ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

 “ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ (4S)” 2024 ರ ಕರ್ಟನ್ ರೈಸರ್ ನವದೆಹಲಿಯಲ್ಲಿ ನಡೆಯಿತು


ಕೇಂದ್ರ ಸರ್ಕಾರವು ಸುಮಾರು ಎರಡು ಲಕ್ಷ ಅತ್ಯಂತ ಕಷ್ಟಕರ ಮತ್ತು ಕೊಳಕು ಸ್ಥಳಗಳನ್ನು ನಿರ್ದಿಷ್ಟ ಮತ್ತು ಕಾಲಮಿತಿಯಲ್ಲಿ ಪರಿವರ್ತಿಸುವ ಗುರಿ ಹೊಂದಿದೆ: ಶ್ರೀ ಮನೋಹರ್ ಲಾಲ್

ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳು ನಾಗರಿಕರ ಭಾಗವಹಿಸುವಿಕೆಯ ವಿವಿಧ ಚಟುವಟಿಕೆಗಳನ್ನು ಯೋಜಿಸುತ್ತಿವೆ

ಸ್ವಚ್ಛ ಭಾರತ್ ಮಿಷನ್ ನಡವಳಿಕೆ ಬದಲಾವಣೆಗಾಗಿ ಜನಾಂದೋಲನವಾಗಿ ಮಾರ್ಪಟ್ಟಿದೆ ಮತ್ತು ಈಗ ಜಾಗತಿಕವಾಗಿ ಶಿಶು ಮರಣ ಹಾಗೂ ರೋಗಗಳಲ್ಲಿ ಕಡಿತ ಮತ್ತು ಸುಧಾರಿತ ಜೀವನೋಪಾಯದ ಅವಕಾಶಗಳಿಗಾಗಿ ಪ್ರಬಲ ಸಾಧನವಾಗಿ ಗುರುತಿಸಲ್ಪಟ್ಟಿದೆ: ಶ್ರೀ ಸಿ ಆರ್ ಪಾಟೀಲ್

Posted On: 13 SEP 2024 6:58PM by PIB Bengaluru

ಈ ವರ್ಷದ ಸ್ವಚ್ಛ ಭಾರತ್ ಮಿಷನ್ (ಎಸ್‌ ಬಿ ಎಮ್) ಧ್ಯೇಯವಾದ ‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ (4S)’ 2024 ರ ಅಭಿಯಾನದ ಸಮಯದಲ್ಲಿ ಕೇಂದ್ರ ಸರ್ಕಾರವು ಸುಮಾರು ಎರಡು ಲಕ್ಷ ಅತ್ಯಂತ ಕಷ್ಟಕರ ಮತ್ತು ಕೊಳಕು ಸ್ಥಳಗಳನ್ನು ನಿರ್ದಿಷ್ಟ ಮತ್ತು ಸಮಯ-ಮಿತಿಯಲ್ಲಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ನೈರ್ಮಲ್ಯ ಗುರಿ ಘಟಕಗಳು (ಸಿಟಿಯು) ಈ ವರ್ಷದ ಅಭಿಯಾನದ ಪ್ರಮುಖ ಅಂಶಗಳಾಗಿವೆ ಮತ್ತು ಪೋರ್ಟಲ್ ಮೂಲಕ ಸಿಟಿಯುಗಳ ಗುರುತಿಸುವಿಕೆ ಮತ್ತು ಮ್ಯಾಪಿಂಗ್ ಅನ್ನು ಒಳಗೊಂಡಿವೆ. ಇಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ ಲಾಲ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರು ಇದನ್ನು ಘೋಷಿಸಿದರು.

ಕೇಂದ್ರಸ್ವಮ್ಯದ ಸಾರ್ಜನಿಕ ಉದ್ಯಮಗಳು, ಉದ್ಯಮ ಪಾಲುದಾರರು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಸಿಟಿಯು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಅಭಿಯಾನವು ಪ್ರವಾಸಿ ಸ್ಥಳಗಳು, ಸಾರ್ವಜನಿಕ ಕಟ್ಟಡಗಳು, ವಾಣಿಜ್ಯ ಪ್ರದೇಶಗಳು, ಸಮುದಾಯ ಶೌಚಾಲಯಗಳು, ಸಾರ್ವಜನಿಕ ಶೌಚಾಲಯಗಳು, ಜಲಮೂಲಗಳು, ಮೃಗಾಲಯಗಳು, ಅಭಯಾರಣ್ಯಗಳಂತಹ ವಿವಿಧ ಸ್ಥಳಗಳಲ್ಲಿ ಶ್ರಮದಾನ ಮತ್ತು ಸಾಮೂಹಿಕ ಕ್ರಿಯೆಯ ಮೂಲಕ ಬೃಹತ್ ಸ್ವಚ್ಛತಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳು ನಾಗರಿಕರ ಭಾಗವಹಿಸುವಿಕೆಯ ವಿವಿಧ ಚಟುವಟಿಕೆಗಳನ್ನು ಯೋಜಿಸುತ್ತಿವೆ. ಈ ಅಭಿಯಾನವು ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಲಿದೆ ಮತ್ತು 2 ನೇ ಅಕ್ಟೋಬರ್, 2024 ರಂದು ಮಹಾತ್ಮ ಗಾಂಧಿಯವರ ಜನ್ಮದಿನದಂದು ಮುಕ್ತಾಯಗೊಳ್ಳಲಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್ ಅವರು ತಮ್ಮ ಭಾಷಣದಲ್ಲಿ, ಈ ವರ್ಷ ಈ ಅಭಿಯಾನವು 'ಸ್ವಚ್ಛತೆಯೇ ಸೇವೆ'ಯಿಂದ 'ಸ್ವಚ್ಛತೆಯೇ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ಮತ್ತು ಸಂಸ್ಕಾರ' ಎಂಬಲ್ಲಿಗೆ ದೊಡ್ಡ ಜಿಗಿತ ಕಂಡಿದೆ ಎಂದು ಹೇಳಿದರು. ವಿಶ್ವದ ಅತಿ ದೊಡ್ಡ ಜನಾಂದೋಲನವಾಗಿರುವ ಈ ಅಭಿಯಾನವು ಇಡೀ ಸಮಾಜವನ್ನು ಮತ್ತು ಇಡೀ ಸರ್ಕಾರವನ್ನು ಮುನ್ನೆಲೆಗೆ ತರುವ ಮಾಧ್ಯಮವಾಗಿದೆ, ಇದರಿಂದ ಜಾಗತಿಕ ಮಟ್ಟದಲ್ಲಿ ಮಾದರಿಯಾಗಬಹುದು ಎಂದು ಹೇಳಿದರು.

ನಗರ ಪ್ರದೇಶದಲ್ಲಿ 22 ಕೋಟಿ ಮೆಟ್ರಿಕ್ ಟನ್ ತ್ಯಾಜ್ಯವಿರುವ ಅಂದಾಜು 2,300 ತ್ಯಾಜ್ಯ ಸುರಿಯುವ ಸ್ಥಳಗಳಿದ್ದು, ಈ ಪೈಕಿ 9 ಕೋಟಿ ಮೆಟ್ರಿಕ್ ಟನ್ ತ್ಯಾಜ್ಯವಿರುವ 427 ಕೋಟಿ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ ಮತ್ತು 4,500 ಎಕರೆ ಭೂಮಿಯನ್ನು ಪುನಃ ಪಡೆದುಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಮನೆ-ಮನೆಯಿಂದ ಸಂಗ್ರಹಣೆ ಯಿಂದ ಶೇ.100 ರಷ್ಟು ಸಂಸ್ಕರಣೆಗೆ ಬದಲಾವಣೆ ತರುವುದು ಮಿಷನ್ ನ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ ಆರ್ ಪಾಟೀಲ್, ದೇಶದಲ್ಲಿ ಶೇಕಡ 93 ಕ್ಕೂ ಹೆಚ್ಚು ಮಹಿಳೆಯರು ಶೌಚಾಲಯಗಳನ್ನು ಹೊಂದಿದ್ದಾರೆ ಮತ್ತು ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಮಿಷನ್ ಮೊದಲ ಐದು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಶಿಶು ಮರಣವನ್ನು ಕಡಿಮೆ ಮಾಡಿದೆ ಎಂದು ಹೇಳಿದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯ ಆವರಣದಿಂದ ಘೋಷಿಸಿದ ಸ್ವಚ್ಛ ಭಾರತ್ ಮಿಷನ್ ನಡವಳಿಕೆ ಬದಲಾವಣೆಗೆ ಜನಾಂದೋಲನವಾಗಿ ಮಾರ್ಪಟ್ಟಿದೆ ಮತ್ತು ಈಗ ಜಾಗತಿಕವಾಗಿ ಶಿಶು ಮರಣ ಹಾಗೂ ರೋಗ ಕಡಿತ ಮತ್ತು ಸುಧಾರಿತ ಜೀವನೋಪಾಯದ ಅವಕಾಶಗಳಿಗೆ ಪ್ರಬಲ ಸಾಧನವಾಗಿ ಗುರುತಿಸಲ್ಪಟ್ಟಿದೆ ಎಂದು ಶ್ರೀ ಪಾಟೀಲ್ ಹೇಳಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ತೋಖನ್ ಸಾಹು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಪಂಚಾಯತ್ ರಾಜ್ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪರಿವರ್ತನೆಯ ಸ್ವಚ್ಛತಾ ಪ್ರಯತ್ನಗಳ ಒಂದು ದಶಕ

ಎಸ್‌ ಬಿ ಎಮ್‌ ಅಭಿಯಾನವನ್ನು 2ನೇ ಅಕ್ಟೋಬರ್ 2014 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಾರಂಭಿಸಿದರು, ಇದು 'ಸಂಪೂರ್ಣ ಸಮಾಜದ' ವಿಧಾನವನ್ನು ಪ್ರತಿಬಿಂಬಿಸುತ್ತದೆ, ನೈರ್ಮಲ್ಯವನ್ನು 'ಎಲ್ಲರ ಜವಾಬ್ದಾರಿ'ಯನ್ನಾಗಿ ಮಾಡುತ್ತದೆ.

ಈ ಅಭಿಯಾನವು ಸುಸ್ಥಿರ ನಡವಳಿಕೆಯ ಬದಲಾವಣೆಯನ್ನು ಪ್ರೋತ್ಸಾಹಿಸುವ ಕಡೆಗೆ ಬದಲಾವಣೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ, ದೈನಂದಿನ ಅಭ್ಯಾಸಗಳಲ್ಲಿ ಶುಚಿತ್ವವನ್ನು ಸಂಯೋಜಿಸುವುದು ಮತ್ತು ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

ಈ ವರ್ಷದ ಸ್ವಾತಂತ್ರ್ಯ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛತೆಯು  ಹೇಗೆ ಭಾರತೀಯ ಸಮಾಜದ ಪ್ರಮುಖ ಭಾಗವಾಗಿದೆ, ದೇಶಾದ್ಯಂತ ಪರಿವರ್ತಕ ಬದಲಾವಣೆಗಳಿಗೆ ಹೇಗೆ ಚಾಲನೆ ನೀಡಿದೆ ಎಂಬುದನ್ನು ಪುನರುಚ್ಚರಿಸಿದರು.

ಈ ವರ್ಷದ ಅಭಿಯಾನವನ್ನು 'ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ (4S)' ಎಂಬ ಧ್ಯೇಯದ ಅಡಿಯಲ್ಲಿ ಆಚರಿಸಲಾಗುತ್ತಿದೆ ಮತ್ತು ಸ್ವಚ್ಛ ಭಾರತ್ ಮಿಷನ್‌ನ 10 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ 17 ನೇ ಸೆಪ್ಟೆಂಬರ್‌ನಿಂದ 2 ನೇ ಅಕ್ಟೋಬರ್ 2024 ರವರೆಗೆ ನಡೆಯಲಿದೆ.

 

ಅಭಿಯಾನದ ಪ್ರಮುಖ ಸ್ತಂಭಗಳು

ಈ ವರ್ಷದ ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ (4S) 2024 ಅಭಿಯಾನವು ಮೂರು ಮುಖ್ಯ ಸ್ತಂಭಗಳನ್ನು ಆಧರಿಸಿದೆ:

1.   ಸ್ವಚ್ಛತಾ ಪಾಲುದಾರಿಕೆ - ಸ್ವಚ್ಛ ಭಾರತಕ್ಕಾಗಿ ಸಾರ್ವಜನಿಕ ಸಹಭಾಗಿತ್ವ, ಜಾಗೃತಿ ಮತ್ತು ಸಮಾಲೋಚನೆ.

2. ಸಂಪೂರ್ಣ ನೈರ್ಮಲ್ಯ - ತಲುಪಲು ಕಷ್ಟಕರವಾದ ಮತ್ತು ಕೊಳಕು ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಬೃಹತ್ ಸ್ವಚ್ಛತಾ ಅಭಿಯಾನಗಳು (ನೈರ್ಮಲ್ಯ ಉದ್ದೇಶಿತ ಘಟಕಗಳು).

3. ಸಫಾಯಿ ಮಿತ್ರ ಸುರಕ್ಷತಾ ಶಿಬಿರ - ಏಕ ಗವಾಕ್ಷಿ ಸೇವೆ, ನೈರ್ಮಲ್ಯ ಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯಕ್ಕಾಗಿ ಸುರಕ್ಷತೆ ಮತ್ತು ಗುರುತಿಸುವಿಕೆ ಶಿಬಿರ.

ʼಇಡೀ ಸಮಾಜʼ ಮತ್ತು ʼಇಡೀ ಸರ್ಕಾರʼ ವಿಧಾನ

ʼಇಡೀ ಸಮಾಜʼ ವಿಧಾನವನ್ನು ಅಳವಡಿಸಿಕೊಳ್ಳುವ ಅಭಿಯಾನವು ನಾಗರಿಕರು, ಕೈಗಾರಿಕೆಗಳು, ಎನ್‌ ಜಿ ಒ ಗಳು, ಅಭಿವೃದ್ಧಿ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ ಗಳು ಮತ್ತು ವಿವಿಧ ಮಧ್ಯಸ್ಥಗಾರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ. ಹೆಚ್ಚುವರಿಯಾಗಿ, 'ಇಡೀ ಸರ್ಕಾರ' ವಿಧಾನದ ಮೂಲಕ, ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವಾಲಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗಾಗಿ ನಿಜವಾದ ರಾಷ್ಟ್ರವ್ಯಾಪಿ ಆಂದೋಲನವನ್ನು ಖಚಿತಪಡಿಸಿಕೊಳ್ಳಲು ಭಾಗವಹಿಸುತ್ತವೆ.

ಅಭಿಯಾನವು ಸ್ವಚ್ಛ ಭಾರತ ದಿವಸಕ್ಕೆ ಹತ್ತಿರವಾಗುತ್ತಿದ್ದಂತೆ ವೇಗವನ್ನು ಪಡೆಯುತ್ತದೆ, ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ, ಜಾಗೃತಿ ಮೂಡಿಸುತ್ತದೆ ಮತ್ತು ಸ್ವಚ್ಛ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ.

 

*****

 


(Release ID: 2054819) Visitor Counter : 104