ಉಪರಾಷ್ಟ್ರಪತಿಗಳ ಕಾರ್ಯಾಲಯ

ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉಪರಾಷ್ಟ್ರಪತಿ ಭಾಷಣ

Posted On: 23 AUG 2024 4:42PM by PIB Bengaluru

ಇಂದು ನಿಮ್ಮೆಲ್ಲರ ಎದುರು ನಿಂತಿರುವುದು ಮತ್ತು ವಿಶ್ವವಿದ್ಯಾಲಯಕ್ಕೆ ನಾನು ಮೊದಲ ಬಾರಿಗೆ ಆಗಮಿಸಿರುವುದು ನಿಜಕ್ಕೂ ಒಂದು ಸೌಭಾಗ್ಯ. ಆದರೆ ಮನುಕುಲದ ಆರನೇ ಒಂದು ಭಾಗದಷ್ಟು ಜನಸಂಖ್ಯೆಗೆ ನೆಲೆಯಾಗಿರುವ ದೇಶದ ಒಂದು ರಾಜ್ಯದಲ್ಲಿ ತೆಗೆದುಕೊಂಡ ಮೊದಲ ವಿನೂತನ ಹೆಜ್ಜೆಯಾದ ಕಾರಣ, ನಾನು ಅದರ ಬಗ್ಗೆ ಬಹಳ ಸಮಯದಿಂದ ಯೋಚಿಸಿದ್ದೆ. ಈ ಪ್ರಮುಖ ಸಂಸ್ಥೆಯು ರಾಷ್ಟ್ರದ ಗಡಿಗಳನ್ನು ಮೀರಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ, ವಿಧಿವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆಯ ದಾರಿದೀಪವಾಗಿದೆ ಮತ್ತು ಅಪರಾಧ ನ್ಯಾಯಶಾಸ್ತ್ರದ ವ್ಯಾಪ್ತಿಯನ್ನು ಮೀರಿದೆ.

ಜ್ಞಾನದ ಅನ್ವೇಷಣೆಗೆ ಮೀಸಲಾಗಿರುವ ರೋಮಾಂಚಕ, ಮುಂದಾಲೋಚನೆಯ ಶೈಕ್ಷಣಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ನನಗೆ ನಿಜಕ್ಕೂ ಸಂತೋಷವಾಗಿದೆ. ಜ್ಞಾನವು ರಾಷ್ಟ್ರೀಯ ಭದ್ರತೆ, ನ್ಯಾಯ ಮತ್ತು ಅಭಿವೃದ್ಧಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ವಿಧಿವಿಜ್ಞಾನವು ಕೇವಲ ತಾಂತ್ರಿಕ ಕ್ಷೇತ್ರವಲ್ಲ. ಇದು ಸತ್ಯ ಮತ್ತು ನ್ಯಾಯದ ಮೂಲಾಧಾರವಾಗಿದೆ.

ಇದು ಏನನ್ನು ಖಚಿತಪಡಿಸುತ್ತದೆ? ಪುರಾವೆಗಳು ಅಭಿಪ್ರಾಯಗಳಿಗಿಂತ ಗಟ್ಟಿಯಾಗಿ ಮಾತನಾಡುತ್ತವೆ, ಊಹಾಪೋಹದ ಬದಲಾಗಿ ಸತ್ಯಕ್ಕೆ ಜಯವಾಗುವುದನ್ನು ಇದು ಖಚಿತಪಡಿಸುತ್ತದೆ. ನಾವು ವಿಧಿವಿಜ್ಞಾನದ ಪ್ರಭಾವ ಹೊಂದಿಲ್ಲದೆ ಇದ್ದಾಗ ಅಪರಾಧ  ನ್ಯಾಯ ವ್ಯವಸ್ಥೆಯ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ನ್ಯಾಯವು ಘಾಸಿಗೊಂಡಿತ್ತು.

ಆದರೆ ಇನ್ನು ಮುಂದೆ ಅದಾಗುವುದಿಲ್ಲ. ವಿಧಿವಿಜ್ಞಾನದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಮತ್ತು ಮುಗ್ಧರನ್ನು ರಕ್ಷಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಈ ಸಂಸ್ಥೆಯು ತನ್ನ ಅತ್ಯಾಧುನಿಕ ಸೌಲಭ್ಯಗಳು, ಅತ್ಯಾಧುನಿಕ ಸಂಶೋಧನೆ ಮತ್ತು ಸಮರ್ಪಿತ ವಿದ್ವಾಂಸರನ್ನು ಹೊಂದಿದ್ದು, ಮುಂದಿನ ಪೀಳಿಗೆಯ ಫೋರೆನ್ಸಿಕ್ ತಜ್ಞರನ್ನು ಪೋಷಿಸುತ್ತಿದೆ, ಅವರು ನಮ್ಮ ಸಮಾಜದಲ್ಲಿ ಸತ್ಯದ ರಕ್ಷಕರಾಗಿ ಸೇವೆ ಸಲ್ಲಿಸುತ್ತಾರೆ. ಸತ್ಯ ಮೇಲುಗೈ ಸಾಧಿಸದಿದ್ದರೆ, ಅಪರಾಧ ನ್ಯಾಯ ವ್ಯವಸ್ಥೆ ಕುಸಿಯುತ್ತದೆ. ಆದ್ದರಿಂದ ಫೋರೆನ್ಸಿಕ್ ಸೈನ್ಸ್ ಕ್ಷೇತ್ರದಲ್ಲಿರುವವರು ಅಂತಿಮವಾಗಿ, ಅಪರಾಧ ಅನುಭವಿಸುವವರನ್ನು ಗುರುತಿಸಲು ಸಹಾಯ ಮಾಡುತ್ತಾರೆ.

ವಿಶ್ವವಿದ್ಯಾಲಯದ ಪ್ರಾಮುಖ್ಯತೆಯು ಅದರ ಶೈಕ್ಷಣಿಕ ಉತ್ಕೃಷ್ಟತೆಯನ್ನು ಮೀರಿದೆ. ಇದು ಎಲ್ಲಾ ವಸ್ತುನಿಷ್ಠತೆಯಲ್ಲಿ ನ್ಯಾಯವನ್ನು ಎತ್ತಿಹಿಡಿಯುವ ನಮ್ಮ ರಾಷ್ಟ್ರದ ಬದ್ಧತೆಯ ಸಂಕೇತವಾಗಿದೆ. ವಾಸ್ತವವಾಗಿ, ನೀವು ಕೆಲವು ಅರ್ಥದಲ್ಲಿ ಕಾನೂನಿನ ವಿದ್ಯಾರ್ಥಿಗಳು.

ವಿಶ್ವವಿದ್ಯಾಲಯವು ನಮ್ಮ ಸಂವಿಧಾನದ ಪೀಠಿಕೆಯನ್ನು ವೈಭವೀಕರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದರ ಎಲ್ಲಾ 3 ಅಂಶಗಳು ಮಾನವತೆ ಮತ್ತು ಮಾನವ ಅಸ್ತಿತ್ವಕ್ಕೆ ಮೂಲಭೂತವಾಗಿವೆ. ನನ್ನ ಯುವ ಸ್ನೇಹಿತರೆ, ಇಲ್ಲಿ ನೀಡಲಾದ ಜ್ಞಾನ ಮತ್ತು ಕೌಶಲ್ಯಗಳು ಅಪರಾಧ ತನಿಖೆ, ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ವಿವಾದಗಳಲ್ಲಿನ ಸಂಕೀರ್ಣ ಸವಾಲುಗಳನ್ನು ನಿಭಾಯಿಸಲು ವೃತ್ತಿಪರರನ್ನು ಸಜ್ಜುಗೊಳಿಸುತ್ತವೆ.

ಬಹು ಮುಖ್ಯವಾಗಿ, ನಿಮ್ಮ ಕಾರ್ಯರಂಗ ನಿರ್ಣಾಯಕವಾಗಿದೆ, ಏಕೆಂದರೆ ಇದು ಕಾನೂನಿನ ನಿಯಮದಲ್ಲಿ ನಮ್ಮ ನಾಗರಿಕರ ನಂಬಿಕೆಯನ್ನು ಹೆಚ್ಚಿಸುತ್ತದೆ. ನ್ಯಾಯದ ದುರ್ಬಳಕೆ ಸಮಾಜಕ್ಕೆ ಬಹಳ ನಿರಾಶಾದಾಯಕ ಅಂಶವಾಗಿದೆ. ವಿಧಿವಿಜ್ಞಾನದ ಅನ್ವಯವಿಲ್ಲದೆ, ನ್ಯಾಯದ ದುರ್ಬಳಕೆ ತಪ್ಪಿಸಲಾಗುವುದಿಲ್ಲ.

ಫೋರೆನ್ಸಿಕ್ ವಿಜ್ಞಾನವು ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಲು ಕೇವಲ ಒಂದು ಸಾಧನಕ್ಕಿಂತ ಹೆಚ್ಚಿನದ್ದಾಗಿದೆ. ಹಾಗಾಗಿ, ಜನರೇ ಇದನ್ನು ಪಡೆಯುತ್ತಾರೆ.

ನ್ಯಾಯದ ಅಪರಾಧಿಗಳು ನಿಜಕ್ಕೂ ಬಳಲುತ್ತಿದ್ದಾರೆ. ಆದರೆ ಇದು ಮುಗ್ಧತೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಮುಗ್ಧ ವ್ಯಕ್ತಿಯ ಕೂಗನ್ನು ಕೇಳದ ಸಮಾಜವು ಕೆಳ ಜಾರುವ ಸಮಾಜವಾಗುತ್ತದೆ.

ನೀವೆಲ್ಲರೂ ಭದ್ರಕೋಟೆ ಆಗಿದ್ದೀರಿ. ನೀವು ವಿಧಿವಿಜ್ಞಾನದ ಯೋಧರು. ಪೂರ್ವಾಗ್ರಹ ಪೀಡಿತ ಮತ್ತು ಪ್ರೇರಿತವಾದ ಮೌಖಿಕ ಸಾಕ್ಷ್ಯದ ಮೇಲೆ ತಪ್ಪಿತಸ್ಥನಾಗಿರುವ ಮುಗ್ಧ ವ್ಯಕ್ತಿಗೆ ನೀವು ಭದ್ರಕೋಟೆಯಾಗಿದ್ದೀರಿ.

ಸ್ನೇಹಿತರೆ, ಇದು ನಮ್ಮ ಪ್ರಪಂಚದ ರಹಸ್ಯಗಳನ್ನು ಹೊರತರಲು, ನಮ್ಮ ಸಮುದಾಯಗಳನ್ನು ರಕ್ಷಿಸಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಯ ಹಾದಿ ರೂಪಿಸುವ ಬಹುಮುಖಿ ಶಿಸ್ತು ಆಗಿದೆ. ಫೋರೆನ್ಸಿಕ್ ವಿಜ್ಞಾನವು ಕಾಲ್ಪನಿಕ ಕಥೆಗಳಿಗಿಂತ ಸತ್ಯಗಳೇ ವಿಚಿತ್ರ ಎಂಬುದನ್ನು ನಮಗೆ ನಂಬುವಂತೆ ಮಾಡುತ್ತದೆ.

ಒಬ್ಬ ಮುಗ್ಧ ವ್ಯಕ್ತಿಯು ಪ್ರಕರಣ ಎದುರಿಸಿದಾಗ, ಅವನು ನಿರಪರಾಧಿಯಾದರೂ  ದರಿದ್ರ ಸ್ವಭಾವದ ಕೆಲವು ಅಪರಾಧಗಳು ಎದುರಾಗುತ್ತವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಇಡೀ ಸಮಾಜ ಒಂದೇ ದನಿಯಲ್ಲಿ ಎದ್ದಾಗ, ನಿರಪರಾಧಿಗಳ ಕೊನೆಯ ಭರವಸೆಯೇ ವಿಧಿವಿಜ್ಞಾನವಾಗಿದೆ. ಪರಿಸರ ವಿಪತ್ತುಗಳ ತನಿಖೆಯಿಂದ ನಿರ್ಣಾಯಕ ದಾಖಲೆಗಳನ್ನು ದೃಢೀಕರಿಸುವವರೆಗೆ, ನಿರ್ಣಾಯಕ ಪುರಾವೆಗಳನ್ನು ವಿಶ್ಲೇಷಿಸುವುದರಿಂದ ಹಿಡಿದು ಸಂಕೀರ್ಣ ಕಾನೂನು ಪ್ರಕ್ರಿಯೆಗಳಲ್ಲಿ ಸತ್ಯವನ್ನು ಬಹಿರಂಗಪಡಿಸುವವರೆಗೆ, ವಿಧಿವಿಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಮತ್ತು ನಮ್ಮ ರಾಷ್ಟ್ರದ ಪ್ರಗತಿಯ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹಿಂದೆ ಮೌಖಿಕ ಸಾಕ್ಷ್ಯವೇ ಪ್ರಮುಖವಾಗಿತ್ತು. ತಪ್ಪು ಮಾಹಿತಿಯ ಘೋಷಣೆಯು ವ್ಯಕ್ತಿಯ ಸಾವಿಗೆ ಕಾರಣವಾಗಿರುತ್ತಿತ್ತು. ಏಕೆಂದರೆ ಸಾಯುತ್ತಿರುವ ವ್ಯಕ್ತಿಯು ಸತ್ಯವನ್ನು ಹೊರತುಪಡಿಸಿ ಏನನ್ನೂ ಮಾತನಾಡುವುದಿಲ್ಲ. ಇದು ದೊಡ್ಡ ಪ್ರಮಾಣದಲ್ಲಿ ಜನರ  ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿರುತ್ತಿತ್ತು.

ಆದರೆ ನಿಮ್ಮ ವಿಧಿವಿಜ್ಞಾನ ಪರಿಣತಿಯು ಅಮಾಯಕರನ್ನು ರಕ್ಷಿಸಲು ಬಂದಿದೆ. ನಿಮ್ಮ ಅತ್ಯಂತ ಸೂಕ್ಷ್ಮವಾದ, ಸುಧಾರಿತ ತಂತ್ರಜ್ಞಾನವು ಈಗ ಮುಗ್ಧರನ್ನು ಉಳಿಸುತ್ತಿದೆ, ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಕರೆದೊಯ್ಯುತ್ತಿದೆ. ವಿಧಿವಿಜ್ಞಾನವು ಸತ್ಯವನ್ನು ಬಹಿರಂಗಪಡಿಸುವ ಸಾಧನವಾಗಿದೆ. ಆದರೆ ಕೆಲವೊಮ್ಮೆ ಸತ್ಯವನ್ನು ಬಹಿರಂಗಪಡಿಸುವುದು ಕಷ್ಟ ಸಾಧ್ಯ.

ಸತ್ಯವನ್ನು ಪತ್ತೆ ಹಚ್ಚಲು ಸಾಕಷ್ಟು ಸಮಯ ತೆಗೆದುಕೊಂಡಿದೆ. ತಾಂತ್ರಿಕ ಪ್ರಗತಿಗಳ ಕಾರಣ, ವಿಶೇಷವಾಗಿ ವಿಚ್ಛಿದ್ರಕಾರಕ ತಂತ್ರಜ್ಞಾನಗಳು, ಸತ್ಯವು ನಿಗೂಢ ಬಲೆಯಲ್ಲಿ ಮುಚ್ಚಿಹೋಗುತ್ತದೆ. ಆದರೆ ನೀವು ಸತ್ಯವನ್ನು ಹೊರತರಲು, ಎತ್ತಿ ಹಿಡಿಯಲು ಸಹಾಯ ಮಾಡುತ್ತೀರಿ.

ಫೋರೆನ್ಸಿಕ್ ಪುರಾವೆಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯು ವಿಶ್ವಾದ್ಯಂತ ಆಧುನಿಕ ಕಾನೂನು ವ್ಯವಸ್ಥೆಯ ಒಂದು ಅನಿವಾರ್ಯ ಭಾಗವಾಗಿದೆ. ನಾನು ಸ್ವಲ್ಪ ಸಮಯದ ಹಿಂದೆ ಪ್ರಸ್ತಾಪಿಸಿದೆ. ಈ ಮೊದಲು, ರಕ್ತದ ಪರೀಕ್ಷೆಯೇ ಸಾಕಾಗಿತ್ತು.

ನಂತರ ಅದು ಮನುಷ್ಯನ ರಕ್ತವಾಗಿರಬೇಕು ಎಂದರು. ಓಹ್, ಇದು ಆರ್ ಎಸ್  ನೆಗೆಟಿವ್‌ಗೆ ಹೊಂದಿಕೆಯಾಗಬೇಕು ಎಂದರು.

ಈಗ ಡಿಎನ್ಎ ಪರೀಕ್ಷೆ, ಮತ್ತು ಇನ್ನೂ ಹೆಚ್ಚಿನದು ಬಂದಿರುವುದು ನಿಮಗೇ ತಿಳಿದಿದೆ. ಇದು ಕಾನೂನಿನ ನಿಯಮವನ್ನು ಬಲಪಡಿಸುತ್ತದೆ. ಇದು ಅಂತಿಮವಾಗಿ ಕಾನೂನಿನ ನಿಯಮವನ್ನು ಬಲಪಡಿಸುತ್ತದೆ ಎಂದು ಹೇಳುವ ಮಟ್ಟಿಗೆ ಹೋಗುತ್ತೇನೆ.

ಏಕೆಂದರೆ ಕಾನೂನಿನ ನಿಯಮವು ಸತ್ಯದ ಮೇಲೆ ದೃಢವಾಗದ ಹೊರತು ದೃಢವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಸತ್ಯವೇ ಪತ್ತೆ ಹಚ್ಚಬೇಕಾದ ವಿಷಯ. ಸತ್ಯದ ಅನ್ವೇಷಣೆಯು ವ್ಯಕ್ತಿನಿಷ್ಠ ಮನಸ್ಸಿನ ವ್ಯಕ್ತಿಗಳ ಮೂಲಕ ನಡೆಯಲು ಸಾಧ್ಯವಿಲ್ಲ.

ನಿಗೂಢ ಮತ್ತು ಮೋಡಗಳಿಂದ ಮುಚ್ಚಿಹೋಗಿರುವ ವಿಚಾರಗಳ ಬಗ್ಗೆ ವಿಧಿವಿಜ್ಞಾನವು ಎಲ್ಲಾ ಅನುಮಾನಗಳನ್ನು ಹೋಗಲಾಡಿಸುತ್ತದೆ. ಅಂತಿಮವಾಗಿ, ದೃಢವಾದ ತೀರ್ಮಾನಕ್ಕೆ ಬರಲು ನಮಗೆ ಸಹಾಯ ಮಾಡುತ್ತದೆ.

ಇದು ಪ್ರಜಾಸತ್ತಾತ್ಮಕ ಮೌಲ್ಯಗಳ ಚಿಲುಮೆ. ನನ್ನ ಯುವ ಸ್ನೇಹಿತರೆ, ಸೈಬರ್ ಭದ್ರತಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಮಾದರಿ ಬದಲಾವಣೆಯಾಗುತ್ತಿದೆ. ಇದು ಸಂಸ್ಥೆಗಳಿಗೆ, ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಭಾರತ ಪ್ರಗತಿಯ ಏರುಗತಿಯಲ್ಲಿ ಸಾಗುತ್ತಿರುವ ದೇಶ. ಈ ಏರುಗತಿಯನ್ನು ತಡೆಯಲಾಗದು, ಅದರಲ್ಲೂ ವಿಶೇಷವಾಗಿ ಡಿಜಿಟಲೀಕರಣ ಕ್ಷೇತ್ರದಲ್ಲಿ. ಹುಡುಗರು ಮತ್ತು ಹುಡುಗಿಯರು ಸೇರಿದಂತೆ ನಾವು ಜಾಗತಿಕ ನೇರ ವಹಿವಾಟುಗಳಲ್ಲಿ 50%ಗಿಂತ ಹೆಚ್ಚು ಖಾತೆಯನ್ನು ಹೊಂದಿದ್ದೇವೆ. ನಮ್ಮ ತಲಾವಾರು ಇಂಟರ್‌ನೆಟ್ ಬಳಕೆಯು ಅಮೆರಿಕ ಮತ್ತು ಚೀನಾದ ಒಟ್ಟು ಬಳಕೆಗಿಂತ ಹೆಚ್ಚು.

100 ದಶಲಕ್ಷ ರೈತರು ವರ್ಷಕ್ಕೆ 3 ಬಾರಿ ನೇರ ನಗದು ವರ್ಗಾವಣೆಯಿಂದ ಪ್ರಯೋಜನ ಪಡೆಯುತ್ತಾರೆ. ಆದ್ದರಿಂದ ಭದ್ರತೆ ಮುಖ್ಯವಾಗಿದೆ. ನಿಮ್ಮ ಪರಿಣತಿಯು ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಬಯಸುವ ಮೋಸಗಾರರಿಂದ ದೂರವಿರಲು ಅವರಿಗೆ ಸಹಾಯ ಮಾಡುತ್ತದೆ. ನನ್ನ ಯುವ ಸ್ನೇಹಿತರೆ, ನಮ್ಮ ರಾಷ್ಟ್ರೀಯ ಭದ್ರತೆ ಕಾಪಾಡಲು, ಸೂಕ್ಷ್ಮ ಮಾಹಿತಿ ರಕ್ಷಿಸಲು ಮತ್ತು ಡಿಜಿಟಲ್ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆ ಕಾಪಾಡಿಕೊಳ್ಳಲು ಈ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಕೆಲಸವು ನಿರ್ಣಾಯಕವಾಗಿದೆ.

ಇಲ್ಲಿಯವರೆಗೆ, ನಾವು ಇತರ ರಾಷ್ಟ್ರಗಳಿಗಿಂತ ಸಂಪೂರ್ಣವಾಗಿ ಮುಂದಿದ್ದೇವೆ. ಆದರೆ ಸವಾಲುಗಳು ಪ್ರತಿದಿನ ಹೊರಹೊಮ್ಮುತ್ತಿವೆ. ಆದ್ದರಿಂದ ನೀವು ನಿಮ್ಮ ಕಾಲ ಮೇಲೆ ನಿಲ್ಲಬೇಕು. ಸಾಕ್ರಟೀಸ್ ಪೂರ್ವದ ಮಹಾನ್ ತತ್ವಜ್ಞಾನಿ ಹೆರಾಕ್ಲಿಟಸ್ ಹೇಳಿದ್ದು ಈ ಸಮಯದಲ್ಲಿ ನನಗೆ ನೆನಪಿದೆ, ಜೀವನದಲ್ಲಿ ಬದಲಾವಣೆಯೊಂದೇ ನಿರಂತರ. ಒಂದೇ ವ್ಯಕ್ತಿ ಒಂದೇ ನದಿಯನ್ನು 2 ಬಾರಿ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು, ಏಕೆಂದರೆ ವ್ಯಕ್ತಿ ಒಂದೇ ಅಲ್ಲ ಅಥವಾ ನದಿ ಒಂದೇ ಅಲ್ಲ. ಸಾವಿರಾರು ವರ್ಷಗಳ ಹಿಂದೆ ಹೆರಾಕ್ಲಿಟಸ್ ಊಹಿಸಿದ್ದಕ್ಕಿಂತ ಹೆಚ್ಚು ವೇಗವಾದ ಬದಲಾವಣೆಗೆ ನೀವು ಕಾಳಜಿ ವಹಿಸಬೇಕು. ನನ್ನ ಯುವ ಸ್ನೇಹಿತರೆ, ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿಯ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ವಿಧಿವಿಜ್ಞಾನವು ವೈವಿಧ್ಯಮಯ ಪಾತ್ರಗಳನ್ನು, ವೈವಿಧ್ಯಮಯ ದೃಢೀಕರಣ ಪಾತ್ರಗಳನ್ನು ವಹಿಸುತ್ತದೆ.

ಇದು ಮಾಲಿನ್ಯದ ಮೂಲಗಳನ್ನು ಗುರುತಿಸಲು, ವನ್ಯಜೀವಿ ಬೇಟೆ ಪತ್ತೆ ಹಚ್ಚಲು ಮತ್ತು ಪರಿಸರ ನಿಯಮಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ನಾನು ಬಹಳ ಸಮಯದಿಂದ ಹೇಳುತ್ತಾ ಬಂದಿದ್ದೇನೆ, ನೈಸರ್ಗಿಕ ಸಂಪನ್ಮೂಲಗಳ ಅಜಾಗರೂಕತೆಯ ಶೋಷಣೆಯನ್ನು ನಾವು ಗಮನಿಸದೆ ಇರುತ್ತೇವೆ, ನಾವು ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಹಾಕುತ್ತೇವೆ, ನಮಗೆ ಬದುಕಲು ಬೇರೊಂದು ಗ್ರಹವಿಲ್ಲ ಎಂಬುದನ್ನು ಮರೆಯುತ್ತೇವೆ.

ನಮ್ಮ ಮುಂದಿನ ಪೀಳಿಗೆಗೆ ನಾವು ಈ ಗ್ರಹವನ್ನು ಸುರಕ್ಷಿತವಾಗಿರಿಸಬೇಕು. ಈ ಗ್ರಹವು ಹಾಗೆಯೇ ಉಳಿದಿದೆ ಮತ್ತು ಸುಧಾರಿಸುತ್ತದೆ ಎಂದು ನೋಡಲು ಎಲ್ಲಾ ಮಾನವ ಶಕ್ತಿ ಒಮ್ಮುಖವಾಗುವ ಅಗತ್ಯವಿದೆ. ಹಾಗಾಗಿ, ವಿಧಿವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ.

ಪರಿಸರ ಹಾನಿಯ ಕಾರಣವನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಸಾಮರ್ಥ್ಯ ನಿರ್ಣಾಯಕವಾಗಿದೆ. ನೀವು ಕಾರಣ ತಿಳಿದಾಗ ಮಾತ್ರ ಅದನ್ನು ನಿಭಾಯಿಸಬಹುದು. ಉಲ್ಲಂಘಿಸುವವರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ನಮ್ಮ ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂರಕ್ಷಿಸಲು ಇದು ಅತ್ಯಗತ್ಯ.

ಸ್ನೇಹಿತರೆ, ನಾನು 1989ರಲ್ಲಿ ಸಂಸತ್ತಿಗೆ ಮತ್ತು 1990ರಲ್ಲಿ ಸಚಿವನಾಗಿ ಆಯ್ಕೆಯಾದೆ. ಆಗ ಭಾರತದ ಆರ್ಥಿಕತೆಯ ಗಾತ್ರವು ಲಂಡನ್ ಮತ್ತು ಪ್ಯಾರಿಸ್ ನಗರಕ್ಕೆ ಸಮನಾಗಿತ್ತು. ನೀವು ಅದನ್ನು ನಂಬುವುದಿಲ್ಲ. ಕೇವಲ ಲಂಡನ್ ನಗರದಷ್ಟಿತ್ತು. ನಾವು ಈಗ ಎಲ್ಲಿದ್ದೇವೆ? ಕಳೆದ 10 ವರ್ಷಗಳಲ್ಲಿ ನಾವು ಈಗ 5ನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯ ಪರಿಸ್ಥಿತಿಗೆ ಹೋಗಿದ್ದೇವೆ, ಕೇವಲ 2 ವರ್ಷಗಳಲ್ಲಿ 3ನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದೆ. ಈ ಸನ್ನಿವೇಶದಲ್ಲಿ ಭಾರತವು ಬೆಳೆಯುತ್ತಿರುವಂತೆ ಮತ್ತು ವಿಕಸನಗೊಳ್ಳುತ್ತಿರುವಂತೆಯೇ ನಾವು ಎದುರಿಸುತ್ತಿರುವ ಸವಾಲುಗಳು ಸಹ ಹೆಚ್ಚು ಸಂಕೀರ್ಣವಾಗುತ್ತಿವೆ.

ದುರದೃಷ್ಟವಶಾತ್ ಕೆಲವು ಸವಾಲುಗಳು ಒಳಗಿನಿಂದ ಮತ್ತು ಹೊರಗಿನಿಂದ ಹೊರಹೊಮ್ಮುತ್ತಿವೆ. ಜನರು ನಮ್ಮ ರಾಷ್ಟ್ರೀಯತೆ ಗೌರವಿಸಲು ವಿಫಲರಾಗುವುದನ್ನು ನಾವು ಕಾಣುತ್ತೇವೆ. ರಾಜಕೀಯ ಅಥವಾ ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮೇಲಕ್ಕೆ ಇಡುವುದು ಈ ಮಹಾನ್ ದೇಶದ ಪ್ರಜೆಗಳಾಗಿ ನಮ್ಮ ಬದ್ಧ ಕರ್ತವ್ಯವಾಗಿದೆ.

ಈ ದೇಶದಲ್ಲಿ ಗಲಭೆಯನ್ನೇ ತ್ವರಿತವಾಗಿ ಬಂಡವಾಳ ಮಾಡಿಕೊಳ್ಳುವ ಜನರಿದ್ದಾರೆ. ನನ್ನ ಯುವ ಸ್ನೇಹಿತರು, ದೊಡ್ಡ ವಕೀಲರು, ಸಚಿವರು, ವಿದೇಶಾಂಗ ಸೇವೆಯ ಸದಸ್ಯರಾಗಿರುವ ಅಧಿಕಾರದಲ್ಲಿರುವ ಜನರು ಹೇಳಬೇಕು... ಪಕ್ಕದ ದೇಶದಲ್ಲಿ ನಡೆದದ್ದು ಎಂತಹ ನೋವು ಈ ದೇಶದಲ್ಲೂ ಆಗಬಹುದಾ ಹೇಳಿ? ಅವಕಾಶವೇ ಇಲ್ಲ.

ಅಂತಹ ಜನರು ತಮ್ಮ ಮೌನದಿಂದ ಪರಿಸ್ಥಿತಿ ನಿಭಾಯಿಸಬಾರದು. ನೀವು ನಿಮ್ಮ ಮನಸ್ಸನ್ನು ತೆರೆಯಬೇಕು. ಗ್ರಹದ ಮೇಲಿನ ಪ್ರಜಾಪ್ರಭುತ್ವದ ದೊಡ್ಡ ಕಾರ್ಯವನ್ನು ಅಸ್ಥಿರಗೊಳಿಸುವ ಹಾನಿಕಾರಕ ವಿನ್ಯಾಸವನ್ನು ಪ್ರತಿಬಿಂಬಿಸುವ ಕೆಟ್ಟ ನಿರೂಪಣೆಯನ್ನು ನೀವು ಸಾಮಾಜಿಕ ಮಾಧ್ಯಮಗಳಿಗೆ ಕೊಂಡೊಯ್ಯಬೇಕು.

ನಾವು ಅವುಗಳನ್ನು ತಟಸ್ಥಗೊಳಿಸಬೇಕು. ಸ್ನೇಹಿತರೆ, ನಿಮ್ಮ ಕೌಶಲ್ಯಗಳು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ಎದುರಿಸಲು, ಪರಿಸರ ಅವನತಿ ಮತ್ತು ಸೈಬರ್ ಬೆದರಿಕೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ನಿಮ್ಮ ಕೌಶಲ್ಯದ ಅಗತ್ಯವೂ ಹೆಚ್ಚುತ್ತಿದೆ.

ಈ ಕೌಶಲ ದೇಶದಲ್ಲಷ್ಟೇ ಅಲ್ಲ, ಹೊರಗೂ ಬೇಕೇ ಬೇಕು ಎಂಬುದನ್ನು ಹೊರಬಿದ್ದು ನೋಡಬೇಕು. ನಾನು ಮೊದಲೇ ಹೇಳಿದಂತೆ ಫೋರೆನ್ಸಿಕ್ ಸೈನ್ಸ್ ಉದ್ಯೋಗವು ಭಯೋತ್ಪಾದಕರು ಮತ್ತು ಅಪರಾಧಿಗಳನ್ನು ಹಿಡಿಯಲು ಅಪರಾಧ ನ್ಯಾಯ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಈ ಗೌರವಾನ್ವಿತ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಉತ್ಕೃಷ್ಟತೆಗಾಗಿ ನಿರಂತರವಾಗಿ ಶ್ರಮಿಸಬೇಕೆಂದು ನಾನು ಒತ್ತಾಯಿಸುತ್ತೇನೆ.

ಫೋರೆನ್ಸಿಕ್ ವಿಜ್ಞಾನಕ್ಕೆ ನಿಮ್ಮ ಕೊಡುಗೆಗಳು ಜಾಗತಿಕ ಮಾನದಂಡಗಳನ್ನು ಮಾತ್ರ ಪೂರೈಸುವ ಜತೆಗೆ, ಭಾರತದ ಸತತ ಏರುಗತಿಗೆ ಹೊಸ ಮಾನದಂಡಗಳನ್ನು ಹೊಂದಿಸಬೇಕು. ಇನ್ನು ಮುಂದೆ ನಮ್ಮ ಮುಂದೆ ಯಾರಿದ್ದಾರೆ ಎಂದು ಯೋಚಿಸಬೇಕಾಗಿಲ್ಲ. ನಾವು ಸಾಲಿನಲ್ಲಿ ಎರಡನೆಯವರಿಗಿಂತ ಬಹಳ ಮುಂದಿರಬೇಕು.

ನನ್ನ ಉತ್ತಮ ಸ್ನೇಹಿತರು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ಹರಸಾಹಸ ಪಡುತ್ತಿರುವಂತೆ, ವಿಶ್ವದ ಹಲವು ದೇಶಗಳು ವಿಚ್ಛಿದ್ರಕಾರಕ ತಂತ್ರಜ್ಞಾನಗಳೊಂದಿಗೆ ಸೆಣಸಾಡುತ್ತಿವೆ. ನಾನು ಅದರ ಬಗ್ಗೆ ಹೆಚ್ಚಿನ ಉಲ್ಲೇಖ ಮಾಡಲು ಬಯಸುವುದಿಲ್ಲ. ಆದರೆ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಹಸಿರು ಜಲಜನಕ ಮಿಷನ್ ಕಲ್ಪಿಸಿಕೊಳ್ಳಿ. ನಾವು ವಿಚ್ಛಿದ್ರಕಾರಕ ತಂತ್ರಜ್ಞಾನಗಳ ಬಗ್ಗೆ ಮಾತನಾಡುವಾಗ, ನಮ್ಮದು ಮೆಷಿನ್ ಲರ್ನಿಂಗ್ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುವ ದೇಶವಾಗಿದೆ, ಬ್ಲಾಕ್‌ಚೈನ್ ಮತ್ತು 6ಜಿ ವಾಣಿಜ್ಯ ಬಳಕೆಯು 2025ರಿಂದ ನಡೆಯುತ್ತದೆ. ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಏರುಗತಿಯಲ್ಲಿ ಸಾಗಬೇಕಿದೆ.

ನಾನು ಮತ್ತು ಇತರರು ಮಾತನಾಡುವ ಪ್ರಗತಿಯ ಏರುಗತಿ ಏನು? ದುರ್ಬಲ 5ರಿಂದ ನಾವೀಗ ಪ್ರಬಲ 5 ಆಗಿದ್ದೇವೆ. ನನ್ನ ಕಣ್ಣುಗಳನ್ನು ನಾನು ನಂಬಲು ಸಾಧ್ಯವಿಲ್ಲ. 1989 ಮತ್ತು 1990ರಲ್ಲಿ ನಾನು ಸಚಿವನಾಗಿದ್ದಾಗ ಈ ಬಗ್ಗೆ ಕನಸು ಕಾಣಲಿಲ್ಲ. ನಮ್ಮ ವಿದೇಶಿ ವಿನಿಮಯ ಸುಮಾರು 1 ಶತಕೋಟಿ ಡಾಲರ್ ಏರಿಳಿತದ ಸಮಯವಾಗಿತ್ತು.

ಸ್ವಿಟ್ಜರ್ಲೆಂಡ್‌ನ 2 ಬ್ಯಾಂಕುಗಳಲ್ಲಿ ಇಡಲು ಚಿನ್ನವನ್ನು ಭೌತಿಕವಾಗಿ ಏರ್‌ಲಿಫ್ಟ್ ಮಾಡಬೇಕಾಗಿತ್ತು. ಈಗ ನಮ್ಮ ವಿದೇಶಿ ವಿನಿಮಯ 660 ಶತಕೋಟಿ ಡಾಲರ್ ಮೀರಿದೆ. ಒಂದೇ ವಾರದಲ್ಲಿ ನಾವು 6ರಿಂದ 7 ಶತಕೋಟಿ ಡಾಲರ್‌ಗಳನ್ನು ಸೇರಿಸಬಹುದು. ಭಾರತದ ಬದಲಾವಣೆ ಬಗ್ಗೆ ವಿಶ್ವಬ್ಯಾಂಕ್ ಹೇಳುವಂತೆ, ಭಾರತದ ಡಿಜಿಟಲೀಕರಣವು ಇಡೀ ಜಗತ್ತೇ ಅನುಕರಿಸಬಹುದಾದ ಸ್ವರೂಪದಲ್ಲಿ ಇದೆ.

ಸಾಮಾನ್ಯವಾಗಿ 4 ದಶಕಗಳಲ್ಲಿ ಸಾಧ್ಯವಾಗದ್ದನ್ನು ನಾವು 6 ವರ್ಷಗಳಲ್ಲಿ ಸಾಧಿಸಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಭಾರತವನ್ನು ಹೂಡಿಕೆ ಮತ್ತು ಅವಕಾಶದ ಉಜ್ವಲ ತಾಣವೆಂದು ಗುರುತಿಸಿದೆ, ನೆಚ್ಚಿನ ಜಾಗತಿಕ ತಾಣವಾಗಿದೆ. ಜಾಗತಿಕ ಅಡ್ಡಿ ಆತಂಕಗಳು, ಕಷ್ಟಕರವಾದ ಭೂಪ್ರದೇಶ ಮತ್ತು ವಾಯು ನೆಲೆಗಳ  ಹೊರತಾಗಿಯೂ ದೊಡ್ಡ ಆರ್ಥಿಕತೆಗಳು ಹೆಣಗಾಡುತ್ತಿರುವಾಗ ಮಾತ್ರ ಭಾರತದ ಆರ್ಥಿಕತೆಯು ಏರುಗತಿಯಲ್ಲಿ ಸಾಗುತ್ತಿದೆ.

ಚಂದ್ರಯಾನ 3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಏಕೈಕ ದೇಶ ಭಾರತವಾಗಿದ್ದು, ನಾವು ಬಾಹ್ಯಾಕಾಶದಲ್ಲಿಯೂ ಇತಿಹಾಸ ಸೃಷ್ಟಿಸಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದ ವಿವಿಧ ಗಡಿಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ.

ಭಾರತದ ಅಭೂತಪೂರ್ವ ಮತ್ತು ನಿರ್ಣಾಯಕ ಪ್ರಗತಿಯ ಹಿನ್ನೆಲೆಯಲ್ಲಿ ನನ್ನ ಯುವ ಸ್ನೇಹಿತರೆ, ನೀವು ನಿಮ್ಮನ್ನು ಕೇವಲ ನಿಮ್ಮದೇ ವಿಷಯದ ವಿದ್ಯಾರ್ಥಿಗಳಂತೆ ನೋಡದೆ ಭಾರತದ ಭವಿಷ್ಯದ ಜ್ಯೋತಿಯಾಗಿ ನೋಡಬೇಕು. ನನ್ನ ಪ್ರಕಾರ, ನೀವು ಪ್ರತಿಯೊಬ್ಬರೂ ಈ ದೇಶದ ಆಡಳಿತದಲ್ಲಿ ಮತ್ತು ಈ ದೇಶದ ಉದಯದಲ್ಲಿ ಇತರ ಯಾವುದೇ ಕ್ಷೇತ್ರಗಳಿಗಿಂತ ಹೆಚ್ಚಿ ಗಂಭೀರ ಪಾಲುದಾರರು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ತಲುಪಿದಾಗ ವಿಕಸಿತ ಭಾರತಕ್ಕಾಗಿ 2047ರ ಮ್ಯಾರಥಾನ್ ನಡಿಗೆಯಲ್ಲಿ  ನೀವು ಅತ್ಯಂತ ಪ್ರಮುಖ ಆಧಾರಸ್ತಂಭಗಳು.

ನೀವು ಈ ಮಹಾನ್ ಮೆರವಣಿಗೆಯ ಚಾಲಕರು. ನಿಗದಿತ ಗಡುವಿಗೆ ಮುಂಚೆಯೇ ಆಗದಿದ್ದರೂ ಕನಿಷ್ಠ 2047ರ ವೇಳೆಗೆ ವಿಕಸಿತ ಭಾರತದಲ್ಲಿ ಇದು ಫಲ ನೀಡುತ್ತದೆ ಎಂಬುದು ನನಗೆ ಖಾತ್ರಿಯಿದೆ. ಆದ್ದರಿಂದ ನನ್ನ ಯುವ ಸ್ನೇಹಿತರೆ, ನಿಮ್ಮ ಪರಿಣತಿಯನ್ನು ನಮ್ಮ ರಾಷ್ಟ್ರ ಎದುರಿಸುತ್ತಿರುವ ಗುರುತರ ಸವಾಲುಗಳಿಗೆ ಅನ್ವಯಿಸಿ. ಒಟ್ಟಾರೆಯಾಗಿ ಸಮಾಜಕ್ಕೆ ಪ್ರಯೋಜನಕಾರಿಯಾದ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸಲು ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯಮದೊಂದಿಗೆ ಸಹಕರಿಸಿ.

ನನ್ನ ಯುವ ಸ್ನೇಹಿತರಿಗೆ ನಾನು ಸಲಹೆ ನೀಡುವುದೇನೆಂದರೆ, ಸರ್ಕಾರಿ ಸೇವೆಗೆ ಬರಲು ಕೋಚಿಂಗ್ ಸೆಂಟರ್‌ಗಳಿಗೆ ಧಾವಿಸಬೇಡಿ. ಇತರ ಕ್ಷೇತ್ರಗಳಲ್ಲಿನ ಅವಕಾಶಗಳು ಅಗಾಧವಾಗಿವೆ, ಅವುಹೆಚ್ಚು ಉತ್ಪಾದಕವಾಗಿದ್ದು, ಅಲ್ಲಿಗೆ ಪ್ರಯತ್ನಿಸಿ.

ಅವರು ನಿಮ್ಮ ಕೌಶಲ್ಯ ಮತ್ತು ಜ್ಞಾನ ಪರೀಕ್ಷಿಸುತ್ತಾರೆ, ಅವರು ನಿಮ್ಮನ್ನು ನಾವೀನ್ಯತೆ ಮತ್ತು ಸಂಶೋಧನೆಗೆ ಪ್ರೇರೇಪಿಸುತ್ತಾರೆ. ಉದಾಹರಣೆಗೆ ವಿಧಿವಿಜ್ಞಾನವನ್ನು ತೆಗೆದುಕೊಳ್ಳಿ. ಈ ಕ್ಷೇತ್ರದಲ್ಲಿ ಪರಿಣಿತ ಅಥವಾ ಜ್ಞಾನ ಹೊಂದಿದ ವ್ಯಕ್ತಿಯು ಸರ್ಕಾರಿ ಕೆಲಸಕ್ಕೆ ಏಕೆ ಹೋಗುತ್ತಾನೆ? ಅದರ ಬಗ್ಗೆ ಯೋಚಿಸಿ.

ಸರ್ಕಾರಿ ಸೇವೆಯಲ್ಲಿ ನಮ್ಮ ಅವಕಾಶಗಳನ್ನು ಬಿಡೋಣ. ಈ ಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ವೃತ್ತಿಪರರಿಗೆ ನಾನು ನೈತಿಕತೆ ಮತ್ತು ಸಮಗ್ರತೆಯ ಉನ್ನತ ಗುಣಮಟ್ಟ ಎತ್ತಿಹಿಡಿಯಲು ಮನವಿ ಮಾಡುತ್ತೇನೆ. ಏಕೆಂದರೆ ನಿಮ್ಮ ನೈತಿಕತೆಯ ದುರ್ಬಲತೆಯು ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ, ಅಮಾಯಕನನ್ನು ಜೈಲಿಗೆ, ಗಲ್ಲು ಶಿಕ್ಷೆಗೆ ಕಳುಹಿಸಬಹುದು. ಯಾವಾಗಲೂ ಸತ್ಯವು ನಿಮ್ಮ ಕೆಲಸಕ್ಕೆ ಮಾರ್ಗದರ್ಶನ ನೀಡಲಿ. ಪಕ್ಷಪಾತರಹಿತ ಮತ್ತು ರಾಜಿಯಿಲ್ಲದೆ ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಿ.

ನೈತಿಕ ದುರ್ಬಲತೆಯು ನ್ಯಾಯಶಾಸ್ತ್ರದ ಕೌಶಲ್ಯಗಳನ್ನು ದೈತ್ಯಾಕಾರದಂತೆ ಮಾಡಬಹುದು. ಆದ್ದರಿಂದ ಫೋರೆನ್ಸಿಕ್ ವಿಶ್ಲೇಷಣೆಯ ಪಾವಿತ್ರ್ಯತೆಗೆ ಎಂದಿಗೂ ಬದ್ಧರಾಗಿರಿ. ಅಧ್ಯಾಪಕರಿಗೆ ಮತ್ತು ಸಂಶೋಧಕರಿಗೆ ನಾನು ವಿಜ್ಞಾನವನ್ನು ಮುನ್ನಡೆಸುವಲ್ಲಿ ಮತ್ತು ನಾಳಿನ ಮನಸ್ಸನ್ನು ಪೋಷಿಸುವ ನಿಮ್ಮ ಅವಿರತ ಪ್ರಯತ್ನಗಳಿಗಾಗಿ ನಿಮ್ಮನ್ನು ಶ್ಲಾಘಿಸುತ್ತೇನೆ.

ನಿಮ್ಮ ಕೆಲಸವು ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜಕ್ಕೆ ಅಡಿಪಾಯ ಹಾಕುತ್ತಿದೆ, ಅದಕ್ಕಾಗಿ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ನನ್ನ ಯುವ ಸ್ನೇಹಿತರೆ, ನಾನು ಈ ವಿಶ್ವದಲ್ಲಿ ಇದ್ದೇನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಭಾರತದ ಬಗ್ಗೆ ಗೌರವ ಹೊಂದಿರುವ ಜನರಿಗಿರುವುದನ್ನು ಸಹ ನೋಡಿದ್ದೇನೆ.

ನಾನು ಭೇಟಿಯಾಗುವ ಜನರಲ್ಲಿ ಭಾರತ ಎಂಬ ಹೆಸರೇ ವಿಭಿನ್ನ ರೀತಿಸದ್ದು ಮಾಡುತ್ತದೆ. ಶತಮಾನಗಳ ಹಿಂದಿನ ಭಾರತ, ಇಂದಿನ ವಿಶ್ವಗುರು ಭಾರತವನ್ನು ನೋಡಲು ನಾವು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದೇವೆ. ಸದೃಢ, ಸುರಕ್ಷಿತ ಮತ್ತು ಸಮೃದ್ಧ ಭಾರತಕ್ಕೆ ವಿಜ್ಞಾನವು ಮಾರ್ಗದರ್ಶಿ ಬೆಳಕಾಗಿ ಕಾರ್ಯ ನಿರ್ವಹಿಸುವ ಭವಿಷ್ಯವನ್ನು ನಾವು ಒಟ್ಟಾಗಿ ನಿರ್ಮಿಸೋಣ.

ನಿಮ್ಮ ಈ ಸಮಯದಲ್ಲಿ ಅಂತಹ ಬೇಡಿಕೆ ಮುಂದಿಡಲು ನಾನು ನಿಜವಾಗಿಯೂ ಅವಕಾಶ ಪಡೆದಿದ್ದೇನೆ. ನಿಮ್ಮ ಜೀವನ ಮತ್ತು ವೃತ್ತಿ ಜೀವನಕ್ಕೆ ನಾನು ಶುಭ ಹಾರೈಸುತ್ತೇನೆ.

 

ಧನ್ಯವಾದಗಳು.

 

*****

 



(Release ID: 2048667) Visitor Counter : 16