ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಮಹಾತ್ಮಾ ಗಾಂಧಿಯವರ ಜನ್ಮದಿನವಾದ 2024ರ ಅಕ್ಟೋಬರ್ 2ರಂದು ಜಾರ್ಖಂಡ್ ನ ಹಜಾರಿಬಾಗ್ ನಿಂದ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ 


ಈ ಅಭಿಯಾನವು 79,156 ಕೋಟಿ ರೂ.ಗಳ ಬಜೆಟ್ ನೊಂದಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ 63,000 ಕ್ಕೂ ಹೆಚ್ಚು ಬುಡಕಟ್ಟು ಪ್ರಾಬಲ್ಯದ/ಬಹುಸಂಖ್ಯಾತ ಗ್ರಾಮಗಳಲ್ಲಿ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ  ಗುರಿಯನ್ನು ಹೊಂದಿದೆ

17 ಸಚಿವಾಲಯಗಳ ಸಂಘಟಿತ ಪ್ರಯತ್ನಗಳ ಮೂಲಕ ಮುಂದಿನ 5 ವರ್ಷಗಳಲ್ಲಿ ಅಭಿಯಾನದ ಅಡಿಯಲ್ಲಿ 25 ಯೋಜನಾ  ಮಧ್ಯಪ್ರವೇಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ

ಪ್ರಧಾನಮಂತ್ರಿಯವರು 40 ಹೊಸ ಏಕಲವ್ಯ ಶಾಲೆಗಳನ್ನು ಉದ್ಘಾಟಿಸಿದರು ಮತ್ತು 2834 ಕೋಟಿ ರೂ. ಮೌಲ್ಯದ 25 ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು

ಪಿಎಂ-ಜನಮಾನ್ ಅಡಿಯಲ್ಲಿ 1365 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 1387 ಕಿ.ಮೀ ರಸ್ತೆಗಳು, 120 ಅಂಗನವಾಡಿಗಳು, 250 ವಿವಿಧೋದ್ದೇಶ ಕೇಂದ್ರಗಳು ಮತ್ತು 10 ಶಾಲಾ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು

Posted On: 02 OCT 2024 6:55PM by PIB Bengaluru

 

ಮಹಾತ್ಮಾ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಾರ್ಖಂಡ್ ಹಜಾರಿಬಾಗ್ ನಲ್ಲಿ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನಕ್ಕೆ (ಡಿಎಜೆಜಿಯುಎ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ಯೋಜನೆಯ ಒಟ್ಟು ವೆಚ್ಚ 79,156 ಕೋಟಿ ರೂ.ಗಳು ( ಕೇಂದ್ರ ಪಾಲು 56,333 ಕೋಟಿ ರೂ., ರಾಜ್ಯ ಪಾಲು 22,823 ಕೋಟಿ ರೂ. ).  ಜಾರ್ಖಂಡ್ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಂತೋಷ್ ಗಂಗ್ವಾರ್; ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವಾಲ್ ಓರಮ್; ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ; ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ಶ್ರೀ ದುರ್ಗಾದಾಸ್ ಉಕೆ; ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಸೇಠ್; ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಪತ್ರಿಕಾ ಪ್ರಕಟಣೆ: https://pib.gov.in/PressReleasePage.aspx?PRID=2061094).

ಅಭಿಯಾನವು ಸುಮಾರು 63,843 ಗ್ರಾಮಗಳನ್ನು ಒಳಗೊಂಡಿದ್ದು, 549 ಜಿಲ್ಲೆಗಳ 5 ಕೋಟಿಗೂ ಹೆಚ್ಚು ಬುಡಕಟ್ಟು ಜನರಿಗೆ ಮತ್ತು 30 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಬುಡಕಟ್ಟು ಬಹುಸಂಖ್ಯಾತ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್ಗಳಲ್ಲಿ ಹರಡಿರುವ 2,911 ಬ್ಲಾಕ್ ಗಳಿಗೆ ಪ್ರಯೋಜನವನ್ನು ನೀಡುತ್ತದೆ.  ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನವು ಸಾಮಾಜಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಜೀವನೋಪಾಯದಲ್ಲಿನ ನಿರ್ಣಾಯಕ ಕಂದಕ/ಅಂತರಗಳನ್ನು ಭಾರತ ಸರ್ಕಾರದ ಸಂಬಂಧಿತ 17 ಸಚಿವಾಲಯಗಳನ್ನು ಒಗ್ಗೂಡಿಸಿ  ಮತ್ತು ಈಗಾಗಲೇ ಜಾರಿಗೆ ತಂದಿರುವ  25 ಮಧ್ಯಪ್ರವೇಶಗಳ ಮೂಲಕ ಬುಡಕಟ್ಟು ಜನರನ್ನು ತಲುಪುವ ಮತ್ತು ಸವಲತ್ತುಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ; ಮತ್ತು ಇದು ಬುಡಕಟ್ಟು ಪ್ರದೇಶಗಳು ಮತ್ತು ಸಮುದಾಯಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.

ಯೋಜನೆ 2024 ರ ಸೆಪ್ಟೆಂಬರ್ 18 ರಂದು ಸಂಪುಟದ (ಕ್ಯಾಬಿನೆಟ್) ಅನುಮೋದನೆ ಪಡೆದಿದೆ. (ಪತ್ರಿಕಾ ಪ್ರಕಟಣೆ: https://pib.gov.in/PressReleaseIframePage.aspx?PRID=2055995). ಇದನ್ನು 2023 ರ ನವೆಂಬರ್ 15 ರಂದು ಜನಜಾತಿಯ ಗೌರವ್ ದಿವಸ್ ದಿನದಂದು ಪ್ರಧಾನಿಯವರು ಪ್ರಾರಂಭಿಸಿದ ಪಿಎಂ-ಜನಮಾನ್ ಕಲಿಕೆ ಮತ್ತು ಯಶಸ್ಸಿನ ಆಧಾರದ ಮೇಲೆ ಯೋಜಿಸಲಾಗಿದೆ. 24,104 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ, ಈ ಯೋಜನೆಯು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಜನಸಂಖ್ಯೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಕಳೆದ 10 ತಿಂಗಳಲ್ಲಿ, 10,000 ಕೋಟಿ ರೂ.ಗಳ ಯೋಜನೆಗಳ ಮಂಜೂರಾತಿಯೊಂದಿಗೆ ಬಹುತೇಕ ಎಲ್ಲಾ ಮಧ್ಯಪ್ರವೇಶಗಳ ಮೂಲಕ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಇತ್ತೀಚೆಗೆ, 2024 ರ ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿಯವರು ಪಿಎಂ-ಜನಮಾನ್ ಅಡಿಯಲ್ಲಿ ನಿರ್ಮಿಸಲಾದ 40,000 ಪೂರ್ಣಗೊಂಡ ಮನೆಗಳ ಗೃಹ ಪ್ರವೇಶಕ್ಕೆ ಕೀಲಿಗಳನ್ನು ಹಸ್ತಾಂತರಿಸಿದರು ಮತ್ತು ಒಡಿಶಾದ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ 50,000 ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದರು.  (ಯೋಜನೆಗೆ ಸಂಪುಟ ಅನುಮೋದನೆ ಕುರಿತು ಪತ್ರಿಕಾ ಪ್ರಕಟಣೆ)

ಪ್ರಧಾನಮಂತ್ರಿಯವರು 40 ಏಕಲವ್ಯ ಶಾಲೆಗಳನ್ನು ಉದ್ಘಾಟಿಸಿದರು ಮತ್ತು ಸುಮಾರು 2,834 ಕೋಟಿ ರೂ.ಗಳ 25 ಹೊಸ ಇಎಂಆರ್ ಎಸ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳು ಪಿಎಂ-ಜನಮಾನ್ ಅಡಿಯಲ್ಲಿ ನಿರ್ಮಿಸುತ್ತಿರುವ 1387 ಕಿ.ಮೀ ರಸ್ತೆಗಳು, 120 ಅಂಗನವಾಡಿಗಳು, 250 ವಿವಿಧೋದ್ದೇಶ ಕೇಂದ್ರಗಳು ಮತ್ತು 10 ಶಾಲಾ ಹಾಸ್ಟೆಲ್ ಗಳು ಸೇರಿದಂತೆ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮಾನ್) ಅಡಿಯಲ್ಲಿ 1,365 ಕೋಟಿ ರೂ.ಗಳ ಯೋಜನೆಗಳನ್ನು ಅವರು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

40 ಹೊಸ ಇಎಂಆರ್.ಎಸ್ ಉದ್ಘಾಟನೆಯೊಂದಿಗೆ, 2018 ರಲ್ಲಿ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾದ ಹೊಸ ಯೋಜನೆಯಡಿ ಒಟ್ಟು 74 ಹೊಸ ಇಎಂಆರ್.ಎಸ್  ಗಳು ಪೂರ್ಣಗೊಂಡಿವೆ, ಭಾರತ ಸರ್ಕಾರವು 440 ಏಕಲವ್ಯ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದಾಗ. ಈ ಯೋಜನೆಯಡಿ, 50% ಅಥವಾ ಅದಕ್ಕಿಂತ ಹೆಚ್ಚಿನ ಎಸ್ಟಿ ಜನಸಂಖ್ಯೆ ಮತ್ತು 20,000 ಅಥವಾ ಅದಕ್ಕಿಂತ ಹೆಚ್ಚಿನ ಬುಡಕಟ್ಟು ವ್ಯಕ್ತಿಗಳನ್ನು ಹೊಂದಿರುವ ಪ್ರತಿ ಬ್ಲಾಕ್ ನವೋದಯ ವಿದ್ಯಾಲಯಗಳಿಗೆ ಸಮಾನವಾಗಿ ಇಎಂಆರ್.ಎಸ್ ಹೊಂದಿರುತ್ತದೆ.  ಈಗಾಗಲೇ 288 ಶಾಲೆಗಳು ಮಂಜೂರಾಗಿದ್ದು,(2018ಕ್ಕೆ ಮೊದಲು)  ಒಟ್ಟು 728 ಶಾಲೆಗಳನ್ನು ಸ್ಥಾಪಿಸಲಾಗುವುದು. ಇಎಂಆರ್ ಎಸ್ ನಿರ್ಮಾಣ ವೆಚ್ಚವನ್ನು ಬಯಲು ಸೀಮೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕ್ರಮವಾಗಿ 38 ಕೋಟಿ ಮತ್ತು 48 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.   2026 ರ ಮಾರ್ಚ್ ವೇಳೆಗೆ, ಎಲ್ಲಾ 728 ಶಾಲೆಗಳನ್ನು ಕಾರ್ಯರೂಪಕ್ಕೆ ತರುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ, ಇದರಲ್ಲಿ ಸುಮಾರು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ. ಈ ಯೋಜನೆಯಡಿ (2021-26ನೇ ಸಾಲಿಗೆ) 28919.72 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.  38,000 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು, ಅದರಲ್ಲಿ 9000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಈಗಾಗಲೇ ನೇಮಕ ಮಾಡಲಾಗಿದೆ. ಕಳೆದ 10 ವರ್ಷಗಳಲ್ಲಿ, ಅಂತಹ ಶಾಲೆಗಳಲ್ಲಿ ಅನೇಕ ಪಟ್ಟು ಹೆಚ್ಚಳ ಕಂಡುಬಂದಿದೆ, ಇದನ್ನು ಕೆಳಗೆ ನೋಡಬಹುದು.

ಯೋಜನೆ/ಮಧ್ಯಪ್ರವೇಶಗಳು

2013-14

2024-25

ಬಜೆಟ್ ಗಾತ್ರ

ರೂ. 278.76 ಕೋಟಿ

 (ಸಂವಿಧಾನದ ಆರ್ಟಿಕಲ್ 275 (1)ರಡಿಯಲ್ಲಿ ಒಂದು ಘಟಕವಾಗಿ)

ರೂ. 6399.00 ಕೋಟಿ

 (ಪ್ರತ್ಯೇಕ ಕೇಂದ್ರ ವಲಯದ ಯೋಜನೆ)

ಮಂಜೂರಾದ ಶಾಲೆಗಳು

167

708

ಕಾರ್ಯಾಚರಿಸುತ್ತಿರುವ ಶಾಲೆಗಳು

123

474

 

ಪುನರಾವರ್ತಿತ ವೆಚ್ಚ

ವರ್ಷಕ್ಕೆ ಓರ್ವ ವಿದ್ಯಾರ್ಥಿಗೆ ತಗಲುವ ಪುನರಾವರ್ತಿತ ವೆಚ್ಚ ರೂ. 42,000

ಪ್ರತಿ ವಿದ್ಯಾರ್ಥಿಗೆ ಪ್ರತಿ ವರ್ಷಕ್ಕೆ ರೂ. 1,09,000

ಬಂಡವಾಳ ವೆಚ್ಚ

ರೂ.  12.00 ಕೋಟಿ (ಬಯಲು)

ರೂ 16 ಕೋಟಿ (ಗಿರಿ ಪ್ರದೇಶ, ಈಶಾನ್ಯ ಮತ್ತು ಎಲ್.ಡಬ್ಲ್ಯು.ಇ.)

ರೂ. 37.80 ಕೋಟಿ (ಬಯಲು),

ರೂ 48 ಕೋಟಿ (ಗಿರಿ ಪ್ರದೇಶ, ಈಶಾನ್ಯ, ಎಲ್.ಡಬ್ಲ್ಯು.ಇ)

ದಾಖಲಾತಿ

34365

1,23,847 (2023-24)

ಕಳೆದ 5 ವರ್ಷಗಳಲ್ಲಿ, 170 ಶಾಲೆಗಳ (2019-20 ರಿಂದ ಸೆಪ್ಟೆಂಬರ್ 2024 ರವರೆಗೆ) ನಿರ್ಮಾಣ ಪೂರ್ಣಗೊಂಡಿದೆ ಮತ್ತು 240 ಕ್ಕೂ ಹೆಚ್ಚು ಶಾಲೆಗಳಲ್ಲಿ ನಿರ್ಮಾಣ ಪ್ರಗತಿಯಲ್ಲಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 328 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸುತ್ತಿದೆ. ವಿದ್ಯಾರ್ಥಿಗಳು, ಶಾಲೆಗಳು, ಶಿಕ್ಷಕರ ಡೇಟಾಬೇಸ್ ಅನ್ನು ನಿರ್ವಹಿಸಲು ಮತ್ತು ನಿರ್ಮಾಣ ಹಾಗು ಆರ್ಥಿಕ ಪ್ರಗತಿಯನ್ನು ಪರಿಶೀಲಿಸಲು ಇಎಂಆರ್ಎಸ್ ಎಂಐಎಸ್ ಪೋರ್ಟಲ್ ಅನ್ನು ರಚಿಸಲಾಗಿದೆ.

(ಈವೆಂಟ್ ವೀಡಿಯೊ ಲಿಂಕ್: https://www.youtube.com/live/ZNl8CdHPthk?feature=shared)

 

 

*****



(Release ID: 2061524) Visitor Counter : 7