ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ನಾಳೆಯಿಂದ ಭುವನೇಶ್ವರದಲ್ಲಿ 5ನೇ ರಾಷ್ಟ್ರೀಯ EMRS ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು ಕಲಾ ಉತ್ಸವವನ್ನು NESTS ಆಯೋಜಿಸುತ್ತದೆ


ಕೇಂದ್ರ ಸಚಿವರಾದ ಶ್ರೀ ಜುಯಲ್ ಓರಮ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

Posted On: 11 NOV 2024 5:00PM by PIB Bengaluru

ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (NESTS) 5ನೇ ರಾಷ್ಟ್ರೀಯ EMRS ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು ಕಲಾ ಉತ್ಸವ - 2024 ಅನ್ನು ಆಯೋಜಿಸುತ್ತದೆ. ಈ ಭವ್ಯವಾದ ಕಾರ್ಯಕ್ರಮವು ನವೆಂಬರ್ 12 ರಿಂದ 15 ರವರೆಗೆ ಒಡಿಶಾದ ಭುವನೇಶ್ವರದ ಖಂಡಗಿರಿಯ ಶಿಕ್ಷಾ 'ಓ' ಅನುಸಂಧಾನದಲ್ಲಿ ನಡೆಯಲಿದೆ. ಮತ್ತು ಒಡಿಶಾ ಮಾಡೆಲ್ ಟ್ರೈಬಲ್ ಎಜುಕೇಷನಲ್ ಸೊಸೈಟಿ (OMTES) ಇದನ್ನು ಆಯೋಜಿಸಿದೆ.

ಈ ಚಿತ್ರಗಳು ಹಿಂದಿನ ವರ್ಷದ EMRS ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನ ನೀಡಿದ EMRS ವಿದ್ಯಾರ್ಥಿಗಳನ್ನು ಪ್ರದರ್ಶಿಸುತ್ತವೆ

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಶ್ರೀ ಜುಯಲ್ ಓರಾಮ್ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ದುರ್ಗಾದಾಸ್ ಉಯಿಕೇ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ವರ್ಷದ ಸಾಂಸ್ಕೃತಿಕ ಉತ್ಸವಗಳ ವಿಷಯವೆಂದರೆ, "ಭಗವಾನ್ ಬಿರ್ಸಾ ಮುಂಡಾ ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ," ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಾರುವ ಸಮಾರಂಭ ಆಯೋಜಿಸಲಾಗಿದೆ.

ಸಮಾರಂಭದ ಮುಖ್ಯಾಂಶಗಳು:

  • ಪ್ರತಿಭೆ ಮತ್ತು ಏಕತೆಯನ್ನು ಪ್ರದರ್ಶಿಸುವುದು: ವಿವಿಧ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಭಾರತದ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ (ಇಎಂಆರ್‌ಎಸ್) ಕಲಿಯುತ್ತಿರುವ 2,000 ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
  • ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಉತ್ಸವ ಮತ್ತು ಕಲಾ ಉತ್ಸವ ಕಾರ್ಯಕ್ರಮಗಳು: ಈವೆಂಟ್‌ನಲ್ಲಿ ಗಾಯನ ಸಂಗೀತ, ವಾದ್ಯ ಸಂಗೀತ, ನೃತ್ಯ, ರಂಗಭೂಮಿ ಮತ್ತು ದೃಶ್ಯ ಕಲೆಗಳು ಸೇರಿದಂತೆ 35 ವಿಭಿನ್ನ ಕಾರ್ಯಕ್ರಮಗಳು ಇರಲಿವೆ. ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಕೌಶಲ್ಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶ ಸಿಗಲಿದೆ. ಈ ಸಾಂಸ್ಕೃತಿಕ ಉತ್ಸವದ ವಿಜೇತರು ಆರ್‌ಐಇ ಭೋಪಾಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕಲಾ ಉತ್ಸವ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ, ಇದರಲ್ಲಿ ಇಎಂಆರ್‌ಎಸ್ ವಿದ್ಯಾರ್ಥಿಗಳು ಹಾಗೂ ದೇಶಾದ್ಯಂತ ಇನ್ನೂ 38 ತಂಡಗಳೊಂದಿಗೆ ಸ್ಪರ್ಧಿಸಲಿದ್ದಾರೆ.
  • ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವುದು: ಇಎಮ್‌ಆರ್‌ಎಸ್ ಸಾಂಸ್ಕೃತಿಕ ಉತ್ಸವವು ಬುಡಕಟ್ಟು ಮತ್ತು ಮುಖ್ಯವಾಹಿನಿಯ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಬುಡಕಟ್ಟು ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿವಿಧ ವೇದಿಕೆಗಳಲ್ಲಿ ಅವರ ಸಾಮರ್ಥ್ಯವನ್ನು ತೋರಲು  ಪ್ರೋತ್ಸಾಸ ನೀಡುತ್ತದೆ.

EMRS ಕಲ್ಚರಲ್ ಫೆಸ್ಟ್ ಬುಡಕಟ್ಟು ಹಿನ್ನೆಲೆಯ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಕಲಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ವೇದಿಕೆಯನ್ನು ನೀಡಿದೆ. ಈ ವರ್ಷದ ಈವೆಂಟ್‌ನೊಂದಿಗೆ, NESTS ಬುಡಕಟ್ಟು ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಮೂಲಕ ಸಬಲೀಕರಣಕ್ಕೆ ತನ್ನ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಪೋಷಿಸುವುದು ಮತ್ತು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಯನ್ನು ಹೆಚ್ಚಿಸಲಾಗುವುದು.

 

*****
 


(Release ID: 2072637) Visitor Counter : 21