ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಪ್ರದರ್ಶನ (RE-INVEST) ವನ್ನು 16 ರಿಂದ 18 ಸೆಪ್ಟೆಂಬರ್ 2024 ರವರೆಗೆ ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಆಯೋಜಿಸಿದೆ


16ನೇ ಸೆಪ್ಟೆಂಬರ್ 2024 ರಂದು ಗಾಂಧಿ ನಗರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಪ್ರದರ್ಶನವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ: ಶ್ರೀ ಪ್ರಲ್ಹಾದ್ ಜೋಶಿ

ನವೀಕರಿಸಬಹುದಾದ ಇಂಧನ ವಲಯಕ್ಕಾಗಿ ತಮ್ಮ ಯೋಜನೆಗಳು/ಗುರಿಗಳನ್ನು ಖಚಿತಪಡಿಸುವ ಶಪತ್-ಪತ್ರ ರೂಪದಲ್ಲಿ ರಾಜ್ಯ ಸರ್ಕಾರಗಳು ತಮ್ಮ ದೃಢವಾದ ಬದ್ಧತೆಗಳನ್ನು ನೀಡಲು: ಶ್ರೀ ಪ್ರಲ್ಹಾದ್ ಜೋಶಿ

Posted On: 09 SEP 2024 7:20PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು "ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ ಆರ್ಇ) 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಪ್ರದರ್ಶನ (RE-INVEST 2024) ವನ್ನು 2024 ರ ಸೆಪ್ಟೆಂಬರ್ 16 ರಿಂದ 18 ರವರೆಗೆ ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಆಯೋಜಿಸಿದೆ.

ಇಂದು ಗಾಂಧಿನಗರದಲ್ಲಿ ಮಾಧ್ಯಮಗಳೊಂದಿಗೆ ಕೇಂದ್ರ ಸಚಿವರು ಮಾತನಾಡುತ್ತಾ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 16 ರಂದು ಹೂಡಿಕೆ ಸಮಾವೇಶ ಮತ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ರೀ-ಇನ್ವೆಸ್ಟ್ 2024 ಉತ್ಪಾದನೆ ಮತ್ತು ನಿಯೋಜನೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಮಹತ್ವದ ಸಾಧನೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. ಭಾರತವು ಮುಂದಿನ ಪೀಳಿಗೆಗೆ ಹಸಿರು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು  ಗುರುತಿಸುತ್ತದೆ ಮತ್ತು  ಪ್ರಧಾನ ಮಂತ್ರಿಯವರ ʼಪಂಚಾಮೃತʼದ ದೂರದೃಷ್ಟಿ ಮತ್ತು 2030 ರ ವೇಳೆಗೆ 500 ಗಿಗಾ ವ್ಯಾಟ್ ಪಳೆಯುಳಿಕೆ ರಹಿತ ಇಂಧನ ಘಟಕವನ್ನು ಸ್ಥಾಪಿಸುವುದು ಇದರ ಮೂಲ ಉದ್ದೇಶವಾಗಿದೆ.

4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಪ್ರದರ್ಶನ (ರೀ-ಇನ್ವೆಸ್ಟ್ 2024)ಕ್ಕೆ ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ನಾರ್ವೆ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ತಿಳಿಸಿದರು.

ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳು ಈ ಕಾರ್ಯಕ್ರಮದ ಪಾಲುದಾರ ರಾಜ್ಯಗಳಾಗಿವೆ.

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು “ಈ ಕಾರ್ಯಕ್ರಮವು ವಿವಿಧ ರಾಜ್ಯ ಸರ್ಕಾರಗಳು ಶಪತ್-ಪತ್ರ ರೂಪದಲ್ಲಿ ತಮ್ಮ ದೃಢವಾದ ಬದ್ಧತೆಗಳನ್ನು ನೀಡುತ್ತದೆ ಮತ್ತು ನವೀಕರಿಸಬಹುದಾದ ಇಂಧನ ವಲಯಕ್ಕೆ ತಮ್ಮ ಯೋಜನೆಗಳು ಮುತ್ತು ಗುರಿಗಳನ್ನು ಖಚಿತಪಡಿಸುತ್ತವೆ. ಎಲ್ಲಾ ಪ್ರಮುಖ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿ ತಮ್ಮ ಪ್ರಸ್ತಾವಿತ ಸಾಲಗಳು / ನಿಧಿಯ ಬಗ್ಗೆ ಶಪತ್ ಪತ್ರವನ್ನು ನೀಡುತ್ತವೆ, ಇದರ ಹೊರತಾಗಿ ಡೆವಲಪರ್ಗಳು, ತಯಾರಕರು, ಖಾಸಗಿ ಈಕ್ವಿಟಿ ಹೂಡಿಕೆದಾರರು, ಉನ್ನತ ಮಾರಾಟಗಾರರು ಸಹ ಶಪತ್ ಪತ್ರವನ್ನು ನೀಡಲಿದ್ದಾರೆ.” ಎಂದು ತಿಳಿಸಿದರು

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ನಾರ್ವೆ, ಸಿಂಗಾಪುರ್, ಹಾಂಗ್ಕಾಂಗ್, ಯುಎಸ್ಎ, ಯುಕೆ, ಬೆಲ್ಜಿಯಂ, ಯುರೋಪಿಯನ್ ಯೂನಿಯನ್, ಓಮನ್, ಯುಎಇ ಮತ್ತು ಇನ್ನೂ ಅನೇಕ ದೇಶಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸಮಾವೇಶವು ನೀತಿ ನಿರೂಪಕರು, ಕೈಗಾರಿಕೆಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಜರ್ಮನ್ ಮತ್ತು ಡ್ಯಾನಿಶ್ ನಿಯೋಗವನ್ನು ಆಯಾ ದೇಶದ ಮಂತ್ರಿಗಳು ಮುನ್ನಡೆಸುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದರು.

ನವೀಕರಿಸಬಹುದಾದ ಇಂಧನ, ನವೀಕರಿಸಬಹುದಾದ ಇಂಧನ ವಲಯಕ್ಕೆ ಹಣಕಾಸು, ಹಸಿರು ಜಲಜನಕ, ಭವಿಷ್ಯದ ಇಂಧನದ ಆಯ್ಕೆಗಳು, ಸಾಮರ್ಥ್ಯ ನಿರ್ಮಾಣ ಮತ್ತು ನವೀಕರಿಸಬಹುದಾದ ಇಂಧನ ಸಂಬಂಧಿತ ತಯಾರಕರು, ಡೆವಲಪರ್ಗಳು, ಹೂಡಿಕೆದಾರರು ಮತ್ತು ನವ ನಿರ್ಮಿತಿಕಾರರ ಕುರಿತು ಎರಡೂವರೆ ದಿನಗಳ ಸಮ್ಮೇಳನವನ್ನು ಈ ಕಾರ್ಯಕ್ರಮವು ಒಳಗೊಂಡಿರುತ್ತದೆ.

ಸಮ್ಮೇಳನದಲ್ಲಿ 10,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀ ಪ್ರಲ್ಹಾದ ಜೋಶಿ ತಿಳಿಸಿದರು. ಇದು ಮುಖ್ಯಮಂತ್ರಿಗಳ ಸಮಗ್ರ ಸಭೆ, ಸಿಇಒ ರೌಂಡ್ಟೇಬಲ್ ಮತ್ತು ಹಲವಾರು ರಾಜ್ಯ, ದೇಶ ಮತ್ತು ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಂತೆ 44 ಅಧಿವೇಶನಗಳನ್ನು ಹೊಂದಿರುತ್ತದೆ.

ಇದರ ಹೊರತಾಗಿ, ಇಂಧನ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ನಾಯಕರಾಗಿ ಮಹಿಳೆಯರ ಪಾತ್ರ: ಸವಾಲುಗಳು ಮತ್ತು ಅವಕಾಶಗಳು ಮತ್ತು  ನವೋದ್ಯಮಗಳ ಕುರಿತು 10 ʼಸೋಲಾರ್ ಎಕ್ಸ್ ಚಾಲೆಂಜ್ ಇಂಡಿಯಾʼ ವಿಜೇತರು ಹೂಡಿಕೆಗಾಗಿ ತಮ್ಮ ವ್ಯಾಪಾರ ಮತ್ತು ವ್ಯವಹಾರದ ಯೋಜನೆಯನ್ನು ಪ್ರಸ್ತುತ ಪಡಿಸುವ ವಿಶೇಷ ಅಧಿವೇಶನವು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಸಮ್ಮೇಳನದ ಹೊರತಾಗಿ, ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಆತಿಥೇಯ ರಾಜ್ಯ ಗುಜರಾತ್  ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ನವೋದ್ಯಮಗಳು ಇತ್ಯಾದಿಗಳಿಂದ ಪ್ರದರ್ಶನವಿರುತ್ತದೆ. ಹೆಚ್ಚಿನ ಸಂಖ್ಯೆಯ B2B, B2G ಮತ್ತು G2G ಸಭೆಗಳ ಅವಕಾಶವನ್ನು ಹೊಂದಿರುವ ರೀ-ಇನ್ವೆಸ್ಟ್ 2024  ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೀ-ಇನ್ವೆಸ್ಟ್ 2024 ಗಾಗಿ, B2B ಸಂವಹನಗಳ ಸೌಲಭ್ಯವನ್ನು ಮೀಸಲಾದ B2B ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಒದಗಿಸಲಾಗುತ್ತಿದೆ ಅದನ್ನು ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಪ್ರದರ್ಶನ (RE-INVEST 2024 ರೀ-ಇನ್ವೆಸ್ಟ್ 2024)ದ  ಅಧಿಕೃತ ಜಾಲತಣ  https://re-invest.in/ ನಲ್ಲಿ  ಕಾಣಬಹುದು.

ನವೀಕರಿಸಬಹುದಾದ ಇಂಧನದ ಎಲ್ಲಾ ಅಂಶಗಳ ಕುರಿತು ಬಹು ಸುತ್ತಿನ ಮಲ್ಟಿಮೀಡಿಯಾ ರಸಪ್ರಶ್ನೆಯನ್ನು ರೀ-ಇನ್ವೆಸ್ಟ್ 2024ರಲ್ಲಿ ನಡೆಸಲಾಗುತ್ತದೆ. ರಸಪ್ರಶ್ನೆಯ ಪ್ರಾಥಮಿಕ ಸುತ್ತನ್ನು ಆಗಸ್ಟ್ 2024 ರಲ್ಲಿ ನಡೆಸಲಾಯಿತು.

ಭಾರತ ಮತ್ತು ವಿದೇಶಗಳಿಂದ ಬೃಹತ್ ಉದ್ಯಮಗಳ ಭಾಗವಹಿಸುವಿಕೆ ಇರುತ್ತದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟವು ರೀ-ಇನ್ವೆಸ್ಟ್ 2024ಗಾಗಿ ಉದ್ಯಮ ಪಾಲುದಾರವಾಗಿದೆ.

ರೀ-ಇನ್ವೆಸ್ಟ್ ಬಲವಾದ ಪರಂಪರೆಯನ್ನು ಹೊಂದಿದೆ. ಮೊದಲ ಆವೃತ್ತಿಯನ್ನು ಫೆಬ್ರವರಿ 2015 ರಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು, ಎರಡನೆಯದನ್ನು ಅಕ್ಟೋಬರ್ 2018 ರಲ್ಲಿ ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್)ದಲ್ಲಿ ಮತ್ತು ಮೂರನೆಯ ಆವೃತ್ತಿಯನ್ನು ನವೆಂಬರ್ 2020 ರಲ್ಲಿ ಕೋವಿಡ್-19 ನಿರ್ಬಂಧಗಳ ಕಾರಣದಿಂದಾಗಿ ವರ್ಚುವಲ್ ಪ್ಲಾಟ್ಫಾರ್ಮ್ನಲ್ಲಿ ಆಯೋಜಿಸಲಾಗಿತ್ತು. ರೀ-ಇನ್ವೆಸ್ಟ್ ನ ಪ್ರತಿ ಆವೃತ್ತಿಯು ವಿದೇಶದಿಂದ ಪಾಲ್ಗೊಳ್ಳುವವರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಾಗವಹಿಸುವವರನ್ನು ಕಂಡಿದೆ.  ಎಲ್ಲಾ ಹಿಂದಿನ ಆವೃತ್ತಿಗಳನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ಉದ್ಘಾಟಿಸಿದ್ದಾರೆ.

ಇಂದು, ಭಾರತವು 2030 ರ ವೇಳೆಗೆ 500 ಗಿಗಾ ವ್ಯಾಟ್ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿ ಸಿದ್ಧವಾಗಿದೆ. ಇದು ಪ್ರಪಂಚದ ಅತ್ಯಂತ ಆಕರ್ಷಕವಾದ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಪಿಎಲ್ ಐ ಯೋಜನೆಯ ಮೂಲಕ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಪೂರ್ವಭಾವಿ ನೀತಿ ಬೆಂಬಲವನ್ನು ನೀಡುತ್ತದೆ, ಸ್ವಯಂಚಾಲಿತ ಮಾರ್ಗದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುತ್ತದೆ, ನವೀಕರಿಸಬಹುದಾದ ಇಂಧನ ಖರೀದಿಗಳಿಗೆ ಐಎಸ್ ಟಿಎಸ್  ಶುಲ್ಕ ಮನ್ನಾ, ಹಸಿರು ಇಂಧನ ಕಾರಿಡಾರ್, ಕಡಲ ತೀರದಾಚೆಯ ಗಾಳಿ ಯೋಜನೆಗಳಿಗೆ ವಿಜಿಎಫ್  ಹಾಗು  ಜಲಜನಕ ಮತ್ತು ಎಲೆಕ್ಟ್ರೋಲೈಸರ್ ಉತ್ಪಾದನಾ ಯೋಜನೆಗಳಿಗೆ ಹಣಕಾಸಿನ ನೆರವು, ಇವೆಲ್ಲವುಗಳಿಂದ ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ 4 ನೇ ಸ್ಥಾನದಲ್ಲಿದೆ, ಭಾರತವು ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಗಳಂತಹ  ಕ್ರಾಂತಿಕಾರಿ ಯೋಜನೆಗಳನ್ನು ರೈತರು ಮತ್ತು ಕುಟುಂಬಗಳಿಗೆ ಅನುಕೂಲವಾಗುವಂತೆ ಪ್ರಾರಂಭಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆಗಳನ್ನು ತೀವ್ರಗೊಳಿಸಲು ಭಾರತ ಗುರಿ ಹೊಂದಿದೆ. ರೀ-ಇನ್ವೆಸ್ಟ್ ಈ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ಹೂಡಿಕೆ ಸಮುದಾಯವನ್ನು ಎಲ್ಲಾ ಭಾರತೀಯ ನವೀಕರಿಸಬಹುದಾದ ಇಂಧನ ಪಾಲುದಾರರೊಂದಿಗೆ ಸಂಪರ್ಕಿಸುತ್ತದೆ.
 

*****



(Release ID: 2053311) Visitor Counter : 21