ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಅಹಮದಾಬಾದ್ ನಲ್ಲಿ 140 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಪೊಲೀಸ್ ಆಯುಕ್ತರ ಕಚೇರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಉದ್ಘಾಟಿಸಿದರು


ಹೊಸ ಕಟ್ಟಡವು ಹೊಸ ಕಾರ್ಯ ವ್ಯವಸ್ಥೆಯನ್ನು ಸ್ಥಾಪಿಸುವ ಅಹಮದಾಬಾದ್ ಪೊಲೀಸರ ಪ್ರಯತ್ನದ ಅಂಗ

ಕಟ್ಟಡದಲ್ಲಿ 'ಜಂಟಿ ವಿಚಾರಣಾ ಕೇಂದ್ರ', 'ತೇರಾ ತುಜ್ಕೊ ಅರ್ಪನ್' ಪೋರ್ಟಲ್ ಉದ್ಘಾಟಿಸಲಾಯಿತು ಮತ್ತು 'ಸೈಬರ್ ಸಾಥಿ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು

ಕ್ರಿಯಾಶೀಲ ಪೊಲೀಸ್ ವ್ಯವಸ್ಥೆಗಾಗಿ ಸಕ್ರಿಯ, ಮುನ್ಸೂಚಕ ಮತ್ತು ವೈಜ್ಞಾನಿಕ ವಿಧಾನದ ಪರಿಕಲ್ಪನೆಯನ್ನು ಮೋದಿ ಜೀ ಮುಂದಿಟ್ಟಿದ್ದಾರೆ

'ಇ-ಗುಜ್ ಕಾಪ್', ದೇಹದ ಮೇಲೆ  ಧರಿಸುವ ಕ್ಯಾಮೆರಾ ಮತ್ತು 'ವಿಶ್ವಾಸ್' ಯೋಜನೆಯ ರೂಪದಲ್ಲಿ ಗುಜರಾತ್ ಪೊಲೀಸರ ಅನೇಕ ಆವಿಷ್ಕಾರಗಳು ದೇಶದ ಅತ್ಯಂತ ಆಧುನಿಕ ಪೊಲೀಸ್ ಪಡೆ ಎಂಬ ಗುರುತನ್ನು ಸ್ಥಾಪಿಸಿವೆ

ಮಾದಕವಸ್ತುಗಳ ವಿರುದ್ಧ ಗುಜರಾತ್ ಪೊಲೀಸರ ಅಭಿಯಾನವು ಅನುಕರಣೀಯವಾಗಿದೆ

ಮೂರು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯು ಕಾಲಮಿತಿಯಲ್ಲಿ ನ್ಯಾಯ ಒದಗಿಸಲು ನ್ಯಾಯಾಂಗ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುತ್ತದೆ

Posted On: 03 OCT 2024 10:19PM by PIB Bengaluru

ಗುಜರಾತ್ ಅಹಮದಾಬಾದ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಪೊಲೀಸ್ ಆಯುಕ್ತರ ಕಚೇರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಹ್ಮದಾಬಾದ್ ನಲ್ಲಿ ಪೊಲೀಸ್ ಆಯುಕ್ತರ ಕಚೇರಿಯ ಹೊಸ ಕಟ್ಟಡವು ಕಟ್ಟಡದ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೆ, ಅಹಮದಾಬಾದ್ ಪೊಲೀಸರಿಗೆ ಹೊಸ ಕಾರ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು.

ಸುಮಾರು 140 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಮತ್ತು ಸುಮಾರು 18,000 ಚದರ ಮೀಟರ್ ಪ್ರದೇಶವನ್ನು ಒಳಗೊಂಡಿರುವ ಏಳು ಅಂತಸ್ತಿನ ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿಯ ದೇಹ ಕ್ಷಮತೆಗಾಗಿ  ಜಿಮ್, ನಾಗರಿಕರಿಗೆ ಪಾರ್ಕಿಂಗ್, ಸಿಸಿಟಿವಿ ಕ್ಯಾಮೆರಾಗಳು, ಅಗ್ನಿ ಸುರಕ್ಷತಾ ಉಪಕರಣಗಳು ಮತ್ತು ಕೇಂದ್ರೀಕೃತ ಹವಾನಿಯಂತ್ರಣದಂತಹ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಆಧುನಿಕ ಕಟ್ಟಡವು ಭದ್ರತೆಯನ್ನು ಖಾತ್ರಿಪಡಿಸುವುದಲ್ಲದೆ, ಅಹ್ಮದಾಬಾದ್ ಭದ್ರತೆಗಾಗಿ ಆರಂಭದಿಂದ ಇಂದಿನವರೆಗೆ ಕೈಗೊಂಡ ಕ್ರಮಗಳನ್ನು ಪ್ರದರ್ಶಿಸುವ ಪೊಲೀಸ್ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ ಎಂದು ಅವರು ಉಲ್ಲೇಖಿಸಿದರು.

ನಾಗರಿಕರನ್ನು ರಕ್ಷಿಸಲು ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ನೆನಪಿಗಾಗಿ ಇಲ್ಲಿ ಸುಂದರವಾದ ಸ್ಮಾರಕವನ್ನು ಕೂಡಾ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಸಾರ್ವಜನಿಕ ಅನುಕೂಲ/ಸೌಲಭ್ಯ ಕೇಂದ್ರ ಮತ್ತು ನಿಯಂತ್ರಣ ಕೊಠಡಿಯನ್ನು ಸಹ ರಚಿಸಲಾಗಿದೆ, ಇದು ಅಹಮದಾಬಾದಿನ ಪ್ರತಿಯೊಂದು ಮೂಲೆ ಮೂಲೆಯನ್ನು ಒಳಗೊಳ್ಳುತ್ತದೆ ಮತ್ತು ಇಡೀ ನಗರದ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದವರು ಹೇಳಿದರು.

ಹೊಸ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡದಲ್ಲಿ 'ಜಂಟಿ ವಿಚಾರಣೆ ಕೇಂದ್ರ' ಮತ್ತು 'ತೇರಾ ತುಜ್ಕೊ ಅರ್ಪನ್' ಪೋರ್ಟಲ್ ಉದ್ಘಾಟನೆ ಮತ್ತು 'ಸೈಬರ್ ಸಾಥಿ' ಪುಸ್ತಕದ ಬಿಡುಗಡೆಯೂ ನಡೆಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಮೊದಲ ಎರಡು ಉಪಕ್ರಮಗಳು ಸೈಬರ್ ಅಪರಾಧದಿಂದ ಪೀಡಿತ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಕಳೆದುಹೋದ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ. ಗಲಭೆಗಳು, ಭಯೋತ್ಪಾದಕ ದಾಳಿಗಳು ಮತ್ತು ಅಶಾಂತಿಯ ಇತರ ಸಂದರ್ಭಗಳಲ್ಲಿ ಕೇಂದ್ರ ಏಜೆನ್ಸಿಗಳು ಮತ್ತು ಅಹಮದಾಬಾದ್ ಪೊಲೀಸರು ಸರಿಯಾದ ಮತ್ತು ವೈಜ್ಞಾನಿಕ ರೀತಿಯಲ್ಲಿ ವಿಚಾರಣೆ ನಡೆಸಲು 'ಜಂಟಿ ವಿಚಾರಣಾ ಕೇಂದ್ರ' ಸ್ಥಾಪಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಕಳೆದ 10 ವರ್ಷಗಳಲ್ಲಿ ಭಾರತದ ಆಂತರಿಕ ಭದ್ರತಾ ಭೂದೃಶ್ಯವು ಗಮನಾರ್ಹವಾಗಿ ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವರು ವಿವರಿಸಿದರು. ಒಂದು ದಶಕದ ಹಿಂದೆ, - ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ ಪ್ರದೇಶಗಳು ದೇಶದ ಮೂರು ಪ್ರಮುಖ ಹಾಟ್ ಸ್ಪಾಟ್ ಗಳಾಗಿದ್ದವು. ಅಲ್ಲಿ ಬಾಂಬ್ ಸ್ಫೋಟಗಳು ಬಹಳ ಸಾಮಾನ್ಯವಾಗಿದ್ದವು. ಇದನ್ನು ಸಾಮಾನ್ಯವೆಂದು ಪರಿಗಣಿಸಲಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ ಶಾಶ್ವತ ಮತ್ತು ವ್ಯವಸ್ಥಿತ ಕ್ರಮಗಳು ಹಾಗು ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಕೋನದಿಂದ ಸಮರ್ಪಿತ/ಬದ್ಧತಾಪೂರ್ವಕ  ಕೆಲಸದಿಂದಾಗಿ, ಈ ಮೂರು ಹಾಟ್ ಸ್ಪಾಟ್ ಗಳಲ್ಲಿ ಹಿಂಸಾಚಾರವು ಶೇಕಡಾ 70 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು. ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮರಣ ಪ್ರಮಾಣವನ್ನು ಶೇಕಡಾ 72 ರಷ್ಟು ಕಡಿಮೆ ಮಾಡಲು ದೇಶಾದ್ಯಂತದ ಭದ್ರತಾ ಸಂಸ್ಥೆಗಳು, ರಾಜ್ಯ ಪೊಲೀಸ್ ಪಡೆಗಳೊಂದಿಗೆ ಜೊತೆಗೂಡಿ ಕೆಲಸ ಮಾಡಿವೆ ಎಂದೂ ಶ್ರೀ ಶಾ ಹೇಳಿದರು. ಈ ಯಶಸ್ಸು ಮುಂಬರುವ ದಿನಗಳಲ್ಲಿ 'ನಕ್ಸಲ್ ಮುಕ್ತ ಭಾರತ' ಮತ್ತು 'ಭಯೋತ್ಪಾದನೆ ಮುಕ್ತ ಭಾರತ'ವನ್ನು  ನನಸು ಮಾಡಲಿದೆ  ಎಂಬುದನ್ನು ತೋರಿಸುತ್ತದೆ ಎಂದೂ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೊಲೀಸ್ ಸಂಸ್ಕೃತಿಯಲ್ಲಿ ಹಲವಾರು ಬದಲಾವಣೆಗಳನ್ನು ತರಲು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ನುಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರಿಯಾಶೀಲ ಪೊಲೀಸ್ ವ್ಯವಸ್ಥೆಗಾಗಿ ಸಕ್ರಿಯ, ಮುನ್ಸೂಚನೆ ಮತ್ತು ವೈಜ್ಞಾನಿಕ ವಿಧಾನದ ಪರಿಕಲ್ಪನೆಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ರಚಿಸುವ ಮೂಲಕ ಭಾರತವು ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಆಮೂಲಾಗ್ರವಾಗಿ ಕೂಲಂಕಷವಾಗಿ ಪರಿಶೀಲಿಸಿದೆ ಮತ್ತು ಅವುಗಳ ಅನುಷ್ಠಾನ ಈಗಾಗಲೇ ದೇಶಾದ್ಯಂತ ಪ್ರಾರಂಭವಾಗಿದೆ ಎಂದು ಶ್ರೀ ಶಾ ಉಲ್ಲೇಖಿಸಿದರು. ಈ ಕಾನೂನುಗಳಲ್ಲಿ, ಅಪರಾಧಗಳನ್ನು ಪರಿಹರಿಸಲು, ಅಪರಾಧಗಳನ್ನು ತಡೆಗಟ್ಟಲು, ತ್ವರಿತವಾಗಿ ಕಾನೂನು ಕ್ರಮವನ್ನು ಪೂರ್ಣಗೊಳಿಸಲು ಮತ್ತು ಸಾಧ್ಯವಾದಷ್ಟು ಅಪರಾಧಿಗಳನ್ನು ಶಿಕ್ಷಿಸಲು ತಂತ್ರಜ್ಞಾನದ ಬಳಕೆಗೆ ನಿಬಂಧನೆಗಳನ್ನು/ಪ್ರಸ್ತಾವನೆಗಳನ್ನು ಮಾಡಲಾಗಿದೆ. ಮುಂದಿನ 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದ ತಂತ್ರಜ್ಞಾನಗಳನ್ನು ಗಮನದಲ್ಲಿಟ್ಟು ಕಾನೂನುಗಳನ್ನು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಮುಂದಿನ ಶತಮಾನದಲ್ಲಿ ಕಾನೂನುಗಳನ್ನು ಬದಲಾಯಿಸುವ ಅಗತ್ಯವಿಲ್ಲ. ತನಿಖೆ, ಕಾನೂನು ಕ್ರಮಗಳು ಮತ್ತು ಇತರ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ವಿಳಂಬವನ್ನು ತಡೆಗಟ್ಟಲು, ನ್ಯಾಯಾಂಗ ಪ್ರಕ್ರಿಯೆಯ 83 ಸಂದರ್ಭಗಳಲ್ಲಿ ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರ ಮೇಲೆ ಸಮಯ ಮಿತಿಗಳನ್ನು ವಿಧಿಸಲು ನಿರ್ಧರಿಸಲಾಗಿದೆ ಎಂದೂ ಅವರು ವಿವರಿಸಿದರು.

ಮೂರು ಹೊಸ ಕಾನೂನುಗಳ ಅನುಷ್ಠಾನದ ನಂತರ, ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದು ಜಾರಿಗೆ ಬಂದ ನಂತರ, ಮುಂದಿನ ಮೂರು ವರ್ಷಗಳಲ್ಲಿ, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ. ಹೊಸ ಕಾನೂನುಗಳು ಜಾರಿಗೆ ಬರುವುದರೊಂದಿಗೆ, ಎಫ್ಐಆರ್ ದಾಖಲಿಸುವುದರಿಂದ ಹಿಡಿದು ಸುಪ್ರೀಂ ಕೋರ್ಟಿನಿಂದ  ನ್ಯಾಯದವರೆಗಿನ ನ್ಯಾಯದ ಸಂಪೂರ್ಣ ಪ್ರಕ್ರಿಯೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ, ಇದು ಜನರಿಗೆ ಸಮಯೋಚಿತ/ಸಕಾಲಿಕ ನ್ಯಾಯವನ್ನು ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಯನ್ನು ಜಾಗತಿಕವಾಗಿ 11 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಏರಿಸಿದ್ದಾರೆ ಮತ್ತು 2027 ರ ವೇಳೆಗೆ ನಾವು ಖಂಡಿತವಾಗಿಯೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂತಹ ನಿರ್ಣಾಯಕ ಸಮಯದಲ್ಲಿ, ಸೈಬರ್ ಭದ್ರತೆ ಸೇರಿದಂತೆ ನಮ್ಮ ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳಿಗೆ ದೃಢವಾದ ಕಾನೂನು ಬೆಂಬಲದ ಅಗತ್ಯವಿದೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳು ಪೊಲೀಸ್ ಅಧಿಕಾರಿಗಳಿಗೆ ಅವರ ಪ್ರಯತ್ನಗಳಲ್ಲಿ ಬಲವಾದ ಬೆಂಬಲವನ್ನು ನೀಡುತ್ತವೆ ಎಂದರು.

ಗುಜರಾತ್ ಪೊಲೀಸರು ತಮ್ಮ ಭವ್ಯ ಇತಿಹಾಸದುದ್ದಕ್ಕೂ ಹಲವಾರು ತಾಂತ್ರಿಕ ಆವಿಷ್ಕಾರಗಳನ್ನು ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 'ಇ-ಗುಜ್ ಕಾಪ್', 'ದೇಹದ ಮೇಲೆ  ಧರಿಸುವ ಕ್ಯಾಮೆರಾಗಳು' ಮತ್ತು 'ವಿಶ್ವಾಸ್ ಪ್ರಾಜೆಕ್ಟ್' ನಂತಹ ಉಪಕ್ರಮಗಳು ಗುಜರಾತ್ ಪೊಲೀಸರಿಗೆ ದೇಶದ ಅತ್ಯಂತ ಆಧುನಿಕ ಪೊಲೀಸ್ ಪಡೆಗಳಲ್ಲಿ ಒಂದಾಗಿ ತಮ್ಮನ್ನು  ಸ್ಥಾಪಿಸಿಕೊಳ್ಳಲು  ಸಹಾಯ ಮಾಡಿವೆ, ಇದು ಹೆಮ್ಮೆಯ ವಿಷಯವಾಗಿದೆ. ಗುಜರಾತ್ ಪೊಲೀಸರು ಮಾದಕವಸ್ತುಗಳ ವಿರುದ್ಧ ದೃಢವಾದ ಅಭಿಯಾನವನ್ನು ಪ್ರಾರಂಭಿಸಿದ ರೀತಿ ಶ್ಲಾಘನೀಯವಾಗಿದೆ ಮತ್ತು ಈಗ ಅದರ ತನಿಖೆಗೆ ದೇಶಾದ್ಯಂತ ಉದಾಹರಣೆಯಾಗಿ ಅವರನ್ನು ಉಲ್ಲೇಖಿಸಲಾಗುತ್ತಿದೆ ಎಂದೂ  ಸಚಿವರು   ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047ರ ವೇಳೆಗೆ 'ವಿಕ್ಷಿತ ಭಾರತ'ದ ಕನಸು ಕಂಡಿದ್ದಾರೆ ಎಂದೂ ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಗುಜರಾತ್ ಸದಾ ಪ್ರಗತಿಪರ ರಾಜ್ಯವಾಗಿದೆ. 1980 ಮತ್ತು 1990 ರ ದಶಕಗಳಲ್ಲಿ ಇದೇ ಗುಜರಾತ್ ಆಗಾಗ್ಗೆ ಕರ್ಫ್ಯೂಗಳನ್ನು ಅನುಭವಿಸುತ್ತಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ ಮತ್ತು ರಾಜ್ಯದಲ್ಲಿ ಸುರಕ್ಷಿತ ವಾತಾವರಣವನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.

 

*****



(Release ID: 2061883) Visitor Counter : 8