ಸಂಪುಟ   
                
                
                
                
                
                    
                    
                        ಈಶಾನ್ಯ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗಾಗಿ ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳು ಸಮಾನ (ಈಕ್ವಿಟಿ) ಭಾಗವಹಿಸುವಿಕೆಯ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಹಾಯ ನೀಡಲು ಸಂಪುಟ ಅನುಮೋದನೆ
                    
                    
                        
                    
                
                
                    Posted On:
                28 AUG 2024 3:30PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈಶಾನ್ಯ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ತಮ್ಮ ಸಮಾನ(ಈಕ್ವಿಟಿ) ಭಾಗವಹಿಸುವಿಕೆಗಾಗಿ ಎನ್ ಇಆರ್ ನ ರಾಜ್ಯ ಸರ್ಕಾರಗಳಿಗೆ ( ಎನ್ ಇಆರ್), ರಾಜ್ಯ ಘಟಕಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ನಡುವಿನ ಜಂಟಿ ಉದ್ಯಮ (ಜೆವಿ) ಸಹಯೋಗದ ಮೂಲಕ  ಕೇಂದ್ರ ಹಣಕಾಸು ನೆರವು (ಸಿಎಫ್ ಎ) ಒದಗಿಸುವ ಇಂಧನ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಈ ಯೋಜನೆಯ ಒಟ್ಟಾರೆ ಮೊತ್ತ ಹಣಕಾಸು ವರ್ಷ 2024-25 ರಿಂದ ಹಣಕಾಸು ವರ್ಷ 2031-32 ರವರೆಗೆ ಒಟ್ಟು 4136 ಕೋಟಿ ರೂ.  ಈ ಯೋಜನೆಯಡಿಯಲ್ಲಿ ಸುಮಾರು 15000 ಮೆಗಾವ್ಯಾಟ್ ಸಂಚಿತ ಜಲವಿದ್ಯುತ್ ಸಾಮರ್ಥ್ಯವನ್ನು ಬೆಂಬಲಿಸಲಾಗುತ್ತದೆ. ಈ ಯೋಜನೆಯು ಇಂಧನ ಸಚಿವಾಲಯದ ಒಟ್ಟು ವೆಚ್ಚದಿಂದ ಈಶಾನ್ಯ ಪ್ರದೇಶಕ್ಕೆ ಶೇ. 10 ರಷ್ಟು ಬಜೆಟ್ ಬೆಂಬಲ (ಜಿಬಿಎಸ್) ಮೂಲಕ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಇಂಧನ ಸಚಿವಾಲಯವು ರೂಪಿಸಿದ ಯೋಜನೆಯು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಪಿಎಸ್‌ಯುನ ಎಲ್ಲಾ ಯೋಜನೆಗಳಿಗೆ ಜಂಟಿ ಉದ್ಯಮ (ಜೆವಿ) ಕಂಪನಿಯ ರಚನೆಗೆ ಅವಕಾಶ ಮಾಡಿಕೊಡುತ್ತದೆ.
ಎನ್ ಇಆರ್ ನ ರಾಜ್ಯ ಸರ್ಕಾರಗಳ ಈಕ್ವಿಟಿ ಭಾಗದ ಮೇಲಿನ ಅನುದಾನವು ಪ್ರತಿ ಯೋಜನೆಗೆ ಗರಿಷ್ಠ 750 ಕೋಟಿ ರೂ.ಗೆ ಒಳಪಟ್ಟು ಒಟ್ಟು ಯೋಜನಾ ಮೊತ್ತದ (ಪ್ರಾಜೆಕ್ಟ್ ಇಕ್ವಿಟಿಯ) ಶೇ.24 ಕ್ಕೆ ಸೀಮಿತವಾಗಿರುತ್ತದೆ. ಪ್ರತಿ ಯೋಜನೆಗೆ 750 ಕೋಟಿ ರೂಪಾಯಿಗಳ ಮಿತಿಯನ್ನು ಅಗತ್ಯಬಿದ್ದಲ್ಲಿ ಸಂದರ್ಭಾನುಸಾರವಾಗಿ ಮರುಪರಿಶೀಲಿಸಲಾಗುವುದು. ಸಿಪಿಎಸ್ ಯು ಮತ್ತು ರಾಜ್ಯ ಸರ್ಕಾರದ ಈಕ್ವಿಟಿಯ ಅನುಪಾತವನ್ನು ಜೆವಿಗೆ ಅನುದಾನವನ್ನು ವಿತರಣೆ ಮಾಡುವ ಸಮಯದಲ್ಲಿ ನಿರ್ವಹಿಸಲಾಗುವುದು. 
ಕೇಂದ್ರದ ಹಣಕಾಸು ನೆರವು ಕಾರ್ಯಸಾಧ್ಯವಾದ ಜಲವಿದ್ಯುತ್ ಯೋಜನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಯೋಜನೆಯು ಕಾರ್ಯಸಾಧ್ಯವಾಗುವಂತೆ ಮಾಡಲು ರಾಜ್ಯಗಳು ಉಚಿತ ವಿದ್ಯುತ್ ಅನ್ನು ತ್ಯಜಿಸಲು / ತಡೆಹಿಡಿಯಬೇಕು (ಸ್ಟ್ಯಾಗರ್ಡ್) ಮತ್ತು / ಅಥವಾ ಎಸ್ ಜಿಎಸ್ ಟಿ ಮರುಪಾವತಿ ಮಾಡುವ ಅಗತ್ಯವಿದೆ.
ಈ ಯೋಜನೆಯನ್ನು ಆರಂಭಿಸುವುದರೊಂದಿಗೆ, ಜಲವಿದ್ಯುತ್ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತದೆ ಮತ್ತು ಅಪಾಯ ಮತ್ತು ಜವಾಬ್ದಾರಿಗಳನ್ನು ಹೆಚ್ಚು ಸಮಾನ ರೀತಿಯಲ್ಲಿ ಹಂಚಿಕೊಳ್ಳಲಾಗುವುದು. ರಾಜ್ಯ ಸರ್ಕಾರಗಳು ಮಧ್ಯಸ್ಥಗಾರರಾಗುವುದರೊಂದಿಗೆ ಭೂಸ್ವಾಧೀನ, ಪುನರ್ವಸತಿ ಮತ್ತು ಪನರ್ ಸ್ಥಾಪನೆ ಮತ್ತು ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೊನೆಗೆ ಇದು ಯೋಜನೆಗಳ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡುತ್ತದೆ.
ಈ ಯೋಜನೆಯು ಈಶಾನ್ಯಭಾಗದ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಈಶಾನ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಬಂಡವಾಳ ಹೂಡಿಕೆಯನ್ನು ತರುತ್ತದೆ ಮತ್ತು ಸಾರಿಗೆ, ಪ್ರವಾಸೋದ್ಯಮ, ಸಣ್ಣ-ಪ್ರಮಾಣದ ವ್ಯಾಪಾರದ ಮೂಲಕ ಪರೋಕ್ಷ ಉದ್ಯೋಗ / ಉದ್ಯಮಶೀಲತೆಯ ಅವಕಾಶಗಳೊಂದಿಗೆ ಸ್ಥಳೀಯ ಜನರಿಗೆ ಹೆಚ್ಚಿನ ಸಂಖ್ಯೆಯ ನೇರ ಉದ್ಯೋಗಗಳನ್ನು ಒದಗಿಸುತ್ತದೆ. ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಯು 2030 ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸುವ ಭಾರತದ ರಾಷ್ಟ್ರೀಯವಾಗಿ ನಿರ್ಧರಿಸಿದ ಗುರಿಯ (ಐಎನ್ ಡಿಸಿ) ಸಾಕಾರಕ್ಕೆ ಕೊಡುಗೆ ನೀಡುತ್ತದೆ ಮತ್ತು ಗ್ರಿಡ್‌ನಲ್ಲಿ ನವೀಕರಿಸಬಹುದಾದ ಇಂಧನಗಳ ಮೂಲಗಳ ಒಗ್ಗೂಡಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರಾಷ್ಟ್ರೀಯ ಗ್ರಿಡ್‌ನ ನಮ್ಯತೆ, ಭದ್ರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಳವಾಗಲಿದೆ. 
ಜಲವಿದ್ಯುತ್ ಅಭಿವೃದ್ಧಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ನಿವಾರಿಸಲು ಭಾರತ ಸರ್ಕಾರವು ಹಲವಾರು ನೀತಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಜಲವಿದ್ಯುತ್ ಕ್ಷೇತ್ರವನ್ನು ಉತ್ತೇಜಿಸಲು ಮತ್ತು ಅದನ್ನು ಹೆಚ್ಚು ಕಾರ್ಯಸಾಧ್ಯಗೊಳಿಸಲು, ಸಚಿವ ಸಂಪುಟ 2019ರ ಮಾರ್ಚ್ 7 ರಂದು, ಭಾರಿ ಜಲವಿದ್ಯುತ್ ಯೋಜನೆಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳಾಗಿ ಘೋಷಿಸುವ ಕ್ರಮಗಳು, ಜಲವಿದ್ಯುತ್ ಖರೀದಿಯ ಹೊಣೆಗಾರಿಕೆಗಳು (ಎಚ್ ಪಿಒಎಸ್), ಸುಂಕ ಹೆಚ್ಚಳದ ಮೂಲಕ ಶುಲ್ಕ ಏಕರೂಪಗೊಳಿಸುವ ಕ್ರಮಗಳು, ಎಚ್ ಇಪಿಯಲ್ಲಿ ಪ್ರವಾಹ ಮಿತಗೊಳಿಸುವಿಕೆಗೆ ಬಜೆಟ್ ಬೆಂಬಲ ಮತ್ತು ಮೂಲಭೂತ ಸೌಕರ್ಯಗಳನ್ನು ಸಕ್ರಿಯಗೊಳಿಸುವ ವೆಚ್ಚಕ್ಕೆ ಬಜೆಟ್ ನೆರವು ಅಂದರೆ, ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕೆ ನೆರವು ನೀಡಲು ಅನುಮೋದನೆ ನೀಡಿತ್ತು.  
*****
                
                
                
                
                
                (Release ID: 2049568)
                Visitor Counter : 89
                
                
                
                    
                
                
                    
                
                Read this release in: 
                
                        
                        
                            Odia 
                    
                        ,
                    
                        
                        
                            English 
                    
                        ,
                    
                        
                        
                            Khasi 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Nepali 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam