ಕೃಷಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್ ನಲ್ಲಿ ಸುಮಾರು 23,300 ಕೋಟಿ ರೂಪಾಯಿ ಮೌಲ್ಯದ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು
ಸುಮಾರು 9.4 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ವಿತರಿಸಲಾಗಿದೆ
ಕೇಂದ್ರ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ ರೂ. 1,920 ಕೋಟಿಗಿಂತ ಹೆಚ್ಚು ಮೌಲ್ಯದ 7,500 ಕ್ಕೂ ಹೆಚ್ಚು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಾಯಿತು
ಸುಮಾರು ರೂಪಾಯಿ 1,300 ಕೋಟಿಗಳ ಸಂಯೋಜಿತ ವಹಿವಾಟು ಹೊಂದಿರುವ ಒಟ್ಟಾರೆ 9,200 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ದೇಶಕ್ಕೆ ಸಮರ್ಪಿಸಲಾಯಿತು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20,400 ಕೋಟಿ ರೂಪಾಯಿ ಮೊತ್ತದ ಕಿಸಾನ್ ಸಮ್ಮಾನ್ ನಿಧಿಯನ್ನು ರೈತರ ಖಾತೆಗಳಿಗೆ ವರ್ಗಾಯಿಸಿದ್ದಾರೆ: ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತ ಸ್ನೇಹಿ, ರೈತರ ಪರವಾದ ನಿರ್ಧಾರಗಳನ್ನು ಪ್ರತಿ ಸಚಿವ ಸಂಪುಟದಲ್ಲಿ ನಿರಂತರವಾಗಿ ತೆಗೆದುಕೊಳ್ಳಲಾಗುತ್ತಿದ್ದಾರೆ: ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಲಾಗಿದೆ, ಮಹಾರಾಷ್ಟ್ರದ ಈರುಳ್ಳಿ ಉತ್ಪಾದಿಸುವ ರೈತರಿಗೆ ಈ ಮೂಲಕ ಉತ್ತಮ ಬೆಲೆ ಸಿಗಲಿದೆ: ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕೇಂದ್ರ ಸರ್ಕಾರವು ರೈತರಿಗೆ ಅವರು ಖರೀದಿಸುವ 35 ಕೆಜಿ ಯೂರಿಯಾ ಚೀಲಕ್ಕೆ 2100 ರೂಪಾಯಿ ಮತ್ತು 50 ಕೆಜಿ ಡಿಎಪಿ ಪ್ಯಾಕ್ ಗೆ 1083 ರೂಪಾಯಿ ಸಹಾಯಧನ ನೀಡುತ್ತದೆ: ಕ
Posted On:
05 OCT 2024 5:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾಶಿಮ್ ನಲ್ಲಿ ಸುಮಾರು 23,300 ಕೋಟಿ ರೂಪಾಯಿ ಮೌಲ್ಯದ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ವಿತರಿಸುವುದು, ನಮೋ ಶೆತ್ಕರಿ ಮಹಾಸನ್ಮಾನ್ ನಿಧಿ ಯೋಜನೆಯ 5 ನೇ ಕಂತನ್ನು ಪ್ರಾರಂಭಿಸುವುದು, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ 7,500 ಕ್ಕೂ ಹೆಚ್ಚು ಯೋಜನೆಗಳ ಸಮರ್ಪಣೆ, 9,200 ರೈತ ಉತ್ಪಾದಕ ಒಕ್ಕೂಟಗಳು, ಸಂಸ್ಥೆಗಳಿಂದ ಮಹಾರಾಷ್ಟ್ರದಾದ್ಯಂತ ಒಟ್ಟು 19 ಎಂಡಬ್ಲ್ಯೂ ಸಾಮರ್ಥ್ಯ ಶಕ್ತಿ ಉತ್ಪಾದನಾ ಐದು ಸೌರ ಪಾರ್ಕ್ ಹಾಗೂ ಜಾನುವಾರು ಮತ್ತು ಸ್ಥಳೀಯ ಲಿಂಗ-ವಿಂಗಡಿಸಿದ ವೀರ್ಯ ತಂತ್ರಜ್ಞಾನಕ್ಕಾಗಿ ಏಕೀಕೃತ ಜಿನೋಮಿಕ್ ಚಿಪ್ ಅನ್ನು ಪ್ರಾರಂಭಿಸುವುದು – ಈ ಉಪಕ್ರಮಗಳಲ್ಲಿ ಸೇರಿವೆ.
ಇಂದು ಸುಮಾರು 9.5 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ -ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತಿನ ವಿತರಣೆಯನ್ನು ಮಾಡಿದ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ “ರಾಜ್ಯ ಸರ್ಕಾರವು ತನ್ನ ರೈತರಿಗೆ ದ್ವಿಗುಣ ಪ್ರಯೋಜನಗಳನ್ನು ನೀಡಲು ಶ್ರಮಿಸುತ್ತಿದೆ” ಎಂದು ಹೇಳಿದರು.
ಮಹಾರಾಷ್ಟ್ರದ ಸುಮಾರು 90 ಲಕ್ಷ ರೈತರಿಗೆ ಸರಿಸುಮಾರು ರೂಪಾಯಿ 1900 ಕೋಟಿಗಳ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿರುವ ನಮೋ ಶೆತ್ಕರಿ ಮಹಾಸನ್ಮಾನ್ ನಿಧಿ ಯೋಜನೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ನೂರಾರು ಕೋಟಿ ಮೌಲ್ಯದ ವಹಿವಾಟು ಹೊಂದಿರುವ 9,200 ರೈತ ಉತ್ಪಾದಕ ಸಂಸ್ಥೆಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.
ಭಾರತದ ರೈತರನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಸಲು ಕೈಗೊಂಡಿರುವ ಪ್ರಮುಖ ಹಲವಾರು ಉಪಕ್ರಮಗಳ ಮೇಲೆ ಬೆಳಕು ಚೆಲ್ಲುತ್ತಾ, ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು 9,200 ರೈತ ಉತ್ಪಾದಕ ಸಂಸ್ಥೆಗಳ (ಎಫ್.ಪಿ.ಒ.) ಮತ್ತು ಹಲವಾರು ಪ್ರಮುಖ ಕೃಷಿ ಮೂಲಸೌಕರ್ಯ ಯೋಜನೆಗಳ ಸಮರ್ಪಣೆಯನ್ನು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. "ಮಹಾರಾಷ್ಟ್ರದಲ್ಲಿ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರೈತರು ದುಪ್ಪಟ್ಟು ಲಾಭವನ್ನು ಪಡೆಯುತ್ತಿದ್ದಾರೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು ಹಾಗೂ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಅವರ ಸರ್ಕಾರವು ರೈತರಿಗೆ ನೀಡುತ್ತಿರುವ ಶೂನ್ಯ ವಿದ್ಯುತ್ ಬಿಲ್ ಕ್ರಮವನ್ನು ಶ್ಲಾಘಿಸಿದರು.
ಹಲವು ದಶಕಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಮಹಾರಾಷ್ಟ್ರ ಮತ್ತು ವಿದರ್ಭದ ರೈತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, “ಹಿಂದಿನ ಸರ್ಕಾರಗಳು ರೈತರನ್ನು ಶೋಚನೀಯ ಸ್ಥಿತಿಗೆ ಕೊಂಡೊಯ್ಯುದು ಮತ್ತು ಅವರನ್ನು ಇನ್ನೂ ಬಡವರನ್ನಾಗಿ ಮಾಡಿದ್ದವು. ಮಹಾರಾಷ್ಟ್ರದಲ್ಲಿ ಮಹಾ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವವರೆಗೂ ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಮತ್ತು ಈ ಯೋಜನೆಗಳ ಹಣದಲ್ಲಿ ಭ್ರಷ್ಟಾಚಾರ ನಡೆಸಲು ಬಿಡುವದಿಲ್ಲಎಂದು ಹೇಳಿದರು, ಹಾಗೂ ಇತರ ಕೆಲವು ರಾಜ್ಯಗಳಲ್ಲಿ ತಮ್ಮ ಖಾಸಗಿ ಅಜೆಂಡಾಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದಿಂದ ಕಳುಹಿಸಲಾದ ಹಣವನ್ನು ಫಲಾನುಭವಿಗಳಿಂದ ಬೇರೆಡೆಗೆ ತಿರುಗಿಸಲಾಗುತ್ತಿದೆ” ಎಂದು ಹೇಳಿದರು. ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ ಜೊತೆಗೆ ಪ್ರತ್ಯೇಕ ಹಣ ನೀಡುತ್ತಿರುವ ಮಹಾರಾಷ್ಟ್ರದ ಈಗಿನ ಮಹಾಯುತಿ ಸರ್ಕಾರದಂತೆ ಈ ಹಿಂದೆ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ನೀಡುತ್ತಿತ್ತು ಎಂಬುದನ್ನು ಉಲ್ಲೇಖಿಸಿದರು. ಅಲ್ಲಿ ಅಧಿಕಾರದಲ್ಲಿ ಹೊಸ ಸರ್ಕಾರ ಬರುವುದರೊಂದಿಗೆ ಈಗ ಅದನ್ನು ನಿಲ್ಲಿಸಲಾಗಿದೆ. ತೆಲಂಗಾಣದ ರೈತರು ಇಂದು ರಾಜ್ಯ ಸರ್ಕಾರವನ್ನು ಸಾಲ ಮನ್ನಾ ಭರವಸೆಯ ಮೇಲೆ ಪ್ರಶ್ನಿಸುತ್ತಿದ್ದಾರೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.
“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20,400 ಕೋಟಿ ರೂಪಾಯಿ ಮೌಲ್ಯದ ಕಿಸಾನ್ ಸಮ್ಮಾನ್ ನಿಧಿಯನ್ನು ರೈತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತ ಸ್ನೇಹಿಯಾಗಿದ್ದು, ಪ್ರತಿ ಸಚಿವ ಸಂಪುಟದಲ್ಲಿ ರೈತರ ಪರವಾಗಿ ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನಿಧಿ ಮಾತ್ರವಲ್ಲದೆ ಹೆಚ್ಚು ಇಳುವರಿ ನೀಡುವ ಹೊಸ 109 ಬೀಜ ತಳಿಗಳನ್ನು ರೈತರಿಗೆ ಕೇಂದ್ರ ಸಚಿವ ಶ್ರೀ ಚೌಹಾಣ್ ಅವರು ಬಿಡುಗಡೆ ಮಾಡಿದರು.
ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ತಮ್ಮ ಭಾಷಣದಲ್ಲಿ “ಸೋಯಾಬೀನ್ ಬೆಲೆ ಕುಸಿದಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡರು, ವಿದೇಶದಿಂದ ಬರುವ ಸೋಯಾಬೀನ್ ಎಣ್ಣೆಗೆ 20% ಆಮದು ಸುಂಕವನ್ನು ವಿಧಿಸಿದರು, ಮತ್ತು ಇದರ ಪರಿಣಾಮವಾಗಿ ಈಗ ಸೋಯಾಬೀನ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಈ ಮೂಲಕ ರೈತರಿಗೆ ಉತ್ತಮ ಬೆಲೆಯೂ ದೊರೆಯುತ್ತಿದೆ. ಪ್ರಧಾನಮಂತ್ರಿ ಶ್ರೀ ಮೋದಿ ಅವರು ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಿದರು ಇದರಿಂದ ಮಹಾರಾಷ್ಟ್ರದ ಈರುಳ್ಳಿ ಉತ್ಪಾದಿಸುವ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ವೆಚ್ಚದ ಮೇಲೆ 50% ಲಾಭವನ್ನು ನೀಡುವ ಮೂಲಕ ಶ್ರೀ ಮೋದಿಯವರು ಉತ್ತಮ ಕನಿಷ್ಟ ಬೆಂಬಲ ಬೆಲೆಯನ್ನು (ಎಂ.ಎಸ್.ಪಿ) ಘೋಷಿಸಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಸೋಯಾಬೀನ್ ಖರೀದಿಸಲು ಅನುಮತಿಯನ್ನೂ ನೀಡಲಾಯಿತು” ಎಂದು ಹೇಳಿದರು..
“ರೈತರಿಗೆ 35 ಕೆಜಿ ಯೂರಿಯಾ ಚೀಲದ ಬೆಲೆ 2366 ರೂ. ಆಗಿದೆ , ಇದರಲ್ಲಿ 2100 ರೂ ಸಬ್ಸಿಡಿ ನೀಡಲಾಗುತ್ತದೆ, ಹಾಗೂ ರೈತರಿಗೆ ಕೇವಲ 266 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ 50 ಕೆಜಿ ಡಿಎಪಿ ಪ್ಯಾಕ್ ಮೂಲ ಬೆಲೆ ರೂಪಾಯಿ 2433 ಆಗಿದೆ, ಸರ್ಕಾರವು ಇದಕ್ಕೆ 1083 ರೂ. ಸಬ್ಸಿಡಿ ನೀಡುತ್ತದೆ. ಮತ್ತು ಇದನ್ನು ರೈತರಿಗೆ ಕೇವಲ 1350 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ” ಎಂದು ಶ್ರೀ ಚೌಹಾಣ್ ಅವರು ಹೇಳಿದರು.
ಹಿನ್ನೆಲೆ
ರೈತರ ಸಬಲೀಕರಣಕ್ಕೆ ಅವರ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಸುಮಾರು 9.4 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತನ್ನು ವಿತರಿಸಿದರು. 18 ನೇ ಕಂತಿನ ಬಿಡುಗಡೆಯೊಂದಿಗೆ, ಪ್ರಧಾನಮಂತ್ರಿ-ಕಿಸಾನ್ ಅಡಿಯಲ್ಲಿ ರೈತರಿಗೆ ಬಿಡುಗಡೆ ಮಾಡಲಾದ ಒಟ್ಟು ಹಣದ ಮೊತ್ತ ಸುಮಾರು 3.45 ಲಕ್ಷ ಕೋಟಿ ರೂಆಗುತ್ತದೆ. ಇದಲ್ಲದೆ, ಪ್ರಧಾನಮಂತ್ರಿಯವರು ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ನಮೋ ಶೆತ್ಕರಿ ಮಹಾಸನ್ಮಾನ್ ನಿಧಿ ಯೋಜನೆಯ 5 ನೇ ಕಂತನ್ನು ಬಿಡುಗಡೆ ಮಾಡಿದರು.
ಪ್ರಧಾನಮಂತ್ರಿ ಅವರು ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಅಡಿಯಲ್ಲಿ 1,920 ಕೋಟಿ ರೂಪಾಯಿ ಮೌಲ್ಯದ 7,500 ಕ್ಕೂ ಹೆಚ್ಚು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕಸ್ಟಮ್ ನೇಮಕ ಕೇಂದ್ರಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು, ಗೋದಾಮುಗಳು, ವಿಂಗಡಣೆ , ಸಂಗ್ರಹಣೆ ಮತ್ತು ಗ್ರೇಡಿಂಗ್ ಘಟಕಗಳು, ಕೋಲ್ಡ್ ಸ್ಟೋರೇಜ್ ಯೋಜನೆಗಳು, ಮತ್ತು ಸುಗ್ಗಿಯ ನಂತರದ ನಿರ್ವಹಣೆ ಯೋಜನೆಗಳು ಮುಂತಾದವಗಳು ಈ ಉಪಕ್ರಮಗಳ ಪ್ರಮುಖ ಯೋಜನೆಗಳಲ್ಲಿ ಸೇರಿವೆ.
ಈ ಸಂದರ್ಭದಲ್ಲಿ ಸುಮಾರು ರೂಪಾಯಿ 1,300 ಕೋಟಿಗಳ ಒಟ್ಟು ವಹಿವಾಟು ಹೊಂದಿರುವ 9,200 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಒ.) ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
*****
(Release ID: 2062613)
Visitor Counter : 94