನ್ನು (ವೈಎನ್ ಡಿಸಿ) ಸ್ಥಾಪಿಸಲು ಅವರು ಸಲಹೆ ನೀಡಿದರು. ಹಾಗೂ ಭಾರತ ಸರ್ಕಾರವು ಯೋಗ ಮತ್ತು ಪ್ರಕೃತಿಚಿಕಿತ್ಸೆಯ ವ್ಯವಸ್ಥೆಗಳಿಗೆ ಕೇಂದ್ರೀಯ ಶಾಸನಕ್ಕಾಗಿ ಸಕ್ರಿಯವಾಗಿ ಪ್ರಯತ್ನಿಸಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಂಶೋಧನೆ ಮತ್ತು ಪುರಾವೆಗಳ ದಾಖಲಾತಿ, ಉತ್ಪಾದನೆಯ ಮೇಲೆ ಸರ್ಕಾರ ಇನ್ನೂ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಹೇಳಿದರು. “ನಾವು ವಿವಿಧ ರಾಜ್ಯಗಳಾದ್ಯಂತ ಉನ್ನತ ಮಟ್ಟದ ಸಂಶೋಧನೆ ನಡೆಸಲು 100 ರಿಂದ 200 ಹಾಸಿಗೆ ಆಸ್ಪತ್ರೆಗಳೊಂದಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಕೇಂದ್ರೀಯ ಸಂಶೋಧನಾ ಸಂಸ್ಥೆಗಳಂತಹ ಸಂಶೋಧನೆ ಮತ್ತು ಬೋಧನಾ ಸಂಸ್ಥೆಗಳ ಸರಣಿಯನ್ನು ರಚಿಸಲಿದ್ದೇವೆ." ಎಂದು ಸಚಿವರು ಹೇಳಿದರು 

ಎರಡು ಸಿಆರ್‌ಐವೈಎನ್ ಗಳು, ಒಂದು ಕರ್ನಾಟಕದ ನಾಗಮಂಗಲದಲ್ಲಿ ಮತ್ತು ಇನ್ನೊಂದು ಹರಿಯಾಣದ ಜಜ್ಜರ್‌ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.  2024 ರ ಆಯುರ್ವೇದ ದಿನದಂದು, ಛತ್ತೀಸ್‌ಗಢದ ರಾಯ್‌ಪುರ ಮತ್ತು ಒಡಿಶಾದ ಖೋರ್ಡಾದಲ್ಲಿ 100 ಹಾಸಿಗೆಗಳ ಹೊಸ ಸಿಆರ್‌ಐವೈಎನ್ ಗಳಿಗೆ ಪ್ರಧಾನ ಮಂತ್ರಿಗಳು ಅಡಿಪಾಯ ಹಾಕಿದ್ದಾರೆ.  ಅಸ್ಸಾಂ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಇದೇ ರೀತಿಯ ಸಂಸ್ಥೆಗಳ ಯೋಜನೆಗಳು ನಡೆಯುತ್ತಿವೆ ಎಂದು ಸಚಿವರು ಮಾಹಿತಿ ತಿಳಿಸಿದರು 

ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಕವಿತಾ ಗಾರ್ಗ್ ಅವರು ಪ್ರಕೃತಿಚಿಕಿತ್ಸೆಯ ಸಮಯಾತೀತ ಮಹತ್ವದ ಬಗ್ಗೆ ಹೇಳಿದರು. “ಪ್ರಕೃತಿ ಚಿಕಿತ್ಸೆಯು ನಮಗೆ ತಿನ್ನಲು, ಕುಡಿಯಲು, ವರ್ತಿಸಲು ಮತ್ತು ಮಿತವಾಗಿ ಬದುಕಲು ಕಲಿಸುತ್ತದೆ.  ಇದು ನಮ್ಮನ್ನು ಸ್ವಯಂ-ನಿರ್ವಹಣೆಯ ಕಲೆಯೊಂದಿಗೆ ಸಜ್ಜುಗೊಳಿಸುತ್ತದೆ. ನಾವು ವರ್ತಮಾನದಲ್ಲಿ ಉಳಿಯಬೇಕು ಮತ್ತು ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಯೋಚಿಸಬಾರದು, ಆಧ್ಯಾತ್ಮಿಕ ಅನ್ವೇಷಣೆಗಳಿಗಾಗಿ ಆರೋಗ್ಯಕರವಾಗಿರಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಡಾ. ಎಚ್.ಆರ್.ನಾಗೇಂದ್ರ ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಸಂಶೋಧನೆಯನ್ನು ಮುಂದುವರೆಸುವ ಪ್ರಾಮುಖ್ಯತೆಯನ್ನು ವಿವರಿಸಿದರು, ಉನ್ನತ ಮಟ್ಟದ ಸಂಶೋಧನೆಗಾಗಿ ಸಿಆರ್‌ಐವೈಎನ್ ಗಳನ್ನು ಜಾಗತಿಕ ಶ್ರೇಷ್ಠ ಕೇಂದ್ರಗಳಾಗಿ ರೂಪಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗಟೆಕ್ ಚಾಲೆಂಜ್‌ ನಲ್ಲಿ  ವಿಜೇತರನ್ನು ಸನ್ಮಾನಿಸಲಾಯಿತು. ಇದು ಆಧುನಿಕ ತಂತ್ರಜ್ಞಾನದೊಂದಿಗೆ ಯೋಗವನ್ನು ಸಂಯೋಜಿಸುವ ನವೀನ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸುವ ಯೋಜನೆ ಯಾಗಿದೆ.  70 ಕ್ಕೂ ಹೆಚ್ಚು ನಮೂದುಗಳಿಂದ ವಿಜೇತರನ್ನು ಆಯ್ಕೆಮಾಡಲಾಗಿದೆ. ಸಾಧನಗಳು, ಐಟಿ ಪರಿಹಾರಗಳು ಮತ್ತು ರಂಗಪರಿಕರಗಳು ಮತ್ತು ವೈದ್ಯಕೀಯ ಪರಿಕರಗಳಂತಹ ಹಲವು ವಿಭಾಗಗಳಾದ್ಯಂತ ಒಟ್ಟು 15 ಸ್ಟಾರ್ಟ್‌ಅಪ್‌ಗಳು ಫೈನಲ್‌ ಹಂತ ತಲುಪಿವೆ: ಸಾಧನಗಳ ವಿಭಾಗದಲ್ಲಿ "ಎನ್.ಟಿ ಪರಿಹಾರಗಳು" ಸಂಸ್ಥೆ ಗೆಲುವು ಕಂಡಿತು; ಪರಿಹಾರಗಳ ವಿಭಾಗದಲ್ಲಿ "ಯೋಗ4ಲೈಫ್" ತಂಡ ವಿಜೇತರಾಗಿ ಹೊರಹೊಮ್ಮಿತು.

ಚಾಲೆಂಜ್ ಎಐ- ಚಾಲಿತ ಅಪ್ಲಿಕೇಶನ್‌ಗಳು, ಧರಿಸಬಹುದಾದ ಸಾಧನಗಳು ಮತ್ತು ಸುಧಾರಿತ ಯೋಗ ಪರಿಕರಗಳಂತಹ ನಾವೀನ್ಯತೆಗಳನ್ನು ಪ್ರದರ್ಶಿಸಿದವು. ಪ್ರಾಚೀನ ಯೋಗಕ್ಷೇಮ ಅಭ್ಯಾಸಗಳನ್ನು ಆಧುನಿಕ ಯುಗಕ್ಕೆ ತರುವಲ್ಲಿ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಎತ್ತಿ ತೋರಿಸುತ್ತವೆ.

ನಿಮ್ಹಾನ್ಸ್, ಸ್ವ್ಯಾಸ ವಿಶ್ವವಿದ್ಯಾಲಯ ಮತ್ತು ಸಿಸಿಆರ್‌ವೈಎನ್‌ ಸಂಸ್ಥೆಗಳ ಸಹಯೋಗದಲ್ಲಿ "ಯುಎನ್ ಎಸ್‌ಡಿಜಿ ಗುರಿಗಳಲ್ಲಿ ಯೋಗದ ಪಾತ್ರ" ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿಗಳು) ಸಾಧಿಸುವಲ್ಲಿ ಯೋಗದ ಪಾತ್ರವನ್ನು ವಿವರಿಸುತ್ತದೆ.  ಅಲ್ಲದೆ, ಯೋಗದ ಕುರಿತು 10 ಸಂಶೋಧನಾ ಪುಸ್ತಕಗಳು, ಪ್ರಕೃತಿಚಿಕಿತ್ಸೆಯ ಬಗ್ಗೆ ಒಂದು ಮತ್ತು ವೋಲ್ಟರ್ಸ್ ಕ್ಲುವರ್‌ವೆರ್ ಅವರು ಪ್ರಕಟಿಸಿದ "ಇಂಡಿಯನ್ ಜರ್ನಲ್ ಆಫ್ ಯೋಗ ಮತ್ತು  ನ್ಯಾಚುರೋಪತಿ" ಇದರ ಉದ್ಘಾಟನಾ ಸಂಚಿಕೆಯನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಮಾರಂಭವು 2024 ರ ನವೆಂಬರ್ 18-19 ರಂದು ನಡೆಯಲಿರುವ "ಪ್ರಕೃತಿ ಚಿಕಿತ್ಸೆ" ಕುರಿತ ಮುಂಬರುವ "ಅಂತರರಾಷ್ಟ್ರೀಯ ಸಮ್ಮೇಳನ"ಕ್ಕೆ ಮುನ್ನುಡಿಯಾಗಿ ಕಾರ್ಯನಿರ್ವಹಿಸಿತು. ಆ ವಿಶೇಷ ಸಮಾರಂಭದಲ್ಲಿ ಜಾಗತಿಕ ತಜ್ಞರು ಸಮಗ್ರ ಆರೋಗ್ಯ ಮತ್ತು ಕ್ಷೇಮದ ವಿಚಾರದಲ್ಲಿ ಹೊಸ ಸಂಶೋಧನೆಗಳನ್ನು, ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಆಯಾಮಗಳನ್ನು ಅನ್ವೇಷಿಸಲಿದ್ದಾರೆ.

 

*****


(Release ID: 2074518) Visitor Counter : 41


Read this release in: English , Urdu , Hindi , Tamil