ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

"ಡಬಲ್ ಇಂಜಿನ್ ಸರ್ಕಾರವು ವಿಷನ್ ಜಮ್ಮು ಮತ್ತು ಕಾಶ್ಮೀರ @2047 ಅನ್ನು ಮುನ್ನಡೆಸಲಿದೆ" ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ


ಐತಿಹಾಸಿಕ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆ: ಇದು ಪ್ರುಜಾಪ್ರಭುತ್ವದ ಮಹತ್ವಾಕಾಂಕ್ಷೆಗಳ ಪ್ರಮುಖ ಸಾಧನೆ ಎಂದು ಡಾ ಜಿತೇಂದ್ರ ಸಿಂಗ್ ಕರೆದಿದ್ದಾರೆ

ಉಗ್ರವಾದದಿಂದ ಮುಖ್ಯವಾಹಿನಿಗೆ: ಪ್ರಧಾನ ಮಂತ್ರಿ ಮೋದಿಯವರ ನಾಯಕತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಮತ್ತು ಭವಿಷ್ಯದ ಬಗ್ಗೆ ಡಾ. ಸಿಂಗ್ ಗಮನ ಸೆಳೆದರು

ಜಮ್ಮು ಮತ್ತು ಕಾಶ್ಮೀರ ಸಬಲೀಕರಣ: ಸ್ವ-ಆಡಳಿತ ಮತ್ತು ಅಭಿವೃದ್ಧಿಗಾಗಿ ಡಾ. ಜಿತೇಂದ್ರ ಸಿಂಗ್ ವಿಷನ್ ಅನಾವರಣ

Posted On: 02 SEP 2024 6:46PM by PIB Bengaluru

ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮಹತ್ವಾಕಾಂಕ್ಷೆಯ "ವಿಷನ್ ಜಮ್ಮು ಮತ್ತು ಕಾಶ್ಮೀರ @2047" ಅನ್ನು ವಿವರಿಸಿದರು. "ಡಬಲ್ ಎಂಜಿನ್ ಸರ್ಕಾರವು ವಿಷನ್ ಜಮ್ಮು ಮತ್ತು ಕಾಶ್ಮೀರ @2047" ಅನ್ನು ಮುನ್ನಡೆಸುತ್ತದೆ" ಎಂದು ಅವರು ಹೇಳಿದರು ಮತ್ತು ಇದು "ವಿಷನ್ ಇಂಡಿಯಾ @2047" ರ ಅವಿಭಾಜ್ಯ ಭಾಗವಾಗಿದೆ ಎಂದು ವಿವರಿಸಿದರು.

ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ  ಹಿನ್ನೆಲೆಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ಇದನ್ನು ಒಂದು ಮಹತ್ವದ ಬೆಳವಣಿಗೆ ಎಂದು ಕೊಂಡಾಡಿದರು. ಒಂದು ದಶಕದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರವು ವಿಧಾನಸಭಾ ಚುನಾವಣೆಗಳನ್ನು ಕಾಣಲಿದೆ ಎಂದು ಗಮನಿಸಿದರು - ಇದು ಪ್ರದೇಶದ ಜೀವಂತ ಪ್ರಜಾಪ್ರಭುತ್ವ ಆಕಾಂಕ್ಷೆಗಳ ಸಾಕಾರವಾಗಿದೆ ಎಂದು ಹೇಳಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸ್ವತಂತ್ರ ಪ್ರಭಾರ, ಭೂವಿಜ್ಞಾನ ಸ್ವತಂತ್ರ ಪ್ರಭಾರ, ಪ್ರಧಾನಮಂತ್ರಿ ಕಚೇರಿಯ ರಾಜ್ಯ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಡಾ. ಜಿತೇಂದ್ರ ಸಿಂಗ್ ಅವರು ಈ ಚುನಾವಣಾ ಘಟನೆಯನ್ನು "ಭಾರತದ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ" ಎಂದು ಬಣ್ಣಿಸಿದರು. ಈ ಪ್ರಗತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚುರುಕಾದ ನಾಯಕತ್ವವೇ ಕಾರಣ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ಅಧಿಕಾರಾವಧಿ 2014ರ ಮೇ 26 ರಂದು ಆರಂಭವಾದಾಗಿನಿಂದ, ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ನೆನಪಿಸಿಕೊಂಡರು. ಇವು ಪ್ರಾದೇಶಿಕ ಮಟ್ಟದಲ್ಲೂ ಗಣನೀಯ ಧನಾತ್ಮಕ ಪರಿಣಾಮ ಬೀರಿವೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರು "ಭಾರತವನ್ನು ಹಳೆಯ ನಿರ್ಬಂಧಗಳಿಂದ ಮುಕ್ತಗೊಳಿಸಿದ್ದಾರೆ" ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಈಗ ಅಂತಿಮ ಹಂತದಲ್ಲಿರುವುದನ್ನು ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಜಿಲ್ಲಾ ಪರಿಷತ್ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು ಇದು ಸ್ಥಳೀಯ ಸ್ವಯಂ-ಆಡಳಿತ ಸಂಸ್ಥೆಗಳಲ್ಲಿ ಆಗಿರುವ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ದಶಕಗಳ ಹಿಂದೆ 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಗಳ ಅನುಷ್ಠಾನದ ಹೊರತಾಗಿಯೂ, ಹಿಂದಿನ ನಾಯಕರ ಗುಪ್ತ ಉದ್ದೇಶಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ಇದಕ್ಕೆ ಅಪವಾದವಾಗಿ ಉಳಿದಿತ್ತು. ಈ ಪರಿವರ್ತನೆಯಲ್ಲಿ 370ನೇ ವಿಧಿಯ ರದ್ದತಿಯು ನಿರ್ಣಾಯಕ ಹೆಜ್ಜೆಯಾಗಿತ್ತು ಎಂದು ಅವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ವಿಷನ್ 2047 ಜಾಗತಿಕವಾಗಿ ಮತ್ತು ದೇಶೀಯವಾಗಿ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ವಿವರಿಸಿದರು. ನಾವು 2047ನ್ನು 2024ರ ದೃಷ್ಟಿಕೋನದಿಂದ ನೋಡಿದಾಗ ಪ್ರಸ್ತುತ ಇರುವ ಅನೇಕ ಪರಿಕಲ್ಪನೆಗಳು ಅಪ್ರಸ್ತುತವಾಗುತ್ತವೆ ಎಂದು ಅವರು ಒತ್ತಿ ಹೇಳಿದರು. ಅವರು 1950ರ ದಶಕದಲ್ಲಿ ದೂರದರ್ಶನದ ಆಗಮನವನ್ನು ಉದಾಹರಿಸಿದರು, ಇದು 1960ರಲ್ಲಿ ಅಮೇರಿಕದ ಅಧ್ಯಕ್ಷೀಯ ರಾಜಕಾರಣವನ್ನು ಬದಲಾಯಿಸಿತು ಎಂದು ಹೇಳಿ, ಇದನ್ನು ಭಾರತದ ಪ್ರಸ್ತುತ ಸ್ಥಿತಿಗೆ ಹೋಲಿಸಿದರು. ಭಾರತ ಈಗ ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ, ಈ ಸಾಧನೆಗೆ ಪ್ರಧಾನಿ ಮೋದಿಯವರ ನಾಯಕತ್ವವೇ ಕಾರಣ ಎಂದು ಅವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ಮತ್ತು ಜಮ್ಮು-ಕಾಶ್ಮೀರದಲ್ಲಿ "ಡಬಲ್ ಎಂಜಿನ್ ಸರ್ಕಾರ" ವರದಾನವಾಗಲಿದೆ ಎಂದು ದೃಢವಾಗಿ ಹೇಳಿದರು. ಅವರು ಪರಿವರ್ತನೆಯ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಹರಿಸಿದರು: a) ಪ್ರಜಾಪ್ರಭುತ್ವ ಸಂಸ್ಥೆಗಳ ಪ್ರಜಾಪ್ರಭುತ್ವೀಕರಣ: ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮರುರೂಪಿಸುವುದು ಮತ್ತು ವಿಸ್ತರಿಸುವುದು. b) ಸ್ವಯಂ-ಆಡಳಿತದ ಮೂಲಕ ಆಡಳಿತ: ಸ್ಥಳೀಯ ಸ್ವಯಂ-ಆಡಳಿತ ಮತ್ತು ಆಡಳಿತ ದಕ್ಷತೆಯನ್ನು ಹೆಚ್ಚಿಸುವುದು. c) ಅನ್ವೇಷಿಸದ ವಲಯಗಳನ್ನು ಅನ್ವೇಷಿಸುವ ಮೂಲಕ ಅಭಿವೃದ್ಧಿ: ಹೊಸ ಅಭಿವೃದ್ಧಿ ಅವಕಾಶಗಳನ್ನು ಅನಾವರಣಗೊಳಿಸುವುದು. ಉದಾಹರಣೆಗೆ, ಅರೋಮಾ ಮಿಷನ್ ಮೂಲಕ ನವೀನ ಕೃಷಿ-ಸ್ಟಾರ್ಟಪ್, ಇದು ಪ್ರದೇಶದ ಸಾವಿರಾರು ಯುವಕರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಿದೆ.

ಸ್ಥಳೀಯ ಆಡಳಿತ ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಕನಿಷ್ಠ ಮತ ಹಂಚಿಕೆಯೊಂದಿಗೆ ಪ್ರತಿನಿಧಿಗಳ ಆಯ್ಕೆಯಂತಹ  ಅಸಮರ್ಥತೆಗಳನ್ನು ಅವರು ನೆನಪಿಸಿಕೊಂಡರು .  ಡಾ. ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಈ ಅಭ್ಯಾಸಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು, ಮತ್ತು ಚುನಾವಣಾ ಪ್ರಾತಿನಿಧ್ಯಕ್ಕೆ ಕನಿಷ್ಠ ಮಿತಿಯನ್ನು ನಿಗದಿಪಡಿಸಲು ಸಲಹೆ ನೀಡಿದರು.

ಡಾ. ಜಿತೇಂದ್ರ ಸಿಂಗ್ ಅವರು ಕಳೆದ ಐದು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳಿಂದ ಪ್ರಜಾಪ್ರಭುತ್ವದ ಆಶಯಗಳು ಅರಳಿ, ಜಮ್ಮು ಮತ್ತು ಕಾಶ್ಮೀರವು ಸ್ಥಿರ ಮತ್ತು ಶಾಂತಿಯುತವಾಗಲು ಕಾರಣವಾಗಿದೆ ಎಂದು ಹೇಳಿದರು. .ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಶೇ .60 ರಷ್ಟು ಮತದಾನವಾಗಿದ್ದು, ಇದು ರಾಷ್ಟ್ರೀಯ ಸರಾಸರಿಗೆ ಸರಿಸುಮಾರು ಸರಿಸಮವಾಗಿದೆ ಎಂದು ಹೇಳಿದರು. ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯವಾಹಿನಿಗೆ ಸೇರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

 ಸಚಿವರು ಕುಂದುಕೊರತೆ ನಿವಾರಣೆಗಾಗಿ CPGRAMS ಮಾದರಿಯನ್ನು ಶ್ಲಾಘಿಸಿದರು, ಇದು ಸುಮಾರು 97-98 ಪ್ರತಿಶತದಷ್ಟು ವಿಲೇವಾರಿ ದರವನ್ನು ಖಚಿತಪಡಿಸುತ್ತದೆ. ರೈತರಿಗಾಗಿ ಡ್ರೋನ್ ಮ್ಯಾಪಿಂಗ್ ನಂತಹ ತಾಂತ್ರಿಕ ಪ್ರಗತಿಗಳನ್ನು ಅವರು ಉಲ್ಲೇಖಿಸಿದರು, ಇವು ಸ್ಥಳೀಯ ಸಮುದಾಯಗಳಿಗೆ ಸಬಲೀಕರಣ ನೀಡುತ್ತಿವೆ ಎಂದು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಸಂದರ್ಶನ ಪ್ರಕ್ರಿಯೆಯನ್ನು ತೆಗೆದುಹಾಕುವ ಬಗ್ಗೆ ಪ್ರಧಾನಿ ಮೋದಿಯವರ ಕೆಂಪು ಕೋಟೆಯ ಘೋಷಣೆಯನ್ನು ನೆನಪಿಸಿಕೊಂಡರು. ಇದು ರಾಜ್ಯಪಾಲರ ಆಳ್ವಿಕೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಜಾರಿಗೆ ಬಂದ ಸುಧಾರಣೆಯಾಗಿದೆ. ಆಡಳಿತದ ಸುಲಭತೆಗಾಗಿ ಅಧಿಕಾರಶಾಹಿ ಅಡೆತಡೆಗಳನ್ನು ಕಡಿಮೆ ಮಾಡುವ ಸ್ವಯಂ-ದೃಢೀಕರಣಕ್ಕೆ ಮಾಡಲಾದ ಬದಲಾವಣೆಯನ್ನು ಸಹ ಅವರು ಒತ್ತಿ ಹೇಳಿದರು.

ಅಭಿವೃದ್ಧಿಯ ಸಾಧ್ಯತೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದರೂ , ಅಜ್ಞಾತ ಪ್ರದೇಶಗಳಿಂದಾಗಿ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಹೇಳಿದರು. ಶಹಪುರ್ - ಕಂಡಿ ಯೋಜನೆಯು ವರ್ಷಗಳಿಂದ ಸ್ಥಗಿತಗೊಂಡಿತ್ತು ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶೇಷ ಪ್ರಯತ್ನ ಮತ್ತು ಆದ್ಯತೆಯಿಂದಾಗಿ ಈಗ ಚಾಲನೆಯಲ್ಲಿದೆ ಎಂದು ಅವರು ಹೇಳಿದರು. ರಾಟಲ್‌ ನಂತಹ ಯೋಜನೆಗಳ ಹಿಂದಿನ ನಿರ್ಲಕ್ಷ್ಯವನ್ನು ನಿವಾರಿಸಿ ಕಿಶ್ತ್ವಾರ್ ಉತ್ತರ ಭಾರತದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಭವಿಷ್ಯ ನುಡಿದರು.

ಡಾ . ಜಿತೇಂದ್ರ ಸಿಂಗ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು ಒತ್ತಿ ಹೇಳಿದರು , ಜಾಗತಿಕವಾಗಿ ಮೂರನೇ ಪ್ರಮುಖ ಸ್ಟಾರ್ಟ್ಅಪ್ ಗಮ್ಯಸ್ಥಾನವನ್ನು ತಲುಪುವುದು , ಸ್ಟಾರ್ಟಪ್ ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಮತ್ತು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಶ್ರೇಯಾಂಕದಲ್ಲಿ ಸುಧಾರಣೆ ಸೇರಿವೆ.  2005 ರಲ್ಲಿ ವಿಶ್ವದ ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತವನ್ನು ಅವರು ಈಗ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿಸಿದ್ದಾರೆ. ಅದು ಮತ್ತಷ್ಟು ಬೆಳೆಯುವ ಸಾಧ್ಯತೆಯಿದೆ  ಎಂದು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಪಿಎಂ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಅವರ ನಿರಂತರ ಪ್ರೋತ್ಸಾಹದೊಂದಿಗೆ, "ಡಬಲ್ ಎಂಜಿನ್ ಸರ್ಕಾರ"ವು ಭಾರತದ ಭವಿಷ್ಯದ ಬೆಳವಣಿಗೆ ಕಥೆಯಲ್ಲಿ ಮತ್ತು ವಿಷನ್‌ ಇಂಡಿಯಾ @2047 ಸಾಕ್ಷಾತ್ಕಾರದಲ್ಲಿ ಜಮ್ಮು ಮತ್ತು ಕಾಶ್ಮೀರಾ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ದೃಢಪಡಿಸಿದರು.

 

*****



(Release ID: 2051192) Visitor Counter : 18