ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೋಷಣ್ ಟ್ರ್ಯಾಕರ್ ಉಪಕ್ರಮಕ್ಕಾಗಿ ಇ-ಆಡಳಿತ 2024 (ಚಿನ್ನ) ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ


ಮಿಷನ್ ಪೋಷಣ್ 2.0: ಬೆಳವಣಿಗೆಯನ್ನು ಗುರುತಿಸುವುದು, ಜೀವನವನ್ನು ಪರಿವರ್ತಿಸುವುದು

Posted On: 04 SEP 2024 12:35PM by PIB Bengaluru

ಮಿಷನ್ ಪೋಷಣ್ 2.0 ಯೋಜನೆಯು ತನ್ನ 0-6 ವರ್ಷ ವಯಸ್ಸಿನ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮಹತ್ವದ ಕಾರ್ಯತೋಜನೆಯಲ್ಲಿ, ನೂತನವಾದ ಮಾಸಿಕ ಬೆಳವಣಿಗೆಯ ಪರಿಶೀಲನಾ ಉಪಕ್ರಮದ - ಪೋಷಣ್ ಟ್ರ್ಯಾಕರ್ ಮೂಲಕ ಲಕ್ಷಾಂತರ ಯುವ ಜೀವಗಳ ಬೆಳವಣಿಗೆಯನ್ನು ಪತ್ತೆಹಚ್ಚುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ವರ್ಷದ ರಾಷ್ಟ್ರೀಯ ಪೋಷಣ್ ಮಾಸ 2024 ರ ವಿಷಯವೂ ಇದೇ ಆಗಿದೆ. ಪೋಷಣ್ ಟ್ರ್ಯಾಕರ್ ಕಾರ್ಯಕ್ರಮವು ಮಕ್ಕಳ ಬೆಳವಣಿಗೆಯ ಸಮಸ್ಯೆಗಳನ್ನು ಯಶಸ್ವಿಯಾಗಿ ಗುರುತಿಸಿದೆ ಮತ್ತು ಪರಿಹರಿಸಿದೆ, ಉದ್ದೇಶಿತ ಮಧ್ಯಸ್ಥಿಕೆಗಳು ಮತ್ತು ಸುಧಾರಿತ ಪೌಷ್ಟಿಕಾಂಶದ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತಿದೆ. 

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಿನ್ನೆ (3.9.2024) ಮುಂಬೈನಲ್ಲಿ ಪೋಷಣ್ ಟ್ರ್ಯಾಕರ್ ಉಪಕ್ರಮಕ್ಕಾಗಿ ಇ-ಆಡಳಿತ 2024 (ಚಿನ್ನ) ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದೆ. ಸರ್ಕಾರಿ ಪ್ರಕ್ರಿಯೆ / ಉಪಕ್ರಮಗಳ ದಕ್ಷತೆಯನ್ನು ಸುಧಾರಿಸಲು ಕಾರ್ಯಾಚರಣೆಗಳನ್ನು ಮರುಸಂಘಟಿಸುವುದು ಮತ್ತು ಡಿಜಿಟಲ್ ರೂಪಾಂತರಕ್ಕಾಗಿ ಪೋಷಣ್ ಟ್ರ್ಯಾಕರ್ ಉಪಕ್ರಮಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪೋಷಣ್ ಟ್ರ್ಯಾಕರ್ ಮಕ್ಕಳ ಪೌಷ್ಟಿಕಾಂಶದ ಬೆಳವಣಿಗೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದೊಂದಿಗೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸುತ್ತದೆ.


ವಿಶ್ವ ಆರೋಗ್ಯ ಸಂಸ್ಥೆಯ ಬೆಳವಣಿಗೆಯ ತ:ಖ್ತೆಯಗಳ ಮೂಲಕ ಕಾಲಾವಧಿಗಳಲ್ಲಿ ಮಗುವಿನ ಬೆಳವಣಿಗೆಯ ಮಾದರಿಯನ್ನು ಪತ್ತೆಹಚ್ಚಲು ಮಿಷನ್ ಪೋಷಣ್ 2.0 ಸಹಾಯ ಮಾಡುತ್ತದೆ, ಇದು ಮಕ್ಕಳ ಬೆಳವಣಿಗೆ ಮತ್ತು ವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಬಳಸುವ ಅಗತ್ಯ ಸಾಧನಗಳಾಗಿವೆ. ಈ ಕೋಷ್ಠಕಗಳು ಪ್ರಮುಖ ಆಂಥ್ರೊಪೊಮೆಟ್ರಿಕ್ ಮಾಪನಗಳನ್ನು ರೂಪಿಸುತ್ತವೆ- ಉದಾಹರಣೆಗೆ ಎತ್ತರ ಮತ್ತು ತೂಕ- ವಯಸ್ಸು ಮತ್ತು ಲಿಂಗ-ನಿರ್ದಿಷ್ಟ ಮಾನದಂಡಗಳಿಗೆ ವಿರುದ್ಧವಾಗಿ, ಮಗುವಿನ ಬೆಳವಣಿಗೆಯ ಪಥದ ದೃಶ್ಯ, ಮಾಹಿತಿ, ಅಂಕಿಅಂಶಗಳಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ. ಮಗುವಿನ ಬೆಳವಣಿಗೆಯ ಪಥದ ಈ ದೃಶ್ಯ ನಿರೂಪಣೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ಪೌಷ್ಟಿಕಾಂಶದ ಸ್ಥಿತಿಯನ್ನು ನಿರ್ಣಯಿಸಲು ಮತ್ತು ವಿಚಲನಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ, ಮಕ್ಕಳ ಬೆಳವಣಿಗೆಯಲ್ಲಿ ಆರಂಭಿಕ ಹಸ್ತಕ್ಷೇಪ ಮತ್ತು ಬೆಂಬಲವನ್ನು ಸುಲಭಗೊಳಿಸುತ್ತದೆ.
 
ಅತ್ಯಾಧುನಿಕ ಐಸಿಟಿ ಅಪ್ಲಿಕೇಶನ್, ಈ ಪೋಷಣ್ ಟ್ರ್ಯಾಕರ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳವಣಿಗೆಯ ಸಮಸ್ಯೆಗಳ ಸಕಾಲಿಕ ಗುರುತಿಸುವಿಕೆ ಮತ್ತು ಪರಿಶೀಲನೆಯನ್ನು ಸಕ್ರಿಯಗೊಳಿಸುತ್ತದೆ. ಪ್ರತಿ ಅಂಗನವಾಡಿ ಕೇಂದ್ರದಲ್ಲಿ (ಎಡಬ್ಲ್ಯೂಸಿ), ನಿಖರವಾದ ದತ್ತಾಂಶ ನಮೂದು ಮಾಡಲು ಸಾಧ್ಯವಾಗುತ್ತದೆ ಮತ್ತು ನಿಯಮಿತ ಮೇಲ್ವಿಚಾರಣೆಯಲ್ಲಿ ಲಭ್ಯವಿರುವ ಬೆಳವಣಿಗೆಯ ಮಾಪನ ಸಾಧನಗಳ (ಜಿ.ಎಂ.ಡಿ.) ಸಹಾಯದಿಂದ, ಈ ಯೋಜನೆಯು ಅತ್ಯಂತ ಉತ್ತಮ ಫಲಿತಾಂಶಗಳನ್ನು ಸಾಧಿಸಿದೆ.

ಪ್ರಸ್ತುತ, ಮಿಷನ್ ಪೋಷಣ್ 2.0 ಯೋಜನೆಯು  8.9 ಕೋಟಿ ಮಕ್ಕಳನ್ನು (0-6 ವರ್ಷಗಳ ಒಳಗಿನ) ಒಳಗೊಂಡಿದೆ, ಮಾಸಿಕ ಬೆಳವಣಿಗೆಯ ಮಾಪನದ ಮೂಲಕ ಒಂದೇ ತಿಂಗಳಲ್ಲಿ 8.57 ಕೋಟಿ ಮಕ್ಕಳ ಯೋಗಕ್ಷೇಮವನ್ನು ಅಳೆಯಲಾಗುತ್ತದೆ. ಈ ವ್ಯಾಪಕವಾದ ಬೃಹತ್ ವಿಸ್ತಾರವು ಮತ್ತು ಈ ಉಪಕ್ರಮದಿಂದಾಗುವ ಉತ್ತಮ ಪ್ರಭಾವವು ಮಕ್ಕಳ ಜೀವನವನ್ನು ಪರಿವರ್ತಿಸುತ್ತದೆ. ಇದು ಕಾರ್ಯಕ್ರಮದ ಬದ್ಧತೆಗೆ ಸಾಕ್ಷಿಯಾಗಿದೆ.

ಆರೋಗ್ಯ ಸಮಸ್ಯೆಗಳ ಆರಂಭಿಕ ಗುರುತಿಸುವಿಕೆ, ಪೌಷ್ಠಿಕಾಂಶದ ಮೌಲ್ಯಮಾಪನ ಮತ್ತು ಅಭಿವೃದ್ಧಿಯ ಹಂತಗಳ ಟ್ರ್ಯಾಕಿಂಗ್ ಮೇಲೆ ಕೇಂದ್ರೀಕರಿಸುವ ಮೂಲಕ, ಮಿಷನ್ ಪೋಷಣ್ 2.0 ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುತ್ತದೆ. ಮಾತ್ರವಲ್ಲದೆ, ಸಮುದಾಯಗಳಿಗೆ, ಕುಟುಂಬಗಳಿಗೆ ತಮ್ಮ ಮಕ್ಕಳ ಯೋಗಕ್ಷೇಮದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಧಿಕಾರವನ್ನು ನೀಡುತ್ತದೆ. ಕಾರ್ಯಕ್ರಮವು ವಿಕಸನಗೊಳ್ಳಲು ಮತ್ತು ವಿಸ್ತರಿಸುವುದನ್ನು ಮುಂದುವರೆಸಿದಂತೆ, ಇದು ಭಾರತದ ಕಿರಿಯ ನಾಗರಿಕರಿಗೆ ತಮ್ಮ ಆರೋಗ್ಯಕರ, ಉಜ್ವಲ ಭವಿಷ್ಯಕ್ಕಾಗಿ ಭರವಸೆಯ ದಾರಿದೀಪವಾಗಿದೆ.

ಹಿನ್ನೆಲೆ

ಪೋಷಣ್ ಮಾಸ (1-30 ಸೆಪ್ಟೆಂಬರ್) ಮತ್ತು ಪೋಷಣ್ ಪಕ್ಷ  (ಮಾರ್ಚ್ ತಿಂಗಳಲ್ಲಿ ಹದಿನೈದು ದಿನಗಳ ಆಂದೋಲನ) ರೂಪದಲ್ಲಿ ವಾರ್ಷಿಕವಾಗಿ ಜನ ಆಂದೋಲನಗಳನ್ನು ಆಚರಿಸಲಾಗುತ್ತದೆ.  2018 ರಿಂದ ಇಲ್ಲಿಯವರೆಗೆ 6 ಬಾರಿ ನಡೆದ ಪೋಷಣ್ ಮಾಸ ಮತ್ತು ಪೋಷಣ್ ಪಕ್ಷ  ಜನ ಆಂದೋಲನಗಳ  ಮೂಲಕ 100 ಕೋಟಿಗೂ ಹೆಚ್ಚು - ವಿವಿಧ ವಿಷಯಗಳ ಅಡಿಯಲ್ಲಿ ಕೇಂದ್ರೀಕೃತ ಸಂವೇದನೆ ಚಟುವಟಿಕೆಗಳ ಆಧಾರದಲ್ಲಿ - ಮಕ್ಕಳ ಪೋಷಣೆ ವರದಿಯಾಗಿದೆ.

 

*****


(Release ID: 2051995) Visitor Counter : 53