ಹಣಕಾಸು ಸಚಿವಾಲಯ
ಕೇಂದ್ರ ಸಚಿವ ಸಂಪುಟ ಸಭೆಯ ಇತ್ತೀಚಿನ ಅನುಮೋದನೆಯೊಂದಿಗೆ ಚೆನ್ನೈ ಮೆಟ್ರೋ ರೈಲು ಯೋಜನೆ ಹಂತ - 2 ಅನ್ನು ‘ಕೇಂದ್ರ ವಲಯ’ ಯೋಜನೆಯಾಗಿ ಪರಿಗಣಿಸಿ, ಕೇಂದ್ರ ಸರ್ಕಾರವು ಅಂದಾಜು ವೆಚ್ಚದ ಸುಮಾರು 65 ಪ್ರತಿಶತದಷ್ಟು ಹಣವನ್ನು ನೀಡುತ್ತದೆ
Posted On:
05 OCT 2024 4:08PM by PIB Bengaluru
ಕೇಂದ್ರ ಸಚಿವ ಸಂಪುಟವು ಚೆನ್ನೈ ಮೆಟ್ರೋ ರೈಲು ಯೋಜನೆ ಹಂತ - 2 ಅನ್ನು 'ಕೇಂದ್ರ ವಲಯ' ಯೋಜನೆಯಾಗಿ ಪರಿಗಣಿಸಿ ಇತ್ತೀಚೆಗೆ ಒಟ್ಟು ಅಂದಾಜು ರೂಪಾಯಿ 63,246 ಕೋಟಿ ಅನುದಾನ ಮಂಜೂರು ಮಾಡಿದೆ.
ಇಲ್ಲಿಯವರೆಗೆ, ಯೋಜನೆಯನ್ನು 'ರಾಜ್ಯ ವಲಯ' ಯೋಜನೆಯಾಗಿ ಅನುಷ್ಠಾನಗೊಳಿಸಲಾಗುತ್ತಿತ್ತು ಪ್ರಾಥಮಿಕವಾಗಿ ಮೆಟ್ರೋ ಯೋಜನಾ ಹಣಕಾಸು ನಲ್ಲಿ ಅಂದಾಜು ಯೋಜನಾ ವೆಚ್ಚದ ಸುಮಾರು 90 ಪ್ರತಿಶತದಷ್ಟು ಹೊಂದಿಸುವ ಹೊಣೆಗಾರಿಕೆ ತಮಿಳುನಾಡು ಸರ್ಕಾರದ ಮೇಲೆ ಇರುತ್ತದೆ. ಮೆಟ್ರೋ ರೈಲು ನೀತಿ 2017 ರ ಪ್ರಕಾರ ಭೂಮಿ ವೆಚ್ಚ ಮತ್ತು ಇತರ ಕೆಲವು ವಸ್ತುಗಳನ್ನು ಹೊರತುಪಡಿಸಿ ಯೋಜನಾ ವೆಚ್ಚದ ಶೇಕಡಾ 10 ರಷ್ಟು ಹಣವನ್ನು ನೀಡುವುದು ಕೇಂದ್ರ ಸರ್ಕಾರದ ಪಾತ್ರವಾಗಿತ್ತು. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಏಜೆನ್ಸಿಗಳಿಂದ ನೇರವಾಗಿ ರಾಜ್ಯ ಸರ್ಕಾರಕ್ಕೆ ಸಾಲವಾಗಿ 32,548 ಕೋಟಿ ರೂಪಾಯಿ ನೀಡಿದ್ದು, ಅದರಲ್ಲಿ ಈವರೆಗೆ ರೂಪಾಯಿ 6,100 ಕೋಟಿ ಮಾತ್ರ ಬಳಕೆಯಾಗಿದೆ.
ಇತ್ತೀಚಿನ ಅನುಮೋದನೆಯೊಂದಿಗೆ, ಕೇಂದ್ರ ಸರ್ಕಾರವು ಈಗ ಚೆನ್ನೈ ಮೆಟ್ರೋ ಹಂತ 2 ರ ಅಂದಾಜು ವೆಚ್ಚದ ಸುಮಾರು 65 ಪ್ರತಿಶತದಷ್ಟು ಹಣವನ್ನು ನೀಡಲಿದೆ. ಈ ಹಣಕಾಸು ಸಂಪೂರ್ಣ ಅಗತ್ಯವಿರುವ ಅಧೀನ ಸಾಲದ ರೂಪಾಯಿ 33,593 ಕೋಟಿ ಜೊತೆಗೆ ಇಕ್ವಿಟಿ ರೂ. 7,425 ಕೋಟಿ.ಯಲ್ಲಿ ಸೇರಿದೆ
ಯೋಜನೆಯ ಅಂದಾಜು ವೆಚ್ಚದ ಉಳಿದ ಶೇ.35 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಲಿದೆ.
ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳಿಂದ ಪಡೆದ ಸಾಲಗಳನ್ನು ಕೇಂದ್ರ ಸರ್ಕಾರಕ್ಕೆ ಸಾಲವೆಂದು ಪರಿಗಣಿಸಲಾಗುವುದು ಮತ್ತು ಕೇಂದ್ರ ಸರ್ಕಾರದ ಬಜೆಟ್‌ನಿಂದ ನೇರವಾಗಿ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (ಸಿ.ಎಂ.ಆರ್.ಎಲ್.) ಸಂಸ್ಥೆಗೆ ಒದಗಿಸಲಾಗುತ್ತದೆ.
ಕೇಂದ್ರದಿಂದ ಯೋಜನೆಗೆ ಈ ಅನುಮೋದನೆ ನೀಡುವ ಮೊದಲು, ಯೋಜನೆಗೆ ಅಗತ್ಯವಿರುವ ಸಾಲದ ಹಣಕಾಸು ಒದಗಿಸುವ ಅಥವಾ ವ್ಯವಸ್ಥೆ ಮಾಡುವ ಜವಾಬ್ದಾರಿ ಸಂಪೂರ್ಣ ರಾಜ್ಯ ಸರ್ಕಾರದ ಮೇಲಿತ್ತು.
ಕೇಂದ್ರ ಸಚಿವ ಸಂಪುಟದ ಅನುಮೋದನೆಯು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ರೂಪಾಯಿ 33,593 ಕೋಟಿಯಷ್ಟು ಆರ್ಥಿಕ ಸಂಪನ್ಮೂಲವನ್ನು ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಅವಕಾಶ ನೀಡುತ್ತದೆ
ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಅನುಸಾರವಾಗಿ, ಕೇಂದ್ರ ಹಣಕಾಸು ಸಚಿವಾಲಯವು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಏಜೆನ್ಸಿಗಳಾದ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಮತ್ತು ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಅನ್ನು ಸಾಲ ಮತ್ತು ಯೋಜನೆಯ ಒಪ್ಪಂದಗಳು ಮತ್ತು ಮರುಪಾವತಿ ಸಂಬಂಧಿತ ದಾಖಲೆಗಳನ್ನು ಮರುಸಂಧಾನಕ್ಕಾಗಿ ಸಂಪರ್ಕಿಸುತ್ತದೆ :
1. ಸಾಲಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಸಾಲವೆಂದು ಪರಿಗಣಿಸಲಾಗುತ್ತದೆ , ಇದು ಈ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ನೀಡುವ ಸಾಲ ಅಲ್ಲ.
2. ಸಾಲದ ಒಳಹರಿವಿನ ಮಾರ್ಗವನ್ನು ಆಯಾ ಏಜೆನ್ಸಿಯಿಂದ ಕೇಂದ್ರ ಸರ್ಕಾರಕ್ಕೆ ಬರುವಂತೆ ಮಾಡಲಾಗಿದೆ ಮತ್ತು ಕೇಂದ್ರ ಸರ್ಕಾರದ ಬಜೆಟ್‌ನಿಂದ ನೇರವಾಗಿ ಚೆನೈ ಮೆಟ್ರೋಗೆ ಪಾಸ್-ಥ್ರೂ ಸಹಾಯವಾಗಿ ನೀಡಲಾಗುತ್ತದೆ.
3. ಆಯಾ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ ನೀಡುತ್ತಿರುವ ಅಸ್ತಿತ್ವದಲ್ಲಿರುವ ಸಾಲವನ್ನು ಈ ವರೆಗೆ ರಾಜ್ಯ ಸರ್ಕಾರದ ಬಜೆಟ್ ನಿಂದ ರಾಜ್ಯ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಬಂದು ಆನಂತರ ಅದು ಚೆನೈ ಮೆಟ್ರೋ ಸಂಸ್ಥೆಗೆ ನೀಡಲಾಗುತ್ತಿತ್ತು. ಈಗ ಈ ಮಾರ್ಗ ಬದಲಾಯಿಸಿ ಕೇಂದ್ರ ಸರ್ಕಾರ ತಾನು ಸಾಲವಾಗಿ ಪಡೆದ ಹಣವನ್ನು ನೇರವಾಗಿ ಚೆನೈ ಮೆಟ್ರೋ ಸಂಸ್ಥೆಗೆ ನೀಡುತ್ತದೆ
ಈ ಮೂಲಕ ಕಾರ್ಯನಿರ್ವಹಣೆಯನ್ನು ಪ್ರಾಜೆಕ್ಟ್ ಎಕ್ಸಿಕ್ಯೂಟಿಂಗ್ ಏಜೆನ್ಸಿಯಾಗಿ ರಾಜ್ಯ ಸರ್ಕಾರದ ಬದಲಿಗೆ ಚೆನೈ ಮೆಟ್ರೋವನ್ನೇ ಪ್ರಾಜೆಕ್ಟ್ ಎಕ್ಸಿಕ್ಯೂಟಿಂಗ್ ಏಜೆನ್ಸಿ ಎಂದು ಗೊತ್ತುಪಡಿಸಲಾಗಿದೆ. ಸಾಲ ಮತ್ತು ಯೋಜನಾ ಒಪ್ಪಂದಗಳು ಮತ್ತು ಸಂಬಂಧಿತ ದಾಖಲೆಗಳಿಗೆ ಈ ಬದಲಾವಣೆಗಳ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಮತ್ತು ರಾಜ್ಯ ಸರ್ಕಾರದ ಸಮನ್ವಯದಲ್ಲಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಸಾಲ ಮರುಪಾವತಿಯ ಜವಾಬ್ದಾರಿ ಚೆನೈ ಮೆಟ್ರೋ ಕಂಪನಿಯ ಮೇಲಿರುತ್ತದೆ.
ಮರುಪಾವತಿಯು ಯೋಜನೆಯು ಪೂರ್ಣಗೊಂಡ ನಂತರ ಹೆಚ್ಚು ಅಥವಾ ಕಡಿಮೆ ಸಾಮಾನ್ಯವಾಗಿ ಕನಿಷ್ಠ ಐದು ವರ್ಷಗಳ ಬಿಡುಅವಧಿಯ ನಂತರ ಪ್ರಾರಂಭವಾಗುತ್ತದೆ.
ಹಾಗೂ, ಚೆನೈ ಮೆಟ್ರೋ ಚಾಲನೆ ಪ್ರಾರಂಭವಾದ ನಂತರ ಒಂದು ವೇಳೆ ಚೆನೈ ಮೆಟ್ರೋ ಸಂಸ್ಥೆ ಆ ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲದಿದ್ದಲ್ಲಿ, ಆ ವರ್ಷಗಳಲ್ಲಿ ಸಾಲ ಮರುಪಾವತಿಯನ್ನು ಸಕ್ರಿಯಗೊಳಿಸಲು ಚೆನೈ ಮೆಟ್ರೋ ಕಂಪನಿಗೆ ಹಣಕಾಸಿನ ನೆರವು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
*****
(Release ID: 2062475)
Visitor Counter : 30