ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉತ್ತರಾಖಂಡ್ ಗೆ ಎರಡು ದಿನ 2024ರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1  ರಂದು ಉಪರಾಷ್ಟ್ರಪತಿ ಭೇಟಿ


ಸಿಎಸ್ಐಆರ್ – ಐಐಪಿ, ಡೆಹ್ರಾಡೂನ್ ನ ವಿಜ್ಞಾನಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ

ಡೆಹ್ರಾಡೂನ್ ನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜಿಗೂ ಉಪರಾಷ್ಟ್ರಪತಿ ಭೇಟಿ

ಋಷಿಕೇಷದ ಎಐಐಎಂಸ್ ಗೆ ಭೇಟಿ ನೀಡಲಿರುವ ಉಪರಾಷ್ಟ್ರಪತಿಗಳು

Posted On: 30 AUG 2024 10:47AM by PIB Bengaluru

ಭಾರತದ ಉಪರಾಷ್ಟ್ರಪತಿ ಗೌರವಾನ್ವಿತ ಶ್ರೀ ಜಗದೀಪ್ ಧನಕರ್ ಅವರು 2024ರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಎರಡು ದಿನಗಳ ಕಾಲ ಉತ್ತರಾಖಂಡ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಈ ಪ್ರವಾಸದ ಸಂದರ್ಭದಲ್ಲಿ ಅವರು, ಡೆಹ್ರಾಡೂನ್ ನ ಸಿಎಸ್ಐಆರ್ – ಭಾರತೀಯ ಪೆಟ್ರೋಲಿಯಂ ಸಂಸ್ಥೆಯ ವಿಜ್ಞಾನಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರವಾಸದ ಎರಡನೇ ದಿನ ಶ್ರೀ ಧನಕರ್ ಅವರು, ಡೆಹ್ರಾಡೂನ್ ನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಅವರು ಋಷಿಕೇಷದಲ್ಲಿನ ಎಐಐಎಂಎಸ್ ಗೂ ಭೇಟಿ ನೀಡಲಿದ್ದು, ಆ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.

 

*****


(Release ID: 2050085) Visitor Counter : 45