ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

'ರಾಷ್ಟ್ರೀಯ ಅನುಭವ ಪ್ರಶಸ್ತಿ ಯೋಜನೆ, 2025'


ಸಾರ್ವಜನಿಕ ವಲಯದ ಬ್ಯಾಂಕುಗಳು ಸೇರಿದಂತೆ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಉದ್ಯೋಗಿಗಳನ್ನು ಮೊದಲ ಬಾರಿಗೆ, ಅನುಭವ ಪ್ರಶಸ್ತಿ ಯೋಜನೆಯಲ್ಲಿ ಸೇರಿಸಲಾಗಿದೆ

ಸಚಿವಾಲಯಗಳು/ಇಲಾಖೆಗಳ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರಿಗೆ ಅನುಭವ ಜಾಲತಾಣದಲ್ಲಿ ಬರಹ, ವ್ಯಕ್ತಿಯ ಮಾಹಿತಿ ಸಲ್ಲಿಕೆ ಮಾಡಿ ಕಳುಹಿಸಿ ಕೊಡಲು  ದಿನಾಂಕ 31 ಮಾರ್ಚ್ 2025 ಕೊನೆಯ ಆಗಿರುತ್ತದೆ

ರಾಷ್ಟ್ರೀಯ ಅನುಭವ ಪ್ರಶಸ್ತಿ ಯೋಜನೆ: ರಾಷ್ಟ್ರ ನಿರ್ಮಾಣಕ್ಕಾಗಿ ಅನುಭವಗಳ ನಿಧಿಯಾಗಿದೆ

ಈ ವರೆಗೆ, 59 ಅನುಭವ ಪ್ರಶಸ್ತಿಗಳು ಮತ್ತು 19 ತೀರ್ಪುಗಾರರ ಪ್ರಮಾಣಪತ್ರಗಳನ್ನು ನೀಡಲಾಗಿದೆ

Posted On: 07 OCT 2024 5:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ, ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಮಾರ್ಚ್, 2015 ರಲ್ಲಿ 'ಅನುಭವ' ಎಂಬ ಜಾಲತಾಣ ವೇದಿಕೆಯನ್ನು ಪ್ರಾರಂಭಿಸಿತು.  ಸರ್ಕಾರದೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳಲು 'ಅರ್ಹ' ನಿವೃತ್ತಿ ಹೊಂದುತ್ತಿರುವ/ನಿವೃತ್ತರಾದ ಸರ್ಕಾರಿ ನೌಕರರಿಗೆ ಈ ಜಾಲತಾಣ ಅನುವು ಮಾಡಿಕೊಡುತ್ತದೆ.

ಅದರ ನಂತರ, ಬರಹಗಳ ಮೂಲಕ ಅನುಭವಗಳ ಸಲ್ಲಿಕೆಯನ್ನು ಪ್ರೋತ್ಸಾಹಿಸಲು ಮತ್ತು ಹುರಿದುಂಬಿಸಲು 2015 ರಲ್ಲಿ ವಾರ್ಷಿಕ ಪ್ರಶಸ್ತಿಗಳ ಯೋಜನೆಯನ್ನು ಕೂಡಾ ರೂಪಿಸಲಾಯಿತು.  ಇಲ್ಲಿಯವರೆಗೆ, 10,886 ಬರಹಗಳನ್ನು ಪ್ರಕಟಿಸಲಾಗಿದೆ ಮತ್ತು 78 ಅತ್ಯುತ್ತಮ ಬರಹಗಳಿಗೆ ಪ್ರಶಸ್ತಿ  (59 ಅನುಭವ ಪ್ರಶಸ್ತಿಗಳು ಮತ್ತು 19 ತೀರ್ಪುಗಾರರ ಪ್ರಮಾಣಪತ್ರಗಳನ್ನು) ಹಾಗೂ ಏಳು ಅನುಭವ ಪ್ರಶಸ್ತಿಗಳನ್ನು, ನಡೆದ ಸಮಾರಂಭಗಳಲ್ಲಿ ನೀಡಲಾಗಿದೆ. 

ಭಾರತ ಸರ್ಕಾರವು ಈಗ, ರಾಷ್ಟ್ರೀಯ ಅನುಭವ ಪ್ರಶಸ್ತಿಗಳ ಯೋಜನೆ, 2025 ಅನ್ನು ಪ್ರಕಟಿಸಿದೆ. ಈ ಯೋಜನೆಯಲ್ಲಿ ಭಾಗವಹಿಸಲು, ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರು ತಮ್ಮ ಅನುಭವ ಬರಹಗಳನ್ನು ಸಲ್ಲಿಸಬೇಕಾಗುತ್ತದೆ.  ಅದರ ನಂತರ, 31.03.2025 ರವರೆಗೆ ಸಂಬಂಧಿಸಿದ ಸಚಿವಾಲಯಗಳು/ಇಲಾಖೆಗಳ ಮೌಲ್ಯಮಾಪನದ ನಂತರ ಪ್ರಕಟವಾದ ಬರಹಗಳಲ್ಲಿ ಐದು ಅನುಭವ ಪ್ರಶಸ್ತಿಗಳು ಮತ್ತು 10 ತೀರ್ಪುಗಾರರ ಪ್ರಮಾಣಪತ್ರಗಳಿಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.           

ರಾಷ್ಟ್ರೀಯ ಅನುಭವ ಪ್ರಶಸ್ತಿಗಳ ಯೋಜನೆ, 2025 ಅನುಭವ ಜಾಲತಾಣದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಾಪೂರದ ಕ್ಷಣವಾಗಿದೆ, ಕೇಂದ್ರ ಸರ್ಕಾರದ ಉದ್ಯೋಗಿಗಳ ಜೊತೆಗೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸೇರಿದಂತೆ ಕೇಂದ್ರ ಸಾರ್ವಜನಿಕ ವಲಯದ (ಸಿ.ಪಿ.ಎಸ್.ಯು) ಉದ್ಯೋಗಿಗಳು ಸಹ ರಾಷ್ಟ್ರೀಯ ಅನುಭವ ಪ್ರಶಸ್ತಿಗಳ ಯೋಜನೆ, 2025 ಗೆ ತಮ್ಮ ಬರಹಗಳನ್ನು ಸಲ್ಲಿಸುವುದಕ್ಕಾಗಿ.  ಅರ್ಹರಾಗಿರುತ್ತಾರೆ.  ಇದರೊಂದಿಗೆ, ಭಾರತದ ಬಲವಾದ ಮತ್ತು ಬೃಹತ್ ಸಾರ್ವಜನಿಕ ವಲಯದಲ್ಲಿ ಪ್ರಚಲಿತದಲ್ಲಿರುವ ಅಮೂಲ್ಯವಾದ ಅನುಭವಗಳು, ಒಳನೋಟಗಳು ಮತ್ತು ಉತ್ತಮ ಅಭ್ಯಾಸಗಳು ಅನುಭವ ಜಾಲತಾಣದಲ್ಲಿಲಭ್ಯವಿರುತ್ತದೆ.  ಇದಲ್ಲದೆ, ಪಿಂಚಣಿದಾರರು ಬರಹಗಳನ್ನು ಸಲ್ಲಿಸಬಹುದಾದ ನಿವೃತ್ತಿಯ ನಂತರದ ಒಂದು ವರ್ಷದ ಅವಧಿಯನ್ನು ಈಗ ಮೂರು ವರ್ಷಗಳವರೆಗೆ ಹೆಚ್ಚವರಿಯಾಗಿ ವಿಸ್ತರಿಸಲಾಗಿದೆ.

ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳೀಕರಿಸಲು, ವಿವಿಧ ವೇತನ ಹಂತಗಳಿಗೆ ಹೊಸ ಗುರುತು ವ್ಯವಸ್ಥೆಯನ್ನು ಕೂಡಾ ಪರಿಚಯಿಸಲಾಗಿದೆ.          

ಹೆಚ್ಚಿನ ಮಾಹಿತಿಗಾಗಿ, ಅರ್ಹ ಉದ್ಯೋಗಿಗಳು ಅಥವಾ ಪಿಂಚಣಿದಾರರು ಅನುಭವ ಜಾಲತಾಣಕ್ಕೆ (URL-http://www.pensionersportal.gov.in/anubhav) ಭೇಟಿ ನೀಡಬಹುದು. ಅಲ್ಲಿ ಸಂಬಂಧಿತ ಪ್ರಶ್ನೋತ್ತರ, ಅನುಭವವನ್ನು ಭರ್ತಿ ಮಾಡುವ ಕ್ರಮಗಳು, ಮಾರ್ಗದರ್ಶನಕ್ಕಾಗಿ ಆಯ್ದ ಬರಹಗಳು, ಅನುಭವ ಪ್ರಶಸ್ತಿ ಪುರಸ್ಕೃತರ ಕಿರುಚಿತ್ರಗಳು ಮತ್ತು  ಉಲ್ಲೇಖಕ್ಕಾಗಿ ಉಲ್ಲೇಖದ ಕಿರುಪುಸ್ತಕಗಳು - ಈ ಕುರಿತು ಮಾಹಿತಿ ಲಭ್ಯವಿದೆ.

 

*****



(Release ID: 2063015) Visitor Counter : 12


Read this release in: English , Urdu , Telugu , Tamil