ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸಗಢದ ರಾಯಪುರದಲ್ಲಿ ನಡೆದ ಛತ್ತೀಸಗಢ ಮತ್ತು ನೆರೆಯ ರಾಜ್ಯಗಳೊಂದಿಗೆ ಎಡಪಂಥೀಯ ಉಗ್ರವಾದ ಕುರಿತು ಪರಿಶೀಲನಾ ಸಭೆ ಮತ್ತು ಅಂತರ-ರಾಜ್ಯ ಸಮನ್ವಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧದ ಅಭಿಯಾನ ಈಗ ನಿರ್ಣಾಯಕ ಘಟ್ಟದಲ್ಲಿದೆ

ಮಾರ್ಚ್ 2026 ರ ಮೊದಲು ದೇಶದಿಂದ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು

ಎಡಪಂಥೀಯ ಉಗ್ರವಾದದ ಸಂಪೂರ್ಣ ಪೂರಕ ವ್ಯವಸ್ಥೆಯನ್ನು ನಿರ್ದಯವಾಗಿ  ನಾಶಪಡಿಸಬೇಕಾಗುತ್ತದೆ

ಎಡಪಂಥೀಯ ಉಗ್ರವಾದವು ಮಾನವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಪಾಯವಾಗಿದೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎರಡು ಪಟ್ಟು ವೇಗ ಮತ್ತು ತೀವ್ರತೆಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ

ಮೋದಿ ಸರ್ಕಾರವು ಎಡಪಂಥೀಯ ಉಗ್ರವಾದದ ವಿರುದ್ಧ ಅಭಿವೃದ್ಧಿ, ಕಾನೂನು ಕ್ರಮ ಮತ್ತು ಕಾರ್ಯಾಚರಣೆ ಎಂಬ ಮೂರು ರಂಗಗಳಲ್ಲಿ ಕಾರ್ಯತಂತ್ರದೊಂದಿಗೆ ಯಶಸ್ವಿ ಹೋರಾಟವನ್ನು ನಡೆಸುತ್ತಿದೆ

ಎಡಪಂಥೀಯ ಉಗ್ರವಾದದಿಂದ ಅನಕ್ಷರಸ್ಥರಾಗಿರುವ ಜನರ ಶಿಕ್ಷಣಕ್ಕಾಗಿ ರಾಜ್ಯಗಳು ನೀತಿಯನ್ನು ರೂಪಿಸಬೇಕಾಗಿದೆ

ವಾಪಸಾಗದ ಹಂತ ತಲುಪಿರುವ ಉಗ್ರರಿಗೆ ಶಿಕ್ಷೆಯಾಗದ ಹೊರತು ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ

ಎಡಪಂಥೀಯ ಉಗ್ರವಾದಕ್ಕೆ ಹಣಕಾಸು, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಅವುಗಳ ತಯಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯುವುದು ಅವಶ್ಯಕವಾಗಿದೆ

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು, ಇದರಿಂದ ಸರ್ಕಾರದ ಯೋಜನೆಗಳ ಶೇ.100 ರಷ್ಟ

Posted On: 24 AUG 2024 7:54PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸಗಢದ ರಾಯಪುರದಲ್ಲಿ ಛತ್ತೀಸಗಢ ಮತ್ತು ನೆರೆಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಎಡಪಂಥೀಯ ಉಗ್ರವಾದ ಮತ್ತು ಅಂತರ ರಾಜ್ಯ ಸಮನ್ವಯ ಕುರಿತು ಪರಿಶೀಲನಾ ಸಭೆ ನಡೆಸಿದರು. ಛತ್ತೀಸಗಢ ಮುಖ್ಯಮಂತ್ರಿ ಶ್ರೀ ವಿಷ್ಣುದೇವ್ ಸಾಯಿ, ಉಪಮುಖ್ಯಮಂತ್ರಿ ಶ್ರೀ ವಿಜಯ್ ಶರ್ಮಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ (ಐಬಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐ ಎ)ಯ ನಿರ್ದೇಶಕರು, ಸಿ ಆರ್‌ ಪಿ ಎಫ್‌, ಬಿ ಎಸ್‌ ಎಫ್‌, ಎಸ್‌ ಎಸ್‌ ಬಿ ಮತ್ತು ಐಟಿಬಿಪಿ ಮಹಾನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು. ಆಂಧ್ರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು ಸಹ ಸಭೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ, ಎಡಪಂಥೀಯ ಉಗ್ರವಾದವನ್ನು ಎದುರಿಸುವ ಕಾರ್ಯತಂತ್ರ, ಅಂತರರಾಜ್ಯ ಸಮನ್ವಯ, ಭದ್ರತಾ ಪಡೆಗಳ ಸಾಮರ್ಥ್ಯ ವರ್ಧನೆ, ಎಡಪಂಥೀಯ ಉಗ್ರಗಾಮಿ ಪ್ರಕರಣಗಳ ತ್ವರಿತ ತನಿಖೆ ಮತ್ತು ಕಾನೂನು ಕ್ರಮ ಮತ್ತು ಎಡಪಂಥೀಯ ಉಗ್ರವಾದ ಸಂತ್ರಸ್ತ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧದ ಅಭಿಯಾನವು ಈಗ ನಿರ್ಣಾಯಕ ಹಂತದಲ್ಲಿದೆ ಮತ್ತು ಮಾರ್ಚ್ 2026 ರ ಮೊದಲು ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ನಕ್ಸಲಿಸಂ ವಿರುದ್ಧ ಮೊದಲಿನಂತೆಯೇ ಈಗ ದುಪ್ಪಟ್ಟು ವೇಗ ಹಾಗೂ ತೀವ್ರತೆಯಿಂದ ಕಾರ್ಯಾಚರಣೆ ನಡೆಸಬೇಕಾದ ಅಗತ್ಯವಿದೆ ಎಂದ ಅವರು, ಆಗ ಮಾತ್ರ ನಮ್ಮ ದೇಶದಿಂದ ಈ ಸಮಸ್ಯೆ ಸಂಪೂರ್ಣವಾಗಿ ತೊಲಗಲು ಸಾಧ್ಯ ಎಂದರು.

ಮೋದಿ ಸರ್ಕಾರವು ಎಡಪಂಥೀಯ ಉಗ್ರವಾದದ ವಿರುದ್ಧ ಅಭಿವೃದ್ಧಿ, ಕಾನೂನು ಕ್ರಮ ಮತ್ತು ಕಾರ್ಯಾಚರಣೆ ಎಂಬ ಮೂರು ರಂಗಗಳಲ್ಲಿ ಕಾರ್ಯತಂತ್ರದೊಂದಿಗೆ ಯಶಸ್ವಿ ಹೋರಾಟವನ್ನು ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಇದರ ಪರಿಣಾಮವಾಗಿ ಈ ಸಮಸ್ಯೆ ಈಗ ಸಾಕಷ್ಟು ಕಡಿಮೆಯಾಗಿದೆ. ಈಗ ಈ ಸಮಸ್ಯೆ ಛತ್ತೀಸಗಢದ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು. ಛತ್ತೀಸಗಢ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಕಳೆದ 7 ತಿಂಗಳಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಈ 7 ತಿಂಗಳಲ್ಲಿ ಗರಿಷ್ಠ ಸಂಖ್ಯೆಯ ನಕ್ಸಲೀಯರನ್ನು ನಿರ್ಮೂಲನೆ ಮಾಡಲಾಗಿದೆ, ಗರಿಷ್ಠ ಸಂಖ್ಯೆಯ ನಕ್ಸಲೀಯರು ಶರಣಾಗಿದ್ದಾರೆ ಮತ್ತು ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು. ಹೊಸ ಸರ್ಕಾರ ರಚನೆಯಾದ ನಂತರ ಎಡಪಂಥೀಯ ಉಗ್ರವಾದದ ವಿರುದ್ಧದ ಅಭಿಯಾನವು ಉತ್ತಮವಾಗಿ ಸಾಗುತ್ತಿರುವುದಕ್ಕೆ ಗೃಹ ಸಚಿವರು ಛತ್ತೀಸಗಢ ಸರ್ಕಾರವನ್ನು ಅಭಿನಂದಿಸಿದರು.

ಎಡಪಂಥೀಯ ಉಗ್ರವಾದದ ವಿರುದ್ಧದ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಎಲ್ಲಾ ಪೊಲೀಸ್ ಮಹಾನಿರ್ದೇಶಕರು ತಮ್ಮ ರಾಜ್ಯಗಳಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳೊಂದಿಗೆ ಪ್ರತಿ ವಾರ ಸಭೆ ನಡೆಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರೊಂದಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಗಳನ್ನು ಮುಖ್ಯ ಕಾರ್ಯದರ್ಶಿಗಳು ನಡೆಸಬೇಕು ಎಂದು ಹೇಳಿದರು. ನಕ್ಸಲ್ ಕಾರ್ಯಾಚರಣೆಗಳ ಮೇಲೆ ನಿರಂತರ ನಿಗಾ ವಹಿಸದ ಹೊರತು ನಾವು ಬಯಸಿದ ಫಲಿತಾಂಶವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಕ್ಸಲಿಸಂ ವಿರುದ್ಧದ ಹೋರಾಟ ಕೇವಲ ಸಿದ್ಧಾಂತದ ಹೋರಾಟವಲ್ಲ, ಅಭಿವೃದ್ಧಿಯ ಕೊರತೆಯಿಂದ ಹಿಂದುಳಿದಿರುವ ಪ್ರದೇಶಗಳ ಹೋರಾಟವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದವನ್ನು ಹರಡುತ್ತಿರುವವರು ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಮತ್ತು ಇಡೀ ಸಮುದಾಯವನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಜಂಟಿ ಕಾರ್ಯಪಡೆಯು (ಜೆಟಿಎಫ್) ಪ್ರತಿ ರಾಜ್ಯದಲ್ಲೂ ಅನುಭವಿ ಮತ್ತು ಸೂಕ್ತ ಪಡೆಗಳನ್ನು ಹೊಂದಿರಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಕಾರ್ಯಾಚರಣೆಯು ನಿರ್ದಿಷ್ಟ ರೀತಿಯ ಕೌಶಲ್ಯದ ಅಗತ್ಯವಿರುವ ಕಾರ್ಯವಾಗಿದ್ದು, ಇದಕ್ಕೆ ಸೂಕ್ತವಾದ ಮತ್ತು ಕ್ಷೇತ್ರದ ಜ್ಞಾನವನ್ನು ಹೊಂದಿರುವ ಅಧಿಕಾರಿಗಳನ್ನು ಮಾತ್ರ ನಿಯೋಜಿಸಬೇಕು ಎಂದು ಅವರು ಹೇಳಿದರು. ಪೊಲೀಸ್ ಮಹಾನಿರ್ದೇಶಕರು ಸ್ವತಃ ಪರಿಶೀಲನೆ ನಡೆಸಿ ಅದಕ್ಕೆ ತಕ್ಕಂತೆ ಜಂಟಿ ಕಾರ್ಯಪಡೆಯಲ್ಲಿ ಬದಲಾವಣೆ ತರಬೇಕು ಎಂದರು.

ರಾಜ್ಯಗಳ ವಿಶೇಷ ತನಿಖಾ ಸಂಸ್ಥೆಗಳನ್ನು (ಎಸ್‌ ಐ ಎ) ಎನ್‌ ಐ ಎ ಮಾದರಿಯಲ್ಲಿ ತನಿಖೆ ಮತ್ತು ಕಾನೂನು ಕ್ರಮಕ್ಕೆ ಸಿದ್ಧಪಡಿಸಬೇಕು ಮತ್ತು ತರಬೇತಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಾಪಾಸಗದ ಹಂತ ತಲುಪಿರುವ ಉಗ್ರರನ್ನು ಶಿಕ್ಷಿಸದ ಹೊರತು ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು. ಶರಣಾಗತಿ ನೀತಿಯು ಹೊಂದಾಣಿಕೆಯಲ್ಲಿರಬೇಕು, ಆದರೆ ಅದು ದುರುಪಯೋಗವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಶ್ರೀ ಶಾ ಹೇಳಿದರು.

ನಕ್ಸಲಿಸಂಗೆ ಸಂಬಂಧಿಸಿದ ಅಂತಾರಾಜ್ಯ ಪ್ರಕರಣಗಳ ತನಿಖೆಯನ್ನು ರಾಜ್ಯಗಳು ಎನ್ ಐ ಎ ಗೆ ಹಸ್ತಾಂತರಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ಉಗ್ರವಾದದ ಹಣಕಾಸು, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಅವುಗಳ ತಯಾರಿಕೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಪ್ರಕರಣಗಳಲ್ಲಿ ಕಾನೂನು ಕ್ರಮವನ್ನು ಉತ್ತಮವಾಗಿ ಸಿದ್ಧಪಡಿಸಲು ಸಾಮಾನ್ಯ ಕಾರ್ಯಾಚರಣೆ ಕಾರ್ಯವಿಧಾನಗಳ (ಎಸ್‌ ಒ ಪಿ) ಮೂಲಕ ಸಮನ್ವಯದತ್ತ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದರು. ಎಡಪಂಥೀಯ ಉಗ್ರಗಾಮಿ ಪ್ರಕರಣಗಳಲ್ಲಿ ಭಾಗಿಯಾಗಿರುವ ತನಿಖೆ ಮತ್ತು ಪ್ರಾಸಿಕ್ಯೂಷನ್ ತಂಡಗಳಿಗೆ ಎನ್‌ ಐ ಎ ತರಬೇತಿ ನೀಡಬೇಕೆಂದು ಶ್ರೀ ಶಾ ಒತ್ತಿ ಹೇಳಿದರು.

ಸರ್ಕಾರದ ಯೋಜನೆಗಳ 100 ಪ್ರತಿಶತ ಪ್ರಯೋಜನಗಳು ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಿಗೆ ತಲುಪುವಂತೆ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಸಚಿವರು ಕರೆ ನೀಡಿದರು. ಎಡಪಂಥೀಯ ಉಗ್ರವಾದದಿಂದ ಅನಕ್ಷರಸ್ಥರಾಗಿರುವ ಜನರ ಶಿಕ್ಷಣಕ್ಕಾಗಿ ರಾಜ್ಯಗಳು ನೀತಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಶ್ರೀ ಅಮಿತ್ ಶಾ ಅವರು ಎಡಪಂಥೀಯ ಉಗ್ರವಾದದ ಪೂರೈಕೆ ಸರಪಳಿ ಮತ್ತು ಅದರ ಹಣಕಾಸಿನ ಮೇಲೆ ಸಮಗ್ರ ದಾಳಿಯನ್ನು ಒತ್ತಿ ಹೇಳಿದರು. ಎಡಪಂಥೀಯ ಉಗ್ರವಾದದಿಂದ ಪೀಡಿತವಾಗಿರುವ ರಾಜ್ಯಗಳು ಮಾರ್ಚ್ 2027 ರವರೆಗೆ ಕಾಯುವ ಬದಲು ಆದಷ್ಟು ಬೇಗ ನಕ್ಸಲ್ ಸಮಸ್ಯೆಯನ್ನು ಕೊನೆಗೊಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಡಿಸೆಂಬರ್ 2025 ರ ವೇಳೆಗೆ ಛತ್ತೀಸಗಢದ ಕೆಲವು ಭಾಗಗಳನ್ನು ಹೊರತುಪಡಿಸಿ ಇಡೀ ದೇಶವು ಎಡಪಂಥೀಯ ಉಗ್ರವಾದದಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಎಡಪಂಥೀಯ ಉಗ್ರವಾದದ ಸಂಪೂರ್ಣ ಪೂರಕ ವ್ಯವಸ್ಥೆಯನ್ನು ನಿರ್ದಯ ರೀತಿಯಲ್ಲಿ ನಾಶಪಡಿಸಬೇಕಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಅಭಿಯಾನವನ್ನು ವ್ಯಾಪಕವಾಗಿ ಮುಂದಕ್ಕೆ ಕೊಂಡೊಯ್ಯಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಎಡಪಂಥೀಯ ಉಗ್ರವಾದದ ಸಿದ್ಧಾಂತವನ್ನು ಬೆಂಬಲಿಸುವವರ ವಿರುದ್ಧ ನಾವು ಹೋರಾಡಬೇಕು ಮತ್ತು ನಮ್ಮ ಸಂದೇಶವನ್ನು ಸಮಾಜದ ಎಲ್ಲಾ ವರ್ಗಗಳಿಗೆ ನಮ್ರತೆ ಮತ್ತು ದೃಢತೆಯಿಂದ ತಿಳಿಸಬೇಕು ಎಂದು ಶ್ರೀ ಶಾ ಹೇಳಿದರು. ಎಡಪಂಥೀಯ ಉಗ್ರವಾದದ ಸಂತ್ರಸ್ತರಿಗೂ ಮಾನವ ಹಕ್ಕುಗಳಿವೆ ಎಂದು ಅವರು ಹೇಳಿದರು.

ಎಡಪಂಥೀಯ ಉಗ್ರವಾದದಿಂದ ಭಾರತವನ್ನು ಮುಕ್ತಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಮುಂದೆ ಇಟ್ಟಿರುವ ಗುರಿಯನ್ನು ಸಾಧಿಸಲು, ನಾವು ಈ ಅಭಿಯಾನವನ್ನು ವೇಗವಾಗಿ ಕೊಂಡೊಯ್ಯಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದವು ಮಾನವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಪಾಯವಾಗಿದೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎರಡು ಪಟ್ಟು ವೇಗ ಮತ್ತು ತೀವ್ರತೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಛತ್ತೀಸಗಢ ಸರ್ಕಾರವು ಸರ್ಕಾರದ ಯೋಜನೆಗಳನ್ನು 100 ಪ್ರತಿಶತ ಸಂಪೂರ್ಣತಾ ಅಭಿಯಾನವನ್ನು ಪ್ರಾರಂಭಿಸಿದೆ ಮತ್ತು ಇದರೊಂದಿಗೆ ಬಸ್ತಾರ್ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಆಹಾರದ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.



(Release ID: 2048645) Visitor Counter : 11


Read this release in: English , Urdu , Hindi , Gujarati