ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಪ್ರತಿ ಕೆಜಿ ಈರುಳ್ಳಿಯನ್ನು 35 ರೂ.ಗೆ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು
ರಾಬಿ ಬೆಳೆಯಿಂದ ಈರುಳ್ಳಿಯ ಬಫರ್ ಸಂಗ್ರಹ 4.7 ಲಕ್ಷ ಟನ್ ಲಭ್ಯವಿದೆ: ಶ್ರೀ ಜೋಶಿ
ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿ ಸಿ ಎಫ್) ಮತ್ತು ಭಾರತದ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ ಎ ಎಫ್ ಇ ಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟ
Posted On:
05 SEP 2024 3:08PM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ವೆಂಕಟೇಶ್ ಜೋಶಿ ಅವರು ಇಂದು ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (ಎನ್ ಸಿ ಸಿ ಎಫ್) ಮತ್ತು ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ (ಎನ್ ಎ ಎಫ್ ಇ ಡಿ) ನ ಸಂಚಾರಿ ವ್ಯಾನ್ ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಪ್ರತಿ ಕೆಜಿ ಈರುಳ್ಳಿಗೆ 35 ರೂಪಾಯಿ ದರದಲ್ಲಿ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಮೂಲಕ, ಈ ಅಗತ್ಯ ತರಕಾರಿಯು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರಿ ಬಫರ್ ಸಂಗ್ರಹದಿಂದ ನಿರ್ದಿಷ್ಟ ಪ್ರಮಾಣದ ಈರುಳ್ಳಿ ಬಿಡುಗಡೆಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜೋಶಿ, ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ದರವನ್ನು ಕಡಿಮೆ ಮಾಡುವಲ್ಲಿ ಬೆಲೆ ಸ್ಥಿರೀಕರಣ ಕ್ರಮಗಳ ಮೂಲಕ ಹಲವಾರು ನೇರ ಮಧ್ಯಸ್ಥಿಕೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.

"ನಮ್ಮಲ್ಲಿ ರಾಬಿ ಬೆಳೆಯಿಂದ 4.7 ಲಕ್ಷ ಟನ್ ಗಳಷ್ಟು ಬಫರ್ ಸಂಗ್ರಹವಿದೆ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾದ ಬೆಲೆ ಸ್ಥಿರೀಕರಣ ನಿಧಿಯು ಅಗತ್ಯ ವಸ್ತುಗಳ ಬೆಲೆಗಳು ಏರಿದಾಗ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವ ಗುರಿಯನ್ನು ಹೊಂದಿದೆ" ಎಂದು ಅವರು ಹೇಳಿದರು. ಈರುಳ್ಳಿ ಚಿಲ್ಲರೆ ಮಾರಾಟವು ದೇಶಾದ್ಯಂತ ಗ್ರಾಹಕರಿಗೆ ಪರಿಹಾರವನ್ನು ನೀಡುತ್ತದೆ ಎಂದು ಶ್ರೀ ಜೋಶಿ ಹೇಳಿದರು.
ಬಫರ್ ಸಂಗ್ರಹದಿಂದ ಈರುಳ್ಳಿಯನ್ನು ವಿಲೇವಾರಿ ಮಾಡುವುದು ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಬೆಲೆಯ ಸ್ಥಿರತೆಯನ್ನು ನಿರ್ವಹಿಸಲು ಕೇಂದ್ರ ಸರ್ಕಾರದ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದೆ.
ಎನ್ ಸಿ ಸಿ ಎಫ್ ಮತ್ತು ಎನ್ ಎ ಎಫ್ ಇ ಡಿ ಯ ಮಳಿಗೆಗಳು ಮತ್ತು ಸಂಚಾರಿ ವ್ಯಾನ್ ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟದೊಂದಿಗೆ ಈರುಳ್ಳಿಯ ಉದ್ದೇಶಿತ ವಿಲೇವಾರಿ ಪ್ರಾರಂಭಿಸಲಾಗುತ್ತಿದೆ. ಈರುಳ್ಳಿ ಬೆಲೆಯಲ್ಲಿನ ಪ್ರವೃತ್ತಿಗೆ ಅನುಗುಣವಾಗಿ ಈರುಳ್ಳಿಯ ಪ್ರಮಾಣ ಮತ್ತು ವಿಲೇವಾರಿ ಮಾರ್ಗಗಳನ್ನು ವಿಸ್ತರಿಸಲಾಗುತ್ತದೆ, ಆಳಗೊಳಿಸಲಾಗುತ್ತದೆ, ತೀವ್ರಗೊಳಿಸಲಾಗುತ್ತದೆ ಮತ್ತು ವೈವಿಧ್ಯಗೊಳಿಸಲಾಗುತ್ತದೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ದೇಶಾದ್ಯಂತ 550 ಕೇಂದ್ರಗಳು ವರದಿ ಮಾಡಿದ ಈರುಳ್ಳಿ ಸೇರಿದಂತೆ 38 ಸರಕುಗಳ ದೈನಂದಿನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ದೈನಂದಿನ ಬೆಲೆ ಡೇಟಾ ಮತ್ತು ತುಲನಾತ್ಮಕ ಪ್ರವೃತ್ತಿಗಳು ಬಫರ್ ಸಂಗ್ರಹದಿಂದ ಈರುಳ್ಳಿಯನ್ನು ಬಿಡುಗಡೆ ಮಾಡಲು ಪ್ರಮಾಣ ಮತ್ತು ಗಮ್ಯಸ್ಥಾನವನ್ನು ನಿರ್ಧರಿಸಲು ಪ್ರಮುಖ ಒಳಹರಿವುಗಳಾಗಿವೆ.

ಕಳೆದ ವರ್ಷದ 3.0 ಲಕ್ಷ ಟನ್ ಈರುಳ್ಳಿ ಖರೀದಿಗೆ ಹೋಲಿಸಿದರೆ, ಈ ವರ್ಷ ರಾಬಿ ಬೆಳೆಯಿಂದ 4.7 ಲಕ್ಷ ಟನ್ ಗಳನ್ನು ಎನ್ ಸಿ ಸಿ ಎಫ್ ಮತ್ತು ನಾಫೆಡ್ ಮೂಲಕ ಬೆಲೆ ಸ್ಥಿರೀಕರಣಕ್ಕಾಗಿ ಖರೀದಿಸಿರುವುದು ಗಮನಾರ್ಹ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಪ್ರಮುಖ ರಾಬಿ ಈರುಳ್ಳಿ ಉತ್ಪಾದಿಸುವ ಪ್ರದೇಶಗಳಲ್ಲಿ ರೈತರು/ರೈತ ಸಂಘಗಳಿಂದ ಈರುಳ್ಳಿಯನ್ನು ಖರೀದಿಸಲಾಗಿದೆ ಮತ್ತು ರೈತರ ಖಾತೆಗಳಿಗೆ ನೇರ ವರ್ಗಾವಣೆಯ ಮೂಲಕ ಹಣ ಪಾವತಿ ಮಾಡಲಾಗಿದೆ. ಈ ವರ್ಷ ಚಟುವಟಿಕೆಗಳ ಎಲ್ಲಾ ಹಂತಗಳನ್ನು ಒಳಗೊಂಡ ತಂತ್ರಜ್ಞಾನವನ್ನು ಬಳಸಿಕೊಂಡು ಈರುಳ್ಳಿ ಕಾರ್ಯಾಚರಣೆಗಳಲ್ಲಿ ಖರೀದಿ, ಸಂಗ್ರಹಣೆ ಮತ್ತು ವಿಲೇವಾರಿ ಮೇಲ್ವಿಚಾರಣೆ ಮಾಡಲು ಸಮಗ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ರಾಬಿ ಹಂಗಾಮಿನಲ್ಲಿ ಈರುಳ್ಳಿ ರೈತರಿಗೆ ಉತ್ತಮ ಬೆಲೆ ಸಿಕ್ಕದೆ. ಮಂಡಿ ಮಾದರಿಯ ಬೆಲೆ ಕಳೆದ ವರ್ಷದಲ್ಲಿದ್ದ ಕ್ವಿಂಟಲ್ ಗೆ 693 ರೂ.ನಿಂದ 1,205 ರೂ.ಗೆ ಹೋಲಿಸಿದರೆ ಈ ವರ್ಷ ಕ್ವಿಂಟಾಲ್ ಗೆ 1,230 ರೂ.ನಿಂದ - 2,578 ರೂ. ವ್ಯಾಪ್ತಿಯಲ್ಲಿ ಇದೆ. ಅದೇ ರೀತಿ, ಕಳೆದ ವರ್ಷ ಇದ್ದ ಪ್ರತಿ ಕ್ವಿಂಟಲ್ ಗೆ 1,724 ರೂ. ಗೆ ಹೋಲಿಸಿದರೆ ಈ ವರ್ಷ ಸರಾಸರಿ ಬಫರ್ ಖರೀದಿ ಬೆಲೆ 2,833 ರೂ. ಆಗಿದೆ. ಅಂಗಡಿಗೆ ಯೋಗ್ಯವಾದ ಈರುಳ್ಳಿಯನ್ನು ಬಫರ್ ಗಾಗಿ ಖರೀದಿಸಲಾಗಿರುವುದರಿಂದ, ಈರುಳ್ಳಿಯ ಸಂಗ್ರಹಣೆ ಬೆಲೆಗಳು ಚಾಲ್ತಿಯಲ್ಲಿರುವ ಮಾದರಿ ಬೆಲೆಗಿಂತ ಯಾವಾಗಲೂ ಹೆಚ್ಚಾಗಿರುತ್ತವೆ.

ಖಾರಿಫ್ ಬಿತ್ತನೆ ಪ್ರದೇಶವು ಆಗಸ್ಟ್ 26, 2024 ರವರೆಗೆ ಹಿಂದಿನ ವರ್ಷಕ್ಕಿಂತ ಶೇ.102 ರಷ್ಟು ಹೆಚ್ಚಳವನ್ನು ಕಂಡಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಈರುಳ್ಳಿ ಲಭ್ಯತೆ ಮತ್ತು ಬೆಲೆಗಳು ಸಕಾರಾತ್ಮಕವಾಗಿರುತ್ತವೆ. ಕೃಷಿ ಇಲಾಖೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2024 ರ ಆಗಸ್ಟ್ 26 ರವರೆಗೆ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಈರುಳ್ಳಿಯನ್ನು ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಲ್ಲದೆ, ಸುಮಾರು 38 ಲಕ್ಷ ಟನ್ ಈರುಳ್ಳಿ ಇನ್ನೂ ರೈತರು ಮತ್ತು ವ್ಯಾಪಾರಿಗಳ ಬಳಿ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಈರುಳ್ಳಿಯ ಲಭ್ಯತೆ ಮತ್ತು ಬೆಲೆಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಗ್ರಾಹಕರು ಮತ್ತು ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ರೈತರಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ದೆಹಲಿ ಎನ್ ಸಿ ಆರ್ ಮತ್ತು ಮುಂಬೈನಲ್ಲಿ ಇಂದಿನಿಂದ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಇದರ ನಂತರ, ಮುಂದಿನ ಒಂದು ವಾರದಲ್ಲಿ ಏಜೆನ್ಸಿಗಳು ಕೋಲ್ಕತ್ತಾ, ಗುವಾಹಟಿ, ಹೈದರಾಬಾದ್, ಚೆನ್ನೈ, ಬೆಂಗಳೂರು, ಅಹಮದಾಬಾದ್, ರಾಯಪುರ ಮತ್ತು ಭುವನೇಶ್ವರದಲ್ಲಿ ವಿತರಣೆ ಆರಂಭವಾಗುತ್ತದೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ ಭಾರತದಾದ್ಯಂತ ವಿತರಣೆ ಪ್ರಾರಂಭವಾಗುತ್ತದೆ. ಏಜೆನ್ಸಿಗಳು ಇತರ ಸಹಕಾರಿ ಸಂಸ್ಥೆಗಳು ಮತ್ತು ಭಾರತದಾದ್ಯಂತ ದೊಡ್ಡ ಚಿಲ್ಲರೆ ಸರಪಳಿಗಳೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳುತ್ತಿವೆ. ದೆಹಲಿ ಎನ್ ಸಿ ಆರ್ ಮತ್ತು ಮುಂಬೈನ ಸ್ಥಳಗಳು ಈ ಕೆಳಗಿನಂತಿವೆ:
1. ದಕ್ಷಿಣ ಎಕ್ಸಟೆನ್‌ಷನ್
|
21.ನೆಹರು ಪ್ಲೇಸ್
|
2. ಸಿಜಿಒ
|
22. ರಾಜೀವ್ ಚೌಕ್ ಮೆಟ್ರೋ ನಿಲ್ದಾಣ
|
3.ಕೃಷಿ ಭವನ
|
23. ಪಟೇಲ್ ಚೌಕ್ ಮೆಟ್ರೋ ನಿಲ್ದಾಣ
|
4.ಎನ್ ಸಿ ಯು ಐ ಕಾಂಪ್ಲೆಕ್ಸ್
|
24. ಎನ್ ಸಿ ಸಿ ಎಫ್ಆಫೀಸ್ ಸೆಕ್ಟರ್ 4
|
5. ದ್ವಾರಕಾ ವಲಯ 1
|
25. ಫಿಲ್ಮ್‌ಸಿಟಿ ನೋಯ್ಡಾ
|
6. ರೋಹಿಣಿ ವಲಯ 2
|
26. ಗೌರ್ ಸಿಟಿ ನೋಯ್ಡಾ
|
7.ಗುರುಗ್ರಾಮ್ ಸಿವಿಲ್ ಲೈನ್
|
27. ಸೆಕ್ಟರ್ 1, ಗ್ರೇಟರ್ ನೋಯ್ಡಾ
|
8. ಆರ್.ಕೆ ಪುರಂ ಸೆಕ್ಟರ್ 10
|
28. ಅಶೋಕ್ ನಗರ
|
9. ಜಸೋಲಾ
|
29. ಸೆಕ್ಟರ್ 62, ನೋಯ್ಡಾ
|
10. ನಂದನಗರಿ ಬ್ಲಾಕ್ ಬಿ
|
30. ಬೊಟಾನಿಕಲ್ ಗಾರ್ಡನ್
|
11. ಯಮುನಾ ವಿಹಾರ
|
31. ಗಾಲ್ಫ್ ಕೋರ್ಸ್ ನೋಯ್ಡಾ
|
12. ಮಾಡೆಲ್ ಟೌನ್
|
32.ಸೆಕ್ಟರ್ 50, ನೋಯ್ಡಾ
|
13. ಲಕ್ಷ್ಮಿ ನಗರ
|
33. ವಸುಂಧರಾ, ಘಾಜಿಯಾಬಾದ್
|
14. ಚತ್ತರಪುರ
|
34. ಇಂದಿರಾಪುರಂ, ಘಾಜಿಯಾಬಾದ್
|
15. ಮೆಹ್ರೌಲಿ
|
35. ಸಾಹಿಬಾಬಾದ್
|
16.ತ್ರಿಲೋಕಪುರಿ
|
36. ಸೆಕ್ಟರ್ 19 ನೋಯ್ಡಾ
|
17. ಬ್ರಿಟಾನಿಯಾ ಚೌಕ
|
37. ಸೆಕ್ಟರ್ 58 ನೋಯ್ಡಾ
|
18. ನಜಾಫಗಡ್
|
38. ಆಮ್ರಪಾಲಿ ವಲಯ 45
|
19. ಮಾಯಾಪುರಿ
|
39. ಲೋವರ್ ಪರೇಲ್, ಮುಂಬೈ
|
20. ಲೋಧಿ ಕಾಲೋನಿ
|
40. ಮಲಾಡ್, ಮುಂಬೈ
|
*****
(Release ID: 2052236)
Visitor Counter : 107