ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನ ನವದೆಹಲಿ ಕಚೇರಿಯಲ್ಲಿ ನಡೆದ ಸಮಾವೇಶದಲ್ಲಿ ಎಲ್ಲರನ್ನೂ ಒಳಗೊಂಡ ಸಿನಿಮಾ ಕುರಿತು ಚರ್ಚೆ


ನವದೆಹಲಿಯ ಸಮ್ಮೇಳನವು ಸಿನಿಮಾ ಪ್ರವೇಶವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ

Posted On: 28 AUG 2024 7:47PM by PIB Bengaluru

ದೆಹಲಿಯಲ್ಲಿರುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನ ಪ್ರಾದೇಶಿಕ ಕಚೇರಿಯು ಇಂದು CGO ಕಾಂಪ್ಲೆಕ್ಸ್ ಲೋಧಿ ರಸ್ತೆಯ ದೀನ್ ದಯಾಳ್ ಅಂತ್ಯೋದಯ ಭವನದಲ್ಲಿ ಸಂವಾದಾತ್ಮಕ ಸಮ್ಮೇಳನವನ್ನು ಆಯೋಜಿಸಿತ್ತು. ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನಗಳಿಗಾಗಿ ಚಲನಚಿತ್ರಗಳಲ್ಲಿ ಪ್ರವೇಶದ ಮಾನದಂಡಗಳ ಅನುಷ್ಠಾನವನ್ನು ಉದ್ದೇಶಿಸಿ ಈ ಸಮ್ಮೇಳನ ಆಯೋಜಿಸಲಾಗಿತ್ತು.

ಚಲನಚಿತ್ರೋದ್ಯಮದಲ್ಲಿ ಪ್ರವೇಶಿಸುವಿಕೆ ವೈಶಿಷ್ಟ್ಯಗಳನ್ನು ಅನುಷ್ಠಾನಗೊಳಿಸುವ ಕಾರ್ಯಕ್ರಮದಲ್ಲಿ ಚಲನಚಿತ್ರೋದ್ಯಮದ ಸದಸ್ಯರು

ಈ ಕಾರ್ಯಕ್ರಮವು ಚಲನಚಿತ್ರ ಅರ್ಜಿದಾರರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ಸೇವಾ ಪೂರೈಕೆದಾರರು ಹಾಗೂ ಅಸೋಸಿಯೇಷನ್ ಫಾರ್ ದಿ ಡೆಫ್ ಮತ್ತು ಸಕ್ಷಮ್ ಎನ್ಜಿಓ ಮುಂತಾದ ದಿವ್ಯಾಂಗರ ಪರವಾದ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. CBFC ದೆಹಲಿಯ ಪ್ರಾದೇಶಿಕ ಅಧಿಕಾರಿ ಶ್ರೀ ಮಹೇಶ್ ಕುಮಾರ್ ಅವರು ಇತರ ಪ್ರತಿನಿಧಿಗಳೊಂದಿಗೆ ದೃಷ್ಟಿ ಮತ್ತು ಶ್ರವಣದೋಷವುಳ್ಳ ವೀಕ್ಷಕರಿಗೂ ವಿಷಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯ ವೈಶಿಷ್ಟ್ಯಗಳನ್ನು ಸೇರಿಸುವ ಕುರಿತು ಚರ್ಚಿಸಿದರು .  

ಈ ಸಮ್ಮೇಳನವು ಭಾರತೀಯ ಸಂಕೇತ ಭಾಷೆಯ ವ್ಯಾಖ್ಯಾನದ ಮೂಲಕ ಎಲ್ಲಾ ಭಾಗವಹಿಸುವವರಿಗೂ ಪ್ರವೇಶಾರ್ಹವಾಗಿತ್ತು, ಇದು ಮೊದಲಿನಿಂದಲೂ ಒಳಗೊಳ್ಳುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಎಲ್ಲರನ್ನೂ ಒಳಗೊಳ್ಳುವ ಸಿನಿಮಾವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು

ಶ್ರೀ ಮಹೇಶ್ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹೆಚ್ಚು ಪ್ರವೇಶಯೋಗ್ಯ ಸಿನಿಮಾದತ್ತ ಪರಿವರ್ತನೆಯನ್ನು ಮಾರ್ಗದರ್ಶಿಸುವ ಹೊಸ ನಿಯಂತ್ರಕ ಚೌಕಟ್ಟನ್ನು (Regulatory Framework) ವಿವರಿಸಿದರು. ಪ್ರೇಕ್ಷಕರ ನೆಲೆಯನ್ನು ವಿಸ್ತರಿಸುವಲ್ಲಿ ಮತ್ತು ದಿವ್ಯಾಂಗ ವ್ಯಕ್ತಿಗಳಿಗೆ ವೀಕ್ಷಣೆಯ ಅನುಭವವನ್ನು ಹೆಚ್ಚಿಸುವಲ್ಲಿ ಈ ಮಾನದಂಡಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಅಲ್ಲದೆ, ಸಹಾನುಭೂತಿ ಮತ್ತು ಈ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸಲು ಚಿಂತನಶೀಲ ವಿಧಾನದ ಅಗತ್ಯವಿದೆ ಎಂದು ಅವರು ಹೇಳಿದರು. 

ಅಸೋಸಿಯೇಷನ್ ಫಾರ್ ದಿ ಡೆಫ್ ನ ಅಧ್ಯಕ್ಷ ಶ್ರೀ ಎ.ಎಸ್. ನಾರಾಯಣನ್ ಅವರು,  ಸಿನಿಮಾವನ್ನು ಅಂತರ್ಗತ ಅನುಭವವನ್ನಾಗಿ ಮಾಡುವಲ್ಲಿ ಪ್ರವೇಶದ ಮಾನದಂಡಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ತಾಂತ್ರಿಕ ಚರ್ಚೆಗಳು ಮುಖ್ಯವಾಹಿನಿಯ ಚಲನಚಿತ್ರಗಳಲ್ಲಿ ಆಡಿಯೋ ವಿವರಣೆಗಳು, ಕ್ಲೋಸ್ ಕ್ಯಾಪ್ಷನ್ಗಳು ಮತ್ತು ಇತರ ಸಹಾಯಕ ಸ್ವರೂಪಗಳನ್ನು ಸಂಯೋಜಿಸಲು ಪ್ರಾಯೋಗಿಕ ಹಂತಗಳು ಮತ್ತು ಕಾರ್ಯಸಾಧ್ಯ ತಂತ್ರಜ್ಞಾನಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

ಉದ್ಯಮದ ಸಿದ್ಧತೆ ಮತ್ತು ಪ್ರವೇಶದ ಕಡೆಗೆ ಬದ್ಧತೆ 

ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ವಿಸ್ತೃತ ಪ್ರೇಕ್ಷಕರ ಸಂಭಾವ್ಯ ಪ್ರಯೋಜನಗಳು ಮತ್ತು ಈ ಬದಲಾವಣೆಗಳನ್ನು ಜಾರಿಗೊಳಿಸುವ ಆರ್ಥಿಕ ಪರಿಣಾಮಗಳನ್ನು ಗುರುತಿಸಿ, ಈ ಮಾರ್ಗಸೂಚಿಗಳನ್ನು ಅನುಸರಿಸಲು ಒಪ್ಪಿಕೊಂಡರು. ಅವರ ಪಾಲ್ಗೊಳ್ಳುವಿಕೆಯು ಬೆಳೆಯುತ್ತಿರುವ ಉದ್ಯಮದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಶ್ರೀ. ಮಹೇಶ್ ಮಿಶ್ರಾ, ಪ್ರಾದೇಶಿಕ ಅಧಿಕಾರಿ, CBFC ನವದೆಹಲಿ ಅವರು ಮುಂಬರುವ ಚಲನಚಿತ್ರಗಳಲ್ಲಿ ಪ್ರವೇಶ ಮಾರ್ಗಸೂಚಿಗಳ ಅನುಷ್ಠಾನದಲ್ಲಿ ಪ್ರಾಯೋಗಿಕ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರೆ

ಸಮ್ಮೇಳನವು ಓಜಸ್ವಿ ಶರ್ಮಾ ಅವರ ಬಹು-ಅಂತರ್ಗತ ಚಲನಚಿತ್ರ ರಬ್ಬ್ ಡಿ ಆವಾಜ್ ನ ಕ್ಲಿಪ್ಪಿಂಗ್ ಗಳ ಪ್ರದರ್ಶನವನ್ನು ಸಹ ಒಳಗೊಂಡಿತ್ತು, ಇದು ಚಲನಚಿತ್ರ ನಿರ್ಮಾಣದಲ್ಲಿ ಒಳಗೊಳ್ಳುವಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಸಂಯೋಜಿಸಬಹುದು ಎಂಬುದಕ್ಕೆ ಪ್ರಾಯೋಗಿಕ ಉದಾಹರಣೆಯಾಗಿದೆ. ಈ ಪ್ರವೇಶಾವಕಾಶದ ಮಾನದಂಡಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಲ್ಲಾ ಪಾಲುದಾರರ ನಡುವೆ ಸಹಕಾರದ ಅಗತ್ಯತೆಯ ಕುರಿತು ಸರ್ವ ಸಮ್ಮತಿಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

 

*****



(Release ID: 2049707) Visitor Counter : 21