ಕೃಷಿ ಸಚಿವಾಲಯ
azadi ka amrit mahotsav

ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಇಂದು ತಮ್ಮ ನಿಯೋಗದೊಂದಿಗೆ ಚಿಲಿಯ ಕೃಷಿ ಸಚಿವ ಶ್ರೀ ಎಸ್ಟೆಬಾನ್  ವೆಲೆನ್ಜುವೆಲಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದರು


ಶ್ರೀ ರಾಮ್ ನಾಥ್ ಠಾಕೂರ್ ಅವರು ಅಸ್ತಿತ್ವದಲ್ಲಿರುವ MoU (ಒಪ್ಪಂದ) ಅಡಿಯಲ್ಲಿ ನೈರ್ಮಲ್ಯ ಮತ್ತು ಫೈಟೊಸಾನಿಟರಿ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು

Posted On: 27 AUG 2024 7:48PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮ್ ನಾಥ್ ಠಾಕೂರ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯಲ್ಲಿ ಚಿಲಿಯ ಕೃಷಿ ಸಚಿವ ಶ್ರೀ ಎಸ್ಟೆಬಾನ್ ವೆಲೆನ್ಜುವೆಲಾ ಅವರನ್ನು ತಮ್ಮ ನಿಯೋಗದೊಂದಿಗೆ ಭೇಟಿ ಮಾಡಿದರು.

ಸಭೆಯು ಪರಸ್ಪರ ಆಸಕ್ತಿ ಮತ್ತು ಸಹಯೋಗದ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿತ್ತು. ಕೃಷಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳ ಜಾರಿ, ತೋಟಗಾರಿಕಾ ಕ್ರಿಯಾ ಯೋಜನೆ, ಮತ್ತು ಸಸ್ಯ ಸಂರಕ್ಷಣೆ ಪ್ರಮಾಣಪತ್ರಗಳ ಇ-ಪ್ರಮಾಣೀಕರಣದಂತಹ ಪ್ರಮುಖ ಕ್ಷೇತ್ರಗಳ ಮೇಲೆ ಗಮನಹರಿಸಲಾಯಿತು. ಚರ್ಚೆಗಳು ಚಿಲಿ ಮತ್ತು ಭಾರತ ಎರಡರಲ್ಲೂ ಕೃಷಿ ಸವಾಲುಗಳನ್ನು ಪರಿಗಣಿಸಿದವು ಮತ್ತು ಎರಡೂ ದೇಶಗಳ ನಡುವೆ ಕೃಷಿ ವ್ಯಾಪಾರವನ್ನು ಹೆಚ್ಚಿಸಲು ಅವಕಾಶಗಳನ್ನು ಅನ್ವೇಷಿಸಿದವು. ಎರಡೂ ದೇಶಗಳ ಮಂತ್ರಿಗಳು ಸುಸ್ಥಿರ ಅಭ್ಯಾಸಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಸಹಕಾರವನ್ನು ಬಲಪಡಿಸಲು ಕೃಷಿ ಪಾಲುದಾರಿಕೆಯನ್ನು ಆಳವಾಗಿಸುವ ತಮ್ಮ ಬದ್ಧತೆಯನ್ನು ಮರುದೃಢೀಕರಿಸಿದರು.

ಸಭೆಯಲ್ಲಿ ದ್ವಿಪಕ್ಷೀಯ ಕೃಷಿ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಗುರುತಿಸಲಾಯಿತು. ರಾಜ್ಯ ಸಚಿವ ಶ್ರೀ ರಾಮನಾಥ್ ಠಾಕೂರ್ ಅವರು ಉಭಯ ರಾಷ್ಟ್ರಗಳ ನಡುವಿನ ಹಂಚಿಯ  ದೃಷ್ಟಿಕೋನಗಳನ್ನು ಶ್ಲಾಘಿಸಿದರು ಮತ್ತು ಉನ್ನತ ಮಟ್ಟದ ಭೇಟಿಗಳು ಮತ್ತು ಒಡನಾಟಗಳು ದ್ವಿಪಕ್ಷೀಯ ಸಹಕಾರವನ್ನು ಗಣನೀಯವಾಗಿ ಬಲಪಡಿಸಿವೆ ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಒಪ್ಪಂದದ ಅಡಿಯಲ್ಲಿ ಸ್ವಚ್ಛತೆ ಮತ್ತು ಸಸ್ಯ ಆರೋಗ್ಯ ಸಂಬಂಧಿತ ವಿಷಯಗಳನ್ನು ಪರಿಹರಿಸಲು ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಚಿಲಿಯ ಸಚಿವರು ರಾಜ್ಯ ಸಚಿವ ಶ್ರೀ ಠಾಕೂರ್ ಅವರಿಗೆ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆ ಸಲ್ಲಿಸಿದರು ಮತ್ತು ಮಾರುಕಟ್ಟೆ ಪ್ರವೇಶ ಮತ್ತು ನೈರ್ಮಲ್ಯ ಮತ್ತು ಫೈಟೊಸಾನಿಟರಿ (SPS) ಕಾಳಜಿಗಳನ್ನು ಪರಿಹರಿಸಲು ಟಾಸ್ಕ್ ಫೋರ್ಸ್ ಸ್ಥಾಪಿಸುವ ಅವರ ಪ್ರಸ್ತಾವನೆಯನ್ನು ಚರ್ಚಿಸಿದರು . ಚಿಲಿಯ ಮಾರುಕಟ್ಟೆಗೆ ಭಾರತೀಯ ಮಾವು ದಾಳಿಂಬೆಗಳ ಪ್ರವೇಶವನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಚಿಲಿಯ ಸಚಿವರು ಭರವಸೆ ನೀಡಿದರು. ಇನ್ನು ಮುಂದೆ ಭಾರತೀಯ ಬಾಳೆಹಣ್ಣು ಮತ್ತು ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಚಿಲಿ ಉತ್ಸುಕವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಠಾಕೂರ್, ದ್ವಿಪಕ್ಷೀಯ ವ್ಯಾಪಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಗುಲಾಬಿ, ಬೆಳ್ಳುಳ್ಳಿ, ರಾಜ್ಮಾ ಮತ್ತು ಇತರ ಉತ್ಪನ್ನಗಳ ವ್ಯಾಪಾರಕ್ಕಾಗಿ ಅವಕಾಶಗಳನ್ನು ಅನ್ವೇಷಿಸಬೇಕು ಎಂದು ಒತ್ತಿ ಹೇಳಿದರು. ಪ್ರಸ್ತುತ ಪಟ್ಟಿಗೆ ಬೀಜಗಳು , ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವ ಮೂಲಕ ವ್ಯಾಪಾರ ಮಾಡುವ ಕೃಷಿ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಲು ಚಿಲಿಯ ಸುರಕ್ಷಿತ ಆಸಕ್ತಿ ಹೊಂದಿದೆ.

ರಾಜ್ಯ ಸಚಿವ ಶ್ರೀ ಠಾಕೂರ್ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಚಿಲಿಯೊಂದಿಗೆ  ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ತಮ್ಮ ಬಯಕೆಯನ್ನು ವ್ಯಕ್ತಪಡಿಸುವುದರೊಂದಿಗೆ ಸಭೆಯು ಮುಕ್ತಾಯಗೊಂಡಿತು.  ಚಿಲಿಯ ಸಚಿವರಿಗೆ ಭಾರತಕ್ಕೆ ಫಲಪ್ರದ ಭೇಟಿ ಮತ್ತು ಆಹ್ಲಾದಕರ ವಾಸ್ತವ್ಯಕ್ಕಾಗಿ ಅವರು ಶುಭ ಹಾರೈಸಿದರು.

ಚಿಲಿಯ ರಾಯಭಾರಿ ಶ್ರೀ ಜುವಾನ್ ಅಂಗುಲೋ, ODEPA ಯ ಅಂತರರಾಷ್ಟ್ರೀಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಶ್ರೀ ಗೇಬ್ರಿಯಲ್ ಲೆಸೆಕಾ ಮತ್ತು ಚಿಲಿಯ ಕೃಷಿ ಸಚಿವಾಲಯದ ವೃತ್ತಿಪರರಾದ ಶ್ರೀ ಮಾರ್ಸೆಲೊ ಅಲ್ವಾರೆಜ್ ಸಹ ಭಾಗವಹಿಸಿದ್ದರು .ಭಾರತದ ಕಡೆಯಿಂದ ಜಂಟಿ ಕಾರ್ಯದರ್ಶಿ ( IC ) ಶ್ರೀ ಅಜಿತ್ ಕುಮಾರ್ ಸಾಹು , ಶ್ರೀ ಮುಕ್ತಾನಂದ್ ಅಗರ್ವಾಲ್ ಜಂಟಿ ಕಾರ್ಯದರ್ಶಿ ( PP ) ಮತ್ತು ಸಚಿವಾಲಯದ ಇತರರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು .

 

*****


(Release ID: 2049291) Visitor Counter : 52