ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮೀಸಲಾತಿ ವಿರುದ್ಧ ತಪ್ಪೆಣಿಕೆಯ ಅಥವಾ ಪೂರ್ವಕಲ್ಪಿತ ಅಭಿಪ್ರಾಯ ಮಾದರಿಯನ್ನು ಹೊರಹಾಕಲಾಗಿದೆ; ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿ ಮೀಸಲಾತಿ ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ: ಉಪರಾಷ್ಟ್ರಪತಿ ವಿಷಾದ


ಸಂವಿಧಾನ ಇರುವುದು, ಅದನ್ನು ಹೊಗಳಲು ಅಲ್ಲ. ಅದನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು: ಶ್ರೀ ಜಗದೀಪ್ ಧನಕರ್

ಸಾಂವಿಧಾನಿಕ ಸ್ಥಾನ ಹೊಂದಿರುವ ಒಬ್ಬರು ವಿದೇಶಿ ನೆಲದಲ್ಲಿ ಧಾರಾವಾಹಿ ರೂಪದಲ್ಲಿ ನಡೆಸುವ 'ಭಾರತ ವಿರೋಧಿ ವಾಗ್ದಾಳಿ'ಯನ್ನು ಒಪ್ಪಲಾಗದು: ಉಪರಾಷ್ಟ್ರಪತಿ ಪ್ರತಿಪಾದನೆ

ವಿಪರ್ಯಾಸವೆಂದರೆ ಕೆಲವರ ವಿದೇಶಿ ಪ್ರವಾಸಗಳ ಏಕೈಕ ಉದ್ದೇಶವೇ ಭಾರತೀಯ ಸಂವಿಧಾನದ ಮನೋಭಾವವನ್ನು ಸಾರ್ವಜನಿಕವಾಗಿ ನಾಶ ಮಾಡುವುದಾಗಿದೆ: ಶ್ರೀ ಜಗದೀಪ್ ಧನಕರ್

ಸಂಸ್ಥೆಗಳು ರಾಜಕೀಯ ಪ್ರಚೋದನೆಯ ಚರ್ಚಾ ವಸ್ತುವಾಗಬಾರದು, ಅವುಗಳನ್ನು ಕೆರಳಿಸುವ ಹೇಳಿಕೆಗಳು ಮತ್ತು ಅವಲೋಕನಗಳನ್ನು ತಪ್ಪಿಸಬೇಕು: ವಿಪಿ ಒತ್ತಾಯ

ನಮ್ಮ ಪ್ರಜಾಸತ್ತಾತ್ಮಕ ಸಾಂವಿಧಾನಿಕ ಮೌಲ್ಯಗಳ ಮೇಲಿನ ಮುಂಚೂಣಿಯ ದಾಳಿಯನ್ನು ತಿರಸ್ಕರಿಸಬೇಕು: ಉಪರಾಷ್ಟ್ರಪತಿ

ಮೀಸಲಾತಿ ಸಂವಿಧಾನದ ಆತ್ಮಸಾಕ್ಷಿಯಾಗಿದೆ, ಸಮಾನತೆ ತರಲು ದೃಢವಾದ ಕ್ರಮ, ಸಮಾಜದ ಆಧಾರಸ್ತಂಭ ಆಗಿರುವವರ ಕೈ ಹಿಡಿಯಿರಿ: ಉಪರಾಷ್ಟ್ರಪತಿ

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನಿರಾಕರಿಸಿದ ಮನಸ್ಥಿತಿ ಮತ್ತು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನವನ್ನು 10 ವರ್ಷಗಳ ಕಾಲ ತಡೆಹಿಡಿದ ಮನಸ್ಥಿತಿಗೆ ಧನಕರ್ ಪ್ರಶ್ನೆ

21 ತಿಂಗಳ ತುರ್ತುಪರಿಸ್ಥಿತಿಯು ಪ್ರತೀಕಾರದ ಸರ್ವಾಧಿಕಾರವಾಗಿತ್ತು, ಭಯೋತ್ಪಾದನೆಯ ಸಾಹಸಗಾಥೆ ಬಿಚ್ಚಿಡಲಾಯಿತು; ಇದು ಭಾರತೀಯ ಪ್ರಜಾಪ್ರಭುತ್ವದ ಕರಾಳ ಹಂತ: ಉಪರಾಷ್ಟ್ರಪತಿ

ಸಂವಿಧಾನ ಹತ್ಯಾ ದಿನವು ನಮಗೆ ಅಂದಿನ ಪ್ರಧಾನಿಯ ಸರ್ವಾಧಿಕಾರಿ ಮನಸ್ಥಿತಿ ನೆನಪಿಸುತ್ತದೆ: ಉಪರಾಷ್ಟ್ರಪತಿ

ಮುಂಬೈನ ಎಲ್ಫಿನ್‌ಸ್ಟೋನ್ ಟೆಕ್ನಿಕಲ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ; ಸಂವಿಧಾನ ಮಂದಿರ ಉದ್ಘಾಟಿಸಿದ ಉಪರಾಷ್ಟ್ರಪತಿ

Posted On: 15 SEP 2024 3:02PM by PIB Bengaluru

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನಿರಾಕರಿಸಿದ ಮತ್ತು ಸುಮಾರು 10 ವರ್ಷಗಳಿಂದ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರದಿರುವ ಮನಸ್ಥಿತಿಯೇ ಮೀಸಲಾತಿ ವಿರುದ್ಧದ ಪೂರ್ವಾಗ್ರಹ ಅಥವಾ ತಪ್ಪೆಣಿಕೆಯ ಅಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಇಂದು ತೀವ್ರ ಕಳವಳ ವ್ಯಕ್ತಪಡಿಸಿದರು. ಹಸ್ತಾಂತರಿಸಲ್ಪಟ್ಟ ಮತ್ತು ವಿದೇಶಿ ನೆಲದಲ್ಲಿ ನಿಯತಕಾಲಿಕವಾಗಿ ಮತ್ತು ಧಾರಾವಾಹಿ ರೂಪದಲ್ಲಿ 'ಭಾರತ ವಿರೋಧಿ ವಾಗ್ದಾಳಿ' ಮಾಡುತ್ತಿರುವ ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ವ್ಯಕ್ತಿ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವರು ಸಂವಿಧಾನ ಹೀಯಾಳಿಸುತ್ತಿರುವುದನ್ನು ಟೀಕಿಸಿದ ಶ್ರೀ ಧನಕರ್, “ಸಂವಿಧಾನವನ್ನು ಪುಸ್ತಕದಂತೆ ಬಿಂಬಿಸಬಾರದು. ಅದನ್ನು ಹೊಗಳುವ ಬದಲು, ಗೌರವಿಸಬೇಕು. ಸಂವಿಧಾನ ಓದಬೇಕು. ಸಂವಿಧಾನ ಅರ್ಥ ಮಾಡಿಕೊಳ್ಳಬೇಕು. ಕನಿಷ್ಠ ಯಾವುದೇ ಸುಸಂಸ್ಕೃತ, ಜ್ಞಾನವುಳ್ಳ ವ್ಯಕ್ತಿ, ಸಂವಿಧಾನದ ಬಗ್ಗೆ ಶ್ರದ್ಧೆ ಹೊಂದಿರುವ ಯಾರಾದರೂ ಮತ್ತು ಸಂವಿಧಾನದ ಸಾರ ಗೌರವಿಸುವ ಜನರು ಸಂವಿಧಾನವನ್ನು ಕೇವಲ ಪುಸ್ತಕವಾಗಿ ಪ್ರಸ್ತುತಪಡಿಸುವವರನ್ನು, ಅದನ್ನು ಪ್ರದರ್ಶಿಸುವವರನ್ನು ಒಪ್ಪುವುದಿಲ್ಲ ಎಂದರು.

 

“ಸಂವಿಧಾನದ ಅಡಿ, ನಾವು ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತಿರುವಾಗ, ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಸಹ ಒಳಗೊಂಡಿದೆ. ಪ್ರಮುಖ ಕರ್ತವ್ಯಗಳು ಯಾವುವು? ಸಂವಿಧಾನಕ್ಕೆ ಬದ್ಧರಾಗಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಗೌರವಿಸಿ. ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಅನುಸರಿಸಿ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಿ. ಕೆಲವರ ವಿದೇಶಿ ಪ್ರವಾಸಗಳ ಏಕೈಕ ಉದ್ದೇಶ ಈ ಕರ್ತವ್ಯಗಳನ್ನು ನಿರ್ಲಕ್ಷಿಸುವುದು ಎಷ್ಟು ವಿಪರ್ಯಾಸ. ಭಾರತೀಯ ಸಂವಿಧಾನದ ಆತ್ಮವನ್ನು ಸಾರ್ವಜನಿಕವಾಗಿ ನಾಶ ಮಾಡಲಾಗುತ್ತಿದೆ” ಎಂದು ಬೇಸರ ಹೊರಹಾಕಿದರು.

ಮುಂಬೈನ ಎಲ್ಫಿನ್‌ಸ್ಟೋನ್ ಟೆಕ್ನಿಕಲ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಸಂವಿಧಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್, “ಇದು ಕಳಕಳಿಯ ವಿಷಯವಾಗಿದೆ, ಪ್ರತಿಬಿಂಬಿಸುವ ವಿಷಯವಾಗಿದೆ ಮತ್ತು ಗಾಢ ಚಿಂತನೆಯ ವಿಷಯವಾಗಿದೆ! ಮೀಸಲಾತಿ ವಿರೋಧಿಯಾಗಿದ್ದ ಅದೇ ಮನಸ್ಥಿತಿ, ಮೀಸಲಾತಿ ವಿರುದ್ಧದ ಪೂರ್ವಾಗ್ರಹ ಅಥವಾ ತಪ್ಪೆಣಿಕೆಯ ಮಾದರಿಯನ್ನು ಸಹ ಹೊರಹಾಕಿದೆ ಅಥವಾ ಹಸ್ತಾಂತರಿಸಿದೆ. ಸಾಂವಿಧಾನಿಕ ಸ್ಥಾನ ಹೊಂದಿರುವ ವ್ಯಕ್ತಿಯೊಬ್ಬರು ಮೀಸಲಾತಿ ರದ್ದುಪಡಿಸಬೇಕು ಎಂದು ವಿದೇಶದಲ್ಲಿ ಹೇಳುತ್ತಾರೆ” ಎಂದರು ಬೇಸರ ವ್ಯಕ್ತಪಡಿಸಿದರು.

“ದೇಶದ ನಿಜವಾದ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಏಕೆ ಭಾರತ ರತ್ನ ನೀಡಲಿಲ್ಲ, 1990 ಮಾರ್ಚ್ 31ರಂದು ಅದನ್ನು ನೀಡಲಾಯಿತು. ಈ ಗೌರವವನ್ನು ಮೊದಲೇ ಏಕೆ ನೀಡಲಿಲ್ಲ? ಬಾಬಾ ಸಾಹೇಬರು ಭಾರತೀಯ ಸಂವಿಧಾನ ಶಿಲ್ಪಿ ಎಂದು ಬಹಳ ಪ್ರಸಿದ್ಧರಾಗಿದ್ದರು. ಬಾಬಾ ಸಾಹೇಬರ ಮನಸ್ಥಿತಿಗೆ ಸಂಬಂಧಿಸಿದ ಇನ್ನೊಂದು ಮಹತ್ವದ ವಿಚಾರವೆಂದರೆ, ಮಂಡಲ್ ಆಯೋಗದ ವರದಿ. ಈ ವರದಿ ಮಂಡಿಸಿದ ನಂತರ, ಮುಂದಿನ 10 ವರ್ಷಗಳ ಕಾಲ ಮತ್ತು ಆ ದಶಕದಲ್ಲಿ ದೇಶವು ಇಬ್ಬರು ಪ್ರಧಾನ ಮಂತ್ರಿಗಳನ್ನು ಹೊಂದಿದ್ದಾಗ – ಶ್ರೀಮತಿ  ಇಂದಿರಾಗಾಂಧಿ ಮತ್ತು ಶ್ರೀ ರಾಜೀವ್ ಗಾಂಧಿ - ಈ ವರದಿಯ ಬಗ್ಗೆ ಒಂದೇ ಒಂದು ನಡೆಯೂ ಆಗಿಲ್ಲ" ಎಂದು ಅವರು ಹೇಳಿದರು

 ಮೀಸಲಾತಿ ವಿರೋಧಿ ಮನಸ್ಥಿತಿಯತ್ತ ಗಮನ ಸೆಳೆದ ಶ್ರೀ ಧನಕರ್, “ಈ ಮನಸ್ಥಿತಿಯ ಬಗ್ಗೆ ಕೆಲವು ಆಕ್ಷೇಪಗಳನ್ನು ನಾನು ಉಲ್ಲೇಖಿಸುತ್ತೇನೆ. ಪಂಡಿತ್ ನೆಹರು ಅವರು ಈ ದೇಶದ ಮೊದಲ ಪ್ರಧಾನಿ, ಅವರು ಏನು ಹೇಳಿದರು?

"ನಾನು ಯಾವುದೇ ರೂಪದ ಮೀಸಲಾತಿ ಇಷ್ಟಪಡುವುದಿಲ್ಲ. ವಿಶೇಷವಾಗಿ ಉದ್ಯೋಗ ಮೀಸಲಾತಿ". ಅವರ ಪ್ರಕಾರವೇ ನಾನು ದುಃಖದಿಂದ ಮತ್ತು ದುರದೃಷ್ಟದಿಂದ ಒಂದು ಉಲ್ಲೇಖ ಮಾಡುತ್ತೇನೆ, ಅದೇನೆಂದರೆ "ಅಸಮರ್ಥತೆ ಉತ್ತೇಜಿಸುವ ಮತ್ತು ನಮ್ಮನ್ನು ಸಾಧಾರಣತೆಯ ಕಡೆಗೆ ಕೊಂಡೊಯ್ಯುವ ಯಾವುದೇ ಹೆಜ್ಜೆಯನ್ನು ನಾನು ವಿರೋಧಿಸುತ್ತೇನೆ".

 

ಮೀಸಲಾತಿ ಕೊನೆಗಾಣಿಸುವಂತೆ ಮಾತನಾಡುವ ಮತ್ತು ಅದು ಅರ್ಹತೆಗೆ ವಿರುದ್ಧವಾಗಿದೆ ಎಂದು ಭಾವಿಸುವವರನ್ನು ಟೀಕಿಸಿದ ಶ್ರೀ ಧನಕರ್, “ನಾನು ನಿಮಗೆ ಭರವಸೆ ನೀಡುತ್ತೇನೆ, ಮೀಸಲಾತಿಯು ಸಂವಿಧಾನದ ಆತ್ಮಸಾಕ್ಷಿಯಾಗಿದೆ, ಮೀಸಲಾತಿಯು ನಮ್ಮ ಸಂವಿಧಾನದಲ್ಲಿ ಸಕಾರಾತ್ಮಕತೆಯೊಂದಿಗೆ, ಸಾಮಾಜಿಕ ಸಮಾನತೆ ತರುವ ಮತ್ತು ಅಸಮಾನತೆಗಳನ್ನು ಕಡಿತಗೊಳಿಸುವ ಹೆಚ್ಚಿನ ಅರ್ಥ ಹೊಂದಿದೆ ಮೀಸಲಾತಿ ಎಂಬುದು ದೃಢವಾದ ಕ್ರಮ, ಅದು ನಕಾರಾತ್ಮಕವಲ್ಲ, ಮೀಸಲಾತಿ ಎನ್ನುವುದು ಯಾರನ್ನಾದರೂ ಅವಕಾಶ ವಂಚಿತ ಮಾಡಬಾರದು,  ಮೀಸಲಾತಿ ಎನ್ನುವುದು ಈ ಸಮಾಜದ ಆಧಾರಸ್ತಂಭ ಮತ್ತು ಶಕ್ತಿಯಾಗಿರುವವರನ್ನು ಹಿಡಿದ ಕೈ ಆಗಿದೆ ಎಂದರು.

“ಬಾಂಗ್ಲಾದೇಶದಲ್ಲಿ ಆಗಿದ್ದು ಇಲ್ಲಿ ನಡೆಯಬಹುದು” ಎಂಬ ಹೇಳಿಕೆಗಳನ್ನು ತುಲನೆ ಮಾಡಿದ ಶ್ರೀ ಧನಕರ್, ನಮ್ಮ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲಿನ ಮುಂಚೂಣಿ ದಾಳಿಗಳನ್ನು ಹಿಮ್ಮೆಟ್ಟಿಸಲು ಯುವಕರನ್ನು ಪ್ರೇರೇಪಿಸಿದರು, ಡಾ. ಬಿ ಆರ್ ಅಂಬೇಡ್ಕರ್ ಹೇಳಿಕೆಗೆ ಒತ್ತು ನೀಡಿದ ಉಪರಾಷ್ಟ್ರಪತಿ, "ಭಾರತವು ಈ ಹಿಂದೆ ತನ್ನದೇ ಕೆಲವು ಜನರ ದ್ರೋಹ ಮತ್ತು ವಿಶ್ವಾಸಘಾತುಕತನದಿಂದ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ. ಆದರೆ ಇತಿಹಾಸ ಮರುಕಳಿಸುತ್ತದಾ? ಭಾರತೀಯರು ತಮ್ಮ ನಂಬಿಕೆಗಿಂತ ದೇಶವನ್ನು ಮೇಲೆ ಇರಿಸುತ್ತಾರೆಯೇ ಅಥವಾ ಅವರು ತಮ್ಮ ನಂಬಿಕೆಯನ್ನು ದೇಶಕ್ಕಿಂತ ಮೇಲೆ ಇರಿಸುತ್ತಾರೆಯೇ? ಆದರೆ ಇದು ಮಾತ್ರ ನಿಶ್ಚಿತ, ಅದೇನೆಂದರೆ ರಾಜಕೀಯ ಪಕ್ಷಗಳು ದೇಶಕ್ಕಿಂತ ತಮ್ಮ ನಂಬಿಕೆಯನ್ನೇ ಮೇಲಿಟ್ಟರೆ, ನಮ್ಮ ಸ್ವಾತಂತ್ರ್ಯವು 2ನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಮತ್ತು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ ಎಂಬುದು ಖಚಿತವಾಗಿದೆ.

ಈ ರೀತಿಯ ಬೆಳವಣಿಗೆಗಳ ವಿರುದ್ಧ ನಾವೆಲ್ಲರೂ ದೃಢವಾಗಿ ಕಾವಲು ಕಾಯಬೇಕು. ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ನಮ್ಮ ಸ್ವಾತಂತ್ರ್ಯ ರಕ್ಷಿಸಲು ನಾವು ಸಂಕಲ್ಪ ಮಾಡಬೇಕು ಎಂದು ಶ್ರೀ ಧನಕರ್ ಕರೆ ನೀಡಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅವಧಿಯಾದ 21 ತಿಂಗಳ ತುರ್ತುಪರಿಸ್ಥಿತಿಯ ಬಗ್ಗೆ ಯುವ ಪೀಳಿಗೆಗೆ ಜಾಗರೂಕರಾಗಿರಬೇಕು ಮತ್ತು ಜಾಗೃತರಾಗಿರಬೇಕು ಎಂದು ಮನವಿ ಮಾಡಿದ ಅವರು, “ಆ ನಿರ್ದಿಷ್ಟ ದಿನವನ್ನು ಎಂದಿಗೂ ಮರೆಯಬೇಡಿ, ಯಾವಾಗಲೂ ಅದನ್ನು ನೆನಪಿಡಿ. ಅದೊಂದು ಕರಾಳ ದಿನ, ನಮ್ಮ ಇತಿಹಾಸಕ್ಕೆ ಕಳಂಕ. 1975 ಜೂನ್ 25 ಸ್ವಾತಂತ್ರ್ಯಾನಂತರದ ನಮ್ಮ ಪ್ರಯಾಣದ ಕರಾಳ ಅಧ್ಯಾಯ, ನಮ್ಮ ಪ್ರಜಾಪ್ರಭುತ್ವದ ಕರಾಳ ಅವಧಿ ಅದು. ಅಂದು ಪ್ರಧಾನಿ ಇಂದಿರಾಗಾಂಧಿ ಅವರು ನಾಗರಿಕರು ಮತ್ತು ಅವರ ಹಕ್ಕುಗಳ ವಿರುದ್ಧ ಬಿರುಗಾಳಿ ಎಬ್ಬಿಸಿದರು. 21 ತಿಂಗಳ ಕಾಲ ಈ ದೇಶವು ತೀವ್ರ ದಬ್ಬಾಳಿಕೆ ಅನುಭವಿಸಿತು. ಸಾವಿರಾರು ಜನರನ್ನು ಬಂಧಿಸಲಾಯಿತು ಮತ್ತು ಕಾನೂನಿನ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಆಗ ನಡೆದದ್ದು ಸರ್ವಾಧಿಕಾರವನ್ನು ವ್ಯಾಖ್ಯಾನಿಸುತ್ತದೆ. ಡಾ. ಭೀಮರಾವ್ ಅಂಬೇಡ್ಕರ್ ಅವರ ಕನಸು ಆ 21 ತಿಂಗಳಲ್ಲೇ ಭಗ್ನವಾಯಿತು. ಇದು ಪ್ರತೀಕಾರದ ಸರ್ವಾಧಿಕಾರವಾಗಿತ್ತು, ಭಯೋತ್ಪಾದನೆಯ ಸಾಹಸವನ್ನು ಬಿಚ್ಚಿಡಲಾಯಿತು. ಚಿಕ್ಕ ಮಕ್ಕಳು ಮತ್ತು ವಿದ್ಯಾರ್ಥಿಗಳು ಆ ಅವಧಿಯ ಬಗ್ಗೆ ಕಲಿಯಬೇಕೆಂದು ನಾನು ಬಯಸುತ್ತೇನೆ, ಅದನ್ನು ಎಂದಿಗೂ ಮರೆಯಬಾರದು. ಈ ಜ್ಞಾನವು ನಿಮಗೆ ಸಂವಿಧಾನ ರಕ್ಷಿಸುವ ಅಪಾರ ಶಕ್ತಿಯನ್ನು ನೀಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು 2015 ರಲ್ಲಿ ಭಾರತದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಲಾಗುವುದು ಎಂದು ಘೋಷಿಸಿದರು. ನಮ್ಮ ಸಂವಿಧಾನವನ್ನು ಹೇಗೆ ರೂಪಿಸಲಾಗಿದೆ, ಅದು ನಮ್ಮ ಹಕ್ಕುಗಳನ್ನು ಹೇಗೆ ಸ್ಥಾಪಿಸುತ್ತದೆ, ಅದು ನಮಗೆ ಹೇಗೆ ಅಧಿಕಾರ ನೀಡುತ್ತದೆ ಎಂಬುದನ್ನು ನೆನಪಿಸಿಕೊಳ್ಳಲು ನಾವು ಸಂವಿಧಾನ ದಿನ ಆಚರಿಸುತ್ತೇವೆ. ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಪ್ರಧಾನಿಯಾಗಬಹುದು, ರೈತನ ಮಗ ಉಪರಾಷ್ಟ್ರಪತಿಯಾಗಬಹುದು ಮತ್ತು ಎಲ್ಲಾ ನ್ಯೂನತೆಗಳನ್ನು ಮತ್ತು ನೆಲದ ವಾಸ್ತವತೆ ಕಂಡ ಮಹಾನ್ ಸಾಮರ್ಥ್ಯ ಮತ್ತು ಸೊಬಗಿನ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿಯಾಗಬಹುದಾದ ವ್ಯವಸ್ಥೆಯನ್ನು ಅದು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ಅರಿಯಬೇಕು ಎಂದು ದಿನಕರ್ ಕರೆ ನೀಡಿದರು.

“ಜೂನ್ 25 ಅನ್ನು ಸಂವಿಧಾನದ ಕಗ್ಗೊಲೆ ದಿನವನ್ನಾಗಿ ಆಚರಿಸಲಾಗುತ್ತದೆ, ಇದನ್ನುನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಆ ಅವಧಿಗೆ ಸಾಕ್ಷಿಯಾಗದಿದ್ದರೆ, ಆ 21 ತಿಂಗಳುಗಳಲ್ಲಿ ಏನಾಯಿತು? ಹೇಗೆ ಇದ್ದಕ್ಕಿದ್ದಂತೆ ವಿಷಯಗಳು ಬದಲಾದವು? ಹೇಗೆ ತನ್ನ ಸ್ವಂತ ಸ್ಥಾನ ಉಳಿಸಿಕೊಳ್ಳಲು, ಎಲ್ಲವನ್ನೂ ಮಿತಿ ಮೀರಿ ಮಾಡಲಾಯಿತು ಎಂಬುದರ ಕುರಿತು ಇತಿಹಾಸದ ಜ್ಞಾನ ಹೊಂದುವುದು ಬಹಳ ಮುಖ್ಯ. ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿ, ಸಂವಿಧಾನದ ಚೈತನ್ಯ ಪುಡಿ ಮಾಡಿ, ಅದರ ಸಾರವನ್ನು ಆಕ್ರಮಣ ಮಾಡಿ, ರಾತ್ರಿ ಸಮಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅದೊಂದು ತಣ್ಣನೆಯ ಅನುಭವ. ಅದಕ್ಕಾಗಿಯೇ ನಾನು ಇದನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಕರೆಯುತ್ತೇನೆ. ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಆತ್ಮವನ್ನೇ ಕತ್ತು ಹಿಸುಕಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಮನಸ್ಥಿತಿಯನ್ನು ಇದು ನೆನಪಿಸುತ್ತದೆ. ತುರ್ತು ಪರಿಸ್ಥಿತಿಯ ಮಿತಿಮೀರಿದ ಕಾರಣದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುವ ದಿನವೂ ಇದಾಗಿದೆ. ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ ಬಿಚ್ಚಿಟ್ಟ ಕರಾಳ ಹಂತ, ಇದುವರೆಗಿನ ಅತ್ಯಂತ ಕರಾಳ ಅಧ್ಯಾಯವಾಗಿದೆ” ಎಂದು ಅವರು ಹೇಳಿದರು.

ರಾಜ್ಯದ ವಿವಿಧ ಅಂಗಗಳ ನಡುವೆ ಅಧಿಕಾರ ಬೇರ್ಪಡಿಸುವ ಅಗತ್ಯತೆ ಮತ್ತು ಎಲ್ಲಾ ಅಂಗಗಳು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುವ ಅಗತ್ಯವನ್ನು ಪ್ರತಿಬಿಂಬಿಸಿದ ಅವರು, ರಾಜಕೀಯ ಪ್ರಚೋದನಾತ್ಮಕ ಚರ್ಚೆಗಳು ವಸ್ತುವಿಷಯವಾಗುವುದನ್ನು ತಪ್ಪಿಸಬೇಕು. “ರಾಜ್ಯದ ಎಲ್ಲಾ ಅಂಗಗಳು-ನ್ಯಾಯಾಂಗ, ಶಾಸಕಾಂಗ, ಮತ್ತು ಕಾರ್ಯಾಂಗ - ಒಂದೇ ಉದ್ದೇಶ ಹೊಂದಿರಬೇಕು. ಸಂವಿಧಾನದ ಮೂಲಭೂತ ಮನೋಭಾವದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು, ಸಾಮಾನ್ಯ ಜನರಿಗೆ ಎಲ್ಲಾ ಹಕ್ಕುಗಳನ್ನು ಖಾತರಿಪಡಿಸಲು ಮತ್ತು ಭಾರತವು ಏಳಿಗೆ ಮತ್ತು ಪ್ರವರ್ಧಮಾನಕ್ಕೆ ಸಹಾಯ ಮಾಡುವ ಏಕೈಕ ಉದ್ದೇಶ ಹೊಂದಬೇಕು ಎಂದು ಕರೆ ನೀಡಿದರು.

ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮತ್ತಷ್ಟು ಸಾಂವಿಧಾನಿಕ ಆದರ್ಶಗಳನ್ನು ಪೋಷಿಸಲು ಮತ್ತು ಅರಳಿಸಲು ಅವರೆಲ್ಲರೂ ಒಟ್ಟಾಗಿ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಸಂಸ್ಥೆಯು ಕೆಲವು ಮಿತಿಗಳ ಬಗ್ಗೆ ಜಾಗೃತವಾಗಿದ್ದಾಗ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ. ಕೆಲವು ಮಿತಿಗಳು ಸ್ಪಷ್ಟವಾಗಿವೆ, ಕೆಲವು ಮಿತಿಗಳು ತುಂಬಾ ಉತ್ತಮವಾಗಿವೆ, ಅವು ಸೂಕ್ಷ್ಮವಾಗಿರುತ್ತವೆ. ಈ ಪವಿತ್ರ 3 ವೇದಿಕೆಗಳು - ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗವು ರಾಷ್ಟ್ರಕ್ಕೆ ಉತ್ತಮವಾಗಿ ಸೇವೆ ಸಲ್ಲಿಸುವ ಸ್ಥಾಪಿತ ಸಂಸ್ಥೆಗಳಿಗೆ ಸವಾಲಿನ ಮತ್ತು ಬೆದರಿಸುವ ವಾತಾವರಣದಲ್ಲಿ ಹಾನಿಕಾರಕ ರಾಜಕೀಯ ಪ್ರಚೋದಕ ಚರ್ಚೆ ಅಥವಾ ನಿರೂಪಣೆಯ ಪ್ರಚೋದಕ ಬಿಂದುಗಳಾಗಬಾರದು ಎಂದರು.

ಚುನಾವಣಾ ಆಯೋಗ, ತನಿಖಾ ಸಂಸ್ಥೆಗಳು ಸೇರಿದಂತೆ ನಮ್ಮ ಎಲ್ಲಾ ರೀತಿಯ ಸಂಸ್ಥೆಗಳು ಬಿಗಿಯಾದ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವಾಗ, ಒಂದು ಅವಲೋಕನವು ಅವರನ್ನು ಹತಾಶಗೊಳಿಸಬಹುದು. ಇದು ರಾಜಕೀಯ ಚರ್ಚೆಗೆ ಗ್ರಾಸವಾಗಬಹುದು. ಇದು ನಿರೂಪಣೆಯನ್ನು ಪ್ರಚೋದಿಸಬಹುದು. ನಾವು ನಮ್ಮ ಸಂಸ್ಥೆಗಳ ಬಗ್ಗೆ ಅತ್ಯಂತ ಜಾಗೃತರಾಗಿರಬೇಕು. ಅವರು ಸದೃಢರಾಗಿದ್ದಾರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ, ಅವರು ತಪಾಸಣೆ ಮತ್ತು ಸಮತೋಲನದಲ್ಲಿದ್ದಾರೆ. ಅವರು ನೆಲದ ಕಾನೂನಿನ ಅಡಿ ಕೆಲಸ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಕೆಲವು ಸಂಚಲನ ಉಂಟುಮಾಡುವ ರೀತಿ ಕೆಲಸ ಮಾಡಿದರೆ, ರಾಜಕೀಯ ಚರ್ಚೆಯೇ ಕೇಂದ್ರಬಿಂದುವಾದರೆ ಅಥವಾ ನಕಾರಾತ್ಮಕ ಹೇಳಿಕೆಗಳೇ ಕೇಂದ್ರಬಿಂದುವಾದರೆ, ಸಂಬಂಧಪಟ್ಟವರಿಗೆ ನಾನು ಮನವಿ ಮಾಡುವುದೇನೆಂದರೆ, ಇಂತಹ ನಿರೂಪಣೆಯನ್ನು ಸಂಪೂರ್ಣವಾಗಿ ತಪ್ಪಿಸಿ ಎನ್ನುತ್ತೇನೆ.

ಅಧಿಕಾರದಲ್ಲಿರುವ ಕೆಲವು ಜನರ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಉಪರಾಷ್ಟ್ರಪತಿ, “ಈಗ ನಾವು ಎಲ್ಲಿಗೆ ತಲುಪಿದ್ದೇವೆ ಎಂದು ನೋಡಿ. ಅದರ ಬಗ್ಗೆ ಮಾತನಾಡಲೂ ನಾಚಿಕೆಯಾಗುತ್ತದೆ. ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯೊಬ್ಬರ ಭಯಾನಕ ಮತ್ತು ಅನಾಗರಿಕ ಘಟನೆಗೆ ಒಬ್ಬರು "ಅಸ್ವಸ್ಥತೆಯ ರೋಗಲಕ್ಷಣ" ಎಂದು ವಿವರಿಸುತ್ತಾರೆ. ಅದು ಯಾವ ರೀತಿಯ ವಿವರಣೆ? ನಮ್ಮ ಸಂವಿಧಾನದ ಇಂತಹ ಅಪಚಾರವನ್ನು ನಾವು ಕಡೆಗಣಿಸಬಹುದೇ ಅಥವಾ ಸಹಿಸಬಹುದೇ? ಇಂತಹ ಕ್ರಮಗಳನ್ನು ತಿರಸ್ಕರಿಸುವಂತೆ ನಾನು ಯುವಕರಿಗೆ ಕರೆ ನೀಡುತ್ತೇನೆ. ಅವರು ನಮ್ಮ ಮಾತೃಭೂಮಿಯಾದ ಭಾರತವನ್ನು ನೋಯಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಮಹಾರಾಷ್ಟ್ರ ಗವರ್ನರ್ ಶ್ರೀ C. P. Radhakrishnan,, ಶ್ರೀ ರಾಮದಾಸ್ ಅಥಾವಳೆ,  ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ  ಶ್ರೀ ಮಗಲ್ ಪ್ರಭಾತ್ ಲೋಧಾ, ಮಹಾರಾಷ್ಟ್ರ ಸರ್ಕಾರದ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆ ಸಚಿವ ಶ್ರೀ ಗಣೇಶ್ ಪಾಟೀಲ್, ಮಹಾರಾಷ್ಟ್ರ ಸರ್ಕಾರದ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆ ಕಾರ್ಯದರ್ಶಿ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(Release ID: 2055621) Visitor Counter : 45