ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷ್ ಮಲ್ಹೋತ್ರಾ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ನಿವೃತ್ತ) ಶ್ರೀ ದೀಪಕ್ ಮಿಶ್ರಾ, ನವದೆಹಲಿಯಲ್ಲಿ ಜವಾಬ್ದಾರಿಯುತ ವ್ಯವಹಾರ ನಡವಳಿಕೆಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು
ಭಾರತೀಯ ಉದ್ಯಮಗಳು ನೈತಿಕ ಮತ್ತು ಶಾಶ್ವತ ನಡವಳಿಕೆಯನ್ನು ಅಳವಡಿಸುವ ಮೂಲಕ ಮಾದರಿಯಾಗಬೇಕು, ಇದು ಭಾರತವನ್ನು ಜವಾಬ್ದಾರಿಯುತ ಆಡಳಿತದಲ್ಲಿ ಜಾಗತಿಕ ನಾಯಕನನ್ನಾಗಿಸಲು ಸಹಾಯ ಮಾಡುತ್ತದೆ: ರಾಜ್ಯ ಸಚಿವರಾದ ಶ್ರೀ ಹರ್ಷ್ ಮಲ್ಹೋತ್ರಾ
ವ್ಯವಹಾರಗಳು ನ್ಯಾಯ ಮತ್ತು ನ್ಯಾಯದ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಾತ್ರಿಪಡಿಸುವಲ್ಲಿ ESG ನೀತಿಗಳು ಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ: ನ್ಯಾಯಮೂರ್ತಿ (ನಿವೃತ್ತ) ದೀಪಕ್ ಮಿಶ್ರಾ
Posted On:
04 SEP 2024 7:41PM by PIB Bengaluru
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಶ್ರೀ ಹರ್ಷ್ ಮಲ್ಹೋತ್ರ ಮತ್ತು ಭಾರತದ 45ನೇ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ (ನಿವೃತ್ತ) ಶ್ರೀ ದೀಪಕ್ ಮಿಶ್ರಾ ಅವರು ಇಂದು ನವದೆಹಲಿಯಲ್ಲಿ 'ರಾಷ್ಟ್ರೀಯ ಜವಾಬ್ದಾರಿಯುತ ವ್ಯಾಪಾರ ನಡವಳಿಕೆ ಸಮ್ಮೇಳನ 2024 - ವಿಕಸಿತ ಭಾರತಕ್ಕಾಗಿ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಹೆಚ್ಚಳ' ಕಾರ್ಕ್ರಮವನ್ನು ಉದ್ಘಾಟಿಸಿದರು. ಈ ಸಮ್ಮೇಳನವನ್ನು ಭಾರತೀಯ ಕಾರ್ಪೊರೇಟ್ ವ್ಯವಹಾರಗಳ ಸಂಸ್ಥೆಯ (IICA) ವ್ಯವಹಾರ ಪರಿಸರ ಶಾಲೆಯು ಆಯೋಜಿಸಿತ್ತು.
ಅವರ ಮುಖ್ಯ ಭಾಷಣದಲ್ಲಿ, ಶ್ರೀ ಮಲ್ಹೋತ್ರ ಅವರು, ಶಾಶ್ವತ ಅಭಿವೃದ್ಧಿಗೆ ಅತ್ಯಗತ್ಯವಾದ ಜವಾಬ್ದಾರಿಯುತ ವ್ಯಾಪಾರ ಪದ್ಧತಿಗಳನ್ನು ಬೆಳೆಸುವಲ್ಲಿ ಸರ್ಕಾರದ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು. 'ವಿಕಸಿತ ಭಾರತ' ಸಾಧಿಸುವಲ್ಲಿ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಭಾರತೀಯ ವ್ಯಾಪಾರಗಳು ನೈತಿಕ ಮತ್ತು ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಮಾದರಿಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು. ಇದರಿಂದ ಭಾರತವು ಜವಾಬ್ದಾರಿಯುತ ಆಡಳಿತದಲ್ಲಿ ಜಾಗತಿಕ ನಾಯಕತ್ವವನ್ನು ವಹಿಸುವಂತಾಗುತ್ತದೆ ಎಂದು ಹೇಳಿದರು.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿ (ನಿವೃತ್ತ) ದೀಪಕ್ ಮಿಶ್ರಾ ಅವರು ವಿಶೇಷ ಭಾಷಣವನ್ನು ನೀಡಿದರು. ಅವರು ಕಾರ್ಪೊರೇಟ್ ಆಡಳಿತದ ನೈತಿಕ ಅಗತ್ಯತೆಗಳ ಮೇಲೆ ಗಮನ ಹರಿಸಿದರು. ವ್ಯವಹಾರಗಳು ನ್ಯಾಯ ಮತ್ತು ನ್ಯಾಯದ ಮಿತಿಯೊಳಗೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುವಲ್ಲಿ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ನೀತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಇದರಿಂದ ವ್ಯವಹಾರಗಳು ತಮ್ಮ ಕಾರ್ಯವಿಧಾನಗಳನ್ನು ಸಾಮಾಜಿಕ ಮತ್ತು ಪರಿಸರ ಜವಾಬ್ದಾರಿಯ ವಿಶಾಲ ಗುರಿಗಳಿಗೆ ಹೊಂದಿಕೊಳ್ಳುತ್ತವೆ ಎಂದು ಅವರು ವಿವರಿಸಿದರು.
"ESG ಎಂಬುದು ಕೇವಲ ಕಾನೂನು ಪಾಲನೆಯ ಕಾರ್ಯವಲ್ಲ, ಇದು ಆಳವಾದ ತತ್ವಶಾಸ್ತ್ರೀಯ ಚಿಂತನೆ ಆಗಿದ್ದು, ಅದನ್ನು ಮನಸಿಗೆ ಹಚ್ಚಿಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿ ಮಿಶ್ರಾ ವಿವರಿಸಿದರು. ರಾಷ್ಟ್ರೀಯ ನಟ್ಟಕ್ಸ್ ವರ್ಕರ್ಸ್ ಯೂನಿಯನ್ ವರ್ಸಸ್ ಪಿ.ಆರ್. ರಾಮಕೃಷ್ಣನ್ ಎಂಬ ಪ್ರಕರಣದಲ್ಲಿ, ಭಾರತೀಯ ಸುಪ್ರೀಂ ಕೋರ್ಟ್, ಕಂಪನಿಗಳು ಸಮಾಜದ ಸಾಮಾಜಿಕತೆಯ ಮಾದರಿಯನ್ನು ಅಂಗೀಕರಿಸುವ ನೂತನ ಪರಿಕಲ್ಪನೆಯನ್ನು ದೇಶದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಗುರಿಯಾಗಿ ಪರಿಗಣಿಸಿದೆ ಎಂದು ಅವರು ನೆನಪಿಸಿದರು. ಪರಿಸರ ನೈತಿಕತೆಯನ್ನು ಕಾಯ್ದುಕೊಳ್ಳುವುದು ವ್ಯವಹಾರಿಕ ಒಕ್ಕೂಟಗಳ ಮೌಲ್ಯವೃದ್ಧಿಗೆ ಅತ್ಯಂತ ಅವಶ್ಯಕವಾದ್ದಾಗಿದೆ ಮತ್ತು ಕಂಪನಿಯ 'ಹಸಿರು ವರ್ತನೆ'ಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು. ದೇಶಗಳು ಈಗ ಅತ್ಯುನ್ನತ ಮಟ್ಟದಲ್ಲಿ ವಾಣಿಜ್ಯ ಸಂಸ್ಥೆಗಳ ತತ್ವಶಾಸ್ತ್ರವನ್ನು ಬದಲಾಯಿಸಲು ಪ್ರಯತ್ನಿಸುವ ಪ್ರತಿಜ್ಞೆ ತೆಗೆದುಕೊಳ್ಳುವ ಸಮಯ ಬಂದಿದೆ. ಜಾಗತಿಕ ಚಿಂತಕರು ಅಭಿವೃದ್ಧಿಪಡಿಸುತ್ತಿರುವ ಹೊಸ ಪದಕೋಶದ ಬಗ್ಗೆ ಪ್ರತಿಯೊಂದು ಕಂಪನಿ ಮತ್ತು ವ್ಯಕ್ತಿಯನ್ನು ಜಾಗೃತಗೊಳಿಸಬೇಕು. ಪ್ರತಿಯೊಂದು ಸಂಸ್ಥೆಯು 'ಎಚ್ಚರಿಕೆಯಿಂದ ಗಮನಿಸುತ್ತಾ' ಕ್ರಮೇಣವಾಗಿ ಅನುಸರಣೆಯಲ್ಲಿರಬೇಕು. ತ್ವರಿತ ಸಾಂಸ್ಥಿಕ ಪರಿಹಾರಗಳನ್ನು ತರಲು ಯಾವುದೇ ಚತುರ ಉದ್ದೇಶದ ಆಶ್ರಯ ಪಡೆಯಬಾರದು ಎಂದು ಅವರು ಸೂಚಿಸಿದರು.
ಐಐಸಿಎ ನಿರ್ದೇಶಕ ಜನರಲ್ ಮತ್ತು ಸಿಇಒ ಡಾ. ಅಜಯ್ ಭೂಷಣ್ ಪ್ರಸಾದ್ ಪಾಂಡೆ ಅವರು ಗಣ್ಯ ಭಾಷಣಕಾರರಿಗೆ ಮತ್ತು ಭಾಗವಹಿಸಿದವರಿಗೆ ಆತ್ಮೀಯ ಸ್ವಾಗತವನ್ನು ಕೋರಿದರು ಮತ್ತು ಭಾರತದ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಜವಾಬ್ದಾರಿಯುತ ವ್ಯಾಪಾರ ನಡವಳಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು. IICA ತನ್ನ ಸ್ಕೂಲ್ ಆಫ್ ಬಿಸಿನೆಸ್ ಎನ್ವಿರಾನ್ಮೆಂಟ್ ಮೂಲಕ ESG, ಸುಸ್ಥಿರತೆ, CSR, ವ್ಯಾಪಾರ ಮತ್ತು ಮಾನವ ಹಕ್ಕುಗಳು, ವ್ಯಾಪಾರ ಮತ್ತು ಜೈವಿಕ ವೈವಿಧ್ಯ ಸಂರಕ್ಷಣೆ, ಸುಸ್ಥಿರ ಹಣಕಾಸು ಇತ್ಯಾದಿಗಳ ಅಂಶಗಳ ಕುರಿತು ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ನೀತಿ ವಕ್ತಾರ, ಸಂಶೋಧನೆ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳ ಮೂಲಕ ಜವಾಬ್ದಾರಿಯುತ ವ್ಯಾಪಾರ ನಡವಳಿಕೆಯನ್ನು ಉತ್ತೇಜಿಸುತ್ತಿದೆ. ಜವಾಬ್ದಾರಿಯುತ ವ್ಯವಹಾರ ನಡವಳಿಕೆಯ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವು ವಿಕಸಿತ ಮತ್ತು ಸುಸ್ಥಿರ ಭಾರತಕ್ಕೆ ಐಐಸಿಎಯ ಬದ್ಧತೆಯ ಸಾಕ್ಷಿಯಾಗಿದೆ. ಎಂದು ಹೇಳಿದರು.
ಐಐಸಿಎ ಬಿಸಿನೆಸ್ ಎನ್ವೈರನ್ಮೆಂಟ್ ಶಾಲೆಯ ಮುಖ್ಯಸ್ಥ ಪ್ರೊಫೆಸರ್ ಗರಿಮಾ ದಧಿಚ್ ಅವರ ಉದ್ಘಾಟನಾ ಅಧಿವೇಶನವು ಸಮ್ಮೇಳನಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು.
ಭಾರತದಲ್ಲಿನ ಯುನೈಟೆಡ್ ನೇಷನ್ಸ್ ರೆಸಿಡೆಂಟ್ ಕೋಆರ್ಡಿನೇಟರ್ ಶ್ರೀ ಶಂಬಿ ಶಾರ್ಪ್ ಅವರು ತಮ್ಮ ವಿಶೇಷ ಭಾಷಣದಲ್ಲಿ ವಿಕಸಿತ ಭಾರತ (ಅಭಿವೃದ್ಧಿಗೊಂಡ ಭಾರತ) ಸಾಧಿಸುವಲ್ಲಿ ಜವಾಬ್ದಾರಿಯುತ ವ್ಯಾಪಾರ ನಡವಳಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಅಲ್ಲದೆ ಸರ್ಕಾರ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಘಟನೆಗಳ ನಡುವಿನ ಸಹಯೋಗದ ಪ್ರಯತ್ನಗಳ ಅಗತ್ಯತೆಯನ್ನು ಒತ್ತಿಹೇಳಿದರು.
ಉದ್ಘಾಟನಾ ಅಧಿವೇಶನವು ಜವಾಬ್ದಾರಿಯುತ ವ್ಯವಹಾರ ನಡವಳಿಕೆಗೆ ಸಂಬಂಧಿಸಿದ ತುರ್ತು ವಿಷಯಗಳನ್ನು ಎತ್ತಿ ತೋರಿಸಿದ ವಿಶೇಷ ಭಾಷಣಗಳನ್ನು ಒಳಗೊಂಡಿತ್ತು. ಯುನಿಸೆಫ್ ಪ್ರತಿನಿಧಿ ಸಿಂಥಿಯಾ ಮೆಕ್ಯಾಫ್ಫೆರಿ ಅವರು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ESG ತತ್ವಗಳ ಜಾಗತಿಕ ಪ್ರಾಸಕ್ತಿಯ ಬಗ್ಗೆ ಮತ್ತು ವಿಕ್ಸಿತ್ ಭಾರತವನ್ನು ಸಾಧಿಸುವಲ್ಲಿ ಅರ್ಥಪೂರ್ಣ, ಶಾಶ್ವತ ಜೀವನೋಪಾಯಗಳನ್ನು ಒಂದಾಗಿ ಅಳವಡಿಸಲು ಅಗತ್ಯವಿರುವ ಗುರಿಯನ್ನು ಹಂಚಿಕೊಂಡರು. ಎಸಿಸಿಎ ಮುಖ್ಯ ಕಾರ್ಯನಿರ್ವಾಹಕಿ ಹೆಲೆನ್ ಬ್ರ್ಯಾಂಡ್ OBE ಅವರು ಜವಾಬ್ದಾರಿಯುತ ವ್ಯವಹಾರ ನಡವಳಿಕೆಯನ್ನು ಉತ್ತೇಜಿಸಲು ಆಡಳಿತದ ರೂಪಾಂತರಗೊಳ್ಳುವ ಪಾತ್ರದ ಬಗ್ಗೆ ಕೇಂದ್ರೀಕರಿಸಿದರು ಮತ್ತು ESG ಆಧಾರಿತ ಅಭಿವೃದ್ಧಿಯನ್ನು ಪ್ರಗತಿ ಪಥದಲ್ಲಿ ಮುಂದುವರಿಸಲು ಭಾರತ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು. ಉದ್ಘಾಟನಾ ಅಧಿವೇಶನವು ಗಣ್ಯ ನಾಯಕರನ್ನು, ನೀತಿ ನಿರ್ಮಾಪಕರನ್ನು, ಸಂಸ್ಥೆಗಳ ಕಾರ್ಯನಿರ್ವಾಹಕರನ್ನು ಮತ್ತು ಅಂತಾರಾಷ್ಟ್ರೀಯ ತಜ್ಞರನ್ನು ಜವಾಬ್ದಾರಿಯುತ ಮತ್ತು ಶಾಶ್ವತ ಅಭಿವೃದ್ಧಿಗೆ ವ್ಯವಹಾರಗಳ ಪ್ರಮುಖ ಪಾತ್ರದ ಬಗ್ಗೆ ಚರ್ಚಿಸಲು ಒಂದೇ ವೇದಿಕೆಗೆ ತಂದಿತು.
ಇದೇ ಸಂದರ್ಭದಲ್ಲಿ, ಡಾ. ಗರಿಮಾ ದಾದಿಚ್ ಮತ್ತು ಡಾ. ರವಿ ರಾಜ್ ಅತ್ರೆ ಅವರ "ಎಂಬ್ರೇಸಿಂಗ್ ಇಎಸ್ಜಿ ಇನ್ ಇಂಡಿಯಾ" ಪುಸ್ತಕವನ್ನು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕವು ಭಾರತೀಯ ಸನ್ನಿವೇಶದಲ್ಲಿ ESG ಅಭ್ಯಾಸಗಳಿಗೆ ಸಮಗ್ರ ಮಾರ್ಗದರ್ಶಿಯನ್ನು ನೀಡುತ್ತದೆ. ಇದು ಬದಲಾವಣೆಯ ಪ್ರವರ್ತಕರು, ಉತ್ತೇಜಕರು ಮತ್ತು ಆರಂಭಿಕರ ಕೇಸ್ ಸ್ಟಡೀಸ್ಗಳ ಸಂಕಲನವಾಗಿದೆ. ಇದರ ಜೊತೆಗೆ, ಆನ್ಲೈನ್ ಡೇಟಾ ಪೋರ್ಟಲ್ ಆನ್ ಬ್ಯುಸಿನೆಸ್ ರೆಸ್ಪಾನ್ಸಿಬಿಲಿಟಿ ಮತ್ತು ಸಸ್ಟೈನಬಿಲಿಟಿ ರಿಪೋರ್ಟಿಂಗ್ (BRSR)ಅನ್ನು ಪ್ರಾರಂಭಿಸಲಾಯಿತು. ಇದು ವ್ಯವಹಾರಗಳು ಮತ್ತು ಮಧ್ಯಸ್ಥಗಾರರಿಗೆ ಜವಾಬ್ದಾರಿಯುತ ವ್ಯವಹಾರ ನಡವಳಿಕೆಗಾಗಿ ನಿರ್ಣಾಯಕ ಡೇಟಾ ಮತ್ತು ಅಂತರ್ನೋಟಗಳನ್ನು ಪ್ರವೇಶಿಸಲು ಅಗತ್ಯವಾದ ಸಾಧನವನ್ನು ಒದಗಿಸುತ್ತದೆ.
ಜವಾಬ್ದಾರಿಯುತ ಆಡಳಿತ: ನಾಯಕತ್ವ ಸಂವಾದ’ ಎಂಬ ಮೊದಲ ಉನ್ನತ ಮಟ್ಟದ ಪ್ಯಾನೆಲ್ ಚರ್ಚೆಯು, ಸುಸ್ಥಿರ ಮತ್ತು ಸಮಾನವಾದ ಬೆಳವಣಿಗೆಯನ್ನು ಮನ್ನಡೆಸುವಲ್ಲಿ ಜವಾಬ್ದಾರಿಯುತ ಆಡಳಿತದ ನಿರ್ಣಾಯಕ ಪಾತ್ರದ ಬಗ್ಗೆ ಚರ್ಚಿಸಲು, ಭಾರತದ ಸರ್ಕಾರ ಮತ್ತು ಖಾಸಗಿ ವಲಯಗಳಿಂದ ಕೆಲವು ಗಣ್ಯ ನಾಯಕರನ್ನು ಒಟ್ಟುಗೂಡಿಸಿತು. ಗಣ್ಯ ವಕ್ತಿಗಳಲ್ಲಿ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಇಂದರ್ ದೀಪ್ ಸಿಂಗ್ ಧರಿವಾಲ್, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಸಾಂಸ್ಥಿಕತೆ ಸಚಿವಾಲಯದ ಮಾಜಿ ಕಾರ್ಯದರ್ಶಿ ಶ್ರೀ ಪ್ರವೀಣ್ ಕುಮಾರ್, ಭಾರತದ ಯೋಜನಾ ಆಯೋಗದ ಮಾಜಿ ಸದಸ್ಯ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಭಾರತದ ಮಾಜಿ ಅಧ್ಯಕ್ಷ ಶ್ರೀ ಅರುಣ್ ಮೈರಾ, ಟಾಟಾ ಸನ್ಸ್ನ ಮಾಜಿ ನಿವಾಸಿ ನಿರ್ದೇಶಕ ಶ್ರೀ ಭರತ್ ವಾಖ್ಲು, ಹ್ಯಾಪಿ ಫೋರ್ಜಿಂಗ್ಸ್ ಲಿಮಿಟೆಡ್ನ ನಿರ್ದೇಶಕಿ ಶ್ರೀಮತಿ ಮೇಘಾ ಗರ್ಗ್ ಇವರು ಇದ್ದರು. ಪ್ಯಾನೆಲ್ ನನ್ನು ಪ್ರೊಫೆಸರ್ ಗರಿಮಾ ದಾಧಿಚ್ ನಡೆಸಿದರು. ಪ್ಯಾನೆಲ್, ವಿಶೇಷವಾಗಿ ಭಾರತದ ಅಭಿವೃದ್ಧಿ ಗುರಿಯಾದ ‘ವಿಕಸಿತ ಭಾರತ’ ದ ಸಂದರ್ಭದಲ್ಲಿ ಕಾರ್ಪೊರೇಟ್ ಚೌಕಟ್ಟಿನೊಳಗೆ ಜವಾಬ್ದಾರಿಯುತ ಆಡಳಿತವನ್ನು ಸಂಯೋಜಿಸುವ ಸವಾಲುಗಳು ಮತ್ತು ಅವಕಾಶಗಳನ್ನು ಆಳವಾಗಿ ಪರಿಶೀಲಿಸಿತು.
ಈ ಪ್ಯಾನಲ್ ಚರ್ಚೆ ಸರ್ಕಾರ, ಖಾಸಗಿ ಕ್ಷೇತ್ರ ಮತ್ತು ನಾಗರಿಕ ಸಮಾಜದ ನಡುವಿನ ಸಹಕಾರವನ್ನು ಒಳಗೊಂಡ ಬಹು-ಪಕ್ಷದ ಅಧಿವೇಶನದ ಅಗತ್ಯದ ಬಗ್ಗೆ ಒಪ್ಪಂದದೊಂದಿಗೆ ಕೊನೆಗೊಂಡಿತು. ಈ ಚರ್ಚೆಯಿಂದ ಹೊರಹೊಮ್ಮಿದ ಆಳವಾದ ಅರಿವು ಮತ್ತು ಶಿಫಾರಸುಗಳು ಸಮ್ಮೇಳನದ ನಂತರದ ಅಧಿವೇಶನಗಳನ್ನು ರೂಪಿಸುವ ನಿರೀಕ್ಷೆಯಿದೆ ಮತ್ತು ಭಾರತದಲ್ಲಿ ಜವಾಬ್ದಾರಿಯುತ ವ್ಯವಹಾರ ನಡವಳಿಕೆಯ ಏಜೆಂಡಾವನ್ನು ಮುನ್ನಡೆಸಲು ಸಹಾಯ ಮಾಡಲಿವೆ.
ಎರಡನೇ ಉನ್ನತ ಮಟ್ಟದ ಪ್ಯಾನೆಲ್ ಚರ್ಚೆಯು 'ಪ್ರಕೃತಿ ಪುನಃ ಸ್ಥಾಪನೆ: ಬಿಸಿನೆಸ್ ಪಾತ್ರ' ಎಂಬ ವಿಷಯವನ್ನು ಕೇಂದ್ರೀಕರಿಸಿತು. ಈ ಪ್ಯಾನಲ್ ಪ್ರಮುಖ ಕೈಗಾರಿಕಾ ನಾಯಕರನ್ನು ಒಳಗೊಂಡಿತು: WWF ಇಂಡಿಯಾದ ಸುಸ್ಥಿರ ವ್ಯವಹಾರ ನಿರ್ದೇಶಕ ವೈಶಾಲ್ ದೇವ್, ಸಿರಿಲ್ ಅಮರ್ಚಂದ್ ಮಂಗಲ್ದಾಸ್ನ ESG ಹಿರಿಯ ನಿರ್ದೇಶಕ ಬೋಸ್ ವರ್ಗೀಸ್ ಮತ್ತು WRI ಇಂಡಿಯಾದ ಆಹಾರ, ಭೂಮಿ ಮತ್ತು ನೀರಿನ ಹಿರಿಯ ಕಾರ್ಯಕ್ರಮ ನಿರ್ದೇಶಕ ಸಿದ್ಧಾರ್ಥ್ ಎಡಕೆ ಭಾಗವಹಿಸಿದರು. ಈ ಪ್ಯಾನೆಲ್ ಅನ್ನು ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್ವರ್ಕ್ ಇಂಡಿಯಾದ ಹಿರಿಯ ತಾಂತ್ರಿಕ ಸಲಹೆಗಾರ ಸುನೀಲ್ ಪಡೇಲ್ ಮಾಡರೇಟ್ ಮಾಡಿದರು.
ಸಿದ್ಧ ಉಡುಪುಗಳ ವಲಯದಲ್ಲಿ ಜವಾಬ್ದಾರಿಯುತ ವ್ಯಾಪಾರ ನಡವಳಿಕೆಯ ರಾಷ್ಟ್ರೀಯ ಮಾರ್ಗಸೂಚಿಗಳ ವಲಯದ ಅಳವಡಿಕೆ' ಮೇಲೆ ಕೇಂದ್ರೀಕರಿ ಮೂರನೇ ಉನ್ನತ ಮಟ್ಟದ ಪ್ಯಾನೆಲ್ ಚರ್ಚೆ ನಡೆಯಿತು.
ಈ ಅಧಿವೇಶನವು ಇನ್ನೋವೇಟಿವ್ ಚೇಂಜ್ ಕೊಲಾಬೊರೇಟಿವ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ICCSPL) ನ ನಿರ್ದೇಶಕರಾದ ಶ್ರೀ ಅಲಯ್ ಬರಾ ಅವರ ಮಾತಿನೊಂದಿಗೆ ಆರಂಭವಾಯಿತು. ಅವರು ಸಿದ್ಧ ಉಡುಪುಗಳ ವಲಯದ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಹೊಂದಿಸುವುದರ ಪ್ರಾಮುಖ್ಯತೆಯನ್ನು ವಿವರಿಸುವ ಮೂಲಕ ಸಂದರ್ಭವನ್ನು ನಿರ್ಧರಿಸಿದರು. ಈ ಪ್ಯಾನೆಲ್ ಉದ್ಯಮ ಮತ್ತು ನೀತಿ ರೂಪಣೆಯ ವಲಯಗಳ ಎರಡೂ ಕ್ಷೇತ್ರಗಳಿಂದ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿತ್ತು. ಆದಿತ್ಯ ಬಿರ್ಲಾ ಫ್ಯಾಷನ್ & ರಿಟೇಲ್ ಲಿಮಿಟೆಡ್ನ ಮುಖ್ಯ ಸುಸ್ಥಿರತಾ ಅಧಿಕಾರಿ ಡಾ. ನರೇಶ್ ತ್ಯಾಗಿ, ಅರವಿಂದ್ ಲಿಮಿಟೆಡ್ನ ಸುಸ್ಥಿರತಾ ಉಪಾಧ್ಯಕ್ಷ ಶ್ರೀ ಅಭಿಷೇಕ್ ಬನ್ಸಲ್, ಸಿಐಐ - ಸಿಇಎಸ್ಡಿಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಶಿಖರ್ ಜೈನ್, ಪಾರ್ಟ್ನರ್ಸ್ ಇನ್ ಚೇಂಜ್ನ ನಿರ್ದೇಶಕ ಶ್ರೀ ಪ್ರದೀಪ್ ನಾರಾಯಣನ್ ಮತ್ತು ಭಾರತದ ಉಡುಪು ತಯಾರಕರ ಸಂಘದ ಜಂಟಿ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಸೈನಾನಿ ಭಾಗವಹಿಸಿದ್ದರಿ. ಈ ಚರ್ಚೆಯನ್ನು ಭಾರತೀಯ ಕಾರ್ಪೊರೇಟ್ ವ್ಯವಹಾರಗಳ ಸಂಸ್ಥೆಯ ಸಂಯೋಜಿತ ಪ್ರಾಧ್ಯಾಪಕರಾದ ಶ್ರೀ ಶಂಕರ್ ವೆಂಕಟೇಶ್ವರನ್ ಅವರು ಪ್ರವೀಣತೆಯಿಂದ ನಿರ್ವಹಿಸಿದರು. ಅವರು ಪ್ಯಾನೆಲ್ ಸದಸ್ಯರ ನಡುವೆ ವಿಚಾರಗಳು ಮತ್ತು ಅತುತ್ತಮ ಮಾಹಿತಿಗಳ ವಿನಿಮಯವನ್ನು ಸುಗಮಗೊಳಿಸಿದರು.
ನಾಲ್ಕನೇ ಅಧಿವೇಶನವು 'ಸಾಮಾಜಿಕ ನ್ಯಾಯದ ಪರಿವರ್ತನೆ: ಬೆಳವಣಿಗೆ, ಸಮಾನತೆ ಮತ್ತು ಸುಸ್ಥಿರತೆಯ ಸಮತೋಲನ'ದ ಕುರಿತು ಆಳವಾಗಿ ಚರ್ಚಿಸಿತು. ಈ ಅಧಿವೇಶನವು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಾಗ ಆರ್ಥಿಕ ಬೆಳವಣಿಗೆ ಸೇರಿಸುವ ಮತ್ತು ಸಮಾನವಾಗಿರುವಂತೆ ಖಚಿತಪಡಿಸಿಕೊಳ್ಳುವ ಸಂಕೀರ್ಣ ಸವಾಲನ್ನು ನಿಭಾಯಿಸಿತು. ಡ್ಯೂ ಕನ್ಸಲ್ಟಿಂಗ್ ಮತ್ತು ಡೆಲಾಯಿಟ್ ಇಂಡಿಯಾದಲ್ಲಿ ಸಿಎಸ್ಆರ್ ಮತ್ತು ಇಎಸ್ಜಿಯಲ್ಲಿ ಹಿರಿಯ ಸಲಹೆಗಾರರಾದ ಡಾ. ಭಾಸ್ಕರ್ ಚಟರ್ಜಿಯವರು ಅಧಿವೇಶನವನ್ನು ನಿರ್ವಹಿಸಿದರು. ಪ್ಯಾನಲ್ನಲ್ಲಿ ವಿವಿಧ ಗುಂಪಿನ ತಜ್ಞರು ಸೇರಿದ್ದರು, ಅವರು ಸಾಮಾಜಿಕ ನ್ಯಾಯದ ಪರಿವರ್ತನೆಯ ಬಹುಮುಖಿಯ ಅಂಶಗಳ ಕುರಿತು ಆಳವಾದ ಒಳನೋಟಗಳನ್ನು ಒದಗಿಸಿದರು. ಉನ್ನತ ಮಟ್ಟದ ಪ್ಯಾನಲ್ನಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಲ್ಲಿ (ILO) ಎಂಟರ್ಪ್ರೈಸ್ ಡೆವಲಪ್ಮೆಂಟ್ ಸ್ಪೆಷಲಿಸ್ಟ್ ಆಗಿರುವ ಮಿಸ್ ಬಾರ್ತಿ ಬಿರ್ಲಾ, ಯುನಿಸೆಫ್ ಇಂಡಿಯಾದಲ್ಲಿ ಹೆಡ್ ಆಫ್ ಪಬ್ಲಿಕ್ & ಪ್ರೈವೇಟ್ ಪಾರ್ಟ್ನರ್ಶಿಪ್ ಆಗಿರುವ ಮಿಸ್ ಗೀತಾಂಜಲಿ ಮಾಸ್ಟರ್ ಮತ್ತು IICAಯಲ್ಲಿ ಅಡ್ಜಂಕ್ಟ್ ಫ್ಯಾಕಲ್ಟಿ ಆಗಿರುವ ಮಿ. ವಿರಾಫ್ ಮೆಹ್ತಾ ಇದ್ದರು.
*****
(Release ID: 2052109)
Visitor Counter : 30