ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಐ ಎಫ್ ಎಫ್ ಐ ಗಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಪ್ರಾರಂಭವಾಗಿದೆ
ಸಿನಿಮಾದ ಆನಂದವನ್ನು ಹಂಚಿಕೊಳ್ಳಲು ಮಾಧ್ಯಮದವರನ್ನು ಐ ಎಫ್ ಎಫ್ ಐ ಸ್ವಾಗತಿಸುತ್ತದೆ
ಮೊದಲ ಕೆಲವು ಅದೃಷ್ಟಶಾಲಿ ಮಾಧ್ಯಮ ಪ್ರತಿನಿಧಿಗಳಿಗೆ ಎಫ್ ಟಿ ಐ ಐ ನಿಂದ ಫಿಲ್ಮ್ ಅಪ್ರಿಷಿಯೇಷನ್ ಸರ್ಟಿಫಿಕೇಟ್ ಕೋರ್ಸ್
#iffiwood ಗೆ ಸುಸ್ವಾಗತ, 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) 2024ರ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಇಂದು ಅಕ್ಟೋಬರ್ 18, 2024 ರಂದು ಆರಂಭವಾಗಿದೆ. ನೀವು ಅನುಭವಿ ಚಲನಚಿತ್ರ ವಿಮರ್ಶಕರಾಗಿರಲಿ ಅಥವಾ ಕಥೆ ಹೇಳುವ ಉತ್ಸಾಹವನ್ನು ಹೊಂದಿರುವ ಉದಯೋನ್ಮುಖ ಪತ್ರಕರ್ತರಾಗಿರಲಿ, ಗೋವಾದ ಪಣಜಿಯಲ್ಲಿ 2024ರ ನವೆಂಬರ್ 20 ರಿಂದ 28 ರವರೆಗೆ ನಡೆಯಲಿರುವ ಐ ಎಫ್ ಎಫ್ ಐ ನ 55ನೇ ಆವೃತ್ತಿಯಲ್ಲಿ ತೆರೆದುಕೊಳ್ಳುವ ಸಿನಿಮೀಯ ಶ್ರೇಷ್ಠತೆಯನ್ನು ಅನುಭವಿಸಲು ಇದೊಂದು ಸುವರ್ಣಾಕಾಶವಾಗಿದೆ. ಉತ್ಸವಕ್ಕೆ ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವ ಮೂಲಕ, ಸಿನಿಮಾದ ಸಂತೋಷದ ಕುರಿತು ಲೇಖನಗಳೊಂದಿಗೆ ಉತ್ಸವವನ್ನು ಪ್ರಪಂಚದ ಮೂಲೆ ಮೂಲೆಗಳ ಜನಸಮೂಹಕ್ಕೆ ಕೊಂಡೊಯ್ಯುವ ತಂಡದ ಭಾಗವಾಗಬಹುದು.
ಭಾರತವು ವಿಶ್ವಕ್ಕೆ ವೆಚ್ಚ-ಪರಿಣಾಮಕಾರಿ ಮತ್ತು ಉತ್ತಮ ಗುಣಮಟ್ಟದ ಕಂಟೆಂಟ್ ರಚನೆಯ ಕೇಂದ್ರವಾಗಲು ಸಜ್ಜಾಗುತ್ತಿರುವಾಗ, ಅದರ ಪ್ರಧಾನ ಚಲನಚಿತ್ರೋತ್ಸವ - ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐ ಎಫ್ ಎಫ್ ಐ) – ಮನರಂಜನಾ ಉದ್ಯಮದಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ಪ್ರಶಂಸಿಸಿಲು ಉತ್ತಮ ವೇದಿಕೆಯಾಗಿದೆ. ಈ ಉತ್ಸವವು ಸಿನಿ ಪಾಲುದಾರರ ಸೃಜನಶೀಲ ಅಭಿವ್ಯಕ್ತಿಗೆ ಅನೇಕ ಅವಕಾಶಗಳನ್ನು ತೆರೆಯುತ್ತದೆ ಅಸಂಖ್ಯಾತ ಕ್ಯಾನ್ವಾಸ್ ಗಳ ಪ್ರಮುಖ ಕಥೆಗಳನ್ನು ನೋಡಲು, ಕೇಳಲು ಮತ್ತು ಅನುಭವಿಸಲು ಇದು ಅವಕಾಶವನ್ನು ಒದಗಿಸುತ್ತದೆ. ಇದಲ್ಲದೆ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕುಶಲತೆಯ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಒಂದು ವೇದಿಕೆಯಾಗಿದೆ, ಏಕೆಂದರೆ ಇದು ಮಾಸ್ಟರ್ ಕ್ಲಾಸ್ ಗಳ ಮೂಲಕ ಸಂವಾದಾತ್ಮಕ ಅಧಿವೇಶನಗಳನ್ನು ಹೊಂದಿರುತ್ತದೆ, ಇದರಲ್ಲಿ ಪ್ರಪಂಚದಾದ್ಯಂತದ ಚಲನಚಿತ್ರ ಜಗತ್ತಿನ ಪ್ರಮುಖ ವ್ಯಕ್ತಿಗಳು ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ.
![](https://static.pib.gov.in/WriteReadData/userfiles/image/iffiS6EN.jpg)
ಸಿನಿಮಾ ಮೆಚ್ಚುಗೆಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮತ್ತು ಚಲನಚಿತ್ರ ನಿರ್ಮಾಣದ ಕಲೆಯ ಬಗ್ಗೆ ನಿಜವಾದ ಪ್ರೀತಿಯನ್ನು ಮೂಡಿಸುವಲ್ಲಿ ಮಾಹಿತಿ ಮತ್ತು ಸಂವಹನವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಿಮಗೆ ತಿಳಿದಿದೆ. ಅದಕ್ಕಾಗಿಯೇ 55 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಮಾಧ್ಯಮ ಪ್ರತಿನಿಧಿಗಳು ಅತ್ಯಗತ್ಯ ಭಾಗವಾಗಿದ್ದೀರಿ. 55 ನೇ ಐ ಎಫ್ ಎಫ್ ಐ ನಲ್ಲಿ, ಶ್ರೇಷ್ಠ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾತೃಗಳ ಸೂಕ್ಷ್ಮ ಅಂಶಗಳನ್ನು ದಾಖಲಿಸುವ ಶಕ್ತಿಯನ್ನು ಹೊಂದಿರುವುದು ಮಾತ್ರವಲ್ಲದೇ ಪ್ರತಿಯೊಂದು ಕಥೆಯನ್ನು ಪ್ರಪಂಚದ ಮೂಲೆಗಳಿಗೆ ತಲುಪಿಸುವ ಸವಲತ್ತು ನಿಮಗೆ ಇದೆ.
ನೋಂದಣಿ ಪ್ರಕ್ರಿಯೆ
ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಲು, ನೀವು ಜನವರಿ 1, 2024 ಕ್ಕೆ 21 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಅಥವಾ ಆನ್‌ಲೈನ್ ಮಾಧ್ಯಮ ಸಂಸ್ಥೆಗೆ ಸೇರಿದ ವರದಿಗಾರ, ಛಾಯಾಗ್ರಾಹಕ ಅಥವಾ ಡಿಜಿಟಲ್ ಕಂಟೆಂಟ್ ರಚನೆಕಾರರಾಗಿರಬೇಕು. ವಯಸ್ಸಿನ ಮಾನದಂಡವನ್ನು ಪೂರೈಸುವ ಸ್ವತಂತ್ರ ಪತ್ರಕರ್ತರನ್ನು ಸಹ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ನೋಂದಾಯಿಸುವ ಮೊದಲು ದಯವಿಟ್ಟು ಇಲ್ಲಿ ಸಂಬಂಧಿತ ಅರ್ಹತಾ ಮಾನದಂಡಗಳನ್ನು ಓದಿ ಮತ್ತು ನೀವು ನೋಂದಾಯಿಸುವ ಮೊದಲು ಅಪ್‌ಲೋಡ್ ಮಾಡಲು ತಿಳಿಸಲಾದ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಿ. ನೋಂದಣಿ ಪ್ರಕ್ರಿಯೆಯು ಸರಳವಾಗಿರುತ್ತದೆ ಮತ್ತು ಆನ್‌ಲೈನ್ ನಲ್ಲಿ https://my.iffigoa.org/media-login ನಲ್ಲಿ ಪೂರ್ಣಗೊಳಿಸಬಹುದು.
![](https://static.pib.gov.in/WriteReadData/userfiles/image/WhatsAppImage2024-10-18at17.54.397OWW.jpeg)
ನೋಂದಣಿಗೆ ಕೊನೆಯ ದಿನಾಂಕ ನವೆಂಬರ್ 12, 2024 ರಂದು ರಾತ್ರಿ 11:59:59ಕ್ಕೆ (ಭಾರತೀಯ ಕಾಲಮಾನ). ನಿಮ್ಮ ಅರ್ಜಿಯ ಪರಿಶೀಲನೆಯ ನಂತರ ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ನಿಮ್ಮ ಸ್ಥಿತಿಯ ಅನುಮೋದನೆಯನ್ನು ತಿಳಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ನೋಂದಣಿ ಪ್ರಕ್ರಿಯೆಯ ಮೂಲಕ ಕೇಂದ್ರ ವಾರ್ತಾ ಶಾಖೆ (ಪಿಐಬಿ) ಯಿಂದ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು 55 ನೇ ಐ ಎಫ್ ಎಫ್ ಐ 2024 ಕ್ಕಾಗಿ ಮಾಧ್ಯಮ ಪ್ರತಿನಿಧಿ ಪಾಸ್ ಗಳಿಗೆ ಅರ್ಹರಾಗಿರುತ್ತಾರೆ. ಮಾಧ್ಯಮ ಸಂಸ್ಥೆಯ ಸಮಯೋಚಿತತೆ, ಗಾತ್ರ (ಪ್ರಸಾರ, ಪ್ರೇಕ್ಷಕರು, ತಲುಪುವಿಕೆ), ಮತ್ತು ಐ ಎಫ್ ಎಫ್ ಐ ನ ನಿರೀಕ್ಷಿತ ಮಾಧ್ಯಮ ಪ್ರಸಾರ ಮತ್ತು ಸಿನಿಮಾದ ಮೇಲೆ ಕೇಂದ್ರೀಕರಿಸುವಂತಹ ಅಂಶಗಳ ಆಧಾರದ ಮೇಲೆ ಪ್ರತಿ ಮಾಧ್ಯಮ ಸಂಸ್ಥೆಗೆ ನೀಡಬೇಕಾದ ಮಾನ್ಯತೆಗಳ ಸಂಖ್ಯೆಯನ್ನು ಪಿಐಬಿ ನಿರ್ಧರಿಸುತ್ತದೆ.
ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು 18ನೇ ನವೆಂಬರ್ 2024 ರಿಂದ ಐ ಎಫ್ ಎಫ್ ಐ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿ ಪಾಸ್ ಅನ್ನು ಪಡೆಯಬಹುದು. ಯಾವುದೇ ಪ್ರಶ್ನೆಗೆ ದಯವಿಟ್ಟು 'ಮಾಧ್ಯಮ ಮಾನ್ಯತೆ ಪ್ರಶ್ನೆ' ವಿಷಯದೊಂದಿಗೆ iffi4pib[at]gmail[dot]com ಗೆ ಮೇಲ್ ಮಾಡಿ.
ಮಾಧ್ಯಮ ಪ್ರತಿನಿಧಿಗಳಿಗಾಗಿ ಎಫ್ ಟಿ ಐ ಐ ನಿಂದ ಫಿಲ್ಮ್ ಅಪ್ರಿಷಿಯೇಷನ್ ಸರ್ಟಿಫಿಕೇಟ್ ಕೋರ್ಸ್
ನಿಜವಾಗಿಯೂ ಚಲನಚಿತ್ರದ ವಿಶೇಷತೆ ಏನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪರದೆಯ ಆಚೆಗೆ ಸಿನಿಮಾದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಸಿದ್ಧರಾಗಿ. ಹೇಗೆ?
ಈ ವರ್ಷ, ಮೊದಲ ಕೆಲವು ಅದೃಷ್ಟವಂತ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಅನನ್ಯ ಅವಕಾಶ ಕಾಯುತ್ತಿದೆ. 18 ನವೆಂಬರ್ 2024 ರಂದು ಗೋವಾದ ಪಣಜಿಯಲ್ಲಿ ಕೇಂದ್ರ ವಾರ್ತಾ ಶಾಕೆ (ಪಿಐಬಿ) ಸಹಯೋಗದೊಂದಿಗೆ ಭಾರತದ ಪ್ರತಿಷ್ಠಿತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್ ಟಿ ಐ ಐ)ಯ ಸಂಪನ್ಮೂಲ ವ್ಯಕ್ತಿಗಳು ಆಯೋಜಿಸುವ ಉಚಿತ ಫಿಲ್ಮ್ ಅಪ್ರಿಷಿಯೇಷನ್ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ. ಈ ಕೋರ್ಸ್ ಒಂದು ದಿನದ ಕಾರ್ಯಕ್ರಮವಾಗಿದೆ ಮತ್ತು ಮಾಧ್ಯಮ ಪ್ರತಿನಿಧಿ ನೋಂದಣಿ ಅರ್ಜಿಯನ್ನು ಸಲ್ಲಿಸಿದ ನಂತರ ಮತ್ತು ಅರ್ಜಿಯಲ್ಲಿ ನೀಡಲಾದ ಕೋರ್ಸ್‌ಗೆ ಹಾಜರಾಗಲು ಆಯ್ಕೆಯನ್ನು ಆರಿಸಿದ ನಂತರ ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಲಭ್ಯವಿರುತ್ತದೆ.
ಕೋರ್ಸ್‌ನ ಹೆಚ್ಚಿನ ವಿವರಗಳನ್ನು ಆಯ್ದ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. ಆದ್ದರಿಂದ, ಇಂದೇ ನೋಂದಾಯಿಸಿ ಮತ್ತು ಮೂಮಚಿತವಾಗಿ ನೋಂದಾಯಿಸುವುದು ಏಕೆ ಗೇಮ್ ಚೇಂಜರ್ ಆಗುತ್ತದೆ ಎಂಬುದನ್ನು ನೋಡಿ. ಇದು ನಿಮ್ಮನ್ನು ಜನಸಂದಣಿಯಿಂದ ಉಳಿಸುವುದು ಮಾತ್ರವಲ್ಲದೆ, 2024 ರ ಐ ಎಫ್ ಎಫ್ ಐ ಸಂಭ್ರಮಾಚರಣೆ ಪ್ರಾರಂಭವಾಗುವ ಮೊದಲು ನೀವು ವಿಶೇಷ ಒಳನೋಟಗಳು ಮತ್ತು ನೆಟ್‌ವರ್ಕಿಂಗ್ ಆನಂದಿಸುವ ಅವಕಾಶಗಳನ್ನು ಸಹ ನೀಡುತ್ತದೆ.
ನೋಂದಾಯಿಸಲು here ಕ್ಲಿಕ್ ಮಾಡಿ ಮತ್ತು ಸಿನಿಮಾದ ಸಂತೋಷವನ್ನು ಹಂಚಿಕೊಳ್ಳಲು ನಾವು ಮತ್ತೊಮ್ಮೆ ನಿಮ್ಮನ್ನು ಸ್ವಾಗತಿಸುತ್ತೇವೆ!
ಚಲನಚಿತ್ರಗಳಲ್ಲಿ ಸಿಗೋಣ!
ಐ ಎಫ್ ಎಫ್ ಐ ಬಗ್ಗೆ
1952ರಲ್ಲಿ ಆರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಅದರ ಪ್ರಾರಂಭದಿಂದಲೂ, ಐ ಎಫ್ ಎಫ್ ಐ ಚಲನಚಿತ್ರಗಳು, ಅವುಗಳ ಆಕರ್ಷಕ ಕಥೆಗಳು ಮತ್ತು ಅವುಗಳ ಹಿಂದೆ ಇರುವ ಪ್ರತಿಭಾವಂತ ವ್ಯಕ್ತಿಗಳನ್ನು ಸಂಭ್ರಮಿಸುವ ಗುರಿಯನ್ನು ಹೊಂದಿದೆ. ಚಲನಚಿತ್ರಗಳ ಬಗ್ಗೆ ಆಳವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಉತ್ತೇಜಿಸಲು ಮತ್ತು ಹರಡಲು, ಜನರಲ್ಲಿ ತಿಳುವಳಿಕೆ ಮತ್ತು ಸೌಹಾರ್ದದ ಸೇತುವೆಗಳನ್ನು ನಿರ್ಮಿಸಲು ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಶ್ರೇಷ್ಠತೆಯ ಹೊಸ ಎತ್ತರಗಳನ್ನು ತಲುಪಲು ಅವರನ್ನು ಪ್ರೇರೇಪಿಸಲು ಈ ಉತ್ಸವವು ಶ್ರಮಿಸುತ್ತದೆ.
ಐ ಎಫ್ ಎಫ್ ಐ ಅನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗೋವಾ ಸರ್ಕಾರದ ಎಂಟರ್‌ಟೈನ್‌ಮೆಂಟ್ ಸೊಸೈಟಿಯ ಸಹಯೋಗದೊಂದಿಗೆ ವಾರ್ಷಿಕವಾಗಿ ಆಯೋಜಿಸುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿನ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು (ಡಿ ಎಫ್ ಎಫ್) ಸಾಮಾನ್ಯವಾಗಿ ಉತ್ಸವವನ್ನು ಮುನ್ನಡೆಸುತ್ತದೆಯಾದರೂ, ಚಲನಚಿತ್ರ ಮಾಧ್ಯಮ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (ಎನ್ ಎಫ್ ಡಿ ಸಿ) ವಿಲೀನಗೊಳಿಸಿದ ಪರಿಣಾಮವಾಗಿ ಎನ್ ಎಫ್ ಡಿ ಸಿ ಉತ್ಸವದ ನಿರ್ವಹಣೆಯನ್ನು ವಹಿಸಿಕೊಂಡಿದೆ. 55ನೇ ಐ ಎಫ್ ಎಫ್ ಐ ನ ಇತ್ತೀಚಿನ ಅಪ್‌ಡೇಟ್ ಗಳಿಗಾಗಿ, ದಯವಿಟ್ಟು http://www.iffigoa.org ನಲ್ಲಿ ಉತ್ಸವದ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಪಿಐಬಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ X, Facebook ಮತ್ತು Instagram ಮತ್ತು ಪಿಐಬಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಐ ಎಫ್ ಎಫ್ ಐ ಅನ್ನು ಅನುಸರಿಸಿ.
![](https://static.pib.gov.in/WriteReadData/userfiles/image/Picture2I0P6.jpg)
*****
(Release ID: 2066352)
Visitor Counter : 49