ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
azadi ka amrit mahotsav

ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಎನ್ ಎಚ್ ಆರ್ ಸಿ ಮತ್ತು ಸಂಕಲ ಫೌಂಡೇಶನ್‌ `ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆ: ಡಿಜಿಟಲ್ ಪರಿಹಾರಗಳು' ಎಂಬ ರಾಷ್ಟ್ರೀಯ ಸಮ್ಮೇಳನ ನವದೆಹಲಿಯ ಐ ಎಚ್ ಸಿ ಯಲ್ಲಿ  ಸೆಪ್ಟೆಂಬರ್  6 ರಂದು ನಡೆಯಲಿದೆ


ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕ್ಷೇತ್ರದಲ್ಲಿನ ವಿವಿಧ ಪಾಲುದಾರರು ಮತ್ತು ತಜ್ಞರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಗುರಿಯನ್ನು ಸಮ್ಮೇಳನವು ಹೊಂದಿದೆ

Posted On: 05 SEP 2024 5:54PM by PIB Bengaluru

ನವದೆಹಲಿ - ನೀತಿ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಸಂಕಲ ಫೌಂಡೇಶನ್‌ ಸಹಯೋಗದೊಂದಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇದೇ ಸೆಪ್ಟೆಂಬರ್ 6 ರಂದು `ಆರೋಗ್ಯ ಸೇವೆಗಳ ಸಾರ್ವತ್ರಿಕ ಲಭ್ಯತೆ: ಡಿಜಿಟಲ್ ಪರಿಹಾರಗಳು' ಎಂಬ ರಾಷ್ಟ್ರೀಯ ಸಮ್ಮೇಳನವನ್ನು ನವದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ಆಯೋಜಿಸಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ, ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಮತ್ತು ಡಿಜಿಟಲ್ ಹೆಲ್ತ್‌ಕೇರ್ ತಂತ್ರಜ್ಞಾನ ಕ್ಷೇತ್ರದಲ್ಲಿನ ವೈದ್ಯರು, ತಜ್ಞರು, ಸಂಶೋಧನೆಗಾರರು, ಸರಕಾರಿ ಅಧಿಕಾರಿಗಳು, ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಡಿ ತರುವ ಗುರಿಯನ್ನು ಈ ಸಮ್ಮೇಳನವು ಹೊಂದಿದೆ. 

 ಡಾ.ವಿ. ಕೆ. ಪಾಲ್, ಸದಸ್ಯ (ಆರೋಗ್ಯ), ನೀತಿ ಆಯೋಗ,  ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.  ಅವರು ತಾಂತ್ರಿಕ ಅಧಿವೇಶನಗಳ ಅಧ್ಯಕ್ಷತೆಯನ್ನೂ ವಹಿಸಲಿದ್ದಾರೆ.  ಶ್ರೀ ಭರತ್ ಲಾಲ್,  ಮಹಾ ಪ್ರಧಾನ ಕಾರ್ಯದರ್ಶಿ, ಎನ್‌ಎಚ್‌ಆರ್‌ಸಿ,  ಈ ಸಮ್ಮೇಳನದ ಹಿಂದಿನ ಉದ್ದೇಶ, ಸಂದರ್ಭ ಮತ್ತು ಮುಂದಿನ ಸವಾಲುಗಳ ಬಗ್ಗೆ ಮಾತನಾಡುವರು.  ಡಾ. ರಾಜೀವ್ ಬಹ್ಲ್, ಡಿಜಿ, ಐಸಿಎಂಆರ್,  ಶ್ರೀ ಎಸ್ ಕೃಷ್ಣಣ್ಣ, ಕಾರ್ಯದರ್ಶಿ, MEITY, ಶ್ರೀ ಸಿ ಕೆ ಮಿಶ್ರಾ, ಮಾಜಿ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಶ್ರೀ ಲವ್ ಅಗರ್ವಾಲ್, ಶ್ರೀಮತಿ ದೇಬ್ಜಾನಿ ಘೋಷ್, ಡಾ ಮನೋಹರ್ ಅಗ್ನಾನಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಶ್ರೀಮತಿ ಎಲ್ ಎಸ್ ಚಾಂಗ್ಸನ್, ಶ್ರೀ ಮಧುಕರ್ ಕುಮಾರ್ ಭಗತ್, ಜಂಟಿ ಕಾರ್ಯದರ್ಶಿ (ಇ-ಹೆಲ್ತ್), ಶ್ರೀ ಶಶಾಂಕ್ ಎನ್.ಡಿ, ಅಧ್ಯಕ್ಷರು, ಡಿಜಿಟಲ್ ಆರೋಗ್ಯ ಸಮಿತಿ ( ಸಿಐಐ) ಮತ್ತು ಪ್ರಾಕ್ಟೊದ ಸಹ-ಸ್ಥಾಪಕ ಮತ್ತು ಸಿಇಓ, ಶ್ರೀ ಗಿರೀಶ್ ಕೃಷ್ಣಮೂರ್ತಿ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ, ಟಾಟಾ ಎಂಡಿ ಮತ್ತು ಸಿವಿಲ್ ಸೊಸೈಟಿ ಮತ್ತು ಸ್ಟಾರ್ಟ್-ಅಪ್‌ಗಳ ನವೋದ್ಯಮಿಗಳು. WHO, UNDP ಮತ್ತು ರಾಜ್ಯಗಳ ಡೊಮೇನ್ ತಜ್ಞರು ಸಮ್ಮೇಳನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಸಮ್ಮೇಳನವು `ಆರೋಗ್ಯ ಸೇವೆಗಳಲ್ಲಿನ ಬದಲಾವಣೆಯ ಮಾದರಿಗಳು', `ಡಿಜಿಟಲ್ ಆರೋಗ್ಯದಲ್ಲಿ ಭವಿಷ್ಯದ ಗಡಿಗಳು' ಮತ್ತು `ತಂತ್ರಜ್ಞಾನ ಆಧಾರಿತ ಯೂನಿವರ್ಸಲ್ ಹೆಲ್ತ್ ಕವರೇಜ್' ಎಂಬ ಮೂರು ತಾಂತ್ರಿಕ ಸೆಷನ್ಸ್ ಗಳನ್ನು ಹೊಂದಿದೆ.  ಇದರ ಜೊತೆಗೆ ಸಂಕಲ ಫೌಂಡೇಶನ್ ಸಂಶೋಧನೆ ಮತ್ತು ಕ್ಷೇತ್ರ ಅಧ್ಯಯನದ ಆಧಾರದ ಮೇಲೆ  ತಯಾರಿಸಿದ "ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಡಿಜಿಟಲ್ ಪರಿಹಾರಗಳ ಬಳಕೆ' ಎಂಬ ವರದಿಯನ್ನು ಬಿಡುಗಡೆ ಮಾಡಲಾಗುವುದು.  

ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ದೊರೆಯುವಂತೆ ಮಾಡಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರದ ಎಲ್ಲ ಪಾಲುದಾರರು ಒಂದೆಡೆ ಸೇರಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಇದು ಸಕಾಲವಾಗಿದೆ.  ಯಾರೊಬ್ಬರೂ ಹೊರಗುಳಿಯದಂತೆ ಪ್ರತಿಯೊಬ್ಬರ ಮಾನವ ಹಕ್ಕುಗಳನ್ನು ರಕ್ಷಿಸಲು ಇದು ಮುಖ್ಯವಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ದೊರಕುವುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ಬಳಕೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಲವಾಗಿ ಪ್ರತಿಪಾದಿಸುವುದರೊಂದಿಗೆ ಸಾರ್ವತ್ರಿಕ ಆರೋಗ್ಯ ಸೇವೆಗಳು ಮೂಲಭೂತ ಮಾನವ ಹಕ್ಕುಗಳಾಗಿ ಹೊರಹೊಮ್ಮಿವೆ.  COVID-19 ಸಾಂಕ್ರಾಮಿಕ ಸಮಯದಲ್ಲಿ, ಮಾನವ ಹಕ್ಕುಗಳ ಅನುಸರಣೆ ಮತ್ತು ಆರೈಕೆಯ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಯೋಗವು ಸಮಗ್ರ ಸಲಹೆಗಳನ್ನು ನೀಡಿತ್ತು. 

ಗುಣಮಟ್ಟದ ಸೇವೆಗಳು ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ತನ್ನ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಭಾರತ ಇಟ್ಟಿರುವ ಗಮನಾರ್ಹ ಹೆಜ್ಜೆಗಳನ್ನು ಈ ಸಮ್ಮೇಳನವು ದಾಖಲಿಸುವುದರ ಜೊತೆಗೆ  ಇವುಗಳನ್ನು ದೂರದ  ಗ್ರಾಮೀಣ ಪ್ರದೇಶಗಳಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಹೇಗೆ ತಲುಪಿಸುಬಹುದು ಎಂಬುದರ ಬಗ್ಗೆಯೂ ಚರ್ಚಿಸಲಿದೆ.  ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಗುರಿಗಳ ಸಾಧನೆಗೆ ಕೇಂದ್ರವಾಗಿರುವ ಸಂತಾನೋತ್ಪತ್ತಿ, ತಾಯಿ, ನವಜಾತ ಮಗು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು (RMNCHA+N) ಸುಧಾರಿಸುವಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಲಾಗಿದೆ.

A person looking at a tabletDescription automatically generated

2030 ರ ವೇಳೆಗೆ ಯುನಿವರ್ಸಲ್ ಹೆಲ್ತ್ ಕವರೇಜ್ (UHC) ಅಡಿಯಲ್ಲಿ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಭಾರತವು ಬದ್ಧವಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸಲು, ಸರ್ಕಾರವು ಪ್ರಾಥಮಿಕ ಹಂತದಲ್ಲಿ ಮಾನವ ಸಂಪನ್ಮೂಲದ ತರಬೇತಿ ಸೇರಿದಂತೆ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿದೆ.  ಕಷ್ಟಕರವಾದ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುವವರು ಮತ್ತು ಹಿಂದುಳಿದವರನ್ನು ತಲುಪಲು ತಂತ್ರಜ್ಞಾನವನ್ನು ಸಮರ್ಥವಾಗಿ  ಬಳಸಲಾಗುತ್ತಿದ್ದು, ಆರೋಗ್ಯ ವಿತರಣೆಯಲ್ಲಿ ಇದೊಂದು ಗೇಮ್ ಚೇಂಜರ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

 

*****


(Release ID: 2052508) Visitor Counter : 42