ಉಕ್ಕು ಸಚಿವಾಲಯ
ಉಕ್ಕಿನ ಡಿಕಾರ್ಬೊನೈಸೇಶನ್ ಪ್ರಕ್ರಿಯೆಗಾಗಿ ಸಂಭಾವ್ಯ ಮಾರ್ಗಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಎಸ್.ಎ.ಐ.ಎಲ್. ಮತ್ತು ಬಿ.ಹೆಚ್.ಪಿ.
Posted On:
07 OCT 2024 1:53PM by PIB Bengaluru
ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಉಕ್ಕು ಉತ್ಪಾದಕ ಸಂಸ್ಥೆಯಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್.ಎ.ಐ.ಎಲ್) ಮತ್ತು ಪ್ರಮುಖ ಜಾಗತಿಕ ಸಂಪನ್ಮೂಲ ಕಂಪನಿಯಾಧ ಬ್ರೋಕನ್ ಹಿಲ್ ಪ್ರೊಪ್ರೈಟರಿ ಕಂಪನಿ (ಬಿ.ಹೆಚ್.ಪಿ) ಸಂಸ್ಥೆಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ ನಂತರ ಉಕ್ಕಿನ ತಯಾರಿಕೆಯ ಡಿಕಾರ್ಬನೈಸೇಶನ್ ಪ್ರಕ್ರಿಯೆಯನ್ನು ಬೆಂಬಲಿಸಲು ಪರಸ್ಪರ ಸಹಕರಿಸಲಿವೆ. ಈ ಸಹಯೋಗವು ಭಾರತದಲ್ಲಿ ಬ್ಲಾಸ್ಟ್ ಫರ್ನೇಸ್ ಮಾರ್ಗಕ್ಕಾಗಿ ಕಡಿಮೆ ಇಂಗಾಲದ ಉಕ್ಕಿನ ತಂತ್ರಜ್ಞಾನದ ಮಾರ್ಗಗಳನ್ನು ಉತ್ತೇಜಿಸುವಲ್ಲಿ ಎಸ್.ಎ.ಐ.ಎಲ್. ಮತ್ತು ಬಿ.ಹೆಚ್.ಪಿ. ಸಂಸ್ಥೆಗಳ ನಡುವಿನ ಸಹಕಾರವು ಒಂದು ಪ್ರಮುಖ ಹೆಜ್ಜೆಯಾಗಿದೆ.
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು (ಜಿ.ಹೆಚ್.ಜಿ) ಕಡಿಮೆ ಮಾಡಲು ವಿವಿಧ ಕಾರ್ಯತಂತ್ರಗಳನ್ನು ನಿರ್ಣಯಿಸಲು ಆರಂಭಿಕ ಅಧ್ಯಯನ ನಡೆಸಲಾಯಿತು. ಎಸ್.ಎ.ಐ.ಎಲ್. ನಿರ್ವಹಿಸುವ ಬ್ಲಾಸ್ಟ್ ಫರ್ನೇಸ್ ಗಳ (ಬಿಎಫ್) ಸಮಗ್ರ ಉಕ್ಕಿನ ಸ್ಥಾವರಗಳಲ್ಲಿ ಸಂಭಾವ್ಯ ಡಿಕಾರ್ಬೊನೈಸೇಶನ್ ಅನ್ನು ಬೆಂಬಲಿಸುವ ಹಲವಾರು ಕಾರ್ಯವಿಧಾನಗಳನ್ನು ಈಗಾಗಲೇ ಅನ್ವೇಷಿಸಲಾಗಿದೆ.
ಈ ವರ್ಕ್ಸ್ಟ್ರೀಮ್ ಗಳು ಡಿಕಾರ್ಬೊನೈಸೇಶನ್ ಪರಿವರ್ತನೆಯನ್ನು ಬೆಂಬಲಿಸಲು ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ನಿರ್ಮಿಸುವ ದೃಷ್ಟಿಕೋನದಿಂದ ಬ್ಲಾಸ್ಟ್ ಫರ್ನೇಸ್ ಗಳಿಗಾಗಿ (ಬಿಎಫ್) ಹೈಡ್ರೋಜನ್ ಮತ್ತು ಬಯೋಚಾರ್ ಬಳಕೆಯಂತಹ ಪರ್ಯಾಯ ರಿಡಕ್ಟಂಟ್ ಗಳ ಪಾತ್ರವನ್ನು ಪರಿಗಣಿಸುತ್ತವೆ. ಬ್ಲಾಸ್ಟ್ ಫರ್ನೇಸ್ನಲ್ಲಿ ಭಾರತದ ತಂತ್ರಜ್ಞಾನದ ಪ್ರಗತಿಗೆ ಮತ್ತು ಜಾಗತಿಕ ಉಕ್ಕಿನ ಉದ್ಯಮವನ್ನು ಡಿಕಾರ್ಬನೈಸ್ ಮಾಡುವಲ್ಲಿ ಈ ಒಪ್ಪಂದವು ನಿರ್ಣಾಯಕವಾಗಿದೆ. ಇದರಲ್ಲಿ ಮಧ್ಯ ಮತ್ತು ದೀರ್ಘಾವಧಿಯಲ್ಲಿ ಮತ್ತು ಪಾಲುದಾರಿಕೆಗಳು ವಿಧಾನದಲ್ಲಿ ಪ್ರಮುಖವಾಗಿವೆ.
ಎಸ್.ಎ.ಐ.ಎಲ್. ಅಧ್ಯಕ್ಷರಾದ ಶ್ರೀ ಅಮರೇಂದು ಪ್ರಕಾಶ್ ಪ್ರತಿಕ್ರಿಯಿಸಿ, “ಉಕ್ಕಿನ ಉತ್ಪಾದನೆಗೆ ಸುಸ್ಥಿರ ಮಾರ್ಗಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುವಲ್ಲಿ ಬಿ.ಹೆಚ್.ಪಿ ಯೊಂದಿಗಿನ ಈ ಸಹಯೋಗವನ್ನು ಎಸ್.ಎ.ಐ.ಎಲ್. ಎದುರು ನೋಡುತ್ತಿದೆ. ಉಕ್ಕಿನ ವಲಯವನ್ನು ಹವಾಮಾನ ಬದ್ಧತೆಗಳೊಂದಿಗೆ ಜೋಡಿಸುವ ತುರ್ತು ಅಗತ್ಯವಿದೆ. ಭಾರತದಲ್ಲಿ ಉಕ್ಕು ಉದ್ಯಮಕ್ಕೆ ನವೀನತೆಯನ್ನು ಬೆಳೆಸುವ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ಕೊಡುಗೆ ನೀಡಲು ಎಸ್.ಎ.ಐ.ಎಲ್. ಬದ್ಧವಾಗಿದೆ" ಎಂದು ಹೇಳಿದರು.
“ಎಸ್.ಎ.ಐ.ಎಲ್ ನೊಂದಿಗೆ ದೀರ್ಘಕಾಲದ ಸ್ಥಾಪಿತ ಸಂಬಂಧವನ್ನು ಬಿ.ಹೆಚ್.ಪಿ ಹೊಂದಿದೆ. ಬ್ಲಾಸ್ಟ್ ಫರ್ನೇಸ್ ಮಾರ್ಗಕ್ಕಾಗಿ ಡಿಕಾರ್ಬನೈಸೇಶನ್ ಅವಕಾಶಗಳನ್ನು ಅನ್ವೇಷಿಸಲು ಈ ಸಂಬಂಧವನ್ನು ವಿಸ್ತರಿಸಲು ಮತ್ತು ಬಲಪಡಿಸಲು ನಾವು ಸಂತೋಷಪಡುತ್ತೇವೆ. ಈ ಉದ್ಯಮವನ್ನು ಡಿಕಾರ್ಬನೈಸ್ ಮಾಡುವುದು ಮುಖ್ಯವಾಗಿದೆ. ಈಗ ಇಂಗಾಲದ ಹೊರಸೂಸುವಿಕೆಯಲ್ಲಿ ನಿಜವಾದ ಬದಲಾವಣೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುವ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯದ ಅಭಿವೃದ್ಧಿಯನ್ನು ಬೆಂಬಲಿಸಲು ಹಂಚಿಕೆಯ ಪರಿಣತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ದೀರ್ಘಾವಧಿಯಲ್ಲಿ ಹತೋಟಿಗೆ ತರಲು ನಾವು ಒಗ್ಗೂಡಬೇಕು." ಎಂದು ಬಿ.ಹೆಚ್.ಪಿ ಯ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ರಾಗ್ ಉದ್ದ್ ಹೇಳಿದರು.
*****
(Release ID: 2063011)
Visitor Counter : 38