ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಅನಪೇಕ್ಷಿತ ವಾಣಿಜ್ಯ ಸಂವಹನಗಳ ಸಮಸ್ಯೆಯನ್ನು ಪರಿಹರಿಸಲು ಟಿ ಆರ್ ಎ ಐ  ವಿಮರ್ಶೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡುತ್ತದೆ

Posted On: 28 AUG 2024 1:39PM by PIB Bengaluru

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ – ಟಿ ಆರ್ ಎ ಐ) ಇಂದು ದೂರಸಂಪರ್ಕ ವಾಣಿಜ್ಯ ಸಂವಹನಗಳ ಗ್ರಾಹಕ ಆದ್ಯತೆಯ ನಿಯಮಗಳು, 2018 (ಟಿಸಿಸಿಸಿಪಿಆರ್-2018) ಪರಿಷ್ಕರಣೆ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಕೋರಿ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ.

ಟಿಸಿಸಿಸಿಪಿಆರ್-2018 ನ್ನು ಫೆಬ್ರವರಿ-2019 ರಲ್ಲಿ ಅನಪೇಕ್ಷಿತ ವಾಣಿಜ್ಯ ಸಂವಹನಗಳ (ಯುಸಿಸಿ) ಸಮಸ್ಯೆಯನ್ನು ಪರಿಹರಿಸಲು ಜಾರಿಗೊಳಿಸಲಾಯಿತು. ಈ ನಿಯಮಗಳು ಅನಗತ್ಯ ಪ್ರಚಾರದ ಕರೆಗಳು ಮತ್ತು ಸಂದೇಶಗಳಿಂದ ಗ್ರಾಹಕರನ್ನು ರಕ್ಷಿಸುವ ಗುರಿಯನ್ನು ಹೊಂದಿವೆ, ಆದರೆ ವ್ಯವಹಾರಗಳಿಗೆ ಸಮ್ಮತಿಸಿದ ಅಥವಾ ಸ್ವೀಕರಿಸಲು ಆದ್ಯತೆಗಳನ್ನು ನಿಗದಿಪಡಿಸಿದ ಗ್ರಾಹಕರಿಗೆ ಉದ್ದೇಶಿತ ಸಂವಹನಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ.

ನಿಯಂತ್ರಕ ಚೌಕಟ್ಟುಗಳ ಅನುಷ್ಠಾನದ ಸಮಯದಲ್ಲಿ, ಕೆಲವು ಸಮಸ್ಯೆಗಳನ್ನು ಗಮನಿಸಲಾಗಿದೆ. ಈ ಸಮಾಲೋಚನಾ ಪತ್ರಿಕೆಯು ಅನುಷ್ಠಾನದ ಸಮಯದಲ್ಲಿ ಗಮನಿಸಿದ ಸಮಸ್ಯೆಗಳನ್ನು ಮುಂದಿಡುವ ಮತ್ತು ಅವುಗಳಿಗೆ ತಕ್ಷಣದ ಗಮನ ನೀಡು ವ ಗುರಿಯನ್ನು ಹೊಂದಿದೆ.  ಈ ಸಮಸ್ಯೆಗಳಿಗೆ ಸಂಬಂಧಿಸಿದ ನಿಯಮಾವಳಿಗಳ ನಿಬಂಧನೆಗಳ ತಿದ್ದುಪಡಿಯ ಅಗತ್ಯವಿರಬಹುದು. ಸಮಾಲೋಚನಾ ವರದಿಯಲ್ಲಿ ಚರ್ಚಿಸಲಾದ ವಿಶಾಲ ವ್ಯಾಪ್ತಿಯ ಸಮಸ್ಯೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:-

* ವಾಣಿಜ್ಯ ಸಂವಹನಗಳ ವ್ಯಾಖ್ಯಾನಗಳು.

* ದೂರು ಪರಿಹಾರಕ್ಕೆ ಸಂಬಂಧಿಸಿದ ನಿಬಂಧನೆಗಳು.

* ಯುಸಿಸಿ  ಪತ್ತೆ ವ್ಯವಸ್ಥೆ ಮತ್ತು ಅದರ ಕ್ರಿಯೆ.
* ಆರ್ಥಿಕ ಬೆಂಬಲದ ನಿರಾಕರಣೆಗೆ ಸಂಬಂಧಿಸಿದ ನಿಬಂಧನೆಗಳು.
* ಕಳುಹಿಸುವವರು ಮತ್ತು ಟೆಲಿಮಾರ್ಕೆಟರ್ ಗಳಿಗೆ ಸಂಬಂಧಿಸಿದ ನಿಬಂಧನೆಗಳು.

* ಅಧಿಕ ಸಂಖ್ಯೆಯ ಕರೆಗಳು ಮತ್ತು ಎಸ್.ಎಂ.ಎಸ್ ವಿಶ್ಲೇಷಣೆ.

ಸ್ಪ್ಯಾಮ್ ಕರೆಗಳ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುವ ನೋಂದಾಯಿತ ಟೆಲಿಮಾರ್ಕೆಟರ್ಗಳ (ಯುಟಿಎಂ) ವಿರುದ್ಧ ಕಠಿಣ ನಿಯಮಗಳು, ಸುಧಾರಿತ ದೂರು ಪರಿಹಾರ ಕಾರ್ಯವಿಧಾನಗಳು, ಹೆಚ್ಚು ಪರಿಣಾಮಕಾರಿಯಾದ ಯುಸಿಸಿ ಪತ್ತೆ ವ್ಯವಸ್ಥೆಗಳು, ನಿಯಮಗಳನ್ನು ಉಲ್ಲಂಘಿಸಲು ಬಲವಾದ ಆರ್ಥಿಕ ಬೆಂಬಲದ ನಿರಾಕರಣೆಗಳು, ಕಳುಹಿಸುವವರಿಗೆ ಪರಿಷ್ಕೃತ ನಿಯಮಗಳು ಸೇರಿದಂತೆ ನಿಯಂತ್ರಣಗಳನ್ನು ಬಲಪಡಿಸಲು ಟಿಆರ್ಎಐ   ಸಲಹೆ ಮತ್ತು ಅಭಿಪ್ರಯಾಯಗಳನ್ನು ಕೋರಿದೆ  .

ಸಮಾಲೋಚನೆ ಪತ್ರಿಕೆಯು ಟಿ ಆರ್ ಎ ಐ  ಜಾಲತಾಣ www.trai.gov.in ನಲ್ಲಿ ಲಭ್ಯವಿದೆ. ಸೆಪ್ಟೆಂಬರ್ 25, 2024 ರೊಳಗೆ ಸಂಬಂಧಪಟ್ಟವರಿಂದ  ಸಮಾಲೋಚನಾ ಪತ್ರದಲ್ಲಿ  ಲಿಖಿತ ರೂಪದಲ್ಲಿ ಆಹ್ವಾನಿಸಲಾಗಿದೆ. ಪರ ಮತ್ತು ವಿರೋಧದ ಅಭಿಪ್ರಾಯಗಳು ಯಾವುದಾದರೂ ಇದ್ದರೆ, ಅಕ್ಟೋಬರ್ 09, 2024 ರೊಳಗೆ ಸಲ್ಲಿಸಬಹುದು. ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು  ಮಿಂಚಂಚೆಗೆ (ಇಮೇಲ್) ಕಳುಹಿಸಬಹುದು. ಇ-ಮೇಲ್ ವಿಳಾಸ advqos@trai.gov.in.

ಯಾವುದೇ ಸ್ಪಷ್ಟೀಕರಣ/ಮಾಹಿತಿಗಾಗಿ, ಶ್ರೀ ಜೈಪಾಲ್ ಸಿಂಗ್ ತೋಮರ್, ಸಲಹೆಗಾರರನ್ನು (QoS-II) ಇ-ಮೇಲ್ ವಿಳಾಸ advqos@trai.gov.in ನಲ್ಲಿ ಸಂಪರ್ಕಿಸಬಹುದು.

 

*****


(Release ID: 2049709) Visitor Counter : 32