ಉಪರಾಷ್ಟ್ರಪತಿಗಳ ಕಾರ್ಯಾಲಯ
2024ರ ಸೆಪ್ಟೆಂಬರ್ 14 ಮತ್ತು 15ರಂದು ಮಹಾರಾಷ್ಟ್ರಕ್ಕೆ ಉಪರಾಷ್ಟ್ರಪತಿಯವರ ಭೇಟಿ
ಸೆಪ್ಟೆಂಬರ್ 15 ರಂದು ಮುಂಬೈನ ಎಲ್ಫಿನ್ ಸ್ಟೊನ್ ಟೆಕ್ನಿಕಲ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಸಂವಿಧಾನ ಮಂದಿರವನ್ನು ಉದ್ಘಾಟಿಸಲಿರುವ ಉಪರಾಷ್ಟ್ರಪತಿಯವರು
ಉಪರಾಷ್ಟ್ರಪತಿಯವರು ನಾಗ್ಪುರದ ರಾಮ್ ದೇವ್ ಬಾಬಾ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 15ರಂದು ಡಿಜಿಟಲ್ ಟವರ್ ಉದ್ಘಾಟಿಸಲಿದ್ದಾರೆ
Posted On:
13 SEP 2024 7:42PM by PIB Bengaluru
ಭಾರತದ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು 2024ರ ಸೆಪ್ಟೆಂಬರ್ 14 ಮತ್ತು 15ರಂದು ಮಹಾರಾಷ್ಟ್ರದ ಮುಂಬೈ ಮತ್ತು ನಾಗ್ಪುರಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆಪ್ಟೆಂಬರ್ 15, 2024ರಂದು ಮುಂಬೈನ ಎಲ್ಫಿನ್ ಸ್ಟೋನ್ ಟೆಕ್ನಿಕಲ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಸಂವಿಧಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಂತರ ಉಪರಾಷ್ಟ್ರಪತಿಯವರು ಅದೇ ದಿನ ನಾಗ್ಪುರಕ್ಕೆ ತೆರಳಲಿದ್ದು, ಅಲ್ಲಿ ಅವರು ರಾಮ್ ದೇವ್ ಬಾಬಾ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಟವರ್ ಅನ್ನು ಉದ್ಘಾಟಿಸಲಿದ್ದಾರೆ.
ಸೆಪ್ಟೆಂಬರ್ 14ರಂದು ಮುಂಬೈಗೆ ಆಗಮಿಸಲಿರುವ ಉಪರಾಷ್ಟ್ರಪತಿಯವರು ಮುಂಬೈನ ರಾಜ್ ಭವನಕ್ಕೂ ಭೇಟಿ ನೀಡಲಿದ್ದಾರೆ.
*****
(Release ID: 2054991)
Visitor Counter : 32