ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪೋಷಣ‌ ಮಾಸ  2024 ಇದರ ನಿರ್ಣಾಯಕ ಪರಿಕಲ್ಪನೆ: ಪೂರಕ ಆಹಾರದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು 

Posted On: 08 SEP 2024 4:36PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 7 ನೇ ರಾಷ್ಟ್ರೀಯ ಪೋಷಣ ಮಾಸವನ್ನು ಆಚರಿಸುತ್ತಿದೆ. ಇದು ತಲಮಟ್ಟದ ಹಂತದಲ್ಲಿ ಪೌಷ್ಟಿಕಾಂಶಗಳ ಫಲಿತಾಂಶಗಳನ್ನು ಸುಧಾರಿಸುವ ಮತ್ತು ಮಗುವಿನ ನಡವಳಿಕೆಯ ಬದಲಾವಣೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.  ಈ ವರ್ಷದ ಪರಿಕಲ್ಪನೆ "ಶಿಶು ಪೋಷಣೆಯ ನಿರ್ಣಾಯಕ ಅಂಶವಾದ ಪೂರಕ ಆಹಾರ" ಎಂಬ ವಿಷಯವನ್ನು ಒಳಗೊಂಡಿದೆ.

ಪೋಷಣ‌ ಮಾಸದ 7 ನೇ ದಿನದಂದು, 1.79 ಕೋಟಿ ಚಟುವಟಿಕೆಗಳನ್ನು ವರದಿ ಮಾಡಲಾಗಿದೆ, ಇದು ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ವ್ಯಾಪಕವಾದ ಹುರುಪು , ಉತ್ಸಾಹ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ.  ಶಿಶು ಪೋಷಣೆಯ ನಿರ್ಣಾಯಕ ಅಂಶವಾದ ಪೂರಕ ಆಹಾರದ ಮೇಲೆ ನಿರ್ದಿಷ್ಟವಾಗಿ 20 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ವರದಿ ಮಾಡಲಾಗಿದೆ.

ಸುಮಾರು 6 ತಿಂಗಳ ವಯಸ್ಸಿನ ನಂತರ, ಮಗುವಿನ ಶಕ್ತಿ ಮತ್ತು ಪೋಷಕಾಂಶಗಳ ಅಗತ್ಯವು ಎದೆ ಹಾಲಿನಿಂದ ಹೊರತಾಗಿ ಇತರ ಪೂರಕ ಆಹಾರ ಒದಗಿಸಲ್ಪಡುವುದರಿಂದ ಪ್ರಾರಂಭಿಸುತ್ತದೆ.   ಆ ಅಗತ್ಯಗಳನ್ನು ಪೂರೈಸಲು ಪೂರಕ ಆಹಾರಗಳು ಅವಶ್ಯಕ.  ಈ ವಯಸ್ಸಿನ ಶಿಶುವು ತಾಯಿಯ ಹಾಲನ್ನು ಹೊರತುಪಡಿಸಿ ಇತರ ಆಹಾರ ಸೇವನೆಗಳಿಗೆ ಸೂಕ್ತ ಬೆಳವಣಿಗೆಗೆ ಸಿದ್ಧವಾಗಿರುತ್ತದೆ.

ಪೂರಕ ಆಹಾರದ ಅವಧಿಯಲ್ಲಿ, ಮಕ್ಕಳು ಅಪೌಷ್ಟಿಕತೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಪ್ರಾರಂಭದ ಸಮಯ, ಪೌಷ್ಟಿಕಾಂಶದ ಗುಣಮಟ್ಟ, ಪ್ರಮಾಣ ಮತ್ತು ಪೂರಕ ಆಹಾರದ ಆವರ್ತನದ ಬಗ್ಗೆ ಸಮುದಾಯದ ಸಂವೇದನೆಯು ಮಕ್ಕಳ ಆರೋಗ್ಯಕರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Image

7ನೇ ರಾಷ್ಟ್ರೀಯ ಪೋಷಣ ಮಾಸ ಇಲ್ಲಿಯವರೆಗೆ,  ದೇಶಾದ್ಯಂತ ಗಮನಾರ್ಹ ಹಾಗೂ ಮಹತ್ವದ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 756 ಜಿಲ್ಲೆಗಳು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿವೆ ಮತ್ತು ಪೌಷ್ಟಿಕಾಂಶ-ಕೇಂದ್ರಿತ ಸಂವೇದನಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

 

*****


(Release ID: 2053082) Visitor Counter : 47