ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ಬುಧವಾರ, 28 ಆಗಸ್ಟ್, 2024 ರಂದು ನಡೆಯಲಿರುವ ಬಿ.ಪಿ.ಆರ್.&ಡಿ ಯ 54 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ


ಗೃಹ ಸಚಿವರು "ಹೊಸ ಕ್ರಿಮಿನಲ್ ಕಾನೂನುಗಳು - ನಾಗರಿಕ ಕೇಂದ್ರಿತ ಸುಧಾರಣೆಗಳು" ಕುರಿತು ಡಾ. ಆನಂದ್ ಸ್ವರೂಪ್ ಗುಪ್ತಾ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ

2023 ಮತ್ತು 2024 ವರ್ಷಗಳ ರಾಷ್ಟ್ರಪತಿಗಳ ಗೌರವಾನ್ವಿತ ಸೇವೆ (ಪಿ.ಎಸ್.ಎಂ) ಮತ್ತು ಮೆರಿಟೋರಿಯಸ್ ಸೇವೆಗಾಗಿ ರಾಷ್ಟ್ರಪತಿಗಳ ಪದಕ (ಎಂ.ಎಸ್.ಎಂ) ಪುರಸ್ಕೃತರನ್ನು ಶ್ರೀ ಅಮಿತ್ ಶಾ ಅವರು ಗೌರವಿಸಲಿದ್ದಾರೆ

ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಬಿ.ಪಿ.ಆರ್.&ಡಿ ಯ "ಇಂಡಿಯನ್ ಪೊಲೀಸ್ ಜರ್ನಲ್" ನ ವಿಶೇಷ ಆವೃತ್ತಿಯನ್ನು ಗೃಹ ಸಚಿವರು ಬಿಡುಗಡೆ ಮಾಡುತ್ತಾರೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ  ಮೋದಿ ಅವರ ನಾಯಕತ್ವದಲ್ಲಿ ಮತ್ತು ಗೃಹ ಸಚಿವರ ಮಾರ್ಗದರ್ಶನದಲ್ಲಿ, ಪೊಲೀಸ್ ಮತ್ತು ಆಂತರಿಕ ಭದ್ರತೆಯ ಸವಾಲುಗಳನ್ನು ಎದುರಿಸಲು ಪೊಲೀಸ್ ಪಡೆಗಳನ್ನು ಎಸ್.ಎಂ.ಎ.ಆರ್.ಟಿ. ಮಾಡಲು ಬಿ.ಪಿ.ಆರ್.&ಡಿ ಬದ್ಧವಾಗಿದೆ

Posted On: 27 AUG 2024 10:12AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಬುಧವಾರ (ಆಗಸ್ಟ್ 28, 2024) ನವದೆಹಲಿಯಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿ.ಪಿ.ಆರ್.&ಡಿ.) ಯ 54 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಗೃಹ ಸಚಿವರು "ಹೊಸ ಕ್ರಿಮಿನಲ್ ಕಾನೂನು - ನಾಗರಿಕ ಕೇಂದ್ರಿತ ಸುಧಾರಣೆಗಳು" ಕುರಿತು ಡಾ. ಆನಂದ್ ಸ್ವರೂಪ್ ಗುಪ್ತಾ ಸ್ಮಾರಕ ಉಪನ್ಯಾಸವನ್ನು ನೀಡಲಿದ್ದಾರೆ. ಶ್ರೀ ಅಮಿತ್ ಶಾ ಅವರು 2023 ಮತ್ತು 2024 ರ ರಾಷ್ಟ್ರಪತಿಗಳ ವಿಶಿಷ್ಟ ಸೇವೆಗಾಗಿ ಪದಕ (ಪಿ.ಎಸ್.ಎಂ) ಮತ್ತು ರಾಷ್ಟ್ರಪತಿಗಳ ಮೆರಿಟೋರಿಯಸ್ ಸೇವೆಗಾಗಿ ಪದಕ (ಎಂ.ಎಸ್.ಎಂ) ಪುರಸ್ಕೃತರನ್ನು ಗೌರವಿಸಲಿದ್ದಾರೆ. ಸಮಾರಂಭದಲ್ಲಿ, ಗೃಹ ಸಚಿವರು ಬ್ಯೂರೋದ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು "ಇಂಡಿಯನ್ ಪೊಲೀಸ್ ಜರ್ನಲ್" ಪ್ರಕಟಣೆಯ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಮತ್ತು ಆಂತರಿಕ ಭದ್ರತೆಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಭೌತಿಕ ಮತ್ತು ಸಾಂಸ್ಥಿಕ ಸಂಪನ್ಮೂಲಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಜೊತೆಗೆ, ಭಾರತೀಯ ಪೊಲೀಸ್ ಪಡೆಗಳನ್ನು ಸ್ಮಾರ್ಟ್ (ಎಸ್.ಎಂ.ಎ.ಆರ್.ಟಿ. ) ಪಡೆಗಳಾಗಿ ಪರಿವರ್ತಿಸಲು ಬಿ.ಪಿ.ಆರ್.&ಡಿ. ಬದ್ಧವಾಗಿದೆ. 

1970 ರಲ್ಲಿ ಪ್ರಾರಂಭವಾದಾಗಿನಿಂದ, ಬಿ.ಪಿ.ಆರ್.&ಡಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪೋಲೀಸಿಂಗ್ನಲ್ಲಿ ಉತ್ಕೃಷ್ಟತೆಯನ್ನು ಬೆಳೆಸಲು - ಪೋಲೀಸ್ ಮತ್ತು ಸುಧಾರಣಾ ಸೇವೆಗಳಿಗೆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು, ನಾಗರಿಕರಿಗೆ ವರ್ಧಿತ ಸೇವೆಯ ವಿತರಣೆಗಾಗಿ ತಂತ್ರಜ್ಞಾನಗಳನ್ನು ಅನ್ವೇಷಿಸುವುದು, ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ರಾಜ್ಯಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ಉತ್ತೇಜಿಸುವುದು ಸಂಸ್ಥೆಯ ಗಮನ ಹರಿಸುವುದು – ಮುಂತಾದ ಕಾರ್ಯಗಳಲ್ಲಿ ಭಾರತೀಯ ಪೋಲೀಸ್ ನ ಥಿಂಕ್ ಟ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. 

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮಹಾನಿರ್ದೇಶಕರು, ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಮತ್ತು ಗೃಹ ಸಚಿವಾಲಯ ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

 

*****


(Release ID: 2049106) Visitor Counter : 48