ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

64ನೇ ರಾಷ್ಟ್ರೀಯ ರಕ್ಷಣಾ ಕಾಲೇಜು (ಎನ್.ಡಿ.ಸಿ) ಕೋರ್ಸ್ ಅಧ್ಯಾಪಕರು ಮತ್ತು ಕೋರ್ಸ್ ಸದಸ್ಯರು ರಾಷ್ಟ್ರಪತಿಯವರನ್ನು ಭೇಟಿ ಮಾಡಿದರು

Posted On: 01 OCT 2024 3:51PM by PIB Bengaluru

64ನೇ ರಾಷ್ಟ್ರೀಯ ರಕ್ಷಣಾ ಕಾಲೇಜು(ಎನ್.ಡಿ.ಸಿ)  ಕೋರ್ಸ್ ಅಧ್ಯಾಪಕರು ಮತ್ತು ಕೋರ್ಸ್ ಸದಸ್ಯರು, ಇಂದು (ಅಕ್ಟೋಬರ್ 1, 2024) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಕ್ರಿಯಾತ್ಮಕ ಜಾಗತಿಕ ಭೌಗೋಳಿಕ-ರಾಜಕೀಯ ಪರಿಸರವು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಇತ್ತೀಚಿನ ದಿನಗಳಲ್ಲಿ ಘಟನೆಗಳು ಪಡೆದುಕೊಳ್ಳುತ್ತಿರುವ ತೀವ್ರತೆಯ ವೇಗವನ್ನು ಬಹುಶಃ ಒಂದು ದಶಕದ ಹಿಂದೆ ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಹೀಗಾಗಿ, ಎಲ್ಲಾ ಅಧಿಕಾರಿಗಳು, ನಾಗರಿಕ ಸೇವೆಗಳು ಅಥವಾ ರಕ್ಷಣಾ ಸೇವೆಗಳು, ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ವ್ಯವಸ್ಥೆಯ ದುರ್ಬಲತೆಗಳು ಮತ್ತು ಅಂತಹ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವ ಸಾಮರ್ಥ್ಯಗಳ ಬಗ್ಗೆ ಇಂದು ನಾವೆಲ್ಲರೂ ತಿಳಿದಿರಬೇಕು. ಅವರು ಹೊಂದಿರಬೇಕಾದ ಮತ್ತು ಮಾಡಲಾಗದ ಒಂದು ಶಕ್ತಿಯೆಂದರೆ ಅಧುನಿಕ ತಂತ್ರಜ್ಙಾನದ ನೂತನ ಅವಿಷ್ಕಾರಗಳು ಮತ್ತು ಅವುಗಳ ಬಳಕೆಗಳು, ಅವುಗಳನ್ನು ನಾವೆಲ್ಲರೂ ತಿಳಿದಿರಬೇಕು. ತಮ್ಮ ಸಂಸ್ಥೆಗಳು, ದೇಶಗಳು ಮತ್ತು ಮಾನವಕುಲದ ಹೆಚ್ಚಿನ ಒಳಿತಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅರಿತಿರಬೇಕು, ಬಳಕೆ ಮಾಡಲು ಸಾಧ್ಯವಾಗಬೇಕು’’ ಎಂದು ಹೇಳಿದರು.

“ನಾವೀನ್ಯತೆಯು ಅವರನ್ನು ಭವಿಷ್ಯಕ್ಕೆ ಸಿದ್ಧವಾಗಿರಿಸುವ ಮಾಡುವ, ಸದಾ ಅವರನ್ನು ತಯಾರು ಮಾಡುವ ಮತ್ತೊಂದು ಅಂಶವಾಗಿದೆ.  ಇಂದು, ನಮ್ಮ ಭದ್ರತಾ ಕಾಳಜಿಗಳು ಪ್ರಾದೇಶಿಕ ಸಮಗ್ರತೆಯ ಸಂರಕ್ಷಣೆಯನ್ನು ಮೀರಿ ವಿಸ್ತರಿಸುತ್ತವೆ,  ಮತ್ತು ರಾಷ್ಟ್ರೀಯ ಯೋಗಕ್ಷೇಮದ ಇತರ ಕ್ಷೇತ್ರಗಳಾದ ಆರ್ಥಿಕ, ಪರಿಸರ, ಇಂಧನ ಭದ್ರತೆ ಮತ್ತು ಸೈಬರ್ ಭದ್ರತೆಯ ವಿಷಯಗಳನ್ನು ಒಳಗೊಳ್ಳುತ್ತವೆ. ಈ ಕಾಳಜಿಗಳನ್ನು ಪರಿಹರಿಸಲು ತೀವ್ರವಾದ ಸಂಶೋಧನೆ ಮತ್ತು ಸಮಗ್ರ ವಿಧಾನಕ್ಕಾಗಿ ಮಾಡಬೇಕಾದ ಸೂಕ್ತ ಪ್ರಯತ್ನಗಳ, ಉಪಕ್ರಮಗಳ ಅಗತ್ಯವಿದೆ.” ಎಂದು ರಾಷ್ಟ್ರಪತಿಯವರು ಹೇಳಿದರು.

“ಸೈಬರ್ ದಾಳಿಗಳು ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆ(ಸವಾಲು) ಆಗಿ ಹೊರಹೊಮ್ಮಿವೆ. ಸೈಬರ್-ದಾಳಿಗಳನ್ನು ಎದುರಿಸಲು ಮತ್ತು ಪ್ರತಿರೋಧಿಸಲು ಉನ್ನತ-ಮಟ್ಟದ ತಾಂತ್ರಿಕ ಮಧ್ಯಸ್ಥಿಕೆ ಮತ್ತು ಉತ್ತಮ ತರಬೇತಿ ಪಡೆದ ಮತ್ತು ವಿಶೇಷ ಮಾನವ ಸಂಪನ್ಮೂಲದ ಜೊತೆಗೆ ದೃಢವಾದ ಡಿಜಿಟಲ್ ಮೂಲಸೌಕರ್ಯ ಅಗತ್ಯವಿರುತ್ತದೆ. ಅಂತಹ ದಾಳಿಗಳನ್ನು ತಡೆಯುವ ಸಾಮರ್ಥ್ಯವಿರುವ ಸುರಕ್ಷಿತ ರಾಷ್ಟ್ರವ್ಯಾಪಿ ವ್ಯವಸ್ಥೆಯನ್ನು ರಚಿಸಲು ನಾಗರಿಕ ಸೇವೆಗಳು ಮತ್ತು ಸಶಸ್ತ್ರ ಪಡೆಗಳು ಕೈಜೋಡಿಸಬೇಕಾದ ಕ್ಷೇತ್ರಗಳಲ್ಲಿ ಇದೂ ಒಂದು. ತಂತ್ರಜ್ಞಾನದ ಬೆಳವಣಿಗೆಗಳು ರಾಷ್ಟ್ರಗಳು ಡಿಜಿಟಲ್ ಮೂಲಸೌಕರ್ಯವನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳುವುದನ್ನು ಕಡ್ಡಾಯಗೊಳಿಸಿವೆ. ಅಗಾಧ ಪ್ರಮಾಣದ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಯು ಸಹ ಆಡಳಿತ ವ್ಯವಸ್ಥೆಗಳಲ್ಲಿ ಲಭ್ಯವಿದ್ದು ಅದನ್ನು ಸುರಕ್ಷಿತವಾಗಿ ಬಿಡಲಾಗುವುದಿಲ್ಲ. ಈ ಸಮಸ್ಯೆಯ ಗಂಭೀರತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಪರಿಹರಿಸಲು ಸುಬಧ್ರ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರಪತಿಯವರ ಭಾಷಣ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

*****
 



(Release ID: 2061030) Visitor Counter : 9