ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆ ತನ್ನ ತಾಂತ್ರಿಕ ಸಹಭಾಗಿತ್ವ, ಟ್ರ್ಯಾಕ್ ನಿರ್ವಹಣೆ ಮತ್ತು ಮೂಲಸೌಕರ್ಯ ಆಧುನೀಕರಣ ಹೆಚ್ಚಿಸಲು ಸ್ವಿಜರ್ ಲೆಂಡ್‌ ಸರ್ಕಾರದ ಡೆಟೆಕ್ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ

Posted On: 29 OCT 2024 10:37PM by PIB Bengaluru

ಭಾರತ ಮತ್ತು ಸ್ವಿಜರ್ ಲೆಂಡ್‌ ರಾಷ್ಟ್ರಗಳ ನಡುವಿನ ತಾಂತ್ರಿಕ ಸಹಕಾರ ಹೆಚ್ಚಿಸಲು ಭಾರತೀಯ ರೈಲ್ವೆಯು ಇಂದು ಸ್ವಿಸ್ ಸರ್ಕಾರದ ಪರಿಸರ, ಸಾರಿಗೆ ಮತ್ತು ಸಂಪರ್ಕ ಇಲಾಖೆ(ಡೆಟೆಕ್)ಯೊಂದಿಗೆ ತಿಳುವಳಿಕೆ ಒಪ್ಪಂದ(ಎಂಒಯು)ಕ್ಕೆ ಸಹಿ ಮಾಡಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎಂಒಯು ನವೀಕರಿಸಲಾಗಿದೆ ಮತ್ತು ಔಪಚಾರಿಕಗೊಳಿಸಲಾಗಿದ್ದು, ರೈಲ್ವೆ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಇದಕ್ಕೆ ಅನುಮೋದನೆ ಪಡೆಯಲಾಗಿದೆ.

ಎಂಒಯು ಸಹಿ ಸಮಾರಂಭ ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ತಂತ್ರಜ್ಞಾನ ಹಂಚಿಕೆ, ಟ್ರ್ಯಾಕ್ ನಿರ್ವಹಣೆ, ವ್ಯವಸ್ಥಾಪನೆ(ನಿರ್ವಹಣೆ) ಮತ್ತು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ರೈಲ್ವೆಯ ಸಹಭಾಗಿತ್ವಿಕ್ಕೆ ಈ ತಿಳಿವಳಿಕೆ ಒಪ್ಪಂದವು ಸಮಗ್ರ ಮಾರ್ಗಸೂಚಿ ಒದಗಿಸುತ್ತದೆ ಎಂದು ಹೇಳಿದರು. ಈ ತಿಳಿವಳಿಕೆ ಒಪ್ಪಂದವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ನಮ್ಮ ಸರ್ಕಾರದ ಬದ್ಧತೆಗೆ ಹೊಂದಿಕೆಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವಿಜರ್ ಲೆಂಡ್‌ ಸರ್ಕಾರದ ಕೌನ್ಸಿಲರ್ ಮತ್ತು ಡೆಟೆಕ್ ಇಲಾಖೆಯ ಮುಖ್ಯಸ್ಥ ಶ್ರೀ ಆಲ್ಬರ್ಟ್ ರೋಸ್ಟಿ, ಸ್ವಿಜರ್ ಲೆಂಡ್‌ನ ಸುಧಾರಿತ ರೈಲ್ವೆ ತಂತ್ರಜ್ಞಾನವು ಕಾರ್ಯಾಚರಣೆ ದಕ್ಷತೆ, ಸುರಕ್ಷತಾ ಮಾನದಂಡಗಳು, ಸೇವಾ ಗುಣಮಟ್ಟ ಮತ್ತು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಿಸುವ ಮೂಲಕ ಭಾರತೀಯ ರೈಲ್ವೆಗೆ ಪ್ರಯೋಜನ ನೀಡುತ್ತದೆ ಎಂದು ಹೇಳಿದರು.

ಆಗಸ್ಟ್ 31, 2017ರಂದು ಸಹಿ ಮಾಡಲಾದ ಮೂಲ ಒಪ್ಪಂದವು 5 ವರ್ಷಗಳವರೆಗೆ ಮಾನ್ಯವಾಗಿದೆ ಮತ್ತು ಸಹಭಾಗಿತ್ವದ ಹಲವಾರು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದೆ:

 

  • ಟ್ರಾಕ್ಷನ್ ರೋಲಿಂಗ್ ಸ್ಟಾಕ್
  • ಎಲೆಕ್ಟ್ರಿಕ್ ಬಹು ಘಟಕಗಳು(ಇಎಂಯು) ಮತ್ತು ರೈಲು ಸೆಟ್‌ಗಳು
  • ಟ್ರಾಕ್ಷನ್ ಪ್ರೊಪಲ್ಷನ್ ಉಪಕರಣ ಸಾಧನಗಳು
  • ಸರಕು ಮತ್ತು ಪ್ರಯಾಣಿಕ ಕಾರುಗಳು
  • ಟಿಲ್ಟಿಂಗ್ ರೈಲುಗಳು
  • ರೈಲ್ವೆ ವಿದ್ಯುದ್ದೀಕರಣ ಸಲಕರಣೆ
  • ರೈಲು ವೇಳಾಪಟ್ಟಿ ಮತ್ತು ಕಾರ್ಯಾಚರಣೆಯ ಸುಧಾರಣೆಗಳು
  • ರೈಲ್ವೆ ನಿಲ್ದಾಣದ ಆಧುನೀಕರಣ
  • ಬಹುಮಾದರಿ ಸಾರಿಗೆ ಪರಿಹಾರಗಳು
  • ಸುರಂಗ ತಂತ್ರಜ್ಞಾನ

ತಿಳಿವಳಿಕೆ ಒಪ್ಪಂದ(ಎಂಒಯು)ಕ್ಕೆ ಸಹಿ ಹಾಕುವ ಮೊದಲು, ಭಾರತೀಯ ರೈಲ್ವೆ ಮತ್ತು ಸ್ವಿಸ್ ರೈಲ್ವೆ ಪ್ರತಿನಿಧಿಗಳ ನಡುವಿನ ಸಹಭಾಗಿತ್ವ ಸುಲಭಗೊಳಿಸಲು ಜಂಟಿ ಕಾರ್ಯನಿರತ ಗುಂಪು(ಜೆಡಬ್ಲ್ಯುಜಿ) ರಚಿಸಲಾಗಿತ್ತು. ಜೆಡಬ್ಲ್ಯುಜಿ ಸಹಕಾರದ ವಿವಿಧ ಪ್ರಮುಖ ಕ್ಷೇತ್ರಗಳನ್ನು ಅನ್ವೇಷಿಸಲು 2 ಸಭೆಗಳನ್ನು ಕರೆಯಲಾಗಿತ್ತು, ಕಲಾಪಗಳು  ಅಕ್ಟೋಬರ್ 21, 2019 ಮತ್ತು ಆಗಸ್ಟ್ 30, 2022 ರಂದು ನಡೆದಿವೆ. ಈ ಕೆಳಗಿನ ವಿಷಯಗಳ ಕುರಿತು ಚರ್ಚೆ ನಡೆದಿವೆ:

  • ಸರಕು ಮತ್ತು ಪ್ರಯಾಣಿಕ ಕಾರುಗಳು(ಬೋಗಿಗಳು)
  • ರೈಲ್ವೆ ವಿದ್ಯುದ್ದೀಕರಣ ಸಲಕರಣೆ
  • ರೈಲ್ವೆ ನಿಲ್ದಾಣದ ಆಧುನೀಕರಣ
  • ಸುರಂಗ ತಂತ್ರಜ್ಞಾನ

ಅಕ್ಟೋಬರ್ 11, 2023ರಂದು ನಡೆದ 3ನೇ ಜೆಡಬ್ಲ್ಯುಜಿ ಸಭೆಯಲ್ಲಿ, ಅಂದಿನ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಅಧ್ಯಕ್ಷತೆಯಲ್ಲಿ, ಸ್ವಿಜರ್ ಲೆಂಡ್‌ ಸರ್ಕಾರದ ಸಾರಿಗೆ ಇಲಾಖೆ ನಿರ್ದೇಶಕ ಶ್ರೀ. ಪೀಟರ್ ಫುಗ್ಲಿಸ್ಟೇಲರ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಭಾರತವು, ನಡೆಯುತ್ತಿರುವ ಬಂಡವಾಳ ವೆಚ್ಚದ ಉಪಕ್ರಮಗಳನ್ನು ಪ್ರಸ್ತುತಪಡಿಸಿತು, ಸ್ವಿಸ್ ಸಂಸ್ಥೆಗಳಿಗೆ ಭಾರತೀಯ ರೈಲ್ವೆ ವಲಯದಲ್ಲಿ ಗಮನಾರ್ಹ ಹೂಡಿಕೆ ಅವಕಾಶಗಳನ್ನು ಇದು ಎತ್ತಿ ತೋರಿಸುತ್ತದೆ.

ಭಾರತದಲ್ಲಿ ರೈಲ್ವೆ ಸೇವೆಗಳ ದಕ್ಷತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವಂತೆ ಈ ಪಾಲುದಾರಿಕೆಯನ್ನು ಹೊಂದಿಸಲಾಗಿದೆ, ಅಂತಿಮವಾಗಿ ಪ್ರಯಾಣಿಕರಿಗೆ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳಿಗೆ ಸಮಾನವಾಗಿ ಪ್ರಯೋಜನ ನೀಡುತ್ತದೆ. ಪ್ರಮುಖ ಸ್ವಿಸ್ ಕಂಪನಿಗಳು ಯಂತ್ರೋಪಕರಣಗಳು, ಸಾಮಗ್ರಿಗಳು ಮತ್ತು ಸುರಂಗ ಸಲಹೆ ಸೇವೆಗಳನ್ನು ಪೂರೈಸುತ್ತವೆ.

ಕಾರ್ಯಕ್ರಮದಲ್ಲಿ ಸ್ವಿಜರ್ ಲೆಂಡ್‌ನ ಭಾರತೀಯ ರಾಯಭಾರಿ ಶ್ರೀ ಮೃದುಲ್ ಕುಮಾರ್, ಸ್ವಿಜರ್ ಲೆಂಡ್‌ ಸರ್ಕಾರದ ಕೌನ್ಸಿಲರ್ ಮತ್ತು ಪರಿಸರ, ಸಾರಿಗೆ ಮತ್ತು ಸಂಪರ್ಕ ಇಲಾಖೆ(ಡೆಟೆಕ್)ಯ ಮುಖ್ಯಸ್ಥ ಶ್ರೀ ಆಲ್ಬರ್ಟ್ ರೋಸ್ಟಿ ಉಪಸ್ಥಿತರಿದ್ದರು.

 

*****

 




(Release ID: 2069525) Visitor Counter : 6


Read this release in: English , Urdu , Hindi , Telugu