ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ 6ನೇ ಭಾರತ-ಅಮೆರಿಕಾ ವಾಣಿಜ್ಯ ಸಂವಾದದಲ್ಲಿ ಶ್ರೀಮತಿ ಗಿನಾ ರೈಮಾಂಡೋ ಅವರೊಂದಿಗೆ ಸಹ ಅಧ್ಯಕ್ಷತೆ ವಹಿಸಲಿರುವ ಶ್ರೀ ಪಿಯೂಷ್‌ ಗೋಯಲ್


ಹೆಸರಾಂತ ಅಮೆರಿಕಾ ಹಾಗೂ ಭಾರತೀಯ ಕಂಪನಿಗಳ ಸಿಒಇಗಳೊಂದಿಗೆ ಭಾರತದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

Posted On: 29 SEP 2024 9:45AM by PIB Bengaluru

ಅಮೆರಿಕಾ ಸಂಯುಕ್ತ ಸಂಸ್ಥಾನದ ವಾಣಿಜ್ಯ ಕಾರ್ಯದರ್ಶಿ ಶ್ರೀಮತಿ ಗಿನಾ ರೈಮಾಂಡೋ ಅವರ ಆಹ್ವಾನದ ಮೇರೆಗೆ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು 2024ರ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಶ್ರೀ ಪಿಯೂಷ್ ಗೋಯಲ್ ಅವರು ಕಾರ್ಯದರ್ಶಿ ರೈಮಾಂಡೋ ಅವರೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ 2024ರ ಅಕ್ಟೋಬರ್ 2 ರಂದು ಭಾರತ-ಅಮೆರಿಕಾ ಸಿಇಒ ವೇದಿಕೆ  ಮತ್ತು 2024ರ ಅಕ್ಟೋಬರ್ 3 ರಂದು 6 ನೇ ಭಾರತ-ಅಮೆರಿಕಾ ವಾಣಿಜ್ಯ ಸಂವಾದದಲ್ಲಿ ಸಹ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ವೇಳೆ ಎರಡೂ ದೇಶಗಳು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅಗತ್ಯ ಮಾರ್ಗೋಪಾಯಗಳು, ವ್ಯಾಪಾರ ಮತ್ತು ಹೂಡಿಕೆಯ ವಾತಾವರಣವನ್ನು ಸುಧಾರಿಸುವುದು ಮತ್ತು ಭಾರತ ಮತ್ತು ಅಮೆರಿಕನ್ ವ್ಯಾಪಾರ ಸಮುದಾಯಗಳ ನಡುವಿನ ಸಂಬಂಧಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು.

ಅಲ್ಲದೆ, ಸಚಿವರಾದ ಗೋಯಲ್ ಅವರು ಅಮೆರಿಕಾ ಮತ್ತು ಭಾರತದ ಪ್ರಮುಖ ಸಿಇಒಗಳು ಮತ್ತು ಉದ್ಯಮದ ಪ್ರಮುಖರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಭಾರತದಲ್ಲಿ ಹೂಡಿಕೆಗೆ ಲಭ್ಯವಿರುವ ವ್ಯಾಪಕ ಅವಕಾಶಗಳನ್ನು ಪ್ರಸ್ತಾಪಿಸಲಿದ್ದಾರೆ. ಅಮೆರಿಕ-ಭಾರತ ಕಾರ್ಯತಾಂತ್ರಿಕ ಪಾಲದಾರಿಕೆ ವೇದಿಕೆ ಆಯೋಜಿಸಿರುವ ದುಂಡುಮೇಜಿನ ಸಭೆಯಲ್ಲಿ ವ್ಯಾಪಾರ ಮತ್ತು ಉದ್ಯಮದ ಪ್ರಮುಖರೊಂದಿಗೆ ಭಾರತ ಮತ್ತು ಅಮೆರಿಕಾ ಆರ್ಥಿಕತೆಗಳ ನಡುವಿನ ಪೂರಕ ಸಾಮರ್ಥ್ಯ ಮತ್ತು ಸಮನ್ವಯಗಳ ಬಗ್ಗೆ ಚರ್ಚಿಸಲಿದ್ದಾರೆ, ಅವುಗಳು ಮತ್ತಷ್ಟು ಹತೋಟಿಗೆ ತರುವ ಮಾರ್ಗಗಳ ಮೇಲೆ ಒತ್ತು ನೀಡುತ್ತವೆ. ಅವರು ಯುವ ವಾಣಿಜ್ಯ ನಾಯಕರ ದುಂಡುಮೇಜಿನ ಸಭೆ ಮತ್ತು ಭಾರತ-ಅಮೆರಿಕಾ ಜೆಮ್ಸ್ ಮತ್ತು ಜ್ಯುವೆಲ್ಲರಿ ವ್ಯಾಪಾರದ ದುಂಡುಮೆಜಿನ ಸಭೆಯಲ್ಲೂ ಅಧ್ಯಕ್ಷರಾಗಿರುತ್ತಾರೆ.

ಶ್ರೀ ಗೋಯಲ್ ಮತ್ತು ಕಾರ್ಯದರ್ಶಿ ರೈಮಂಡೊ ಅವರು ಭಾರತ ಮತ್ತು ಅಮೆರಿಕಾ ನಡುವಿನ ನಿರ್ಣಾಯಕ ಖನಿಜಗಳ ಪೂರೈಕೆ ಸರಣಿಯನ್ನು ವಿಸ್ತರಿಸಲು ಬಗ್ಗೆ ಚರ್ಚಿಸಲಿದ್ದಾರೆ, ಅಗತ್ಯ ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಮತ್ತು ಅವುಗಳ ಪೂರಕ ಸಾಮರ್ಥ್ಯಗಳನ್ನು ವೃದ್ಧಿಸಲು ದ್ವಿಪಕ್ಷೀಯ ಸಹಯೋಗವನ್ನು ಹೆಚ್ಚಿಸಲು ಉದ್ದೇಶಿಸಿರುವ ಒಡಂಬಡಿಕೆಯ ಕುರಿತು ಎರಡೂ ದೇಶಗಳು ಮಾತುಕತೆ ನಡೆಸಲಿವೆ.

ವ್ಯಾಪಾರ ನೀತಿ ವೇದಿಕೆ (ಟ್ರೇಡ್ ಪಾಲಿಸಿ ಫೋರಮ್) ಅಡಿಯಲ್ಲಿ ನಡೆಯುತ್ತಿರುವ ಸಹಯೋಗ ಮತ್ತು ಉಭಯ ದೇಶಗಳ ನಡುವಿನ ದ್ವಿಮುಖ ವ್ಯಾಪಾರಕ್ಕೆ ಮತ್ತಷ್ಟು ಸೇರಿಸುವ ಮಾರ್ಗಗಳ ಕುರಿತು ಚರ್ಚಿಸಲು ಸಚಿವ ಗೋಯಲ್ ಅವರು ಯುಎಸ್ ಟಿಆರ್ ರಾಯಭಾರಿ ಕ್ಯಾಥರೀನ್ ತಾಯ್ ಅವರನ್ನು ವಾಷಿಂಗ್ಟನ್ ಡಿಸಿ ಯಲ್ಲಿ ಭೇಟಿಯಾಗಲಿದ್ದಾರೆ.

ಸಚಿವರ ಭೇಟಿಯು ಭಾರತ ಮತ್ತು ಅಮೆರಿಕಾ ನಡುವಿನ ಸದೃಢ ಮತ್ತು ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಇದು ವ್ಯವಹಾರದಿಂದ ವ್ಯಾಪಾರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ನಿರ್ಣಾಯಕ ಖನಿಜಗಳು, ಹವಾಮಾನ ಮತ್ತು ಶುದ್ಧ ತಂತ್ರಜ್ಞಾನ ಸಹಕಾರವನ್ನು ಸುಗಮಗೊಳಿಸುವುದು, ಅಂತರ್ಗತ ಡಿಜಿಟಲ್ ಬೆಳವಣಿಗೆ, ಮಾನದಂಡಗಳು ಮತ್ತು ಅನುಸರಣೆ ಸಹಕಾರ, ಪಯಣ ಮತ್ತು ಪ್ರವಾಸೋದ್ಯಮ ಸೇರಿದಂತೆ ಇತ್ಯಾದಿ ವಿಷಯಗಳಲ್ಲಿ  ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಎರಡೂ ದೇಶಗಳಿಗೆ ಆದ್ಯತೆಯ ವಲಯಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ.

 

*****


(Release ID: 2060169) Visitor Counter : 30