ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ರಾಷ್ಟ್ರೀಯ ಕಾರ್ಯಾಗಾರವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳೊಂದಿಗೆ ಉದ್ಘಾಟಿಸಿದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ 


ಕಾರ್ಯಾಗಾರವು ಸಶ್ರಮ ತರಬೇತಿಯ ಶೈಕ್ಷಣಿಕ ಬುದ್ದಿಮತ್ತೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ - ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ 

ಶೈಕ್ಷಣಿಕ ಕ್ಷೇತ್ರದ ದಿಗ್ಗಜರು, ತಜ್ಞರು, ಆಡಳಿತಗಾರರು ಮತ್ತು ನಿರ್ವಹಣೆ ಮಾಡುವವರು ಗಮನ ಕೇಂದ್ರೀಕರಿಸಲು ಐದು ಪ್ರಮುಖ ಕ್ಷೇತ್ರಗಳನ್ನು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಸೂಚಿಸಿದರು

Posted On: 12 NOV 2024 1:44PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ನವದೆಹಲಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೇಂದ್ರ ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀ ಕೆ. ಸಂಜಯ್ ಮೂರ್ತಿ; ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ  ಶ್ರೀ ಸುನೀಲ್ ಕುಮಾರ್ ಬರ್ನ್ವಾಲ್; ಯುಜಿಸಿ ಅಧ್ಯಕ್ಷರಾದ ಪ್ರೊ. ಎಂ. ಜಗದೇಶ್ ಕುಮಾರ್; ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಮನಮೋಹನ್ ಕೌರ್; ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು, ಶಿಕ್ಷಣ ತಜ್ಞರು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಚಿವಾಲಯದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Image

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು, “ಕಾರ್ಯಾಗಾರವು ಕಠಿಣವಾದ ಶೈಕ್ಷಣಿಕ ವಿಚಾರ ಮಂಥನಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಶಿಕ್ಷಣವು ಜೀವನವನ್ನು ಸುಲಭಗೊಳಿಸಲು, ತಲಾ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ ರಾಷ್ಟ್ರೀಯ ಆದ್ಯತೆಗಳನ್ನು ಸಾಧಿಸುವಲ್ಲಿ ಗಣನೀಯ ಸುಧಾರಣೆಗಳನ್ನು ತರುವ ಪ್ರಯತ್ನ ಮಾಡುತ್ತದೆ. ಇಂಡಸ್ಟ್ರಿ 4.0 ಮತ್ತು ಅಭಿವೃದ್ಧಿಯ ಏರಿಕೆಯ ಅವಕಾಶಗಳನ್ನು ಬಳಸಿಕೊಂಡು ದೇಶವು ಉತ್ಪಾದನಾ ಆರ್ಥಿಕತೆಯಾಗಬೇಕು ಮತ್ತು ಜಾಗತಿಕ ಗುಣಮಟ್ಟವನ್ನು ಮೀರಿಸುವ ಶಿಕ್ಷಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು. ಶಿಕ್ಷಣ ಮೂಲಸೌಕರ್ಯವು ಬಹು ಆಯಾಮದ ಪರಿಕಲ್ಪನೆಯಾಗಿದೆ ಮತ್ತು ಕೇವಲ ಕೊಠಡಿ, ಇಟ್ಟಿಗೆ ಮತ್ತು ಗಾರೆ ರಚನೆಗಳನ್ನು ಅಭಿವೃದ್ಧಿಪಡಿಸುವುದನ್ನು ಮೀರಿದೆ” ಎಂದು ಹೇಳಿದರು.  

Image

ಶೈಕ್ಷಣಿಕ ದಿಗ್ಗಜರು, ತಜ್ಞರು  ಮತ್ತು ನಿರ್ವಹಣೆ ಮಾಡುವವರು ಹಾಗೂ ಆಡಳಿತಗಾರರು ಗಮನಹರಿಸಿ ಕೇಂದ್ರೀಕರಿಸಲು ಐದು ಪ್ರಮುಖ ಕ್ಷೇತ್ರಗಳನ್ನು ಕೇಂದ್ರ ಶಿಕ್ಷಣ ಸಚಿವರು ಸೂಚಿಸಿದರು. ಇವುಗಳು ಈ ರೀತಿ ಇವೆ -ನವೀನ ವಿಧಾನಗಳ ಮೂಲಕ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಬಲಪಡಿಸುತ್ತಿದ್ದವು; ಉದ್ಯಮದ ಬೇಡಿಕೆಗೆ ಅನುಗುಣವಾಗಿ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಗತ್ಯತೆಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಜೋಡಿಸಲು ಮತ್ತು ಹೊಂದಿಸಲು ಚಿಂತನ ತಂಡ (ಥಿಂಕ್ ಟ್ಯಾಂಕ್)ಗಳನ್ನು ಸ್ಥಾಪಿಸುವುದು; ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಲು ಸಂಶೋಧನೆ ಮತ್ತು ನಾವೀನ್ಯತೆಗೆ ಬಹುಶಿಸ್ತೀಯ ವಿಧಾನವನ್ನು ಅಳವಡಿಸಿಕೊಳ್ಳುವುದು; ಪ್ರಖ್ಯಾತ ಕೇಂದ್ರ/ರಾಜ್ಯ ಸಂಸ್ಥೆಗಳ ಸಹಯೋಗದ ಮೂಲಕ ಪ್ರತಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೈಕ್ಷಣಿಕ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು; ಮತ್ತು ಕ್ರೀಡೆ, ಚರ್ಚೆ, ಕವನ, ನಾಟಕ, ಪ್ರದರ್ಶನ ಕಲೆಗಳ ಮೂಲಕ ಶೈಕ್ಷಣಿಕ ವಠಾರ (ಕ್ಯಾಂಪಸ್) ಜೀವನದ ಚೈತನ್ಯವನ್ನು ಪುನರುಜ್ಜೀವನಗೊಳಿಸುವುದು (ಈಗಾಗಲೇ ಎನ್.ಇಪಿ ಮೂಲಕ ಮನ್ನಣೆ ಪಡೆದಿದೆ) ಮತ್ತು ವಿದ್ವತ್-ಅಲ್ಲದ ಇತರೆ ವಿವಿಧ ಕ್ಷೇತ್ರಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು.
 
ಭಾರತೀಯ ಭಾಷೆಗಳಲ್ಲಿ ಬೋಧನೆಯ ಮಹತ್ವವನ್ನು ವಿವರಿಸುತ್ತಾ, ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ದೇಶದ ವಿದ್ಯಾರ್ಥಿಗಳ ಬಗೆಗಿನ ಹೊಣೆಗಾರಿಕೆಯನ್ನು ಕೂಡಾ ವಿವರಿಸಿದರು, ಹಾಗೂ “ಶಿಕ್ಷಣದಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಸ್ಥಾಪಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.

ಡಾ. ಸುಕಾಂತ ಮಜುಂದಾರ್ ಅವರು ತಮ್ಮ ಭಾಷಣದಲ್ಲಿ,  ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) 2020 ರ ಮೂಲಕ ಭಾರತದ ಶೈಕ್ಷಣಿಕ ಚೌಕಟ್ಟನ್ನು ಮರುರೂಪಿಸುವ ದೃಷ್ಟಿಕೋನ ಹೊಂದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. 

“ಎನ್.ಇ.ಪಿ. ಕೇವಲ ನೀತಿಯಲ್ಲ; ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಮಾಡಲು ಇದು ಮಾರ್ಗಸೂಚಿಯಾಗಿದೆ. ಎನ್.ಇ.ಪಿ. 2020 ರ ಐದು ಸ್ತಂಭಗಳಾದ ಪ್ರವೇಶ, ಪಾಲುದಾರಕೆ(ಇಕ್ವಿಟಿ), ಗುಣಮಟ್ಟ, ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆಯನ್ನು ಎತ್ತಿ ತೋರಿಸುತ್ತಾ, ಆಧುನಿಕ, ಅಂತರ್ಗತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಗೆ ಇವು ಅಡಿಪಾಯವಾಗಿ ರೂಪುಗೊಳ್ಳುತ್ತವೆ. ನೀತಿಯನ್ನು ಜಾರಿಗೊಳಿಸುವ ಮೂಲಕ, ರಾಜ್ಯಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದು, ನುರಿತ ಉದ್ಯೋಗಿಗಳನ್ನು ನಿರ್ಮಿಸಬಹುದು ಮತ್ತು ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸಬಹುದು” ಎಂದು ಡಾ. ಸುಕಾಂತ ಮಜುಂದಾರ್ ಅವರು ಹೇಳಿದರು. 

ಎನ್.ಇ.ಪಿ. 2020 ಅನ್ನು ಅದರ ರೂಪದಲ್ಲಿ ಮತ್ತು ಉತ್ಸಾಹದಲ್ಲಿ ಅಳವಡಿಸಿಕೊಳ್ಳುವಂತೆ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಳನ್ನು ಡಾ. ಸುಕಾಂತ ಮಜುಂದಾರ್ ಅವರು ಒತ್ತಾಯಿಸಿದರು. 

ಶ್ರೀ ಕೆ. ಸಂಜಯ್ ಮೂರ್ತಿ ಅವರು ತಮ್ಮ ಭಾಷಣದಲ್ಲಿ ಕಾರ್ಯಾಗಾರದ ಕುರಿತು ವಿವರಿಸಿದರು ಹಾಗೂ ಸಮಾರಂಭದಲ್ಲಿ ನಡೆಯಲಿರುವ 14 ತಾಂತ್ರಿಕ ಅವಧಿಗಳನ್ನು ಅವರು ಸಂಕ್ಷಿಪ್ತವಾಗಿ ವಿವರಿಸಿದರು. ಕಳೆದ ಮೂರು ವರ್ಷಗಳಲ್ಲಿ ಗಂಭೀರವಾದ ಚರ್ಚೆಗಳಿಂದ ಹೊರಹೊಮ್ಮಿದ ಪ್ರಮುಖ ಅಂಶಗಳನ್ನು ವಿವರಿಸಿದರು, ಮತ್ತು ವಿಶ್ವವಿದ್ಯಾನಿಲಯಗಳಿಗೆ ಚೌಕಟ್ಟನ್ನು ಒದಗಿಸುವ ನೂತನ ಇಪ್ಪತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಕೆ. ಸಂಜಯ್ ಮೂರ್ತಿ ಅವರು ಹೇಳಿದರು. 

ಹೆಚ್ಚುವರಿಯಾಗಿ, ಎನ್.ಇ.ಪಿ. 2020 ರ ಅನುಷ್ಠಾನವನ್ನು ಮುನ್ನಡೆಸಿದ್ದಕ್ಕಾಗಿ ಮತ್ತು ತಮ್ಮ ಒಳನೋಟಗಳ ಮೂಲಕ ಅಮೂಲ್ಯವಾದ ಮಾರ್ಗದರ್ಶನವನ್ನು ನೀಡಿದ್ದಕ್ಕಾಗಿ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಶ್ರೀ ಕೆ. ಸಂಜಯ್ ಮೂರ್ತಿ ಅವರು ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಾಗಾರದ ಮುಖ್ಯ ಉದ್ದೇಶವು ಹೀಗಿದೆ : - ಎನ್.ಇ.ಪಿ. 2020 ಅನ್ನು ಕಾರ್ಯಗತಗೊಳಿಸಲು ವಿವಿಧ ವಿಧಾನಗಳು ಮತ್ತು ಕಾರ್ಯಾಚರಣೆಗಳನ್ನು ಪ್ರಸಾರ ಮಾಡುವುದು; ಮಾರ್ಗಸೂಚಿ ಮತ್ತು ಅನುಷ್ಠಾನ ತಂತ್ರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿ, ಜ್ಞಾನ ವಿನಿಮಯವನ್ನು ಉತ್ತೇಜಿಸುವುದು; ಎನ್.ಇ.ಪಿ. 2020 ರ ಪರಿಣಾಮಕಾರಿ ಮತ್ತು ಸುಗಮ ಅನುಷ್ಠಾನಕ್ಕಾಗಿ ಎಲ್ಲಾ ಮಧ್ಯಸ್ಥಗಾರರಿಗೆ ಒಟ್ಟುಗೂಡಲು ಮತ್ತು ಸಂಪರ್ಕ (ನೆಟ್ವರ್ಕ್) ಮಾಡಲು ಸಾಮಾನ್ಯ ವೇದಿಕೆಯನ್ನು ಒದಗಿಸಿ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಅದರ ಅಳವಡಿಕೆಯನ್ನು ಉತ್ತೇಜಿಸಿ, ಭಾರತದಾದ್ಯಂತ ಹೆಚ್ಚು ದೃಢವಾದ, ಅಂತರ್ಗತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಗೆ ದಾರಿ ಮಾಡಿಕೊಡುವುದು.

ಎನ್.ಇ.ಪಿ. 2020 ಅನ್ನು ಅಳವಡಿಸಿಕೊಳ್ಳುವುದು ರಾಜ್ಯಗಳ ಉನ್ನತ ಶಿಕ್ಷಣ ವ್ಯವಸ್ಥೆಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಹೆಚ್ಚು ನುರಿತ ಉದ್ಯೋಗಿಗಳನ್ನು ರಚಿಸುವ ಮೂಲಕ, ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಬಹುದು. ಉನ್ನತ ಶಿಕ್ಷಣವನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸುವ ಮೂಲಕ, ಇದು ರಾಜ್ಯಗಳ ಶಿಕ್ಷಣ ವ್ಯವಸ್ಥೆಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಸಹಯೋಗಗಳನ್ನು ಆಕರ್ಷಿಸುತ್ತದೆ. ಸಂಶೋಧನೆಯ ಮೇಲಿನ ನೀತಿಯ ಒತ್ತು ಮತ್ತು ಬಹುಶಿಸ್ತೀಯ ವಿಧಾನವು ರಾಜ್ಯಗಳಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುತ್ತದೆ. ಇದು ತಾಂತ್ರಿಕ ಪ್ರಗತಿಗಳು ಮತ್ತು ಆರ್ಥಿಕ ಪ್ರಯೋಜನಗಳಿಗೆ ಕಾರಣವಾಗುತ್ತದೆ.

ಉನ್ನತ ಶಿಕ್ಷಣದಲ್ಲಿ ಎನ್.ಇ.ಪಿ. 2020 ರ ಯಶಸ್ವಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಬದ್ಧತೆಯ ಅಗತ್ಯವಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಎನ್.ಇ.ಪಿ.  2020 ನೊಂದಿಗೆ ರಾಜ್ಯದ ನೀತಿಗಳನ್ನು ಜೋಡಿಸುವ ಮೂಲಕ, ರಾಜ್ಯಗಳು ತಮ್ಮ ವಿಶಿಷ್ಟ ಸಾಂಸ್ಕೃತಿಕ ಗುರುತುಗಳನ್ನು ಉಳಿಸಿಕೊಂಡು 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಲು ಅವಕಾಶವನ್ನು ಹೊಂದಿಸಿಕೊಳ್ಳುತ್ತಿವೆ.

ಈ ಎರಡು ದಿನಗಳ ಕಾರ್ಯಾಗಾರದಲ್ಲಿ, ಎನ್.ಇ.ಪಿ. 2020 ಅನುಷ್ಠಾನದ ಕುರಿತು - ಸವಾಲುಗಳು ಮತ್ತು ಮಾರ್ಗಸೂಚಿ; ಶಿಕ್ಷಣದಲ್ಲಿ ತಂತ್ರಜ್ಞಾನ; ಶಿಕ್ಷಣದಲ್ಲಿ ಸಹಯೋಗ; ಡಿಜಿಟಲ್ ಆಡಳಿತ; ಸಾಮರ್ಥ್ಯ ನಿರ್ಮಾಣ ಮತ್ತು ನಾಯಕತ್ವ; ಮತ್ತು ಉನ್ನತ ಶಿಕ್ಷಣಕ್ಕಾಗಿ ಹಣಕಾಸು; - ಮುಂತಾದ ವಿಷಯಗಳಲ್ಲಿ ಪ್ರಸಿದ್ಧ ವಿಷಯ ತಜ್ಞರು 14 ತಾಂತ್ರಿಕ ಅಧಿವೇಶನಗಳನ್ನು ನಡೆಸಿಕೊಡಲಿದ್ದಾರೆ.

 

*****


(Release ID: 2073007) Visitor Counter : 31