ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ಉದಯೋನ್ಮುಖ ಪ್ರತಿಭೆಗಳು ಸದಾ ಕೇಂದ್ರ ಸ್ಥಾನವನ್ನು ಪಡೆಯುತ್ತಾರೆ 


ವೀಕ್ಷಣಾ ಕೊಠಡಿ ಮತ್ತು ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್, ಈ ವರ್ಷದ ಫಿಲ್ಮ್ ಬಜಾರ್ ಇಂಡಿಯಾ 2024 ದಲ್ಲಿನ ಪ್ರಮುಖ ಅಂಶಗಳಾಗಿವೆ

ಸೆಪ್ಟೆಂಬರ್ 30, 2024 ರವರೆಗೆ ಕೆಲಸ-ಪ್ರಗತಿಯಲ್ಲಿರುವ ಲ್ಯಾಬ್ ಮತ್ತು ವೀಕ್ಷಣಾ ಕೊಠಡಿಗಾಗಿ ತಮ್ಮ ಪ್ರಾಜೆಕ್ಟ್ ನಮೂದುಗಳನ್ನು ಸಲ್ಲಿಸಲು ಚಲನಚಿತ್ರ ನಿರ್ಮಾಪಕರನ್ನು ಆಹ್ವಾನಿಸಲಾಗಿದೆ

Posted On: 26 SEP 2024 8:26PM by PIB Bengaluru

ಫಿಲ್ಮ್ ಬಜಾರ್‌ ಇಂಡಿಯಾ ಇದರ 18ನೇ ಆವೃತ್ತಿಯು ಸಹ-ನಿರ್ಮಾಣ ಮಾರುಕಟ್ಟೆ (ಸಿಪಿಎಂ), ಚಿತ್ರಕಥೆಗಾರರ ​​ಲ್ಯಾಬ್, ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್, ವೀಕ್ಷಣಾ ಕೊಠಡಿ (ವಿಆರ್), ಮಾರುಕಟ್ಟೆ ಸ್ಕ್ರೀನಿಂಗ್, ನಿರ್ಮಾಪಕರ ಕಾರ್ಯಾಗಾರ, ಮತ್ತು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು.  ಜ್ಞಾನ-ಮಾಹಿತಿಯುಕ್ತ ಸರಣಿಯಲ್ಲಿ ಚಲನಚಿತ್ರ ನಿರ್ಮಾಪಕರು, ನಿರ್ಮಾಪಕರು ಮತ್ತು ಉದ್ಯಮ ವೃತ್ತಿಪರರಿಗೆ ನೆಟ್‌ವರ್ಕಿಂಗ್ ಮತ್ತು ತಮ್ಮ ನವೀನ ಚಲನಚಿತ್ರ ಯೋಜನೆಗಳನ್ನು ಪ್ರದರ್ಶಿಸಲು ಉತ್ತಮ ಕೇಂದ್ರವಾಗಿವೆ.

ಈ ಕಾರ್ಯಕ್ರಮಗಳ ಮೂಲಕ, ಫಿಲ್ಮ್ ಬಜಾರ್ ನೆಟ್‌ ವರ್ಕಿಂಗ್ ಅನ್ನು ಉತ್ತೇಜಿಸಲು ಮತ್ತು ಸಹಯೋಗ ಮತ್ತು ಧನಸಹಾಯ ಅವಕಾಶಗಳಿಗೆ ಆಯ್ಕೆ ಹೊಂದಿದೆ.  ಇದನ್ನು ನವೆಂಬರ್ 20-24, 2024 ರಿಂದ ಗೋವಾದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಆವೃತ್ತಿಯು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಸಿದ್ಧವಾಗಿರುವ ಉತ್ತಮ ಮತ್ತು ವೈವಿಧ್ಯಮಯ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ.

ಸ್ವತಂತ್ರ ಚಲನಚಿತ್ರ ನಿರ್ಮಾಪಕರನ್ನು ಸಬಲೀಕರಣಗೊಳಿಸುವುದು: ವೈವಿಧ್ಯಮಯ ನಿರೂಪಣೆಗಳನ್ನು ಪ್ರೋತ್ಸಾಹಿಸುವುದು 

ಉದ್ಯಮದ ಮುಖ್ಯ ಸಂಚಾಲಕರೊಂದಿಗೆ  ಉದಯೋನ್ಮುಖ ಪ್ರತಿಭೆಗಳನ್ನು ಸಂಪರ್ಕಿಸಲು ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಮತ್ತು ವೀಕ್ಷಣಾ ಕೊಠಡಿ ವಿಭಾಗಗಳು , ಹಾಗೂ ಅತ್ಯಗತ್ಯ ವ್ಯವಸ್ಥೆ ಮಾಡಲಾಗಿದೆ.  ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಇನ್ನೂ ನಿರ್ಮಾಣದಲ್ಲಿರುವ ಚಲನಚಿತ್ರಗಳಿಗೆ ಚಾಲನಾ ವೇದಿಕೆ (ಲಾಂಚ್‌ಪ್ಯಾಡ್‌) ಯಾಗಿ ಕಾರ್ಯನಿರ್ವಹಿಸುತ್ತದೆ. ಚಲನಚಿತ್ರ ನಿರ್ಮಾಪಕರು ಅನುಭವಿ ವೃತ್ತಿಪರರಿಂದ ಅಮೂಲ್ಯವಾದ ಸಲಹೆ/ಪ್ರತಿಕ್ರಿಯೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.  ಅಪೂರ್ಣ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ, ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರ ಯೋಜನೆಗಳನ್ನು ಅಂತಿಮಗೊಳಿಸುವ ಮೊದಲು ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಪಡೆಯಬಹುದು /ಅಳೆಯಬಹುದು ಮತ್ತು ಬೇಕಾದ ಅಗತ್ಯ ಹೊಂದಾಣಿಕೆಗಳನ್ನು ಮಾಡಬಹುದು. 

ಈ ವರ್ಷ, ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್‌ ನ ಭಾಗವಾಗಿ  ಫೀಚರ್ ಫಿಕ್ಷನ್ ಮತ್ತು ಅನಿಮೇಷನ್ ಫಿಕ್ಷನ್ ಅನ್ನು ಚಲನಚಿತ್ರಗಳನ್ನು ಸ್ವೀಕರಿಸಲಾಗುತ್ತದೆ. ಕಡಿಮೆ ಪ್ರಾತಿನಿಧಿಕ ಚಲನಚಿತ್ರಗಳಿಗೆ ವಿಶಾಲ ಪ್ರೇಕ್ಷಕರೊಂದಿಗೆ ಸಂಪರ್ಕಿಸಲು ಅವಕಾಶ ನೀಡುವ ಮೂಲಕ ವೀಕ್ಷಣಾ ಕೊಠಡಿಯು ಕಥೆ ಹೇಳುವಿಕೆಯಲ್ಲಿ ವೈವಿಧ್ಯತೆಯನ್ನು ನೀಡಹೊರಟಿದೆ.  ಸಾಂಪ್ರದಾಯಿಕ ನಿರೂಪಣೆಗಳನ್ನು ಸವಾಲು ಮಾಡುವ ನೂತನ ಆಯಾಮದ ಚಲನಚಿತ್ರಗಳಿಗೆ ಆದ್ಯತೆ ನೀಡುವ ಮೂಲಕ, ಇದು ವಿಭಿನ್ನ ಸಂಸ್ಕೃತಿಗಳು ಮತ್ತು ದೃಷ್ಟಿಕೋನಗಳ ಉತ್ಕೃಷ್ಟ ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ವೀಕ್ಷಣಾ ಕೊಠಡಿಯ ಕ್ಯುರೇಟೆಡ್ ವಿಭಾಗವು ಸಲ್ಲಿಕೆಗಳಿಂದ ಫಿಲ್ಮ್ ಬಜಾರ್ ಶಿಫಾರಸುಗಳು (ಎಫ್.ಬಿ.ಆರ್.) ಎಂದು ಕರೆಯಲ್ಪಡುವ ಪಟ್ಟಿ ಮೂಲಕ, ನೋಡಲೇಬೇಕಾದ ಚಲನಚಿತ್ರಗಳನ್ನು ವಿಶೇಷವಾಗಿ ಶಿಫಾರಸು ಮಾಡುತ್ತದೆ, ಹೀಗೆ ಪ್ರೇಕ್ಷಕರು ಮತ್ತು ಉದ್ಯಮದ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಗಮನಾರ್ಹ ಸಾಧನೆಗಳು

ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಮತ್ತು ವೀಕ್ಷಣಾ ಕೊಠಡಿಯ ಯಶಸ್ಸಿನ ಭಾಗವಾಗಿ, ಜೋರಾಮ್ ಮತ್ತು ಆಲ್ ಇಂಡಿಯಾ ಶ್ರೇಣಿಯು ಇನ್ ದಿ ಬೆಲ್ಲಿ ಆಫ್ ಎ ಟೈಗರ್, ಆಗ್ರಾ, ಅಟ್ಟಂ (ದ ಪ್ಲೇ), ಬಿ.ಎ.  ಪಾಸ್, ತುಂಬದ್ ಮತ್ತು ಶಾಂಘೈ, ಮುಂತಾದ ಸಮಕಾಲೀನ ಸಿನಿಮಾಗಳನ್ನು ಪ್ರದರ್ಶನ ಮಾಡಲಿದೆ.

ವರ್ಕ್-ಇನ್-ಪ್ರೋಗ್ರೆಸ್ ಲ್ಯಾಬ್ ಮತ್ತು ವೀಕ್ಷಣಾ ಕೊಠಡಿ ಎರಡಕ್ಕೂ ಅರ್ಜಿ ಸಲ್ಲಿಸಲು ಅವಕಾಶ ಈಗ ಸೆಪ್ಟೆಂಬರ್ 30, 2024 ರವರೆಗೆ ತೆರೆದಿರುತ್ತವೆ ಮತ್ತು ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರ ಕೆಲಸವನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯಮದ ಪ್ರಮುಖರೊಂದಿಗೆ ಸಂಪರ್ಕ ಸಾಧಿಸಲು ಈ ಅಪೂರ್ವ ಅವಕಾಶಕ್ಕಾಗಿ ಸದುಪಯೋಗ ಪಡಿಸಿಕೊಂಡು ತಮ್ಮ ಚಲನಚಿತ್ರ ಯೋಜನೆಗಳನ್ನು ಸಕಾಲಿಕವಾಗಿ ಸಲ್ಲಿಸಲು ಕೋರಲಾಗಿದೆ.

 

*****



(Release ID: 2059388) Visitor Counter : 6