ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದತ್ತ ಗಮನ 

Posted On: 26 OCT 2024 5:58PM by PIB Bengaluru

ಈ ವರ್ಷವು ಭಾರತ-ಜರ್ಮನಿ ರಾಜತಾಂತ್ರಿಕ ಪಾಲುದಾರಿಕೆಯ 25ನೇ ವರ್ಷವಾಗಿದೆ. ನಾವು ಮುಂದಿನ 25 ವರ್ಷಗಳವರೆಗೆ ಅಭಿವೃದ್ಧಿ ಹೊಂದಿದ ಭಾರತ, ವಿಕಸಿತ ಭಾರತಕ್ಕೆ (#ViksitBharat) ಮಾರ್ಗಸೂಚಿಯನ್ನು ಹೊಂದಿದ್ದೇವೆ. ಈ ಮಹತ್ವದ ಕ್ಷಣದಲ್ಲಿ ಜರ್ಮನ್ ಕ್ಯಾಬಿನೆಟ್ "ಫೋಕಸ್ ಆನ್ ಇಂಡಿಯಾ" ದಸ್ತಾವೇಜನ್ನು ಬಿಡುಗಡೆ ಮಾಡಿರುವುದು ನನಗೆ ಸಂತೋಷ ತಂದಿದೆ. "ಫೋಕಸ್ ಆನ್ ಇಂಡಿಯಾ" ದಸ್ತಾವೇಜು ಪ್ರಪಂಚದ ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಪ್ರಜಾಪ್ರಭುತ್ವಗಳು "ಜಾಗತಿಕ ಒಳಿತಿಗಾಗಿ ಶಕ್ತಿ" ಆಗಲು ಹೇಗೆ ಸಹಕರಿಸಬಹುದು ಎಂಬುದರ ನೀಲನಕ್ಷೆಯನ್ನು ವಿವರಿಸುತ್ತದೆ.

~ ಪ್ರಧಾನಮಂತ್ರಿ ನರೇಂದ್ರ ಮೋದಿ

ವರದಿಯ ಪ್ರಮುಖ ಅಂಶಗಳು

  • ಚುರುಕಾದ ಪರಿವರ್ತನೆ: ಭಾರತವು ಚೈತನ್ಯದಾಯಕ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಪ್ರತಿಬಿಂಬಿಸುವ ಮಹತ್ವದ ಬದಲಾವಣೆಗಳಿಗೆ ಒಳಗಾಗುತ್ತಿದೆ. ಈ ಪರಿವರ್ತನೆಯು  ಜಾಗತಿಕ ವ್ಯವಹಾರಗಳಲ್ಲಿ ಅದರ ದೃಢವಾದ ಪಾತ್ರದಿಂದ ಗುರುತಿಸಲ್ಪಟ್ಟಿದ್ದು, ಹೆಚ್ಚು ಸಮಾನ ಮತ್ತು ಸುಸ್ಥಿರ ಜಗತ್ತನ್ನು ರೂಪಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸುತ್ತದೆ.
  • ಜಾಗತಿಕ ಪ್ರಭಾವ: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ, ಜಾಗತಿಕ ನೀತಿಗಳನ್ನು ರೂಪಿಸುವಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಎಲ್ಲರಿಗೂ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (SDGs) ಹೊಂದಾಣಿಕೆ ಮಾಡುವ, ಹವಾಮಾನ ಸಂರಕ್ಷಣೆ, ಪರಿಸರ ಸುಸ್ಥಿರತೆ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಗುರಿಯನ್ನು ಹೊಂದಿರುವ ಉಪಕ್ರಮಗಳಲ್ಲಿ ದೇಶವು ಸಕ್ರಿಯವಾಗಿ ಭಾಗವಹಿಸುತ್ತದೆ.
  • ಶಾಂತಿಯುತ ಮಧ್ಯಸ್ಥಿಕೆಯ ಪಾತ್ರ: ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ, ಶಾಂತಿಯುತ ಸಂಘರ್ಷ ಪರಿಹಾರಕ್ಕಾಗಿ ಕೊಡುಗೆ ನೀಡಲು ಇರುವ ಭಾರತದ ಇಚ್ಛೆಯು ರಾಜತಾಂತ್ರಿಕ ಮತ್ತು ಜಾಗತಿಕ ಸಮಸ್ಯೆಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳುವಿಕೆಗೆ ಇರುವ ಅದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಪಾತ್ರವು ಜವಾಬ್ದಾರಿಯುತ ಜಾಗತಿಕ ಮುಖಂಡರಲ್ಲೊಬ್ಬರಾಗಿ ಭಾರತದ ಖ್ಯಾತಿಯನ್ನು ಹೆಚ್ಚಿಸುತ್ತದೆ.
  • ಪ್ರಾದೇಶಿಕ ಸ್ಥಿರತೆ: ಯುಎನ್ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳ ಆಧಾರದ ಮೇಲೆ ಪ್ರಪಂಚದ ಗಣನೀಯ ಒತ್ತಡವನ್ನು ಎದುರಿಸುತ್ತಿರುವ ಪ್ರದೇಶದಲ್ಲಿ ಭಾರತವು ಅದನ್ನು ಸ್ಥಿರಗೊಳಿಸುವ ಪ್ರಭಾವವನ್ನು ಹೊಂದಿದೆ. ಇಂಡೋ-ಪೆಸಿಫಿಕ್ ನಲ್ಲಿನ ಭೌಗೋಳಿಕ ರಾಜಕೀಯ ರೇಖೆಗಳು ಮತ್ತು ಈ ಪ್ರದೇಶದಲ್ಲಿನ ಉನ್ನತ ಆರ್ಥಿಕ ಪರಿಸ್ಥಿತಿಗಳು 21ನೇ ಶತಮಾನದ ಅಂತರರಾಷ್ಟ್ರೀಯ ಕ್ರಮವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
  • ಜಾಗತಿಕ ದಕ್ಷಿಣದ ಧ್ವನಿ (Voice of the Global South): ಭಾರತವು ಗ್ಲೋಬಲ್ ಸೌತ್ ನ ಪ್ರಮುಖ ಪ್ರತಿನಿಧಿಯಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳಿಗಾಗಿ ಪ್ರತಿಪಾದಿಸುತ್ತದೆ. ಜಿ20, ಬ್ರಿಕ್ಸ್, ಮತ್ತು ಶಾಂಘೈ ಸಹಕಾರ ಸಂಘಟನೆಯಂತಹ ವೇದಿಕೆಗಳಲ್ಲಿ ತನ್ನ ಭಾಗವಹಿಸುವಿಕೆಯ ಮೂಲಕ, ಜಾಗತಿಕ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕಡಿಮೆ ಪ್ರತಿನಿಧಿಸುವವರ ಧ್ವನಿಯನ್ನು ಭಾರತವು ಹೆಚ್ಚಿಸುತ್ತದೆ.
  • ತ್ವರಿತ ಆರ್ಥಿಕ ಬೆಳವಣಿಗೆ: ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂದು ಗುರುತಿಸಲ್ಪಟ್ಟಿರುವ ಭಾರತವು 2030 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು ಹೆಚ್ಚುತ್ತಿರುವ ಸಮೃದ್ಧಿ, ಬೆಳೆಯುತ್ತಿರುವ ದೇಶೀಯ ಮಾರುಕಟ್ಟೆ  ಹಾಗು ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿನ ಗಮನಾರ್ಹ ಹೂಡಿಕೆಗಳಿಂದ ಆಗಿದೆ.
  • ನಾವೀನ್ಯತೆ ಮತ್ತು ತಂತ್ರಜ್ಞಾನದ ನಾಯಕತ್ವ: ಭಾರತವು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಿದೆ, ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಮೂಲಸೌಕರ್ಯ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಉತ್ತಮವಾಗಿದೆ. ಈ ನಾಯಕತ್ವವು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವುದಲ್ಲದೆ ಜಾಗತಿಕ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಭಾರತವನ್ನು  ನಿರ್ಣಾಯಕ ಪಾಲುದಾರ ದೇಶವನ್ನಾಗಿ ಮಾಡಿದೆ.
  • ಶ್ರೀಮಂತ ಜೀವವೈವಿಧ್ಯದ ತವರೂರು: ವಿವಿಧ ಜಾತಿಗಳ ಬೃಹತ್ ಜೈವಿಕ ವೈವಿಧ್ಯಗಳಿಗೆ ನೆಲೆಯಾಗಿರುವ ಭಾರತವು ಜೈವಿಕ ವೈವಿಧ್ಯತೆಯನ್ನು ರಕ್ಷಿಸುವ ವಿಷಯದಲ್ಲಿ ಜಾಗತಿಕ ಮಹತ್ವವನ್ನು ಹೊಂದಿದೆ. ಇದು ಜಾಗತಿಕ ಜೀವವೈವಿಧ್ಯದ ಸುಮಾರು ಏಳು ಪ್ರತಿಶತದಷ್ಟು ನೆಲೆಯಾಗಿದೆ. ಆದ್ದರಿಂದ ಜೀವವೈವಿಧ್ಯ ಸಂರಕ್ಷಣೆಯಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆ ಜಾಗತಿಕ ಪ್ರಾಮುಖ್ಯತೆಯ ವಿಷಯವಾಗಿದೆ!
  • 2030ರ ಕಾರ್ಯಸೂಚಿಗೆ ಬದ್ಧತೆ: 2030 ರ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಭಾರತವು ಪ್ರಮುಖವಾದ ದೇಶ ಎಂದು ಗುರುತಿಸಲ್ಪಟ್ಟಿದೆ. ಹವಾಮಾನ ನೀತಿ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಂಚಿಕೆಯ ಉದ್ದೇಶಗಳನ್ನು ಪರಿಹರಿಸುವಲ್ಲಿ ರಾಷ್ಟ್ರದ ಸಹಯೋಗವು ಅತ್ಯಗತ್ಯ.
  • ಹವಾಮಾನ ಗುರಿಗಳಿಗೆ ಬದ್ಧತೆ: ಭಾರತವು ಹವಾಮಾನ-ತಟಸ್ಥ ಬೆಳವಣಿಗೆಗೆ ತನ್ನ ಬದ್ಧತೆಯಲ್ಲಿ ಸ್ಥಿರವಾಗಿದೆ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತದೆ. ಪ್ಯಾರಿಸ್ ಒಪ್ಪಂದದ ಗುರಿಗಳಂತೆಯೆ ರಾಷ್ಟ್ರದ ಪ್ರಯತ್ನಗಳು ಇವೆ, ಅದರ ಗಮನಾರ್ಹ ಹಸಿರುಮನೆ ಅನಿಲ ಹೊರಸೂಸುವಿಕೆ ಇರುವುದನ್ನು ಒಪ್ಪಿಕೊಂಡಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ.
  • ನವೀಕರಿಸಬಹುದಾದ ಶಕ್ತಿ ಮತ್ತು ಹಸಿರು ಪರಿವರ್ತನೆ: ನವೀಕರಿಸಬಹುದಾದ ಶಕ್ತಿಯಲ್ಲಿ ಅಪಾರ ಸಾಮರ್ಥ್ಯದೊಂದಿಗೆ, ಭಾರತವು ತನ್ನ ಸೌರ, ಗಾಳಿ ಮತ್ತು ಹಸಿರು ಜಲಜನಕ ಸಂಪನ್ಮೂಲಗಳನ್ನು ಸುಸ್ಥಿರ ಇಂಧನ ಭವಿಷ್ಯಕ್ಕೆ ಪರಿವರ್ತಿಸಲು ಬಳಸಿಕೊಳ್ಳುತ್ತಿದೆ. ಜರ್ಮನಿಯಂತಹ ಸಹಯೋಗದ ಪಾಲುದಾರಿಕೆಗಳು ಇಂಧನ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತವೆ.
  • ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ: 2022 ರಲ್ಲಿ ಜರ್ಮನಿಯೊಂದಿಗೆ ಸ್ಥಾಪಿಸಲಾದ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ, ಹವಾಮಾನ ಕ್ರಮ,  ಇಂಧನ ಪರಿವರ್ತನೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ನಗರೀಕರಣಕ್ಕೆ ಒತ್ತು ನೀಡುತ್ತದೆ. ಪ್ರಮುಖ ಉಪಕ್ರಮಗಳಲ್ಲಿ ಕೃಷಿ ಪರಿಸರ, ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಅರಣ್ಯ ಸಂರಕ್ಷಣೆಯ ಪ್ರಯತ್ನಗಳು ಸೇರಿವೆ. ಹೆಚ್ಚುವರಿಯಾಗಿ, ಭಾರತವು 2025 ರ ವೇಳೆಗೆ ತೀವ್ರವಾದ ಶಾಖ, ಅನಾವೃಷ್ಟಿ ಮತ್ತು ಪ್ರವಾಹಗಳಂತಹ ಹವಾಮಾನದ ಪ್ರಭಾವಗಳಿಗೆ ಒಳಗಾಗುವ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಹೊಂದಾಣಿಕೆಯ ಯೋಜನೆಯನ್ನು ರೂಪಿಸಲು ಉದ್ದೇಶಿಸಿದೆ.
  • ಹಸಿರು ಜಲಜನಕ ಕಾರ್ಯಪಡೆ: ಹಸಿರು ಜಲಜನಕ ಕಾರ್ಯಪಡೆ (ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್)ಯಲ್ಲಿ, ಜರ್ಮನಿ ಮತ್ತು ಭಾರತೀಯ ತಜ್ಞರು ಜಂಟಿಯಾಗಿ ಭವಿಷ್ಯದ ಈ ಇಂಧನದ ಮಾರುಕಟ್ಟೆಯನ್ನು ಉತ್ತೇಜಿಸಲು ಮಾರ್ಗಸೂಚಿಗಳನ್ನು ಒಟ್ಟುಗೂಡಿಸುತ್ತಿದ್ದಾರೆ, ಇದನ್ನು ಸಮಂಜಸವಾಗಿ. ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.
  • ನವೀಕರಿಸಬಹುದಾದ ಇಂಧನಕ್ಕಾಗಿ ಹೂಡಿಕೆ ವೇದಿಕೆ: ನವೀಕರಿಸಬಹುದಾದ ಇಂಧನಗಳಲ್ಲಿ ಹೂಡಿಕೆಗಾಗಿ ವೇದಿಕೆಯನ್ನು ರಚಿಸುವುದರೊಂದಿಗೆ ಭಾರತ ಮತ್ತು ಜರ್ಮನಿ ನವೀಕರಿಸಬಹುದಾದ ಇಂಧನದ  ತ್ವರಿತ ವಿಸ್ತರಣೆಗೆ ಸೂಕ್ತವಾದ ಪರಿಹಾರಗಳನ್ನು ವಿವರಿಸಲು ಬಯಸುತ್ತವೆ. ಇದು ಭಾರತವು ಜಗತ್ತಿನಾದ್ಯಂತ ಆದರ್ಶ ಹೂಡಿಕೆ ವೇದಿಕೆಯಾಗಲು ದಾರಿ ಮಾಡಿಕೊಡುತ್ತದೆ!

 

*****


ಉಲ್ಲೇಖಗಳು

Focus on India: https://www.auswaertiges-amt.de/blob/2680288/8909ac2c501ab85d55defff7d1b8b75d/241016-fokus-indien-data.pdf




(Release ID: 2068715) Visitor Counter : 5


Read this release in: English , Urdu , Hindi , Tamil , Telugu