ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

2024-25ರಲ್ಲಿ ವೇಸ್ ಅಂಡ್ ಮೀನ್ಸ್ ಮುಂಗಡಗಳನ್ನು (ನಗದು ಹರಿವಿನ ಅಸ್ತವ್ಯಸ್ತತೆ ನಿಭಾಯಿಸಲು ನೀಡುವ ಮುಂಗಡ) ಈಕ್ವಿಟಿಗೆ ಪರಿವರ್ತಿಸುವ ಮೂಲಕ ಭಾರತೀಯ ಆಹಾರ ನಿಗಮದ ರೂ.10,700 ಕೋಟಿಗಳ ಈಕ್ವಿಟಿಯ ಸೇರ್ಪಡೆಗೆ ಸಂಪುಟ ಅನುಮೋದನೆ ನೀಡಿದೆ

Posted On: 06 NOV 2024 3:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ), ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ – ಎಫ್.ಸಿ.ಐ.) ದಲ್ಲಿ 2024-25 ರ ಆರ್ಥಿಕ ವರ್ಷದಲ್ಲಿ ವ್ಯವಹಾರಿಕ ಬಂಡವಾಳಕ್ಕಾಗಿ ರೂ.10,700 ಕೋಟಿಗಳ ಈಕ್ವಿಟಿಯ ಸೇರ್ಪಡೆಯನ್ನು ಅನುಮೋದಿಸಿದೆ. ಈ ನಿರ್ಧಾರವು ಕೃಷಿ ಕ್ಷೇತ್ರವನ್ನು ಬಲಪಡಿಸುವ ಮತ್ತು ರಾಷ್ಟ್ರವ್ಯಾಪಿ ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯತಂತ್ರದ ಕ್ರಮವು ರೈತರನ್ನು ಬೆಂಬಲಿಸಲು ಮತ್ತು ಭಾರತದ ಕೃಷಿ ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರದ ದೃಢವಾದ ಬದ್ಧತೆಯನ್ನು ತೋರಿಸುತ್ತದೆ.

ಭಾರತೀಯ ಆಹಾರ ನಿಗಮವು ತನ್ನ ಪ್ರಯಾಣವನ್ನು 1964 ರಲ್ಲಿ ರೂ.100 ಕೋಟಿ ಮತ್ತು ಈಕ್ವಿಟಿ ರೂ. 4 ಕೋಟಿ ಅಧಿಕೃತ ಬಂಡವಾಳದೊಂದಿಗೆ ಪ್ರಾರಂಭಿಸಿದೆ. ಎಫ್.ಸಿ.ಐ.ಯ ಕಾರ್ಯಾಚರಣೆಗಳು ಅಭಿವೃದ್ದಿಯ ಬಹುಮುಖ ಮಾರ್ಗಗಳನ್ನು ಹೆಚ್ಚಿಸಿರುವುದಕ್ಕಾಗಿ ಹೆಚ್ಚುವರಿಯಾಗಿ ರೂ. 11,000 ಕೋಟಿ ಅಧಿಕೃತ ಬಂಡವಾಳವನ್ನು ಹೂಡಿಕೆ ಮಾಡಿದ ಪರಿಣಾಮವಾಗಿ   ಫೆಬ್ರವರಿ, 2023 ರಲ್ಲಿ ಒಟ್ಟು ಲಭ್ಯ ಮೊತ್ತ ರೂ. 21,000 ಕೋಟಿಗಳಾಗುತ್ತವೆ. ಎಫ್.ಸಿ.ಐ.ಯ ಈಕ್ವಿಟಿ ರೂ. 2019-20ರ ಹಣಕಾಸು ವರ್ಷದಲ್ಲಿ 4,496 ಕೋಟಿ ರೂ.ಗೆ ಏರಿಕೆಯಾಗಿದೆ. 2023-24ರ ಹಣಕಾಸು ವರ್ಷದಲ್ಲಿ ರೂ.10,157 ಕೋಟಿ ಆಗಿತ್ತು. ಈಗ, ಭಾರತ ಸರ್ಕಾರವು ಗಮನಾರ್ಹ ಮೊತ್ತದ ಈಕ್ವಿಟಿ ರೂ. 10,700 ಕೋಟಿಗಳ ಹೂಡಿಕೆ ಮೂಲಕ ಎಫ್.ಸಿ.ಐ.ಯನ್ನು ಆರ್ಥಿಕವಾಗಿ ಇನ್ನೂ ಬಲಪಡಿಸಿದೆ ಮತ್ತು ಈ ಮೂಲಕ ಎಫ್.ಸಿ.ಐ. ತೆಗೆದುಕೊಳ್ಳುವ ಉಪಕ್ರಮಗಳಿಗೆ ದೊಡ್ಡ ಉತ್ತೇಜನವನ್ನು ನೀಡಿದೆ. 

ಆಹಾರ ಧಾನ್ಯಗಳನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ) ಖರೀದಿಸುವುದು, ವಿತರಣಾ ವ್ಯವಸ್ಥೆಯ ಕಾರ್ಯತಂತ್ರದ ಆಹಾರ ಧಾನ್ಯ ದಾಸ್ತಾನುಗಳ ನಿರ್ವಹಣೆ ಮಾಡುವುದು, ಕಲ್ಯಾಣ ಕ್ರಮಕ್ಕಾಗಿ ಆಹಾರ ಧಾನ್ಯಗಳ ವಿತರಣೆ ಮಾಡುವುದು ಮತ್ತು ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆಗಳನ್ನು ಸ್ಥಿರಗೊಳಿಸುವ ಮುಂತಾದ ಕಾರ್ಯಚಟುವಟಿಕೆಗಳ ಮೂಲಕ ದೇಶದಾದ್ಯಂತ ಆಹಾರ ಭದ್ರತೆಯನ್ನು ಖಾತರಿಪಡಿಸುವಲ್ಲಿ ಎಫ್.ಸಿ.ಐ. ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಎಫ್.ಸಿ.ಐ. ತನ್ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ತನ್ನ ಈಕ್ವಿಟಿಯ ಸೇರ್ಪಡೆ ಆದೇಶವನ್ನು ಪರಿಣಾಮಕಾರಿಯಾಗಿ ಪೂರೈಸುವಲ್ಲಿ ಈ ನಿರ್ಣಯವು ಒಂದು ಮಹತ್ವದ ಹೆಜ್ಜೆಯಾಗಿದೆ. ತನ್ನ ಕಾರ್ಯಾಚರಣೆಯ ವೆಚ್ಚಕ್ಕಾಗಿ ನಿಧಿಯ ಅಗತ್ಯತೆಯ ಅಂತರವನ್ನು ಹೊಂದಿಸಲು ಎಫ್.ಸಿ.ಐ. ಅಲ್ಪಾವಧಿಯ ಸಾಲಗಳನ್ನು ಆಶ್ರಯಿಸುತ್ತದೆ. ಈ ಈಕ್ವಿಟಿಯ ಸೇರ್ಪಡೆಯು ಸಂಸ್ಥೆಗೆ ಬಡ್ಡಿಯ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ಭಾರತ ಸರ್ಕಾರದ ಅನುದಾನವನ್ನು ಕಡಿಮೆ ಮಾಡುತ್ತದೆ.

ರೈತರ ಸಬಲೀಕರಣ, ಕೃಷಿ ವಲಯವನ್ನು ಬಲಪಡಿಸುವುದು ಮತ್ತು ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸಹಕಾರಿ ಪ್ರಯತ್ನವನ್ನು ಸೂಚಿಸುತ್ತದೆ. ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ) - ಆಧಾರಿತ ಸಂಗ್ರಹಣೆ ಮತ್ತು ಎಂ.ಎಸ್.ಪಿ.ಯ ಕಾರ್ಯಾಚರಣಾ ಸಾಮರ್ಥ್ಯಗಳಲ್ಲಿನ ಹೂಡಿಕೆಗೆ ಸರ್ಕಾರದ ಉಭಯ ರೀತಿಯ ಬದ್ಧತೆಯನ್ನು ಈ ನಿರ್ಣಯ ತೋರಿಸುತ್ತದೆ.

 

*****




(Release ID: 2071190) Visitor Counter : 26