ಜಲ ಶಕ್ತಿ ಸಚಿವಾಲಯ
ಗೌರವಾನ್ವಿತ ಕೇಂದ್ರ ಜಲಶಕ್ತಿ ಸಚಿವರು 5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಘೋಷಿಸಿದರು
Posted On:
14 OCT 2024 6:43PM by PIB Bengaluru
ಗೌರವಾನ್ವಿತ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್.ಪಾಟಿಲ್ ಅವರು ಇಂದು ನವದೆಹಲಿಯ ಶ್ರಮಶಕ್ತಿ ಭವನದಲ್ಲಿ 5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.
ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಬರುವ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ (ಡಿಒಡಬ್ಲ್ಯುಆರ್, ಆರ್ ಡಿ ಮತತ್ತು ಜಿಆರ್) 2023ರ 5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳಿಗೆ ಜಂಟಿ ವಿಜೇತರು ಸೇರಿದಂತೆ 38 ವಿಜೇತರನ್ನು ಘೋಷಿಸಿದೆ, ಅವುಗಳೆಂದರೆ 09 ವಿಭಾಗಗಳಲ್ಲಿ ಅಂದರೆ ಅತ್ಯುತ್ತಮ ರಾಜ್ಯ, ಅತ್ಯುತ್ತಮ ಜಿಲ್ಲೆ, ಅತ್ಯುತ್ತಮ ಗ್ರಾಮ ಪಂಚಾಯತ್, ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆ, ಅತ್ಯುತ್ತಮ ಶಾಲೆ ಅಥವಾ ಕಾಲೇಜು, ಅತ್ಯುತ್ತಮ ಉದ್ಯಮ, ಅತ್ಯುತ್ತಮ ನೀರು ಬಳಕೆದಾರರ ಸಂಘ. ಅತ್ಯುತ್ತಮ ಸಂಸ್ಥೆ (ಶಾಲೆ ಅಥವಾ ಕಾಲೇಜು ಹೊರತುಪಡಿಸಿ), ಮತ್ತು ಅತ್ಯುತ್ತಮ ನಾಗರಿಕ ಸಮಾಜ. ವಿಜೇತರ ಪಟ್ಟಿಯನ್ನು ಲಗತ್ತಿಸಲಾಗಿದೆ.
ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಒಡಿಶಾ ಮೊದಲ ಸ್ಥಾನ, ಉತ್ತರ ಪ್ರದೇಶ ದ್ವಿತೀಯ, ಗುಜರಾತ್ ಮತ್ತು ಪುದುಚೇರಿ ಜಂಟಿಯಾಗಿ ಮೂರನೇ ಸ್ಥಾನ ಪಡೆದಿವೆ.
ಪ್ರತಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ಮತ್ತು ಕೆಲವು ವಿಭಾಗಗಳಲ್ಲಿ ನಗದು ಬಹುಮಾನಗಳನ್ನು ನೀಡಲಾಗುವುದು. ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ (ಡಿಒಡಬ್ಲ್ಯುಆರ್, ಆರ್ ಡಿ ಮತ್ತು ಜಿಆರ್) 2023ರ 5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳ ಪ್ರಶಸ್ತಿ ವಿತರಣಾ ಸಮಾರಂಭವು 2024ರ ಅಕ್ಟೋಬರ್ 22 ರಂದು ಬೆಳಗ್ಗೆ 11.00 ಗಂಟೆಗೆ ನವದೆಹಲಿಯ ವಿಜ್ಞಾನ ಭವನದ ಪೂರ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಘೋಷಿಸಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಜಲಶಕ್ತಿ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ರಾಜ್ ಭೂಷಣ್ ಚೌಧರಿ ಮತ್ತು ಶ್ರೀ ವಿ.ಸೋಮಣ್ಣ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಕಾರ್ಯದರ್ಶಿ ಶ್ರೀಮತಿ ದೇಬಶ್ರೀ ಮುಖರ್ಜಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಒಎಸ್ ಡಿ ಶ್ರೀ ಅಶೋಕ್ ಕೆ.ಕೆ.ಮೀನಾ ಮತ್ತು ಜಲಶಕ್ತಿ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಂಪುಟ ಸಚಿವರೊಂದಿಗೆ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಘೋಷಣೆ ಮಾಡಿದರು.
ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಆಸ್ತಿಯಾಗಿ ನೀರಿನ ಅಭಿವೃದ್ಧಿ, ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಗಾಗಿ ನೀತಿ ಚೌಕಟ್ಟುಗಳನ್ನು ಸ್ಥಾಪಿಸುವ ಮತ್ತು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ವಹಿಸಲಾದ ಕೇಂದ್ರ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ, ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಮಟ್ಟದಲ್ಲಿ ನೀರಿನ ನಿರ್ವಹಣೆ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಮಗ್ರ ಅಭಿಯಾನವನ್ನು ಕೈಗೊಳ್ಳುತ್ತಿದೆ. ಈ ದೃಷ್ಟಿಕೋನದಿಂದ ಮತ್ತು ನೀರಿನ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಉತ್ತಮ ನೀರಿನ ಬಳಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು, 1ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು 2018 ರಲ್ಲಿ ಡಿಒಡಬ್ಲ್ಯುಆರ್, ಆರ್ ಡಿ ಮತ್ತು ಜಿಆರ್ ಪ್ರಾರಂಭಿಸಿತು. 2019, 2020 ಮತ್ತು 2022ನೇ ಸಾಲಿನ 2, 3 ಮತ್ತು 4ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಪ್ರಶಸ್ತಿಗಳನ್ನು ನೀಡಲಾಗಿಲ್ಲ.
2023ನೇ ಸಾಲಿನ 5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು 2023ರ ಅಕ್ಟೋಬರ್ 13ರಂದು ಗೃಹ ಸಚಿವಾಲಯದ (ಎಂಎಚ್ಎ) ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ನಲ್ಲಿ ಪ್ರಾರಂಭಿಸಲಾಯಿತು. ಒಟ್ಟು 686 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳನ್ನು ತೀರ್ಪುಗಾರರ ಸಮಿತಿಯು ಪರಿಶೀಲಿಸಿತು ಮತ್ತು ಮೌಲ್ಯಮಾಪನ ಮಾಡಿತು. ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಮತ್ತು ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಬಿ) ಅಂತಿಮಪಟ್ಟಿ ಮಾಡಿದ ಅರ್ಜಿಗಳ ಸತ್ಯಾಸತ್ಯತೆಯನ್ನು ನಡೆಸಿವೆ. ಗ್ರೌಂಡ್ ಟ್ರೂಥಿಂಗ್ ವರದಿಗಳ ಆಧಾರದ ಮೇಲೆ, 09 ವಿವಿಧ ವಿಭಾಗಗಳನ್ನು ಒಳಗೊಂಡ ಜಂಟಿ ವಿಜೇತರು ಸೇರಿದಂತೆ ಒಟ್ಟು 38 ವಿಜೇತರನ್ನು 5ನೇ ಎನ್ ಡಿಬ್ಲ್ಯೂಎ, 2023 ಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಜಲ ಪ್ರಶಸ್ತಿಗಳು (ಎನ್ ಡಬ್ಲ್ಯೂಎಗಳು) ಸರ್ಕಾರದ 'ಜಲ ಸಮೃದ್ಧ ಭಾರತ್' ದೃಷ್ಟಿಕೋನವನ್ನು ಸಾಧಿಸುವಲ್ಲಿ ದೇಶಾದ್ಯಂತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿದ ಉತ್ತಮ ಕೆಲಸ ಮತ್ತು ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತವೆ. ನೀರಿನ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿ ಮತ್ತು ಉತ್ತಮ ನೀರಿನ ಬಳಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸಿದ್ದಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವು ಜಲ ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ಬಲವಾದ ಪಾಲುದಾರಿಕೆ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲಾ ಜನರು ಮತ್ತು ಸಂಸ್ಥೆಗಳಿಗೆ ಒಂದು ಸಂದರ್ಭವನ್ನು ಒದಗಿಸುತ್ತದೆ.
*****
(Release ID: 2064914)
Visitor Counter : 50