ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಪಂಜಾಬ್‌ ನಲ್ಲಿ ಭತ್ತದ ಸಂಗ್ರಹಣೆಗೆ ಕೇಂದ್ರವು ಸಾಕಷ್ಟು ವ್ಯವಸ್ಥೆಗಳನ್ನು ಖಚಿತಪಡಿಸಿಕೊಂಡಿದೆ


ಜಾಲತಾಣದಲ್ಲಿ ನೋಂದಣಿ, ಭೂ ದಾಖಲೆಗಳ ಏಕೀಕರಣ, ಡಿಜಿಟಲ್ ಸಂಗ್ರಹಣೆ ಕಾರ್ಯಾಚರಣೆಗಳು ಮತ್ತು ಖರೀದಿ ವ್ಯವಹಾರಗಳ ಸಂದರ್ಭದಲ್ಲಿ ರೈತರಿಗೆ ಕನಿಷ್ಠ ಮಾರಾಟ ಬೆಲೆ ಪಾವತಿಗಳ ಮೊತ್ತವನ್ನು ಜಾಲತಾಣ ಮೂಲಕ ವರ್ಗಾವಣೆಯನ್ನು ಕೇಂದ್ರ ಸರ್ಕಾರವು ಒದಗಿಸುತ್ತದೆ

ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಪಂಜಾಬ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು, ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು

Posted On: 14 OCT 2024 7:09PM by PIB Bengaluru

ಪಂಜಾಬ್‌ ನಲ್ಲಿ ಕೆ.ಎಂ.ಎಸ್. 2024-25 ರಲ್ಲಿ ನಡೆಯುತ್ತಿರುವ ಭತ್ತದ ಸಂಗ್ರಹಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಇಂದು ಪಂಜಾಬ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು.  ಪಂಜಾಬ್‌ ನಲ್ಲಿ ಭತ್ತದ ಸಂಗ್ರಹಣೆಯು ಪಂಜಾಬ್‌ನಲ್ಲಿ 1 ಅಕ್ಟೋಬರ್, 2024 ರಿಂದ ಪ್ರಾರಂಭವಾಗಿದೆ ಮತ್ತು ಸರಾಗವಾಗಿ ನಡೆಯುತ್ತಿದೆ.

ಕಳೆದ ವರ್ಷ ಕೆ.ಎಂ.ಎಸ್. 2023-24 ರಲ್ಲಿ ಪಂಜಾಬ್‌ ನಿಂದ  124.14 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಂಗ್ರಹಣೆಯನ್ನು ಮಾಡಲಾಗಿದೆ. ಕಳೆದ ವರ್ಷ ಇದು 100% ರಷ್ಟು ಸಾಧಿಸಿದೆ, ಹಾಗೂ ಯಶಸ್ವಿಯಾಗಿದೆ.  ಈ ವರ್ಷ ಕೆ.ಎಂ.ಎಸ್. 2024-25 ಗಾಗಿ, ಭಾರತ ಸರ್ಕಾರವು ಪಂಜಾಬ್‌ ನಿಂದ 185 ಲಕ್ಷ ಟನ್‌ ಗಳಷ್ಟು ಭತ್ತಕ್ಕೆ ಸಮನಾದ 124 ಲಕ್ಷ ಟನ್‌ ಗಳಷ್ಟು ಅಕ್ಕಿಯನ್ನು ಈಗಾಗಲೇ ಖರೀದಿಸಲು ಅಂದಾಜು ಮಾಡಲಾಗಿದೆ ಮತ್ತು ಭಾರತ ಸರ್ಕಾರವು ಯಾವುದೇ ನಿರ್ಬಂಧಗಳಿಲ್ಲದೆ ರಾಜ್ಯದಿಂದ ಅದನ್ನು ಸಂಗ್ರಹಿಸುತ್ತಿದೆ.

ಈ ವರ್ಷ ಭತ್ತ ಸಂಗ್ರಹಣೆಗಾಗಿ ಪಂಜಾಬ್‌ ನಲ್ಲಿ ಪ್ರಸ್ತುತ 2200 ಕ್ಕೂ ಹೆಚ್ಚು ಮಂಡಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 13.10.2024 ರಂತೆ ಒಟ್ಟು ಸುಮಾರು 7.0 ಲಕ್ಷ ಟನ್ ಭತ್ತದ ನಿರೀಕ್ಷಿತ ಖರೀದಿ ಪೈಕಿ, ಕೇಂದ್ರ ಪೂಲ್‌ ಗಾಗಿ ಈಗಾಗಲೇ ಅಂದಾಜು 6.0 ಲಕ್ಷ ಟನ್‌ ಗಳನ್ನು ಸಂಗ್ರಹಿಸಲಾಗಿದೆ. ಭತ್ತ ಸಂಗ್ರಹಣೆಯು ಎಂದಿನಂತೆ 30.11.2024 ರವರೆಗೆ ಮುಂದುವರಿಯಲಿದೆ.

ಭತ್ತ ಸಂಗ್ರಹಣೆ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ನಡೆಯಲು ಸಾಕಷ್ಟು ಶೇಖರಣಾ ವ್ಯವಸ್ಥೆ ಮಾಡಲಾಗಿದೆ.  ಸಿ.ಎಂ.ಆರ್. (ಕಸ್ಟಮ್ ಮಿಲ್ಡ್ ರೈಸ್) ಒಳಹರಿವನ್ನು ಸರಿಹೊಂದಿಸಲು, ಡಿಸೆಂಬರ್ 2024 ರ ವೇಳೆಗೆ ಪಂಜಾಬ್‌ ನಲ್ಲಿ ಲಭ್ಯವಿರುವ ವ್ಯಾಪ್ತಿಯ ಸುರಕ್ಷಿತ ಗೋಡೌನ್‌ ಗಳಿಂದ ಹಿಂದಿನ ಗೋಧಿ ಮತ್ತು ಅಕ್ಕಿಯ ದಾಸ್ತಾನುಗಳನ್ನು ಖಾಲಿ ಮಾಡುವ ಮೂಲಕ ಸುಮಾರು 40 ಲಕ್ಷ ಟನ್‌ ಗಳಷ್ಟು ಶೇಖರಣಾ ಸ್ಥಳವನ್ನು ಒದಗಿಸಲು ಈಗಾಗಲೇ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. 

ಖರೀದಿ ಕಾರ್ಯಾಚರಣೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ರೈತರ ಜಾಲತಾಣ ಮೂಲಕ ನೋಂದಣಿ, ಭೂ ದಾಖಲೆಗಳ ಏಕೀಕರಣ, ಡಿಜಿಟಲ್ ಸಂಗ್ರಹಣೆ ಕಾರ್ಯಾಚರಣೆಗಳು ಮತ್ತು ಎಂಎಸ್‌ಪಿ ಪಾವತಿಗಳ ಜಾಲತಾಣ ಮೂಲಕ ವರ್ಗಾವಣೆ ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಕೇಂದ್ರ ಸರ್ಕಾರ ಕಡೆಯಿಂದ ಮಾಡಲಾಗಿದೆ.  ಸಾಮಾನ್ಯವಾಗಿ 48 ಗಂಟೆಗಳ ಒಳಗೆ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಮಾರಾಟ ಬೆಲೆಯ ಸಂಪೂರ್ಣ ಪಾವತಿಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಭತ್ತದ ಸಂಗ್ರಹಣೆಯ ಮೇಲಿನ ಆಯೋಗದ ದರಗಳ ಪರಿಶೀಲನೆ, ವಿಂಗ್ಸ್ ಪೋರ್ಟಲ್‌ ನ ನವೀಕರಣ ಮತ್ತು ಭತ್ತದಿಂದ ಅಕ್ಕಿಯ ಔಟ್ ಟರ್ನ್ ಅನುಪಾತ (ಓಟಿಆರ್) ಸೇರಿದಂತೆ ಇತರ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.  ಗಿರಣಿದಾರರು ಹೆಚ್ಚುವರಿ ಸಾರಿಗೆ ಶುಲ್ಕ ವಿಧಿಸುವ ಬಗ್ಗೆಯೂ ಚರ್ಚಿಸಲಾಯಿತು.   ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಆನಂತರ ಪರಿಹರಿಸಲಾಗುವುದು ಎಂದು ಭರವಸೆಯನ್ನು ಕೇಂದ್ರ ಸಚಿವರು ನೀಡಿದರು.

ಕಮಿಷನ್ ಶುಲ್ಕಗಳ ದರಗಳ ಪರಿಷ್ಕರಣೆಯು ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿದೆ ಮತ್ತು ಈ ವಿಷಯದಲ್ಲಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು.  ಐಐಟಿ ಖರಗ್‌ ಪುರದಲ್ಲಿ ಓಟಿಆರ್ ಮತ್ತು ಭತ್ತದ ಡ್ರೈಯೇಜ್ ಕುರಿತು ಕೂಡ ಅಧ್ಯಯನ ನಡೆಯುತ್ತಿದೆ.

ವಿಂಗ್ಸ್ (ವೇರ್‌ಹೌಸ್ ಇನ್ವೆಂಟರಿ ನೆಟ್‌ವರ್ಕ್ ಮತ್ತು ಗವರ್ನಿಂಗ್ ಸಿಸ್ಟಮ್) ಪೋರ್ಟಲ್‌ ನಲ್ಲಿ ಡೇಟಾ/ಫೀಲ್ಡ್‌ ಗಳ ನವೀಕರಣವನ್ನು ಮಾಡಲಾಗಿದೆ ಮತ್ತು ಈ ಕ್ಷೇತ್ರದ ಎಲ್ಲಾ ಮಧ್ಯಸ್ಥಗಾರರಿಗೆ ಅದರ ಮಾಹಿತಿ ಈಗ ಲಭ್ಯವಿದೆ.

 

*****


(Release ID: 2064901) Visitor Counter : 48


Read this release in: English , Urdu , Hindi , Tamil