ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಐ.ಎಫ್.ಎಫ್.ಐ. 2024ರ ಸಿದ್ಧತೆಗಳನ್ನು ಪರಿಶೀಲಿಸಿದರು
ಐ.ಎಫ್.ಎಫ್.ಐ. ಭಾರತದ ಸಿನಿಮೀಯ ಬಹುತ್ವ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ : ಡಾ. ಎಲ್. ಮುರುಗನ್
ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್. ಮುರುಗನ್ ಅವರು 2024ರ ನವೆಂಬರ್ 20-28 ರವರೆಗೆ ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 55ನೇ ಆವೃತ್ತಿಯ ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಸಂಬಂಧಪಟ್ಟ ಪ್ರಮುಖರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಡಾ. ಮುರುಗನ್ ಅವರು ಮಹೋತ್ಸವವನ್ನು ತಡೆರಹಿತವಾಗಿ ಕಾರ್ಯಗತಗೊಳಿಸಲು ಸಮಗ್ರ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು. ಐ.ಎಫ್.ಎಫ್.ಐ. ಸಂಭ್ರಮದ ಉತ್ಸಾಹ ಮತ್ತು ಗೋವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಎಂದು ಒತ್ತಿ ಹೇಳಿದರು. ಉತ್ಸವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಬಂಧಪಟ್ಟ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಕೋರಿದರು.
ಡಾ. ಮುರುಗನ್ ಅವರು ಭಾರತೀಯ ಚಿತ್ರರಂಗದ ವೈವಿಧ್ಯತೆಯನ್ನು ಆಚರಿಸುವ ವೇದಿಕೆಯಾಗಿ ಐ.ಎಫ್.ಎಫ್.ಐ. ನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. "ಈ ಉತ್ಸವವು ಭಾರತೀಯ ಚಿತ್ರರಂಗವನ್ನು ರೂಪಿಸುವ ವಿಶಾಲವಾದ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ" ಎಂದು ಅವರು ಹೇಳಿದರು, ಪ್ರಾದೇಶಿಕ ಚಲನಚಿತ್ರಗಳಿಂದ ಹಿಡಿದು ದೇಶದ ಬ್ಲಾಕ್ ಬಸ್ಟರ್ ಗಳವರೆಗೆ, ಐ.ಎಫ್.ಎಫ್.ಐ. ಭಾರತೀಯ ಚಿತ್ರರಂಗದ ಬಹುತ್ವಕ್ಕೆ ನಿಜವಾದ ಪ್ರತಿಬಿಂಬವಾಗಿರಬೇಕು." ಎಂದು ಅವರು ಹೇಳಿದರು.
ಡಾ. ಮುರುಗನ್ ಅವರು ಪ್ರಪಂಚದಾದ್ಯಂತ ಉತ್ಸವದ ವ್ಯಾಪ್ತಿ ಮತ್ತು ಗೋಚರತೆಯನ್ನು ಹೆಚ್ಚಿಸಲು ಜಾಗತಿಕ ಮಾಧ್ಯಮದ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಐ.ಎಫ್.ಎಫ್.ಐ. ವಿಶ್ವಾದ್ಯಂತ ಗಮನ ಸೆಳೆಯುವುದು ಮಾತ್ರವಲ್ಲದೆ ಭಾರತೀಯ ಸಿನಿಮಾ ಮತ್ತು ಜಾಗತಿಕ ಪ್ರೇಕ್ಷಕರ ನಡುವಿನ ಅರ್ಥಪೂರ್ಣ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಎಲ್ಲರೂ ಅಂತಾರಾಷ್ಟ್ರೀಯ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುವಂತೆ ಅವರು ಒತ್ತಾಯಿಸಿದರು.
ಡಾ ಮುರುಗನ್ ಅವರು ನಂತರ ಫಿಲ್ಮ್ ಬಜಾರ್ ನಡೆಯುವ ಗೋವಾ ಮ್ಯಾರಿಯೆಟ್ ರೆಸಾರ್ಟ್ ಮತ್ತು ಪ್ರಾಮಿನೇಡ್ ಸೇರಿದಂತೆ ಪ್ರಮುಖ ಉತ್ಸವದ ಸ್ಥಳಗಳಿಗೆ ಭೇಟಿ ನೀಡಿದರು. ಅವರು ಕಲಾ ಅಕಾಡೆಮಿ ಮತ್ತು ಐನಾಕ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡಿದರು, ಇವು ಐ.ಎಫ್.ಎಫ್.ಐ. ಪ್ರದರ್ಶನಗಳ ಪ್ರಮುಖ ಸ್ಥಳವಾಗಿವೆ. ಅವರು ಡಿಬಿ ಗ್ರೌಂಡ್ಗೆ ಭೇಟಿ ನೀಡಿದರು, ಇದು ಈ ವರ್ಷದ ಉತ್ಸವದ ಪ್ರಮುಖ ಆಕರ್ಷಣೆಯಾದ ಮನರಂಜನಾ ಆವರಣವಾದ 'ಇಫಿಯೆಸ್ಟಾ'ವನ್ನು ಸಹ ಹೊಂದಿದೆ. ಮಹೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ನಡೆಯಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣಕ್ಕೂ ಡಾ.ಮುರುಗನ್ ಭೇಟಿ ನೀಡಿದರು. ಅವರು ಕೇಂದ್ರೀಯ ಸಂಪರ್ಕ ಸಂಸ್ಥೆಯ ಮಲ್ಟಿಮೀಡಿಯಾ ಪ್ರದರ್ಶನ 'ಸಫರ್ನಾಮ' ನಡೆಯುವ ಸ್ಥಳವಾದ ಧರಿಯಾ ಸಂಗಮಕ್ಕೆ ಭೇಟಿ ನೀಡಿದರು.
ಸಭೆಯಲ್ಲಿ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ವಿ.ಕಂದವೇಲು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು; ಜೊತೆಗೆ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ, ಮಹಾನಿರ್ದೇಶಕ (ಪಶ್ಚಿಮ ವಲಯ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ; ಶ್ರೀ ಪೃಥುಲ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ; ಶ್ರೀ ರಮೇಶ್ ವರ್ಮಾ, ಕಾರ್ಯದರ್ಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಗೋವಾ ಸರ್ಕಾರ; ಅಕ್ಷತ್ ಕೌಶಲ್ ಐಪಿಎಸ್, ಎಸ್.ಪಿ ಉತ್ತರ ಗೋವಾ; ಕಿರಣ್ ಪೊದುವಾಳ್, ಎಸ್.ಪಿ ವಿಐಪಿ ಭದ್ರತೆ; ಮತ್ತು ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾದ ಜನರಲ್ ಮ್ಯಾನೇಜರ್ ಕುಮಾರಿ ಮೃನಾಲ್ ವಾಲ್ಕೆ ಇತರರು ಇದ್ದರು.
ಡಾ. ಮುರುಗನ್ ಅವರ ಚಲನಚಿತ್ರೋತ್ಸವದ ಸ್ಥಳಕ್ಕೆ ನೀಡಿದ ಭೇಟಿ ಮತ್ತು ಚರ್ಚೆಗಳು ಐ.ಎಫ್.ಎಫ್.ಐ 2024 ಅನ್ನು ಅದ್ಭುತ ಯಶಸ್ಸನ್ನಾಗಿ ಮಾಡುವ ಸರ್ಕಾರದ ಅಚಲ ಬದ್ಧತೆಯನ್ನು ಬಲಪಡಿಸುತ್ತವೆ.
*****
(Release ID: 2073946)
Visitor Counter : 8