ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ ಲಕ್ಷಾಧಿಪತಿ ಮಹಿಳೆಯರ (ಲಖ್ ಪತಿ ದೀದಿ) ಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11 ಲಕ್ಷ ಹೊಸ ಲಖ್ ಪತಿ ದೀದಿಗಳಿಗೆ ಸನ್ಮಾನ ಮಾಡಿದರು ಮತ್ತು ಪ್ರಮಾಣಪತ್ರಗಳನ್ನು ನೀಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2500 ಕೋಟಿ ರೂಪಾಯಿಗಳ ಆವರ್ತ ನಿಧಿಯನ್ನು ಬಿಡುಗಡೆ ಮಾಡಿದರು ಹಾಗೂ ಸಮುದಾಯ ಹೂಡಿಕೆ ನಿಧಿ ಮತ್ತು ಸ್ವ-ಸಹಾಯ ಗುಂಪುಗಳ ಖಾತೆಗಳಿಗೆ 5,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲವನ್ನು ವಿತರಿಸಿದರು

"ತಾಯಿ ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು 

ಒಬ್ಬ ಸಹೋದರಿ ಲಖ್ ಪತಿ ದೀದಿ ಆದಾಗ ಇಡೀ ಕುಟುಂಬದ ಅದೃಷ್ಟ ಬದಲಾಗುತ್ತದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿಯವರ ಸಂಕಲ್ಪವನ್ನು ಈಡೇರಿಸಲು ದ್ವಿಗುಣ ಶಕ್ತಿಯಿಂದ ಕೆಲಸ ಮಾಡುವ ಪ್ರತಿಜ್ಞೆ ಮಾಡೋಣ: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

Posted On: 25 AUG 2024 5:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ ನಡೆದ ಲಕ್ಷಾಧಿಪತಿ ಮಹಿಳೆಯರ (ಲಖ್ ಪತಿ ದೀದಿ) ಸಮ್ಮೇಳನದಲ್ಲಿ ಭಾಗವಹಿಸಿದರು. ಪ್ರಸ್ತುತ ಸರ್ಕಾರದ ಮೂರನೇ ಅವಧಿಯಲ್ಲಿ ಇತ್ತೀಚೆಗೆ ಲಕ್ಷಾಧಿಪತಿಗಳಾದ 11 ಲಕ್ಷ ಹೊಸ ಲಖ್ ಪತಿ ದೀದಿಯರನ್ನು ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಸನ್ಮಾನಿಸಿದರು. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶಾದ್ಯಂತದ ಲಖ್ ಪತಿ ದೀದಿಯರೊಂದಿಗೆ ಸಂವಾದ ನಡೆಸಿದರು. 2,500 ಕೋಟಿ ರೂಪಾಯಿಗಳ ಆವರ್ತ ನಿಧಿಯನ್ನು ಬಿಡುಗಡೆ ಮಾಡಿದರು, 4.3 ಲಕ್ಷ ಸ್ವ-ಸಹಾಯ ಗುಂಪುಗಳ (ಎಸ್.ಹೆಚ್.ಜಿ.) ಸುಮಾರು 48 ಲಕ್ಷ ಸದಸ್ಯರಿಗೆ  ಪ್ರಯೋಜನವನ್ನು ನೀಡಿದರು.  2.35 ಲಕ್ಷ ಸ್ವಸಹಾಯ ಸಂಘಗಳ 25.8 ಲಕ್ಷ ಸದಸ್ಯರಿಗೆ ಪ್ರಯೋಜನವಾಗಲಿರುವ 5,000 ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ಅವರು ವಿತರಿಸಿದರು.  ಲಖ್ ಪತಿ ದೀದಿ ಯೋಜನೆ ಆರಂಭವಾದಾಗಿನಿಂದ ಈಗಾಗಲೇ ಒಂದು ಕೋಟಿ ಮಹಿಳೆಯರನ್ನು ಲಖ್ ಪತಿ ದೀದಿಯರನ್ನಾಗಿ ಮಾಡಲಾಗಿದೆ ಮತ್ತು ಕೇಂದ್ರ 
ಸರ್ಕಾರವು ಮೂರು ಕೋಟಿ ಲಖ್ ಪತಿ ದೀದಿಯರ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಆರಂಭಿಸಿದರು.  ಲಖ್ ಪತಿ ದೀದಿ ಸಮ್ಮೇಳನದ ಬೃಹತ್ ಸಮಾರಂಭದಲ್ಲಿ ತಾಯಂದಿರು ಮತ್ತು ಸಹೋದರಿಯರು ಅಪಾರ ಜನಸ್ತೋಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು, "ಇಂದು, ಭಾರತದಾದ್ಯಂತ ವ್ಯಾಪಿಸಿರುವ ಲಕ್ಷಗಟ್ಟಲೆ ಮಹಿಳಾ ಸ್ವಸಹಾಯ ಸಂಘಗಳಿಗೆ 6000 ಕೋಟಿ ರೂ.ಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ" ಎಂದು ಹೇಳಿದರು.  ಈ ನಿಧಿಯು ಅನೇಕ ಮಹಿಳೆಯರನ್ನು 'ಲಖ್ ಪತಿ  ದೀದಿ'ಗಳಾಗಿ ಪರಿವರ್ತಿಸಲು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.  

ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ತಮ್ಮ ಶುಭ ಹಾರೈಕೆಗಳನ್ನು ಕೂಡಾ ತಿಳಿಸಿದ್ದಾರೆ.ಮಹಾರಾಷ್ಟ್ರದ ತಾಯಂದಿರು ಮತ್ತು ಸಹೋದರಿಯರು ರಾಜ್ಯದ ವೈಭವದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಒಂದು ಪ್ರತೀಕವಾಗಿದ್ದಾರೆ. ಲಖ್ ಪತಿ ದೀದಿ ಅಭಿಯಾನವು ಕೇವಲ ತಾಯಂದಿರು ಮತ್ತು ಸಹೋದರಿಯರ ಆದಾಯವನ್ನು ಹೆಚ್ಚಿಸುವ ಮಾರ್ಗವಲ್ಲ , ಬದಲಾಗಿ ಕುಟುಂಬ ಮತ್ತು ಭವಿಷ್ಯದ ಪೀಳಿಗೆಯನ್ನು ಬಲಪಡಿಸುವ ಬೃಹತ್ ಅಭಿಯಾನವಾಗಿದೆ, ಇದು ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ.  "ಇಲ್ಲಿ ಇರುವ ಪ್ರತಿಯೊಬ್ಬ ಮಹಿಳೆಯು ತಾನು ಜೀವನ ಮಾಡಲು ಪ್ರಾರಂಭಿಸಿದಾಗ ಸಮಾಜದಲ್ಲಿ ತನ್ನ ಸಾಮಾಜಿಕ ಸ್ಥಾನಮಾನವು ಉನ್ನತ ಮಟ್ಟದಲ್ಲಿರುತ್ತದೆ ಎಂದು ಅರಿತಿರುತ್ತಾರೆ". ಆದಾಯದ ಹೆಚ್ಚಳದೊಂದಿಗೆ ಕುಟುಂಬದ ಕೊಳ್ಳುವ ಸಾಮರ್ಥ್ಯವೂ ಹೆಚ್ಚಾಗುತ್ತದೆ.  "ಒಬ್ಬ ಸಹೋದರಿ ಲಖ್ ಪತಿ ದೀದಿಯಾದಾಗ ಇಡೀ ಕುಟುಂಬದ ಅದೃಷ್ಟ ಬದಲಾಗುತ್ತದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಹೇಳಿದರು.

ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಇಂದು ಮಹಿಳೆಯರ ಕೊಡುಗೆಯನ್ನು ಗಮನಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಹಿಂದೆ ಮಹಿಳೆಯರ ಅಭಿವೃದ್ಧಿಯ ಬಗ್ಗೆ  ನಿರ್ಲಕ್ಷ್ಯವನ್ನು ತೋರಿಸಿದರು.  ದೇಶದಲ್ಲಿ ಕೋಟ್ಯಂತರ ಮಹಿಳೆಯರು ಯಾವುದೇ ಆಸ್ತಿ ಹೊಂದಿಲ್ಲದಿರುವುದರಿಂದ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬ್ಯಾಂಕ್ ಸಾಲ ಪಡೆಯುವಲ್ಲಿ ಅವರುಗಳಿಗೆ ದೊಡ್ಡ ಅಡಚಣೆಯಾಗಿತ್ತು. ಆದ್ದರಿಂದ, ನಾನು ಮಹಿಳೆಯರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪ್ರತಿಜ್ಞೆ ಮಾಡಿದ್ದೇನೆ ಮತ್ತು ಕೇಂದ್ರದ ಮೋದಿ ಸರ್ಕಾರವು ಒಂದರ ನಂತರ ಒಂದರಂತೆ ಮಹಿಳೆಯರ ಹಿತದೃಷ್ಟಿಯಿಂದ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿತು"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಹಿಂದಿನ ಏಳು ದಶಕಗಳ ಕಾಲ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳೊಂದಿಗೆ ಪ್ರಸ್ತುತ ಸರ್ಕಾರದ 10 ವರ್ಷಗಳ ಸಮಾನಾಂತರಗಳನ್ನು ಜನತೆ ಎದುರು ಚಿತ್ರಿಸಿದ ಪ್ರಧಾನಮಂತ್ರಿಯವರು, "ಹಿಂದಿನ ಯಾವುದೇ ಸರ್ಕಾರಗಳಿಗಿಂತ ಈಗಿನ ಸರ್ಕಾರವು ಮಹಿಳೆಯರ ಹಿತಾಸಕ್ತಿಯಲ್ಲಿ ಹೆಚ್ಚಿನ ಕೆಲಸ ಮಾಡಿದೆ" ಎಂದು ಹೇಳಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಲಖ್ ಪತಿ ದೀದಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದರು.  ಭಾರೀ ಮಳೆಯ ನಡುವೆಯೂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ಶ್ರೀ ಚೌಹಾಣ್ ದೀದಿಯರನ್ನು ಶ್ಲಾಘಿಸಿದರು.  ಸಹೋದರಿಯರ ಉತ್ಸಾಹ ಮತ್ತು ಪ್ರೀತಿಗೆ ತಲೆಬಾಗುತ್ತೇನೆ ಎಂದು ಹೇಳಿದರು.

"ಯಾವುದೇ ಸಹೋದರಿ ಅಸಹಾಯಕಳಾಗಬಾರದು, ಯಾವ ಸಹೋದರಿಯ ಕಣ್ಣುಗಳು ಕಣ್ಣೀರು ಸುರಿಸಬಾರದು ಮತ್ತು ಆಕೆಯ ಮುಖದಲ್ಲಿ ಯಾವಾಗಲೂ ನಗು ಇರಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ" ಎಂದು ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಅವರು ಹೇಳಿದರು. "ಇದನ್ನು ಸಾಧಿಸಲು ಶ್ರೀ ಮೋದಿ ಅವರು ಲಖ್ ಪತಿ ದೀದಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪದಿಂದಾಗಿ ಈಗಾಗಲೇ ಒಂದು ಕೋಟಿ  ದೀದಿಯರನ್ನು ಲಕ್ಷಾಧಿಪತಿಯರನ್ನಾಗಿ ಮಾಡಲಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ" ಎಂದು ಸಚಿವರು ಹೇಳಿದರು.  ಇಂದು,  30,000 ಸ್ಥಳಗಳಲ್ಲಿ 11 ಲಕ್ಷ ಮಹಿಳೆಯರು ಲಖ್ ಪತಿ ದೀದಿ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಒಂದೂವರೆ ಕೋಟಿ ಮಹಿಳೆಯರು ಕಾರ್ಯಕ್ರಮಕ್ಕೆ ಜೋಡಿಸಿಕೊಂಡು ಸಂಪರ್ಕ ಹೊಂದಿದ್ದಾರೆ.  100 ದಿನಗಳಲ್ಲಿ 11 ಲಕ್ಷ ದೀದಿಗಳನ್ನು ಲಕ್ಷಾಧಿಪತಿಯರನ್ನಾಗಿ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದರು, ಆದರೆ 100 ದಿನಗಳ ಮೊದಲೇ 11 ಲಕ್ಷ ಮಹಿಳೆಯರನ್ನು ಈಗಾಗಲೇ ಲಕ್ಷಾಧಿಪತಿಯರನ್ನಾಗಿ ಮಾಡಲಾಗಿದೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಶೀರ್ವಾದದಿಂದ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಯರನ್ನಾಗಿ ಮಾಡಲಾಗುವುದು ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಅವರು ಹೇಳಿದರು.

"ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಮೂರು ಪಟ್ಟು ಶಕ್ತಿಯೊಂದಿಗೆ ಕೆಲಸ ಮಾಡುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಭಾಷಣದಲ್ಲಿ ಹೇಳಿದ್ದಾರೆ" ಎಂದು ಶ್ರೀ ಚೌಹಾಣ್ ಹೇಳಿದರು.  ನನ್ನ ಸಹೋದರ ಸಹೋದರಿಯರಿಗೆ ನಾನು ನಿಮಗೆ ಒಂದೇ ಒಂದು ವಿಷಯವನ್ನು ಹೇಳಬಯಸುತ್ತೇನೆ ಎಂದ ಸಚಿವರು, ಪ್ರಧಾನಮಂತ್ರಿಯವರ ಸಂಕಲ್ಪವನ್ನು ಈಡೇರಿಸಲು ದುಪ್ಪಟ್ಟು ಶಕ್ತಿಯಿಂದ ಕೆಲಸ ಮಾಡುವ ಪ್ರತಿಜ್ಞೆ ಮಾಡೋಣ.  ಲಕ್ಷಾಧಿಪತಿಗಳಾಗಿರುವ ಸಹೋದರಿಯರು ಇತರ ಸಹೋದರಿಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುತ್ತಾರೆ. ಬಡತನ ಮುಕ್ತ ಗ್ರಾಮಗಳ ನಿರ್ಮಾಣದ ಪ್ರಧಾನಮಂತ್ರಿಯವರ ಕನಸನ್ನು ನನಸು ಮಾಡುವಲ್ಲಿ ನಾವು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ. ಪ್ರತಿಜ್ಞೆ ಮಾಡುವ ಸಮಯ ಇದು ಎಂದು ಕೇಂದ್ರ ಸಚಿವ ಶ್ರೀ ಚೌಹಾಣ್ ಹೇಳಿದರು.  

"ಪ್ರಧಾನಮಂತ್ರಿಯವರು ಮೂರು ಪಟ್ಟು ಶಕ್ತಿಯಿಂದ ಕೆಲಸ ಮಾಡಿದರೆ, "ನಾವು ದುಪ್ಪಟ್ಟು ದುಡಿಮೆಯಿಂದ ದುಡಿದು ಸಹೋದರಿಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ" ಎಂದು ಇಲ್ಲಿ ನೆರೆದಿರುವ ನೀವೆಲ್ಲರೂ ಎರಡೂ ಕೈಗಳನ್ನು ಮೇಲಕ್ಕೆತ್ತಿ ಈ ಪ್ರತಿಜ್ಞೆ ಸ್ವೀಕರಿಸಿ" ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು 

 

*****


(Release ID: 2048911) Visitor Counter : 50