ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಗಾಂಧಿನಗರದಲ್ಲಿ 14ನೇ ಅಖಿಲ ಭಾರತ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸೇವೆ ಮತ್ತು ಭದ್ರತೆಯ ಎಲ್ಲಾ ಆಯಾಮಗಳನ್ನು ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಗಳ ಬೆಂಬಲದೊಂದಿಗೆ ಸಾಧಿಸಬಹುದು

ಸೇವೆ ಮತ್ತು ರಕ್ಷಣೆಯ ಮೂಲಕ ರಾಷ್ಟ್ರವನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಸುರಕ್ಷಿತಗೊಳಿಸುವಲ್ಲಿ ನಾಗರಿಕ ರಕ್ಷಣಾ ಪಡೆ ಮತ್ತು ಹೋಮ್ ಗಾರ್ಡ್ಸ್ ಪ್ರಮುಖ ಪಾತ್ರ ವಹಿಸುತ್ತವೆ

ಹಲವಾರು ಹೊಸ ಅಂಶಗಳು ಮತ್ತು ಸಮಯೋಚಿತ ಬದಲಾವಣೆಗಳನ್ನು ಸೇರಿಸುವ ಮೂಲಕ ಮೋದಿ ಸರ್ಕಾರ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಚಾರ್ಟರ್ ಅನ್ನು ಹೆಚ್ಚು ಪ್ರಸ್ತುತ ಮತ್ತು ಉಪಯುಕ್ತವಾಗಿಸಲಿದೆ

ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ನಂತೆ, ಮೋದಿ ಸರ್ಕಾರ ಎಲ್ಲಾ ವರ್ಗಗಳ ಯುವಕರನ್ನು ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಯಲ್ಲಿ ತೊಡಗಿಸಿಕೊಳ್ಳಲಿದೆ

1965 ಮತ್ತು 1971ರ ಯುದ್ಧಗಳಲ್ಲಿಯೂ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ

ಮಾದಕ ವಸ್ತು ಮುಕ್ತ ಭಾರತ, ಸ್ವಚ್ಛ ಭಾರತ, ಸಸಿ ನೆಡುವಿಕೆ, ಜಲ ಸಂರಕ್ಷಣಾ ಅಭಿಯಾನಗಳು, ಮಹಿಳಾ ಸುರಕ್ಷತೆ, ಕ್ಷಯರೋಗ ಮುಕ್ತ ಭಾರತ, ಅಪೌಷ್ಟಿಕತೆ ವಿರುದ್ಧದ ಹೋರಾಟ ಮತ್ತು ಪೋಷಣೆ ಅಭಿಯಾನಗಳಂತಹ ಜಾಗೃತಿ ಕಾರ್ಯಕ್ರಮಗಳೊಂದಿಗೆ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಯನ್ನು ಸಂಯೋಜಿಸಬೇಕು

ಸ್ಥಳೀಯ ಕಾನೂನು ಜಾರಿ ಮತ್ತು ಹೋಮ್ ಗಾರ್ಡ್ಸ್ ಹಾಗೂ ನಾಗರಿಕ ರಕ್ಷಣಾ ಪಡೆಗಳ ನಡುವೆ ಸಮನ್ವಯತೆಯನ್ನು ಸುಗಮಗೊಳಿಸುವ ಕಾನೂನು ಮತ್ತು ಸುವ್ಯವಸ್ಥೆಯ ನೆರವಿಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕು

ತುರ್ತು ಸೇವೆಗಳಿಗೆ ಈ ಸಂಸ್ಥೆಗಳ ಕೊಡುಗೆಯನ್ನು ಹೆಚ್ಚಿಸಲು ತರಬೇತಿ ಮತ್ತು ಟ್ರಾಫಿಕ್ ನಿರ್ವಹಣೆಗಾಗಿ ಸಾಂಸ್ಥಿಕ ವ್ಯವಸ್ಥೆಗಳ ಅವಶ್ಯಕತೆಯಿದೆ

Posted On: 22 OCT 2024 9:25PM by PIB Bengaluru

ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿ ನಡೆದ 14ನೇ ಅಖಿಲ ಭಾರತ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ (All India Home Guards and Civil Defence) ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

IMG_3299.JPG

2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಇದನ್ನು ಸಾಧಿಸಲು,, ನಾವು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯೊಂದಿಗೆ ನಮ್ಮ ಮೌಲ್ಯಗಳು, ಸಂಪ್ರದಾಯಗಳು, ಸಂಸ್ಕೃತಿ ಮತ್ತು ಭಾಷೆಗಳನ್ನು ಸಂರಕ್ಷಿಸುತ್ತಾ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಈ ನಿರ್ಣಯವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೇವೆ ಮತ್ತು ಭದ್ರತೆ ಎರಡು ಪ್ರಮುಖ ಅಂಶಗಳಾಗಿವೆ ಎಂದು ಶ್ರೀ ಶಾ ಹೇಳಿದರು. ಭದ್ರತೆಯು ಪ್ರತಿಯೊಬ್ಬ ವ್ಯಕ್ತಿ, ಆಸ್ತಿ, ಭವಿಷ್ಯ, ಹಕ್ಕುಗಳು ಮತ್ತು ನಮ್ಮ ಸೇವೆಯ ಪ್ರಮುಖ ಮೌಲ್ಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಉಲ್ಲೇಖಿಸಿದರು. ನಾಗರಿಕ ರಕ್ಷಣೆ ಮತ್ತು ಹೋಮ್ ಗಾರ್ಡ್‌ ಗಳು ಭದ್ರತೆ ಮತ್ತು ಸೇವೆಯೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಾಗಿದ್ದು, ಸಮಾಜದ ಒಂದು ವಿಭಾಗವನ್ನು ಸಮುದಾಯದ ರಕ್ಷಣೆ ಮತ್ತು ಸೇವೆಯೊಂದಿಗೆ ಸಂಪರ್ಕಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಿನಂತೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಹೋಮ್ ಗಾರ್ಡ್‌ ಗಳು ಮತ್ತು ನಾಗರಿಕ ರಕ್ಷಣಾ ಪಡೆಗಳು ಒದಗಿಸುವ ಸೇವೆ ಮತ್ತು ಭದ್ರತೆಯ ಆಯಾಮಗಳ ಮೂಲಕ ಸಾಧಿಸಬಹುದು ಎಂದು ಅವರು ಸೇರಿಸಿದರು.

IMG_3287.JPG

ಈ ಎರಡು ದಿನಗಳ ಸಮ್ಮೇಳನದಲ್ಲಿ, ಹೋಮ್ ಗಾರ್ಡ್‌ ಗಳು ಮತ್ತು ನಾಗರಿಕ ರಕ್ಷಣಾ ಪಡೆಗಳ ಬಲವರ್ಧನೆ, ಸಾಮರ್ಥ್ಯ ನಿರ್ಮಾಣ ಮತ್ತು ವಿಪತ್ತು ನಿರ್ವಹಣೆಯಲ್ಲಿ ಅವುಗಳ ಪಾತ್ರಗಳ ಕುರಿತು ಐದು ಅಧಿವೇಶನಗಳಲ್ಲಿ ವಿವಿಧ ಅಂಶಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಲಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಸಮ್ಮೇಳನವು ರಾಜ್ಯಗಳ ನಡುವೆ ಸಂವಾದಕ್ಕಾಗಿ ಒಂದು ಮಾಧ್ಯಮವಾಗಿಯೂ ಕಾರ್ಯನಿರ್ವಹಿಸಲಿದ್ದು, ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಅನುಕೂಲವಾಗುತ್ತದೆ ಮತ್ತು ಹೊರಹೊಮ್ಮುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಅವರ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1962 ರಿಂದ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆಗೆ ಪ್ರಾಮುಖ್ಯತೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1962ರಲ್ಲಿ ನಾಗರಿಕ ರಕ್ಷಣಾ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು ಮತ್ತು 1968ರಲ್ಲಿ ನಾಗರಿಕ ರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು ಎಂದು ಅವರು ಹೇಳಿದರು. 1965 ಮತ್ತು 1971ರ ಯುದ್ಧಗಳ ಸಮಯದಲ್ಲಿ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರ ಅಮೂಲ್ಯ ಕೊಡುಗೆಯನ್ನು ಶ್ರೀ ಶಾ ಉಲ್ಲೇಖಿಸಿದರು. 1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಸಂಸ್ಥೆಗಳು ಅಗತ್ಯ ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ, ನಾಗರಿಕರಿಗೆ ಸಾಮಾನ್ಯ ತರಬೇತಿಯನ್ನು ಒದಗಿಸುವಲ್ಲಿ ಮತ್ತು ಸಶಸ್ತ್ರ ಪಡೆಗಳು ಮತ್ತು ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು ಎಂದು ಅವರು ಒತ್ತಿ ಹೇಳಿದರು.

ಮುಂದಿನ ನಾಲ್ಕು ತಿಂಗಳಲ್ಲಿ ಹಲವಾರು ಹೊಸ ಅಂಶಗಳು ಮತ್ತು ಸಮಯೋಚಿತ ಬದಲಾವಣೆಗಳನ್ನು ಸೇರಿಸುವ ಮೂಲಕ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಚಾರ್ಟರ್ ಅನ್ನು ಪ್ರಸ್ತುತ ಮತ್ತು ಉಪಯುಕ್ತವಾಗಿಸಲು ಮೋದಿ ಸರ್ಕಾರವು ಪ್ರಯತ್ನಗಳನ್ನು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕ್ರಮವು ಎರಡೂ ಸಂಸ್ಥೆಗಳಿಗೆ ಹೊಸ ಜಾಗೃತಿ ಮತ್ತು ಚೈತನ್ಯವನ್ನು ತರುವ ಗುರಿಯನ್ನು ಹೊಂದಿದೆ ಎಂದು ಅವರು ಉಲ್ಲೇಖಿಸಿದರು. ಪ್ರಸ್ತುತ ಚಾರ್ಟರ್ ನಲ್ಲಿ ಯುದ್ಧದ ತುರ್ತು ಸಂದರ್ಭಗಳಿಗೆ ಜನರನ್ನು ಸಿದ್ಧಪಡಿಸುವುದು, ನಾಗರಿಕರನ್ನು ರಕ್ಷಿಸುವುದು, ಯುದ್ಧದ ಪರಿಣಾಮಗಳನ್ನು ತಪ್ಪಿಸಲು ಅವರಿಗೆ ತರಬೇತಿ ನೀಡುವುದು, ಅಹಿಂಸಾತ್ಮಕ ನಾಗರಿಕ ಪ್ರತಿರೋಧದ ಮನಸ್ಥಿತಿಯನ್ನು ಬೆಳೆಸುವುದು, ಸಮುದಾಯಗಳನ್ನು ಸಂಘಟಿಸುವುದು, ಯುದ್ಧದಲ್ಲಿ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿಗೆ ಸಹಾಯ ಮಾಡುವುದು ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸುವುದು ಸೇರಿವೆ ಎಂದು ಶ್ರೀ ಶಾ ವಿವರಿಸಿದರು. ಒಂದು ಸಂಸ್ಥೆಯ ಚಾರ್ಟರ್ 50 ವರ್ಷಗಳ ಕಾಲ ಬದಲಾವಣೆಗೆ ಒಳಗಾಗದಿದ್ದರೆ, ಸಂಸ್ಥೆ ಮತ್ತು ಚಾರ್ಟರ್ ಎರಡೂ ಅಪ್ರಸ್ತುತವಾಗುತ್ತವೆ ಎಂದು ಅವರು ಗಮನಿಸಿದರು. ಕಳೆದ 50 ವರ್ಷಗಳಲ್ಲಿ ದೇಶದಲ್ಲಿ ಮೂಲಭೂತ ಬದಲಾವಣೆಗಳಾಗಿವೆ ಮತ್ತು ತಾಂತ್ರಿಕ ಪ್ರಗತಿಯು ಅಗತ್ಯಗಳನ್ನು ಬದಲಾಯಿಸಿದೆ, ಇದರಿಂದಾಗಿ ದೇಶವು ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದು ಅವರು  ಹೇಳಿದರು.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರು ವಹಿಸಿದ ಪಾತ್ರ ಮತ್ತು ಜನರ ಸೇವೆಗಾಗಿ ಅವರ ಸಮರ್ಪಣೆ ಶ್ಲಾಘನೀಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆಯ 27 ಸಿಬ್ಬಂದಿಗಳು ಸಾರ್ವಜನಿಕರ ಸೇವೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಗಳಿಗೆ ತುರ್ತು ಸೇವೆಗಳಲ್ಲಿ ಕೊಡುಗೆ ನೀಡುವ ತರಬೇತಿಯು ವ್ಯವಸ್ಥಿತವಾಗಿರಬೇಕು ಮತ್ತು ಅವುಗಳ ಚಾರ್ಟರ್‌ ನಲ್ಲಿ ಸ್ಥಾನ ಹೊಂದಿರಬೇಕು ಎಂದು ಹೇಳಿದರು. ಸಂಚಾರ ನಿರ್ವಹಣೆಯಲ್ಲಿಯೂ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಗಳಿಗೆ ಸಾಂಸ್ಥಿಕ ವ್ಯವಸ್ಥೆಗಳನ್ನು ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು. ಅದೇ ರೀತಿ  ಡ್ರಗ್ ಮುಕ್ತ ಭಾರತ, ಸ್ವಚ್ಛ ಭಾರತ ಅಭಿಯಾನ, ಸಸಿ ನೆಡುವ ಅಭಿಯಾನ, ಜಲ ಸಂರಕ್ಷಣೆ, ಸಾಮಾಜಿಕ ಕೆಡುಕುಗಳ ವಿರುದ್ಧ ಜಾಗೃತಿ, ಮಹಿಳಾ ಸುರಕ್ಷತೆ, ಸಮುದಾಯ ಆರೋಗ್ಯ ರಕ್ಷಣೆ, ಕ್ಷಯರೋಗ ಮುಕ್ತ ಭಾರತ, ಅಪೌಷ್ಟಿಕತೆ ವಿರುದ್ಧದ ಹೋರಾಟ, ಪೋಷಣ್ ಅಭಿಯಾನ ಮುಂತಾದ ಇತರ ಜಾಗೃತಿ ಕಾರ್ಯಕ್ರಮಗಳಲ್ಲಿ ಕೈಜೋಡಿಸಬೇಕು ಎಂದು ಅವರು ಹೇಳಿದರು. ಸೈಬರ್ ಭದ್ರತೆ ಮತ್ತು ಡಿಜಿಟಲ್ ವಂಚನೆ, ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ಪರಿಸರ ರಕ್ಷಣೆಗಾಗಿ ಮರಗಳನ್ನು ನೆಡುವ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರಚನಾತ್ಮಕ ಪಾತ್ರ ಇರಬೇಕು ಎಂದು ಶ್ರೀ ಶಾ ಹೇಳಿದರು. ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣಾ ಅಧಿಕಾರಿಗಳು ಹಾಗೂ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಗಳ ನಡುವೆ ಸಮನ್ವಯತೆ ಇರುವಂತೆ ಕಾನೂನು ಮತ್ತು ಸುವ್ಯವಸ್ಥೆಯ ನೆರವಿಗಾಗಿ ಮಾರ್ಗಸೂಚಿಯನ್ನು ತಯಾರಿಸಬೇಕು ಎಂದರು. ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು, ಶೇಕಡಾ 100ರಷ್ಟು ದಾಖಲಾತಿ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಮುಂತಾದ ಶಿಕ್ಷಣದಲ್ಲಿನ ಅವರ ಪಾತ್ರಗಳಿಗೂ ಹೊಸ ಚಾರ್ಟರ್‌ ನಲ್ಲಿ ಸ್ಥಾನ ನೀಡಬೇಕು. ಉದ್ಯೋಗ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಅನೇಕ ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಅವುಗಳನ್ನು ಸಂಪರ್ಕಿಸಲು ಚಾರ್ಟರ್‌ನಲ್ಲಿ ಹೋಮ್ ಗಾರ್ಡ್ಸ್ ಮತ್ತು ನಾಗರಿಕ ರಕ್ಷಣಾ ಪಡೆಗಳನ್ನು ಸೇರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಹೆಚ್ಚು ಪ್ರಸ್ತುತಪಡಿಸಲು ಈ ಎರಡು ಸಂಸ್ಥೆಗಳ ಪಾತ್ರದ ಬಗ್ಗೆ ಇಂದು ಹೊಸದಾಗಿ ಯೋಚಿಸುವ ಅಗತ್ಯವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂದಿನ 4 ತಿಂಗಳಲ್ಲಿ, ಈ ಎರಡೂ ಸಂಸ್ಥೆಗಳಿಗೆ ಹೊಸ ಜೀವ ತುಂಬುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ತರಬೇತಿ ಮತ್ತು ಹೊಸ ಮತ್ತು ಯುವ ಮುಖಗಳನ್ನು ಮುಂದೆ ತರುವ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ ಎಂದು ಶ್ರೀ ಶಾ ಹೇಳಿದರು. ಇಲ್ಲಿಯವರೆಗೆ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆಯೊಂದಿಗೆ ಸಂಬಂಧ ಹೊಂದಿರುವವರು ಮಾತ್ರ ಸಮಾಜಕ್ಕಾಗಿ ಮುಂದೆ ಬರಲು ಬಯಸುತ್ತಾರೆ ಎಂದು ಗೃಹ ಸಚಿವರು ಹೇಳಿದರು. ಎನ್. ಸಿ. ಸಿ., ಎನ್. ಎಸ್. ಎಸ್. ಗಳಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರಾತಿನಿಧ್ಯ ಇರುವಂತೆಯೇ, ಸಮಾಜದ ಪ್ರತಿಯೊಂದು ವರ್ಗದ ಯುವಕರೂ ಈ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು ಎಂದು ಸರ್ಕಾರ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ನಾವು ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನೂ ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದರು.

9B7A7654.JPG

ತರಬೇತಿ ನೀಡಿ ಯುವಕರನ್ನು ಮುಂದೆ ತರುವತ್ತ ಗಮನ ಹರಿಸಬೇಕಾದ ಅಗತ್ಯವೂ ಇದೆ. ಇಲ್ಲಿಯವರೆಗೆ ಗೃಹ ರಕ್ಷಕರು ಮತ್ತು ನಾಗರಿಕರ ರಕ್ಷಣೆಗೆ ಸಂಬಂಧಿಸಿದವರು ಮಾತ್ರ ಸಮಾಜಕ್ಕಾಗಿ ಮುಂದೆ ಬರಲು ಬಯಸುತ್ತಾರೆ ಎಂದು ಗೃಹ ಸಚಿವರು ಹೇಳಿದರು. NCC, NSS, ಗಳಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರಾತಿನಿಧ್ಯ ಇರುವಂತೆಯೇ, ಸಮಾಜದ ಪ್ರತಿಯೊಂದು ವರ್ಗದ ಯುವಕರೂ ಈ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು ಎಂದು ಸರ್ಕಾರ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ನಾವು ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನೂ ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದರು.

******




(Release ID: 2067266) Visitor Counter : 55