ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತೀಯ ಭೂ ಬಂದರು ಪ್ರಾಧಿಕಾರ (LPAI) ಮೂಲಕ ಪಶ್ಚಿಮ ಬಂಗಾಳದ ಪೆಟ್ರಾಪೋಲ್‌ನಲ್ಲಿ ನಿರ್ಮಿಸಲಾದ ಪ್ರವಾಸಿಗರ ತಂಗುದಾಣ ಕಟ್ಟಡ ಮತ್ತು ಮೈತ್ರಿ ದ್ವಾರವನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಷಾ ಉದ್ಘಾಟಿಸಿದರು


ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಬದ್ಧವಾಗಿದೆ

ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಸುಲಭಗೊಳಿಸುವ ಮೂಲಕ LPAI ಇಂದು ನೆರೆಯ ದೇಶಗಳೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ, ನ್ಯಾಯಾಯುತ  ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಕಾನೂನುಬಾಹಿರ ವ್ಯಾಪಾರವನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. 

ಮೋದಿ ಸರ್ಕಾರ ಗಡಿಗಳನ್ನು ಭದ್ರಪಡಿಸುವುದರ ಜೊತೆಗೆ ಅವುಗಳನ್ನು ಅಭಿವೃದ್ಧಿಯ ಜೊತೆಗೆ ಹೆಜ್ಜೆ ಹಾಕುವಂತೆ ಮಾಡಿದೆ. 

ಮೋದಿಯವರ ನಾಯಕತ್ವದಲ್ಲಿ, LPAI ಸಮೃದ್ಧಿ, ಶಾಂತಿ, ಪಾಲುದಾರಿಕೆ ಮತ್ತು ಪ್ರಗತಿ ಎಂಬ  4-P ಮಂತ್ರದೊಂದಿಗೆ ಮುನ್ನಡೆಯುತ್ತಿದೆ

ಮೋದಿಯವರು  LPAI ಪರಿಕಲ್ಪನೆಯನ್ನು ಪರಿವರ್ತಿಸಿ, ಅದನ್ನು ಸಮೃದ್ಧಿ ಮತ್ತು ಶಾಂತಿಯ ರಹದಾರಿಯಾಗಿ ಮಾರ್ಪಡಿಸಿದ್ದಾರೆ 

ಅಕ್ರಮ ಒಳನುಸುಳುವಿಕೆಗೆ ದೊರೆಯುತ್ತಿರುವ ಬೆಂಬಲಕ್ಕೆ ಕಡಿವಾಣ ಹಾಕಿದಾಗ ಮಾತ್ರ ಪಶ್ಚಿಮ ಬಂಗಾಳದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಇದರಿಂದ  ಅಂತಹ ಒಳನುಸುಳುವಿಕೆ ಸಂಪೂರ್ಣವಾಗಿ ನಿಲ್ಲುತ್ತದೆ, ಅಲ್ಲದೆ ಇದರಿಂದ ನೆರೆಯ ದೇಶಗಳೊಂದಿಗೆ ಹೊಸ ಪಾಲುದಾರಿಕೆಯ ಯುಗಾರಂಭಕ್ಕೆ ಅವಕಾಶ ಕಲ್ಪಿಸುತ್ತದೆ

LPAI ಗಡಿ ಪ್ರದೇಶಗಳಲ್ಲಿ ಬಲವಾದ ಮೂಲಸೌಕರ್ಯಗಳನ್ನು ಒದಗಿಸುವ ಮೋದಿಯವರ ದೃಷ್ಟಿಕೋಣಕ್ಕೆ ಪುಷ್ಟಿ ನೀಡುತ್ತಿದೆ

Posted On: 27 OCT 2024 5:43PM by PIB Bengaluru

ಭಾರತೀಯ ಭೂ ಬಂದರು ಪ್ರಾಧಿಕಾರ (LPAI) ಮೂಲಕ ಪಶ್ಚಿಮ ಬಂಗಾಳದ ಪೆಟ್ರಾಪೋಲ್‌ನಲ್ಲಿ ನಿರ್ಮಿಸಲಾದ ಪ್ರವಾಸಿಗರ ತಂಗುದಾಣ ಕಟ್ಟಡ ಮತ್ತು ಮೈತ್ರಿ ದ್ವಾರವನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಷಾ ಇಂದು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶಂತನು ಠಾಕೂರ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಗೃಹ ಸಚಿವಾಲಯದ ಗಡಿ ನಿರ್ವಹಣಾ ಕಾರ್ಯದರ್ಶಿ ಡಾ ರಾಜೇಂದ್ರ ಕುಮಾರ್, ಶ್ರೀ ದಲ್ಜಿತ್ ಸಿಂಗ್ ಉಪಸ್ಥಿತರಿದ್ದರು., ಮಹಾ ನಿರ್ದೇಶಕರು, ಗಡಿ ಭದ್ರತಾ ಪಡೆ ಮತ್ತು ಲ್ಯಾಂಡ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (LPAI) ಅಧ್ಯಕ್ಷ ಶ್ರೀ ಆದಿತ್ಯ ಮಿಶ್ರಾ ಉಪಸ್ಥಿತರಿದ್ದರು.

1.JPG

ಪೆಟ್ರಾಪೋಲ್‌ನಲ್ಲಿ ಸಂಯೋಜಿತ ಚೆಕ್‌ಪೋಸ್ಟ್, ಪ್ರಯಾಣಿಕರ ತಂಗುದಾಣ ಕಟ್ಟಡಗಳ ನಿರ್ಮಾಣ ಮತ್ತು ಮೈತ್ರಿ ದ್ವಾರದ ಉದ್ಘಾಟನೆಯು ಪ್ರತಿಯೊಂದು ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. 2014 ರಲ್ಲಿ ಪ್ರಧಾನಿಯಾದ ನಂತರ, ಮೋದಿಯವರು ಶಿಕ್ಷಣ, ಆರೋಗ್ಯ, ಆಂತರಿಕ ಭದ್ರತೆ, ಗಡಿ ಭದ್ರತೆ ಮತ್ತು ಕ್ರೀಡೆಯಂತಹ ಕ್ಷೇತ್ರಗಳಲ್ಲಿ ಹಲವಾರು ಹೊಸ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿದ್ದಾರೆ ಮತ್ತು ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾ, ಅವುಗಳನ್ನು ತಾರ್ಕಿಕ ಮುಕ್ತಾಯಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.

2.JPG

ಭಾರತದ ಭೂ ಬಂದರು ಪ್ರಾಧಿಕಾರವು (LPAI) ನೆರೆಹೊರೆಯವರೊಂದಿಗೆ ಸಂಬಂಧವನ್ನು ಸುಧಾರಿಸುವುದರೊಂದಿಗೆ ಮತ್ತು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಸುಗಮಗೊಳಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ LPAI ಸಮೃದ್ಧಿ, ಶಾಂತಿ, ಪಾಲುದಾರಿಕೆ ಮತ್ತು ಪ್ರಗತಿ ಎಂಬ 4 Ps ಮಂತ್ರವನ್ನಾಧರಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. 

ಈ ಹೊಸ ಉಪಕ್ರಮವು ಇಡೀ ಪ್ರದೇಶದ ಅಭಿವೃದ್ಧಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತರಲಿದೆ ಎಂದು ಶ್ರೀ ಷಾ  ತಿಳಿಸಿದರು. ಸಂಚಾರಕಾಗಿ ಕಾನೂನು ಬದ್ಧ ಚೌಕಟ್ಟಿನ ಕೊರತೆಯು ಅಕ್ರಮ ನುಸುಳುವಿಕೆಗೆ ಕಾರಣವಾಗಿದ್ದು, ಇದು ಭಾರತ ಮತ್ತು ಪಶ್ಚಿಮ ಬಂಗಾಳದ ಶಾಂತಿಯನ್ನು ಕದಡುತ್ತದೆ. ಹಾಗಾಗಿ LPAI ನ ಈ ಉಪಕ್ರಮವು ಈ ಭಾಗದಲ್ಲಿ ಶಾಂತಿ ಸ್ಥಾಪನೆಗೆ ಕೂಡ ಸಹಾಯ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಅಕ್ರಮ ಒಳನುಸುಳುವಿಕೆಗೆ ಬೆಂಬಲಕ್ಕೆ ಕಡಿವಾಣ ಹಾಕಿದಾಗ ಮತ್ತು ಅದು ಸಂಪೂರ್ಣವಾಗಿ ಸ್ಥಗಿತಗೊಂಡಾಗ ಮಾತ್ರ ಪಶ್ಚಿಮ ಬಂಗಾಳದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಅವರು ಹೇಳಿದರು, ಇದು ನೆರೆಯ ದೇಶಗಳೊಂದಿಗೆ ಪಾಲುದಾರಿಕೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

3.JPG

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು LPAI ಪರಿಕಲ್ಪನೆಯಲ್ಲಿ ಮಾರ್ಪಾಡು ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಎತ್ತಿ ತೋರಿದರು. ಈ ಹಿಂದೆ ಇದನ್ನು ಕೇವಲ ವ್ಯಾಪಾರದ ಸಾಧನವಾಗಿ ನೋಡಲಾಗುತ್ತಿತ್ತು, ಆದರೆ ಈಗ ಅದು ಸಮೃದ್ಧಿ ಮತ್ತು ಶಾಂತಿಯ ಹೆಬ್ಬಾಗಿಲಾಗಿ ಮಾರ್ಪಡಿಸಿದೆ, ನೆರೆಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ, ಕಾನೂನು ರೀತ್ಯಾ ವ್ಯಾಪಾರವನ್ನು ಉತ್ತೇಜಿಸುವ ಮೂಲಕ ಅಕ್ರಮ ವ್ಯಾಪಾರವನ್ನು ಕಡಿವಾಣ ಹಾಕಿದೆ ಮತ್ತು ಒಂದು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ. ಸುಮಾರು ₹ 500 ಕೋಟಿ ವೆಚ್ಚದಲ್ಲಿ, ಸುಮಾರು 60,000 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಟರ್ಮಿನಲ್ ಕಟ್ಟಡವು ಪ್ರತಿದಿನ 25,000 ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀ ಷಾ ತಿಳಿಸಿದರು. ಇದು ವೈದ್ಯಕೀಯ ಮತ್ತು ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಗಣನೀಯ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು. LPAI ನ ಈ ಉಪಕ್ರಮವು ಭಾರತದ ಗಡಿಗಳನ್ನು ಭದ್ರಪಡಿಸುತ್ತದೆ ಮತ್ತು ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

4.JPG

ಮೈತ್ರಿ ದ್ವಾರವನ್ನು ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ದಿನಕ್ಕೆ 600-700 ಟ್ರಕ್‌ಗಳ ನಿರ್ವಹಣೆ ಸಾಮರ್ಥ್ಯದೊಂದಿಗೆ ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. 200 ವರ್ಷ ಅಥವಾ ಅದಕ್ಕಿಂತ ಹೆಚ್ಚು ಬಾಳಿಕೆ ಬರುವ ಇಂತಹ ಮರಗಳ 25,000 ಸಸಿಗಳನ್ನು ನೆಡುವ ಮೂಲಕ ಸ್ಥಳೀಯ ಪರಿಸರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸುಲಲಿತ ಸಂಚಾರಕ್ಕಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ, ಬೂಮ್ ಬ್ಯಾರಿಯರ್‌ಗಳು, ಮುಖ ಗುರುತಿಸುವ ಯಂತ್ರಗಳು ಮತ್ತು ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರವೇಶ ನಿಯಂತ್ರಣದಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಪೆಟ್ರಾಪೋಲ್ ದಕ್ಷಿಣ ಏಷ್ಯಾದ ಅತಿದೊಡ್ಡ ಮತ್ತು ಜನನಿಬಿಡ ಭೂ ಬಂದರಾಗಿದ್ದು, ಇದು ನಮ್ಮ ವ್ಯಾಪಾರ ಮತ್ತು ಸಂಚಾರವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಒಟ್ಟು ವ್ಯಾಪಾರದ 70% ಭೂ ಮಾರ್ಗದ ವ್ಯಾಪಾರ ಪೆಟ್ರಾಪೋಲ್ ಮೂಲಕ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. 2016-17ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇದನ್ನು ಪ್ರಾರಂಭಿಸಿದಾಗ, ವ್ಯಾಪಾರದ ಪ್ರಮಾಣವು ₹ 18,000 ಕೋಟಿಗಳಷ್ಟಿತ್ತು, ಆದರೆ 2023-24 ರಲ್ಲಿ ₹ 30,500 ಕೋಟಿಗಳಿಗೆ ವೃದ್ಧಿಸಿದೆ, ಇದು 64% ವೃದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ವ್ಯಾಪಾರ ವೃದ್ಧಿ ಸಾರಿಗೆ ವ್ಯವಹಾರಗಳನ್ನು ಉತ್ತೇಜಿಸುತ್ತದೆ, ಗೋದಾಮುಗಳ ಸ್ಥಾಪನೆಗೆ ಕಾರಣವಾಗುತ್ತದೆ ಮತ್ತು ಸರಕುಗಳನ್ನು ಲೋಡ್ ಮಾಡುವ ಮತ್ತು ಅನ್ ಲೋಡ್ ಮಾಡುವ ಕೂಲಿ ಕೆಲಸಗಾರರು ಸೇರಿದಂತೆ ವಿವಿಧ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಷಾ ತಿಳಿಸಿದರು. 2023-24ರಲ್ಲಿ ಪೆಟ್ರಾಪೋಲ್ ಮೂಲಕ ಸುಮಾರು 24 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಅವರು ಹೇಳಿದರು.

5.JPG

ಗಡಿ ಭದ್ರತೆ, ಗಡಿ ಭಾಗದ ವ್ಯಾಪಾರ, ಗಡಿ ಸಂಪರ್ಕ, ಮತ್ತು ಪೂರ್ವ ಭಾರತದ ಜನರ ಮಧ್ಯೆ ಸಂಪರ್ಕಕ್ಕಾಗಿ LPAI ಸ್ನೇಹಪೂರ್ವಕ ಮಾರ್ಗಗಳನ್ನು ಮುಕ್ತಗೊಳಿಸುತ್ತಿದೆ ಎಂದು ಶ್ರೀ ಅಮಿತ್ ಷಾ ಒತ್ತಿ ಹೇಳಿದರು. ಮೋದಿ ಸರಕಾರವು ಗಡಿಗಳನ್ನು ಸುಭದ್ರಗೊಳಿಸಿರುವುದು ಮಾತ್ರವಲ್ಲದೆ ಅವುಗಳನ್ನು ಅಭಿವೃದ್ಧಿಯೊಂದಿಗೆ ಕೊಂಡಿ ಬೆಸೆಯುವಂತೆ ಮಾಡಿದೆ ಎಂದು ಹೇಳಿದರು. LPAI, ಗಡಿ ಪ್ರದೇಶಗಳಲ್ಲಿ ಬಲಿಷ್ಠ ಮೂಲಸೌಕರ್ಯಗಳ ಮೋದಿಯವರ ದೃಷ್ಟಿಕೋಣಕ್ಕೆ ಇಂಬು ನೀಡುತ್ತಿದೆ ಎಂದು ಶ್ರೀ ಷಾ ತಿಳಿಸಿದರು. ವಲಸೆ, ಕಸ್ಟಮ್ಸ್ ಮತ್ತು ಗಡಿ ಭದ್ರತೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಏಕ ಗವಾಕ್ಷಿ ಪರಿಹಾರವಾಗಿ LPAI ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು. ಪ್ರಸ್ತುತ ಭಾರತದಲ್ಲಿ ಬಾಂಗ್ಲಾದೇಶದೊಂದಿಗೆ ಸಂಪರ್ಕ ಕಲ್ಪಿಸುವ ಪೆಟ್ರಾಪೋಲ್ ಸೇರಿದಂತೆ, ಅಗರ್ತಲಾ, ಶ್ರೀಮಾನ್‌ಪುರ್ ಸುತರಕಂಡಿ, ಸಬ್ರೂಮ್, ಅದೇ ರೀತಿ ನೇಪಾಳದೊಂದಿಗೆ ರಕ್ಸಾಲ್, ಜೋಗ್ಬಾನಿ, ರುಪೈದಿಹಾ; ಮತ್ತು ಪಾಕಿಸ್ತಾನ ಮತ್ತು ಮ್ಯಾನ್ಮಾರ್‌ನೊಂದಿಗೆ ಕ್ರಮವಾಗಿ ಅಟ್ಟಾರಿ ಮತ್ತು ಮೋರೆ ಸೇರಿದಂತೆ ಒಟ್ಟು 12 ಭೂ ಬಂದರುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು;. ಹೆಚ್ಚುವರಿಯಾಗಿ, ಮೋದಿ ಸರ್ಕಾರವು ಗುರುನಾನಕ್ ದೇವ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಕೂಡ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು.

2023-24ನೇ ಸಾಲಿನಲ್ಲಿ ಈ ಎಲ್ಲಾ ಭೂ ಬಂದರುಗಳ ಮೂಲಕ ₹71,000 ಕೋಟಿ ಮೌಲ್ಯದ ವಹಿವಾಟು ನಡೆದಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 23 ಭೂ ಬಂದರುಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನದ ಮೂಲಕ ಭದ್ರತೆಯನ್ನು ಹೆಚ್ಚಿಸುವ ಮತ್ತು ಸಮಸ್ಯೆಗಳನ್ನು ತಗ್ಗಿಸುವ ಗುರಿಯನ್ನು ಹೊಂದಿರುವ LPAI ನ ಸಂಪೂರ್ಣ ಡಿಜಿಟಲೀಕರಣದ ಸಮಗ್ರ ಯೋಜನೆಯು ಬಹುತೇಕ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬಂಗಾಳದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಯುಪಿಎ ಸರ್ಕಾರದ 10 ವರ್ಷಗಳ ಆಡಳಿತಾವಧಿಯಲ್ಲಿ ಬಂಗಾಳಕ್ಕೆ ಕೇವಲ ₹ 2,09,000 ಕೋಟಿ ಅನುದಾನ ದೊರೆತಿದ್ದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ₹ 7,74,000 ಕೋಟಿಗಳನ್ನು ಒದಗಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಕಳುಹಿಸುವ ಹಣವನ್ನು ಭ್ರಷ್ಟಾಚಾರ ಕಬಳಿಸುತ್ತದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರದ ಆಡಳಿತದಲ್ಲಿ, MGNREGA ಯೋಜನೆಯ ಮೂಲಕ ಬಂಗಾಳಕ್ಕೆ ₹ 15,000 ಕೋಟಿ ಮಂಜೂರು ಮಾಡಲಾಗಿತ್ತು, ಕಳೆದ 10 ವರ್ಷಗಳಲ್ಲಿ ಮೋದಿಯವರು ಅದನ್ನು ₹ 54,000 ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಶ್ರೀ ಷಾ ತಿಳಿಸಿದರು. ಯೋಜನೆಗಳ ಫಲಾನುಭವಿಗಳಿಗೆ ಈ ಹಣ ಏಕೆ ತಲುಪುತ್ತಿಲ್ಲ ಎಂಬುದನ್ನು ತನಿಖೆ ಮಾಡುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.+

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನೀಡುವ ಅನುದಾನವನ್ನೂ ಸಹ ಕೇಂದ್ರ ಗೃಹ ಸಚಿವ ಶ್ರೀ ಷಾ ಅವರು ಹೋಲಿಕೆ ಮಾಡಿದರು, ಯುಪಿಎ ಸರ್ಕಾರವು 10 ವರ್ಷಗಳಲ್ಲಿ ಕೇವಲ ₹ 5,400 ಕೋಟಿಗಳನ್ನು ಮೀಸಲಿಟ್ಟಿದ್ದರೆ, ಮೋದಿ ಸರ್ಕಾರವು ₹ 17,000 ಕೋಟಿಗಳನ್ನು ನೀಡಿದೆ ಎಂದು ಹೇಳಿದರು. ಅದೇ ರೀತಿ ವಸತಿ ಯೋಜನೆಯಡಿ ಹಿಂದಿನ ಆಡಳಿತದಲ್ಲಿ ₹ 4,500 ಕೋಟಿ ಮೀಸಲಿಟ್ಟಿದ್ದರೆ, ಮೋದಿಯವರು ₹ 50,000 ಕೋಟಿಗೆ ಹೆಚ್ಚಿಸಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ₹630 ಕೋಟಿ ನೀಡಲಾಗಿತ್ತು, ಆದರೆ ಮೋದಿ ಸರ್ಕಾರ ಅದನ್ನು ₹91,000 ಕೋಟಿಗೆ ಏರಿಸಿದೆ.


 

*****


(Release ID: 2069047) Visitor Counter : 26