ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಪ್ರವಾಸೋದ್ಯಮ ಸಚಿವಾಲಯವು ವಿಶೇಷ ಅಭಿಯಾನ 4.0 ಸಮಯದಲ್ಲಿ ಸ್ವಚ್ಛತಾ ಮತ್ತು ಬಾಕಿ ಕಡತ ವಿಲೇವರಿಗೆ ಕ್ರಮ

Posted On: 13 SEP 2024 4:35PM by PIB Bengaluru

ಕೇಂದ್ರ ಸರ್ಕಾರವು 2ನೇ ಅಕ್ಟೋಬರ್‌ನಿಂದ 31ನೇ ಅಕ್ಟೋಬರ್ 2024 ರವರೆಗೆ ವಿಶೇಷ ಅಭಿಯಾನ 4.0ಗೆ ಮುಂದಾಗಿದೆ. ಸ್ವಚ್ಛತಾ ಮತ್ತು ಬಾಕಿ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ಅಭಿಯಾನ 3.0 ರಲ್ಲಿನ ಕೊನೆಯ ಅಭಿಯಾನದ ಸಮಯದಲ್ಲಿ, ಪ್ರವಾಸೋದ್ಯಮ ಸಚಿವಾಲಯ ಮತ್ತು ಅದರ ಅಧೀನ ಕಚೇರಿಗಳು ಮತ್ತು ಸಂಸ್ಥೆಗಳಾದ ಕೇಂದ್ರ ಪ್ರವಾಸೋದ್ಯಮ ದೇಶೀಯ ಕಚೇರಿಗಳು, ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಅಡುಗೆ ತಂತ್ರಜ್ಞಾನದ ರಾಷ್ಟ್ರೀಯ ಮಂಡಳಿ (NCHMCT), ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (CIHMs), ಭಾರತೀಯ ಪಾಕಶಾಲೆಯ ಸಂಸ್ಥೆಗಳು (ICIs), ಯುವ ಪ್ರವಾಸೋದ್ಯಮ ಕ್ಲಬ್‌ಗಳು (YTC) ಇದರಲ್ಲಿ ಕೈಜೋಡಿಸಿವೆ. ಕೇಂದ್ರ ಸರ್ಕಾರವು ನಡೆಸುತ್ತಿರುವ ವಿಶೇಷ ಅಭಿಯಾನ 3.0 ನಲ್ಲಿ ಸಕ್ರಿಯವಾಗಿ ಭಾಗವಹಿಸಲಾಗಿತ್ತು.

ವಿಶೇಷ ಅಭಿಯಾನ 3.0 ಸಮಯದಲ್ಲಿ, ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತ 412 ‘ಸ್ವಚ್ಛತಾ ಅಭಿಯಾನ’ಗಳನ್ನು ನಡೆಸಿತು. ಒಟ್ಟು 3496 ಕಡತಗಳನ್ನು ವಿಲೇವಾರಿ ಮಾಡಿದೆ ಮತ್ತು 1633 ಎಲೆಕ್ಟ್ರಾನಿಕ್ ಫೈಲ್‌ಗಳನ್ನು ವಿಲೇವಾರಿ ಮಾಡಲಾಗಿದೆ. ವಿಶೇಷ ಅಭಿಯಾನ 3.0 ರ ಅಡಿಯಲ್ಲಿ ಕಾರ್ಯಗತಗೊಳಿಸಲಾದ ಚಟುವಟಿಕೆಗಳನ್ನು ವಿಶೇಷ ಅಭಿಯಾನ 3.0 ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕ್ರಮ ಕೈಗೊಳ್ಳಲಾಗಿದೆ.

02 ಅಕ್ಟೋಬರ್ 2024 ರಿಂದ 31 ಅಕ್ಟೋಬರ್ 2024 ರವರೆಗೆ ನಡೆಯಲಿರುವ ಮುಂಬರುವ ವಿಶೇಷ ಅಭಿಯಾನ 4.0 ರ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಸಚಿವಾಲಯವು ಪ್ರಯತ್ನ ಮಾಡುತ್ತಿದೆ.

 

*****


(Release ID: 2054816) Visitor Counter : 35


Read this release in: English , Urdu , Hindi , Tamil