ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಓಲಾಗೆ ಮರುಪಾವತಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಆಯ್ಕೆಯನ್ನು ಒದಗಿಸುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ನಿರ್ದೇಶನ ನೀಡಿದೆ


ಕುಂದುಕೊರತೆ ಪರಿಹಾರ ಪ್ರಕ್ರಿಯೆಯಲ್ಲಿ ಗ್ರಾಹಕರು ಬ್ಯಾಂಕ್ ಖಾತೆ ಅಥವಾ ಕೂಪನ್ ಮೂಲಕ ಮರುಪಾವತಿಯನ್ನು ಆಯ್ಕೆ ಮಾಡಲು ಅವಕಾಶವಿರಬೇಕು

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಕ್ರಮವು ಓಲಾ ಅಪ್ಲಿಕೇಶನ್‌ ನಲ್ಲಿ ನಿರ್ಣಾಯಕ ಗ್ರಾಹಕ-ಕೇಂದ್ರಿತ ಬದಲಾವಣೆಗಳಿಗೆ ಕಾರಣವಾಗುತ್ತದೆ

Posted On: 13 OCT 2024 4:05PM by PIB Bengaluru

ಮಹತ್ವದ ನಿರ್ಧಾರವೊಂದರಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಪ್ರಮುಖ ಆನ್‌ಲೈನ್ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಓಲಾಗೆ, ಗ್ರಾಹಕರು ಕುಂದುಕೊರತೆ ಪರಿಹಾರ ಪ್ರಕ್ರಿಯೆಯಲ್ಲಿ ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಅಥವಾ ಕೂಪನ್ ಮೂಲಕ ಮರುಪಾವತಿ ಪಡೆಯುವ ಆದ್ಯತೆಯ ವಿಧಾನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ನಿರ್ದೇಶಿಸಿದೆ. ಹೆಚ್ಚುವರಿಯಾಗಿ, ಓಲಾ ಅದರ ಸೇವೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸಲು ತನ್ನ ಪ್ಲಾಟ್‌ಫಾರ್ಮ್ ಮೂಲಕ ಬುಕ್ ಮಾಡಿದ ಎಲ್ಲಾ ವಾಹನ ರೈಡ್‌ ಗಳಿಗೆ ಬಿಲ್ ಅಥವಾ ರಶೀದಿ ಅಥವಾ ಇನ್‌ವಾಯ್ಸ್ ಅನ್ನು ಗ್ರಾಹಕರಿಗೆ ಒದಗಿಸುವಂತೆ ಸೂಚನೆ ನೀಡಲಾಗಿದೆ, ಈ ಪ್ರಾಧಿಕಾರವು ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ ಅವರ ನೇತೃತ್ವದಲ್ಲಿದೆ.

ಗ್ರಾಹಕರು ಓಲಾ ಅಪ್ಲಿಕೇಶನ್‌ ನಲ್ಲಿ ದೂರು ಸಲ್ಲಿಸಿದಾಗಲೆಲ್ಲಾ, ಅದರ ಯಾವುದೇ ಪ್ರಶ್ನೆಗಳಿಲ್ಲದ ಮರುಪಾವತಿ ನೀತಿಯ ಭಾಗವಾಗಿ, ಓಲಾ ಕೇವಲ ಕೂಪನ್ ಕೋಡ್ ಅನ್ನು ಒದಗಿಸುತ್ತದೆ ಮತ್ತು ಅದನ್ನು ಮುಂದಿನ ರೈಡ್‌ ಗೆ ಬಳಸಬಹುದಾಗಿದೆ, ಆದರೆ ಗ್ರಾಹಕರ ಬ್ಯಾಂಕ್‌ ಖಾತೆಗೆ ಮರುಪಾವತಿ ಅಥವಾ ಕೂಪನ್ ನಡುವೆ ಆಯ್ಕೆ ಮಾಡಲು ಯಾವುದೇ ಸ್ಪಷ್ಟ ಆಯ್ಕೆಯನ್ನು ನೀಡಲಾಗಿಲ್ಲ ಎಂಬುದನ್ನು ಸಿಸಿಪಿಎ ಗಮನಿಸಿದೆ. ಇದು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಯಾವುದೇ ಪ್ರಶ್ನೆಗಳಿಲ್ಲದ ಮರುಪಾವತಿ ನೀತಿಯು ಈ ಸೌಲಭ್ಯವನ್ನು ಮತ್ತೊಂದು ಸವಾರಿಗಾಗಿ ಬಳಸಲು ಜನರನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನು ಗಮನಿಸಲಾಗಿದೆ.

ಇದಲ್ಲದೆ, ಗ್ರಾಹಕರು ಓಲಾದಲ್ಲಿ ಬುಕ್ ಮಾಡಲಾದ ವಾಹನ ರೈಡ್‌ ಗಳಿಗೆ ಇನ್‌ವಾಯ್ಸ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದರೆ, ಆ್ಯಪ್ 'ಓಲಾ ಅವರ ಆಟೋ ಸೇವೆಯ ನಿಬಂಧನೆ ಮತ್ತು ಷರತ್ತುಗಳಲ್ಲಿನ ಬದಲಾವಣೆಗಳಿಂದಾಗಿ ಗ್ರಾಹಕ ಇನ್‌ವಾಯ್ಸ್ ಅನ್ನು ಒದಗಿಸಲಾಗುವುದಿಲ್ಲ' ಎಂಬ ಸಂದೇಶವನ್ನು ತೋರಿಸುತ್ತದೆ ಎಂದು ಸಿಸಿಪಿಎ ಗಮನಿಸಿದೆ. ಮಾರಾಟವಾದ ಸರಕುಗಳು ಅಥವಾ ಸೇವೆಗಳಿಗೆ ಬಿಲ್ ಅಥವಾ ಇನ್‌ವಾಯ್ಸ್ ಅಥವಾ ರಶೀದಿಯನ್ನು ನೀಡದಿರುವುದು ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ 'ಅನ್ಯಾಯ ವ್ಯಾಪಾರ ಅಭ್ಯಾಸ'ವಾಗಿದೆ ಎಂದು ಗಮನಿಸಲಾಗಿದೆ.

2. ವ್ಯಾಖ್ಯಾನಗಳು

(47) "ಅನ್ಯಾಯವಾದ ವ್ಯಾಪಾರ ಅಭ್ಯಾಸ" ಎಂದರೆ ಯಾವುದೇ ಸರಕುಗಳ ಮಾರಾಟ, ಬಳಕೆ ಅಥವಾ ಪೂರೈಕೆ ಅಥವಾ ಯಾವುದೇ ಸೇವೆಯ ನಿಬಂಧನೆಯನ್ನು ಉತ್ತೇಜಿಸುವಲ್ಲಿ ಯಾವುದೇ ಅನ್ಯಾಯದ ವಿಧಾನ ಅಥವಾ ಅನ್ಯಾಯದ ಅಥವಾ ಮೋಸಗೊಳಿಸುವ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಯಾವುದೇ ವ್ಯಾಪಾರ ಅಭ್ಯಾಸವು ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಒಳಗೊಂಡಿರುತ್ತದೆ: ಯಾವುದೇ ನಡವಳಿಕೆಯನ್ನು ಒಳಗೊಂಡಿರುತ್ತದೆ , ಅವುಗಳೆಂದರೆ:-

(vii) ಮಾರಾಟವಾದ ಸರಕುಗಳು ಅಥವಾ ಸಲ್ಲಿಸಿದ ಸೇವೆಗಳಿಗೆ ನಿಗದಿತ ರೀತಿಯಲ್ಲಿ ಬಿಲ್‌ಗಳು ಅಥವಾ ನಗದು ಮೆಮೊಗಳು ಅಥವಾ ರಸೀದಿಗಳನ್ನು ನೀಡದಿರುವುದು.

ಮೇಲಿನವುಗಳ ಜೊತೆಗೆ, ಸಿಸಿಪಿಎಯ ಕ್ರಮವು ಓಲಾ ಅಪ್ಲಿಕೇಶನ್‌ ನಲ್ಲಿ ಕೆಳಗಿನ ಗ್ರಾಹಕ-ಕೇಂದ್ರಿತ ಬದಲಾವಣೆಗಳಿಗೆ ಕಾರಣವಾಗಿದೆ –

i.   ಈ ಹಿಂದೆ, ಜಾಲತಾಣದಲ್ಲಿ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯ ವಿವರಗಳು ಪ್ರಮುಖವಾಗಿ ಗೋಚರಿಸುತ್ತಿರಲಿಲ್ಲ. ಈಗ, ಜಾಲತಾಣದ ಬೆಂಬಲ ವಿಭಾಗದಲ್ಲಿ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಲಾಗಿದೆ.

ii   ರದ್ದತಿ ನೀತಿಯ ಪ್ರಕಾರ ರದ್ದತಿಗೆ ಅನುಮತಿಸಲಾದ ಸಮಯವನ್ನು ಈಗ ಬುಕ್ಕಿಂಗ್ ರೈಡ್ ಸಮಯದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ.

iii  ರದ್ದತಿ ಶುಲ್ಕದ ಮೊತ್ತವನ್ನು ಈಗ ರೈಡ್ ಬುಕಿಂಗ್ ಪುಟದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ, ಇದರಿಂದ ಗ್ರಾಹಕರು ರದ್ದುಮಾಡುವ ಮೊದಲು ರೈಡ್ ರದ್ದುಗೊಳಿಸಿದಾಗ ವಿಧಿಸಬಹುದಾದ ಮೊತ್ತದ ಬಗ್ಗೆ ಸ್ಪಷ್ಟವಾಗಿ ತಿಳಿದಿರುತ್ತದೆ.

iv.  ಚಾಲಕರಿಗೆ ಹೊಸ ಸ್ವೀಕಾರ ಪರದೆಯನ್ನು ಸೇರಿಸಲಾಗಿದೆ, ಅಲ್ಲಿ ಪಿಕಪ್ ಮತ್ತು ಡ್ರಾಪ್ ಸ್ಥಳ ಎರಡರ ವಿಳಾಸವನ್ನು ಚಾಲಕರಿಗೆ ತೋರಿಸಲಾಗುತ್ತದೆ.

v.  ಅನನುಕೂಲತೆ ಮತ್ತು ಗೊಂದಲವನ್ನು ತಪ್ಪಿಸುವ ಸಲುವಾಗಿ, ಗ್ರಾಹಕರು ಸವಾರಿಯನ್ನು ರದ್ದುಗೊಳಿಸಲು ಬಯಸುವ ಹೆಚ್ಚಿನ ಕಾರಣಗಳನ್ನು ಸೇರಿಸಲಾಗಿದೆ.

vi.  ಒಟ್ಟು ದರವನ್ನು ಒಳಗೊಂಡಿರುವ ಘಟಕಗಳ ಪಟ್ಟಿಯು ಈಗ ಮೂಲ ದರ, ಪ್ರತಿ ಕಿಮೀ ದರ, ಪೂರ್ವ ಕಾಯುವಿಕೆ ಶುಲ್ಕಗಳು ಇತ್ಯಾದಿ ಸಾರ್ವಜನಿಕವಾಗಿ ಲಭ್ಯವಿರುತ್ತವೆ

vii. ಡಿಜಿಟಲ್ ಪಾವತಿಗಳನ್ನು ತೆಗೆದುಕೊಳ್ಳಲು ಮತ್ತು ಹವಾನಿಯಂತ್ರಣ ವ್ಯವಸ್ಥೆ ಚಾಲುಗೊಳಿಸಲು ಪ್ರೋತ್ಸಾಹಿಸಲು ಚಾಲಕರಿಗೆ ಸಂವಹನಗಳನ್ನು ನೀಡಲಾಗಿದೆ.

viii.  ಚಾಲಕರಿಗೆ ಪರಿಷ್ಕೃತ ಪಾವತಿ ಚಕ್ರಗಳು, ಇದರಿಂದ ಅವರು ಶೀಘ್ರವಾಗಿ ಪಾವತಿಯನ್ನು ಪಡೆಯುತ್ತಾರೆ.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ ಸಿ ಎಚ್) ನಲ್ಲಿನ ಮಾಹಿತಿಯ ಪ್ರಕಾರ ಓಲಾ ವಿರುದ್ಧ 01.01.2024 ರಿಂದ 09.10.2024 ರವರೆಗೆ ಒಟ್ಟು 2,061 ದೂರುಗಳು ದಾಖಲಾಗಿವೆ. ದೂರುಗಳಲ್ಲಿ ಇವುಗಳು ಹೆಚ್ಚಾಗಿ ಕಂಡುಬಂದಿವೆ:

i.  ರೈಡ್ ಅನ್ನು ಬುಕ್ ಮಾಡುವ ಸಮಯದಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಿಧಿಸಲಾಗುತ್ತದೆ.

ii   ಗ್ರಾಹಕರಿಗೆ ಮೊತ್ತವನ್ನು ಮರುಪಾವತಿ ಮಾಡದಿರುವುದು.

iii  ಹೆಚ್ಚುವರಿ ಹಣವನ್ನು ಕೇಳುತ್ತಿರುವ ಚಾಲಕ.

iv. ಚಾಲಕ ಸರಿಯಾದ ಸ್ಥಳವನ್ನು ತಲುಪಲಿಲ್ಲ ಅಥವಾ ತಪ್ಪಾದ ಸ್ಥಳದಲ್ಲಿ ಡ್ರಾಪ್ ಮಾಡಿದ್ದಾನೆ.

ತನ್ನ ನಿಯಂತ್ರಕ ಕ್ರಮಗಳ ಮೂಲಕ, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸ್ಥಾಪಿತ ಕಾನೂನು ಚೌಕಟ್ಟಿಗೆ ಓಲಾ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಸಿಸಿಪಿಎ ದೃಢವಾಗಿದೆ. ಈ ಕ್ರಮಗಳು ಗ್ರಾಹಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ, ನಂಬಿಕೆಯನ್ನು  ಹೆಚ್ಚಿಸುವುದು ಮತ್ತು ಸೇವಾ ಪೂರೈಕೆದಾರರ ಹೊಣೆಗಾರಿಕೆಯನ್ನು ಸುಧಾರಿಸುವುದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಗಳಲ್ಲಿ ಎಲ್ಲಾ ಗ್ರಾಹಕರಿಗೆ ನ್ಯಾಯಯುತ ಮತ್ತು ಸುರಕ್ಷಿತ ಅನುಭವವನ್ನು ಖಾತ್ರಿಪಡಿಸುವ ಸಿಸಿಪಿಎ ಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(Release ID: 2064611) Visitor Counter : 47